ಕೈಯಲ್ಲಿ ಪಿಸ್ಟಲ್ ಹಿಡಿದು ನೆಲಮಂಗಲದ ಒಡವೆ ಅಂಗಡಿಗೆ ನುಗ್ಗಿ ಚಿನ್ನಾಭರಣ ದೋಚಿದ ಕಳ್ಳರು
ಪ್ರಕರಣ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವುದು ನಿಜವಾದರೂ ಕಳ್ಳರು ಸುಲಭವಾಗಿ ಹೇಗೆ ಪಿಸ್ಟಲ್, ಗನ್ಗಳ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ ಅಂತ ಗೊತ್ತಾಗುತ್ತಿಲ್ಲ. ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಗೊತ್ತಿಲ್ಲ ಅಂತಲೇ ಹೆಚ್ಚು ಸಲ ಹೇಳುವ ರಾಜ್ಯದ ಗೃಹ ಸಚಿವ ಜಿ ಪರಮೇಶ್ವರ್ ಅವರಿಗೆ ಈ ವಿಷಯವೂ ಗೊತ್ತಿರಲಿಕ್ಕಿಲ್ಲ! ಕಳ್ಳರು ಮುಸುಕುಧರಿಸಿ ತಲೆಗೆ ಕ್ಯಾಪ್ ಧರಿಸಿ ಅಂಗಡಿಗೆ ನುಗ್ಗಿದ್ದಾರೆ.
ನೆಲಮಂಗಲ, ಜುಲೈ 26: ನಿನ್ನೆ ರಾತ್ರಿ ಸುಮಾರು 9ಗಂಟೆಯ ಸಮಯದಲ್ಲಿ ಮಾಗಡಿ ರಸ್ತೆ, ಮಾಚೋಹಳಿ ಗೇಟ್ ಹತ್ತಿರವಿರುವ ರಾಮ್ ಜ್ಯೂಯೆಲ್ಲರಿ ಅಂಗಡಿಗೆ ನುಗ್ಗಿದ ದರೋಡೆಕೋರರು ಅಂಗಡಿಯಲ್ಲಿದ್ದ ಮಾಲೀಕ ಕನ್ಹಯ್ಯಲಾಲ್ (Kanhaiya Lal) ಮತ್ತು ಸೇಲ್ಸ್ಮನ್ನನ್ನು ಪಿಸ್ಟಲ್ ಒಂದರಿಂದ ಹೆದರಿಸಿ ಕೈಗೆ ಸಿಕ್ಕ ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಅಂಗಡಿಯಲ್ಲಿ ಅಳವಡಿಲಾಗಿರುವ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಕನ್ಹಯ್ಯಲಾಲ್ ಅವರ ಕೂಗಾಟ ಕೇಳಿ ಅಕ್ಕಪಕ್ಕದ ಅಂಗಡಿಯವರು ಅಲ್ಲಿಗೆ ಬರುವ ಮೊದಲೇ ಕಳ್ಳರು ಆಭರಣಗಳೊಂದಿಗೆ ಪರಾರಿಯಾಗಿದ್ದಾರೆ. ಪಕ್ಕದ ಅಂಗಡಿಯಾತನೊಬ್ಬನನ್ನು ಕಳ್ಳರು ದೂಡಿಕೊಂಡು ಪರಾರಿಯಾಗುವ ದೃಶ್ಯವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ಬೀದರ್ ಶೂಟೌಟ್ ಆರೋಪಿಗಳಿಗಾಗಿ ತೀವ್ರ ಶೋಧ: ದರೋಡೆಕೋರರು ಹೈದರಾಬಾದ್ನಲ್ಲೇ ಇರುವ ಶಂಕೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

