ಬೈಕ್ನ್ನ 60 ಮೀಟರ್ ಎಳೆದೊಯ್ದ ಕಾರು: ಎದೆ ಝಲ್ ಎನಿಸುವ ಆ್ಯಕ್ಸಿಡೆಂಟ್ ವಿಡಿಯೋ
ಚಿಕ್ಕಮಗಳೂರು ನಗರದ ಬೈಪಾಸ್ ಸಮೀಪದ ಕುರುವಂಗಿ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಜೆನ್ ಕಾರೊಂದು ಬೈಕ್ಗೆ ಗುದ್ದಿ ಸುಮಾರು 60 ಮೀಟರ್ನಷ್ಟು ದೂರು ಎಳೆದೊಯ್ದಿದೆ. ಇನ್ನು ಈ ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ನೋಡಿದರೆ ಎದೆ ಝಲ್ ಎನ್ನುತ್ತೆ.
ಚಿಕ್ಕಮಗಳೂರು, (ಜನವರಿ 15): ನಗರದ ಬೈಪಾಸ್ ಸಮೀಪದ ಕುರುವಂಗಿ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಾರಿಗೆ ಸಿಲುಕಿದ ಬೈಕ್ನ್ನ 60 ಮೀಟರ್ ಎಳೆದೊಯ್ದಿದ್ದು, ಕಾರು ಉಜ್ಜಿಕೊಂಡು ಹೋಗುವ ರಭಸಕ್ಕೆ ಬೆಂಕಿಯ ಕಿಡಿ ಹಾರಿದೆ. ಇನ್ನು ಬೈಕ್ ಸವಾರರ ರಾಜಶೇಖರ್ಗೆ ಗಂಭೀರ ಗಾಯಗಳಾಗಿವೆ. ರಾಜಶೇಖರ್ ಕೆಲಸ ಮುಗಿಸಿ ಮನಗೆ ಹೋಗುವಾಗ ಈ ಅಪಘಾತ ಸಂಭವಿಸಿದ್ದು, ಜೆನ್ ಕಾರು ಚಾಲಕ ನಿಲ್ಲಿಸದೇ ಫಾಸ್ಟ್ ಆಗಿ ಹೋಗಿದ್ದಾನೆ. ಇನ್ನು ಈ ದೃಶ್ಯ ಸಿಟಿ ಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ನೋಡಿದರೆ ಎದೆ ಝಲ್ ಎನ್ನುತ್ತೆ. ಬೈಕ್ ಸವಾರ ರಾಜಶೇಖರ್ ಸೊಂಟದ ಮೂಳೆ ಮುರಿದಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಚಿಕ್ಕಮಗಳೂರು ನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Latest Videos
ಗಣರಾಜ್ಯೋತ್ಸವ 2026: ಕೈದಿಗಳು ತಯಾರಿಸಿದ ಬೇಕರಿ ಉತ್ಪನ್ನಗಳ ಉಪಹಾರ ವಿತರಣೆ
ರೈತರ ಪ್ರತಿಭಟನೆ ವೇಳೆ ಕುಮಾರಸ್ವಾಮಿ ಬಳಿ ಸೆರಗೊಡ್ಡಿ ಮಹಿಳೆ ಮನವಿ
ಚೋರ್ಲಾ ಘಾಟ್ ರಾಬರಿ ರಹಸ್ಯ ಬಿಚ್ಚಿಟ್ಟ ಪೊಲೀಸ್ ವರಿಷ್ಠಾಧಿಕಾರಿ
ಬಿಬಿಎಲ್ನಲ್ಲಿ ದಾಖಲೆಯ 6ನೇ ಬಾರಿಗೆ ಪ್ರಶಸ್ತಿ ಗೆದ್ದ ಪರ್ತ್ ಸ್ಕಾರ್ಚರ್ಸ್

