Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಪ್ಪಳ ಗವಿಮಠದ ಜಾತ್ರೆ, ಮಹಾದಾಸೋಹಕ್ಕೆ ಇಂದು ಅದ್ಧೂರಿ ತೆರೆ: ಲಕ್ಷಾಂತರ ಭಕ್ತರಿಂದ ಪ್ರಸಾದ ಸೇವನೆ

ದಕ್ಷಿಣ ಭಾರತದ ಕುಂಭಮೇಳ ಎಂದು ಹೆಸರಾಗಿರುವ ಕೊಪ್ಪಳದ ಗವಿಮಠದ ಜಾತ್ರೆಗೆ ಅದ್ದೂರಿ ತೆರೆಬಿದ್ದಿದೆ. ಹದಿನೈದು ದಿನಗಳ ಈ ಜಾತ್ರೆಯಲ್ಲಿ 20 ಲಕ್ಷಕ್ಕೂ ಹೆಚ್ಚು ಜನರು ದಾಸೋಹದಲ್ಲಿ ಭಾಗವಹಿಸಿದ್ದರು. ವಿವಿಧ ಖಾದ್ಯಗಳೊಂದಿಗೆ ಲಕ್ಷಾಂತರ ಜನರಿಗೆ ಅಚ್ಚುಕಟ್ಟಾಗಿ ಪ್ರಸಾದ ವಿತರಣೆ ಮಾಡಲಾಗಿದೆ. ಇದು ದೇಶದಲ್ಲೇ ಅಪರೂಪದ ದಾಸೋಹವಾಗಿದೆ.

ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ಗಂಗಾಧರ​ ಬ. ಸಾಬೋಜಿ

Updated on:Jan 29, 2025 | 9:08 PM

ಅತ್ತ ಪ್ರಯಾಗರಾಜ್​ನ ಕುಂಭಮೇಳದಲ್ಲಿ ಕೋಟಿ ಕೋಟಿ ಜನರು ಭಾಗಿಯಾಗುತ್ತಿದ್ದರೆ, ಇತ್ತ ದಕ್ಷಿಣ ಭಾರತದ ಕುಂಭಮೇಳ ಅಂತ ಖ್ಯಾತಿ ಪಡೆದಿರುವ ಕೊಪ್ಪಳ ಗವಿಮಠದ ಜಾತ್ರೆಗೆ ಅದ್ದೂರಿ ತೆರೆ ಬಿದ್ದಿದೆ. ಇನ್ನು ಕಳೆದ ಹದಿನೈದು ದಿನಗಳಿಂದ ನಡೆದ ಜಾತ್ರೆಯಲ್ಲಿ ಸರಿಸುಮಾರು ಇಪ್ಪತ್ತು ಲಕ್ಷಕ್ಕೂ ಅಧಿಕ ಜನ ದಾಸೋಹದಲ್ಲಿ ಊಟ ಮಾಡಿದ್ದಾರೆ.

1 / 6
ಕೊಪ್ಪಳದ ಗವಿಮಠದ ಜಾತ್ರೆಯನ್ನು ದಕ್ಷಿಣ ಭಾರತದ ಕುಂಭಮೇಳ ಎಂದು ಕರೆಯುತ್ತಾರೆ. ಇದಕ್ಕೆ ಕಾರಣ, ಜಾತ್ರೆಯಲ್ಲಿ ಭಾಗಿಯಾಗುವ ಲಕ್ಷ ಲಕ್ಷ ಜನರು. ಇದೇ ಜನವರಿ 15 ರಂದು ಗವಿಸಿದ್ದೇಶ್ವರರ ರಥೋತ್ಸವ ಅದ್ದೂರಿಯಾಗಿ ನಡೆದಿತ್ತು. ಅಂದು ಸರಿಸುಮಾರು ಐದು ಲಕ್ಷ ಜನ ಭಾಗಿಯಾಗಿದ್ದರು. ಜನವರಿ 15 ರಿಂದ ಆರಂಭವಾಗಿದ್ದ ಜಾತ್ರೆಗೆ ಇಂದು ವಿದ್ಯುಕ್ತ ತೆರೆ ಬಿದ್ದಿದೆ.

2 / 6
ಇನ್ನು ಗವಿಮಠದ ಜಾತ್ರೆಯ ವಿಶೇಷವೆಂದರೆ ಅದು ದಾಸೋಹ. ಜನವರಿ 12 ರಿಂದಲೇ ಆರಂಭವಾಗಿದ್ದ ಮಹಾದಾಸೋಹಕ್ಕೆ ಕೂಡ ಇಂದು ತೆರೆಬಿದ್ದಿದೆ. ಇಂದು ಕೂಡ ಲಕ್ಷಕ್ಕೂ ಅಧಿಕ ಜನರು ಮಹಾ ದಾಸೋಹದಲ್ಲಿ ಪ್ರಸಾದ ಸೇವಿಸಿದರು. ಇಂದು ಕೊನೆಯ ದಿನ್ನ ಹಿನ್ನೆಲೆಯಲ್ಲಿ ಗೋದಿ ಹುಗ್ಗಿ, ಅನ್ನ, ಸಾರು, ಬದನೆಕಾಯಿ ಪಲ್ಲೆಯನ್ನು ಮಾಡಲಾಗಿತ್ತು.

3 / 6
ಮುಂಜಾನೆ ಏಳುಗಂಟೆಯಿಂದ ರಾತ್ರಿ ಹನ್ನೆರಡುಗಂಟೆವರಗೆ ಲಕ್ಷಕ್ಕೂ ಅಧಿಕ ಜನರು ಸರದಿ ಸಾಲಿನಲ್ಲಿ ನಿಂತು ಪ್ರಸಾದ ಸೇವಿಸಿದ್ದಾರೆ. ಇಂದು ಒಂದೇ ದಿನ ನೂರು ಕ್ವಿಂಟಲ್​ ಅಧಿಕ ಅನ್ನ, ಎಪ್ಪತ್ತೈದು ಕ್ವಿಂಟಲ್ ಗೋದಿ ಹುಗ್ಗಿಯನ್ನು ಮಾಡಲಾಗಿತ್ತು.

4 / 6
ಇನ್ನು ಜನವರಿ 12 ರಿಂದಲೇ ಆರಂಭವಾಗಿದ್ದ ಮಹಾದಾಸೋಹಕ್ಕೆ ಇಂದು ತೆರೆ ಬಿದ್ದಿದ್ದು, ನಾಳೆಯಿಂದ ಮಠದಲ್ಲಿ ದೈನಂದಿನಂತೆ ದಾಸೋಹ ಇರಲಿದೆ. ಇನ್ನು ಹದಿನೆಂಟು ದಿನಗಳ ಕಾಲ ನಡೆದ ಮಹಾದಾಸೋಹದಲ್ಲಿ ಇಪ್ಪತ್ತು ಲಕ್ಷಕ್ಕೂ ಅಧಿಕ ಜನ ಪ್ರಸಾದ ಸೇವಿಸಿದ್ದಾರೆ. ಇಪ್ಪತ್ತು ಲಕ್ಷ ರೊಟ್ಟಿ ಖರ್ಚಾಗಿದ್ದು, ಹನ್ನೆರಡು ನೂರು ಕ್ವಿಂಟಲ್ ಅಕ್ಕಿ ಖರ್ಚಾಗಿದೆ. ಐನೂರು ಕ್ವಿಂಟಲ್ ಕಟ್ಟಿಗೆ ಬಳಕೆಯಾಗಿದೆ. ಹತ್ತಾರು ಟನ್ ತರಕಾರಿ ಬಳಸಲಾಗಿದೆ.

5 / 6
ಹತ್ತು ಲಕ್ಷಕ್ಕೂ ಅಧಿಕ ಜಿಲೇಬಿ, ಶೇಂಗಾ ಹೋಳಿಗೆ, ಮಾದಲಿ, ಮಿರ್ಚಿಯನ್ನು ಪ್ರಸಾದದಲ್ಲಿ ನೀಡಲಾಗಿತ್ತು. ಪ್ರತಿ ದಿನವು ಕೂಡ ಒಂದೊಂದು ರೀತಿಯ ಭಕ್ಷ್ಯ ಭೋಜನಗಳನ್ನು ಜಾತ್ರೆಗೆ ಬರುವ ಭಕ್ತರಿಗೆ ಮಹಾದಾಸೋಹದಲ್ಲಿ ಬಡಿಸಲಾಗಿದೆ. ಕೊಪ್ಪಳ ಗವಿಮಠದ ಜಾತ್ರೆಯಲ್ಲಿರುವಷ್ಟು ವೆರೈಟಿ ಆಹಾರ ಮತ್ತು ಲಕ್ಷ ಲಕ್ಷ ಜನರಿಗೆ ಅಚ್ಚುಕಟ್ಟು ಪ್ರಸಾದ ವ್ಯವಸ್ಥೆ ದೇಶದ ಯಾವ ಜಾತ್ರೆಯಲ್ಲಿ ಕೂಡ ಕಾಣಸಿಗಲಾರದು.

6 / 6

Published On - 9:08 pm, Wed, 29 January 25

Follow us
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ

ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ

ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ

ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?

ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ

ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ

ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ

‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ

ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ

ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ