Viral: ಹೆಂಡತಿ ವಿಚ್ಛೇದನ ನೀಡಿದ ಕಾರಣಕ್ಕೆ ಪ್ರತಿದಿನ ಅನ್ನ ನೀರು ಬಿಟ್ಟು ಬಿಯರ್ ಕುಡಿದು ವ್ಯಕ್ತಿ ಸಾವು
ಹೆಂಡತಿ ವಿಚ್ಛೇದನ ನೀಡಿದಕ್ಕೆ ನೊಂದು ಅನ್ನ ನೀರು ಬಿಟ್ಟು, ಪ್ರತಿದಿನ ಬಿಯರ್ ಕುಡಿಯಲು ಶುರು ಮಾಡಿ, ಇದೀಗ ವ್ಯಕ್ತಿಯೊಬ್ಬ ಸಾವನ್ನಪ್ಪಿದ ವಿಚಿತ್ರ ಘಟನೆ ನಡೆದಿದೆ.. 44 ವರ್ಷದ ವ್ಯಕ್ತಿಯೊಬ್ಬ ವಿಚ್ಛೇದನದ ನಂತರ ನೋವಿನಲ್ಲಿ ಅನ್ನ ನೀರು ಬಿಟ್ಟು ಒಂದು ತಿಂಗಳು ಬರೀ ಬಿಯರ್ನ್ನು ಕುಡಿದು ತನ್ನ ಮಲಗುವ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಇತ್ತಿಚೀಗಿನ ದಿನಗಳಲ್ಲಿ ವಿಚ್ಛೇದನ ( divorce) ಪ್ರಕರಣಗಳು ಹೆಚ್ಚಾಗಿದೆ. ಸಣ್ಣ ಸಣ್ಣ ಕಾರಣಗಳಿಗೆ ವಿಚ್ಛೇದನ ನೀಡುತ್ತಾರೆ. ಹೀಗೆ ಸುಮ್ಮಸುಮ್ಮನೆ ವಿಚ್ಛೇದನ ನೀಡಿ, ತಮ್ಮ ಜೀವನವನ್ನು ಹಾಳು ಮಾಡಿಕೊಂಡಿರುವ ಹಲವು ಉದಾಹರಣೆಗಳು ನಮ್ಮ ಮುಂದೆ ಇದೆ. ಇದೀಗ ಇಲ್ಲೊಂದು ಘಟನೆ ಕೂಡ ಅದೇ ರೀತಿ ಆಗಿದೆ, ಆದರೆ ಇದು ಸ್ವಲ್ಪ ವಿಚಿತ್ರವಾಗಿದೆ. ವಿಚ್ಛೇದನ ನೀಡಿದ ನಂತರ ಅನ್ನ ನೀರು ಬಿಟ್ಟು ಬಿಯರ್ ಮಾತ್ರ ಕುಡಿದು, ವ್ಯಕ್ತಿಯೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಈ ಘಟನೆ ಥೈಲ್ಯಾಂಡ್‌ನ (Thailand) ಬಾನ್ ಚಾಂಗ್ ಜಿಲ್ಲೆಯಲ್ಲಿ ನಡೆದಿದೆ. 44 ವರ್ಷದ ವ್ಯಕ್ತಿಯೊಬ್ಬ ವಿಚ್ಛೇದನದ ನಂತರ ಆ ನೋವಿನಲ್ಲಿ ಅನ್ನ ನೀರು ಬಿಟ್ಟು ಒಂದು ತಿಂಗಳು ಬಿಯರ್ನ್ನು ಕುಡಿದು ತನ್ನ ಮಲಗುವ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಇನ್ನು ಸಾವನ್ನಪ್ಪಿರುವ ವ್ಯಕ್ತಿಯನ್ನು ಥವೀಸಕ್ ನಮ್ವೊಂಗ್ಸಾ ಎಂದು ಗುರುತಿಸಲಾಗಿದೆ.
ಇನ್ನು ಈ ಘಟನೆಯನ್ನು ಮಗ ನೋಡಿದ್ದಾನೆ. ತಂದೆ ಶವ ಪತ್ತೆಯಾಗಿರುವ ರೂಮ್ನಲ್ಲಿ 100ಕ್ಕೂ ಹೆಚ್ಚು ಬಿಯರ್ ಬಾಟಲ್ ಸಿಕ್ಕಿದೆ. ಒಂದು ಮಗುವಿನ ತಂದೆಯಾಗಿರುವ ನಮ್ವೊಂಗ್ಸಾ, ತನ್ನ ಹೆಂಡತಿಯಿಂದ ಬೇರ್ಪಟ್ಟ ನಂತರ ತನ್ನ 16 ವರ್ಷದ ಮಗನೊಂದಿಗೆ ವಾಸಿಸುತ್ತಿದ್ದ. ಪ್ರತಿದಿನ ಬಿಸಿ ಬಿಸಿಯಾದ ಅಡುಗೆಯನ್ನು ಮಾಡುತ್ತಿದ್ದರೂ, ತಂದೆ ಮಾತ್ರ ಊಟ ಮುಟ್ಟುತ್ತಿರಲಿಲ್ಲ, ಪ್ರತಿದಿನ ಅವರಿಗೆ ಬಿಯರ್ ಬೇಕಿತ್ತು ಎಂದು ಮಗ ಪೊಲೀಸರಿಗೆ ತಿಳಿಸಿದ್ದಾನೆ. ಇನ್ನು ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಥವೀಸಕ್ ನಮ್ವೊಂಗ್ಸಾ ಅವರ ಮಗ ಶಾಲೆ ಹೋಗಿ ಬರುವಾಗ ಮೂರ್ಛೆ ಹೋಗಿದ್ದನು, ಕೋಣೆಯಲ್ಲಿ ಪ್ರಜ್ಞಾಹೀನಾ ಸ್ಥಿತಿಯನ್ನು ಕಂಡು ಸಿಯಾಮ್ ರೇಯಾಂಗ್ ಫೌಂಡೇಶನ್‌ನ ಅರೆವೈದ್ಯಕೀಯ ಸಿಬ್ಬಂದಿಗಳನ್ನು ಸ್ಥಳಕ್ಕೆ ಕರೆಸಲಾಯಿತು. ಆದರೆ ಅವರು ಬರುವ ಹೊತ್ತಿಗೆ ನಮ್ವೊಂಗ್ಸಾ ಈಗಾಗಲೇ ಮೃತಪಟ್ಟಿದ್ದನು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಮಗುವಿನ ಶಾಲೆಗಾಗಿ 11.2 ಲಕ್ಷ ರೂ. ಖರ್ಚು ಮಾಡುತ್ತಿರುವ ದಂಪತಿ
ಇನ್ನು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರಿಗೆ ಒಂದು ಅಚ್ಚರಿಯ ವಿಚಾರ ಕಂಡಿದೆ. ಕೋಣೆಯೊಳಗೆ 100 ಕ್ಕೂ ಹೆಚ್ಚು ಖಾಲಿ ಬಿಯರ್ ಬಾಟಲಿಗಳು ರೂಮ್ ತುಂಬಾ ಹರಡಿತ್ತು. ರೂಮ್ ಒಳಗೆ ಕಾಲಿಡಲು ಸ್ಥಳವಿಲ್ಲ, ಅಷ್ಟು ಬಾಟಲಿಗಳು ರೂಮ್ನಲ್ಲಿ ಇತ್ತು. ಅತಿಯಾದ ಮದ್ಯ ಸೇವನೆಯಿಂದ ಆತ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ. ಅಧಿಕಾರಿಗಳು ಇನ್ನೂ ಸಾವಿಗೆ ಅಧಿಕೃತ ಕಾರಣವನ್ನು ದೃಢಪಡಿಸಿಲ್ಲ. ಈ ವಾರದ ಕೊನೆಯಲ್ಲಿ ಶವಪರೀಕ್ಷೆ ನಡೆಯಲಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








