Viral: ಮಗುವಿನ ಶಾಲೆಗಾಗಿ 11.2 ಲಕ್ಷ ರೂ. ಖರ್ಚು ಮಾಡುತ್ತಿರುವ ದಂಪತಿ
ಮಕ್ಕಳ ಶಾಲೆಯ ಶುಲ್ಕ ನೋಡಿದ್ರೆ ತಲೆ ತಿರುಗುತ್ತದೆ. ಮಕ್ಕಳಿಗೆ ಉತ್ತಮ ಸಿಗಬೇಕು ಎಂದು ದೊಡ್ಡ ದೊಡ್ಡ ಶಾಲೆಗೆ ಸೇರಿಸುತ್ತಾರೆ. ಆದರೆ ಅಲ್ಲಿ ಮಕ್ಕಳಿಗೆ ಶಿಕ್ಷಣ ಜತೆಗೆ ಸಂಸ್ಕಾರ ಸಿಗುತ್ತಾ? ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಇಲ್ಲೊಂದು ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗೂಗಲ್ ಕಂಪನಿಯಲ್ಲಿ ಕೆಲಸ ಮಾಡುವ ದಂಪತಿಗಳು ತಮ್ಮ ಮಗುವಿಗೆ 11.2 ಲಕ್ಷ ರೂ ಖರ್ಚು ಮಾಡುತ್ತಿದ್ದಾರೆ. ಈ ಕುರಿತಾದ ಇಲ್ಲಿದೆ ಸ್ಟೋರಿ.

ಈಗಿನ ಮಕ್ಕಳ ಶಾಲೆ ಶುಲ್ಕ ನೋಡಿದ್ರೆ ಒಂದು ಸಣ್ಣ ಮನೆ ಕಟ್ಟಬಹುದು, ಅಷ್ಟೂ ದುಬಾರಿಯಾಗಿದೆ. ಹೀಗಾಗಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕೆಂದು ವಾರ್ಷಿಕವಾಗಿ ಲಕ್ಷಾನುಗಟ್ಟಲೇ ಹಣವನ್ನು ವ್ಯಯಿಸುತ್ತಾರೆ. ಇದೀಗ ಇಲ್ಲೊಂದು ವೈರಲ್ ಪೋಸ್ಟ್ ಭಾರೀ ಚರ್ಚೆ ಕಾರಣವಾಗಿದೆ. ಗೂಗಲ್ ಉದ್ಯೋಗದಲ್ಲಿರುವ ದಂಪತಿಗಳ (google-employed couple) ಮಗುವಿಗೆ ಶಾಲಾ ಶುಲ್ಕಕ್ಕಾಗಿ ವಾರ್ಷಿಕವಾಗಿ 11.2 ಲಕ್ಷ ರೂ ಖರ್ಚು ಮಾಡುತ್ತಿದ್ದಾರೆ. ಈ ಸುದ್ದಿ ಕೇಳಿ ವ್ಯಕ್ತಿಯೊಬ್ಬರು ಶಾಕ್ ಆಗಿದ್ದಾರೆ. ಈ ಬಗ್ಗೆ ರೆಡ್ಡಿಟ್ನಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ಬಗ್ಗೆ ಹಿಂದೂಸ್ತಾನ್ ಟೈಮ್ಸ್ ವರದಿ ಕೂಡ ಮಾಡಿದೆ. ಇನ್ನು ಈ ಪೋಸ್ಟ್ ಸತ್ಯವೇ ಎಂಬುದನ್ನು ರೆಡ್ಡಿಟ್ ಕೂಡ ಪರಿಶೀಲನೆಯನ್ನು ಮಾಡುತ್ತಿದೆ.
ಗೂಗಲ್‌ನಲ್ಲಿ ಕೆಲಸ ಮಾಡುವ ಮತ್ತು ವರ್ಷಕ್ಕೆ ಸುಮಾರು 60 ಲಕ್ಷ ರೂ ಸಂಪಾದಿಸುವ ದಂಪತಿಗಳ ಹಣಕಾಸು ಯೋಜನೆ ದಾಖಲೆಗಳನ್ನು ನೋಡಿದಾಗ ಅದರಲ್ಲಿ ಅವರ ಮಗುವಿಗೆ ಶಾಲಾ ಶುಲ್ಕಕ್ಕಾಗಿ 11.2 ಲಕ್ಷ ರೂ ಖರ್ಚು ಮಾಡುತ್ತಾರೆ ಎಂಬುದು ತಿಳಿದು ಬಂದಿದೆ. ಇನ್ನು ಸಾಮಾಜಿಕ ಜಾಲತಾಣ ಬಳಕೆದಾರರೂ ಹಣಕಾಸಿನ ವ್ಯಯವಾಗುವ ನಡುವಿನ ವ್ಯತ್ಯಾಸವನ್ನು ಲೆಕ್ಕಹಾಕಿದ್ದಾರೆ. ಒಬ್ಬ ಬಳಕೆದಾರ ಇಷ್ಟೊಂದು ಮೊತ್ತವನ್ನು ಕೇಳಿಲ್ಲ. ನಾನು ವರ್ಷಕ್ಕೆ 2–4 ಲಕ್ಷ ರೂ ತಪ್ಪಿದ್ರೆ 5–6 ರೂ ಲಕ್ಷ ಖರ್ಚು ಮಾಡಬಹುದು, ಆದರೆ 11.2 ಲಕ್ಷ ರೂ ಖರ್ಚು ಮಾಡಿರುವ ಬಗ್ಗೆ ಇದೇ ಮೊದಲು ಕೇಳುತ್ತಿರುವುದು ಎಂದು ಹೇಳಿದ್ದಾರೆ. ಹಣ ಎಲ್ಲರನ್ನೂ ಆಕರ್ಷಣೆ ಮಾಡುತ್ತಿದೆ. ಮಕ್ಕಳಿಗೆ ದುಬಾರಿ ಶಾಲೆ, ಶಿಬಿರ, ಇನ್ನು ಅನೇಕ ಸೌಕರ್ಯಗಳು ಮಕ್ಕಳಿಗೆ ಸಿಗಬಹುದು, ಈ ಶುಲ್ಕ ಹೆತ್ತವರ ಜೇಬನ್ನು ಖಾಲಿ ಮಾಡುತ್ತಿದೆ ಎಂದು ಸಾಮಾಜಿಕ ಜಾಲತಾಣದ ಬಳಕೆದಾರರೊಬ್ಬರು ಹೇಳಿದ್ದಾರೆ.
ಇಲ್ಲಿದೆ ನೋಡಿ ಪೋಸ್ಟ್:

ಇದನ್ನೂ ಓದಿ: ಸಾಕಮ್ಮ ಚಳಿ ಆಗುತ್ತೆ, ತಾಯಾನೆ ಮರಿಯಾನೆಗೆ ಸ್ನಾನ ಮಾಡಿಸುವ ಚಂದ ನೋಡಿ
ಹೆಚ್ಚಿನ ಶುಲ್ಕಗಳು ಒಂದು ವೈಶಿಷ್ಟ್ಯ, ದೋಷವಲ್ಲ. ಈ ಶಾಲೆಗಳು 0.1% ಜನರನ್ನು ಒಳಗೆ ಮತ್ತು ಉಳಿದವರೆಲ್ಲರನ್ನು ಹೊರಗೆ ಇಡುವ ಉದ್ದೇಶವಾಗಿದೆ ಎಂದು ಹೇಳಿದ್ದಾರೆ. ಎಲ್ಲರೂ ತಮ್ಮ ಮಕ್ಕಳನ್ನು ದುಬಾರಿ ಶಾಲೆಗೆ ಕಳುಹಿಸಿದಿಲ್ಲ, ನಾನು ನನ್ನ ಮಗುವಿಗೆ ಉತ್ತಮ ಶಿಕ್ಷಣ ನೀಡುವ ಶಾಲೆಗೆ ಸೇರಿಸಿದ್ದೇನೆ. ನನ್ನ ಮಗು ಶಾಲೆಗೆ ಹೋಗುತ್ತಿರುವುದು ಅಲಂಕಾರಕ್ಕೆ ಅಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








