AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಸಾಕಮ್ಮ ಚಳಿ ಆಗುತ್ತೆ, ತಾಯಾನೆ ಮರಿಯಾನೆಗೆ ಸ್ನಾನ ಮಾಡಿಸುವ ಚಂದ ನೋಡಿ

ತಾಯಿಯ ಪ್ರೀತಿಯ ಹಾಗೇ, ಮಕ್ಕಳ ಆರೈಕೆಯಲ್ಲೇ ಖುಷಿ ಕಾಣುವ ಜೀವವದು. ಈ ವಿಚಾರದಲ್ಲಿ ಪ್ರಾಣಿಗಳು ಕೂಡ ಹೊರತಾಗಿಲ್ಲ, ಹೌದು, ಈ ಪ್ರಾಣಿಗಳು ಕೂಡ ತನ್ನ ಕಂದಮ್ಮನನ್ನು ಕಾಳಜಿ ವಹಿಸುತ್ತಾ, ಸುರಕ್ಷಿತವಾಗಿ ನೋಡಿಕೊಳ್ಳುತ್ತವೆ. ಇದೀಗ ತಾಯಿ ಆನೆಯೊಂದು ತಮ್ಮ ಕಂದಮ್ಮನಿಗೆ ಸ್ನಾನ ಮಾಡಿಸಿದ್ದು, ಈ ಮುದ್ದಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಹೃದಯವನ್ನು ಗೆದ್ದುಕೊಂಡಿದೆ.

Video: ಸಾಕಮ್ಮ ಚಳಿ ಆಗುತ್ತೆ, ತಾಯಾನೆ ಮರಿಯಾನೆಗೆ ಸ್ನಾನ ಮಾಡಿಸುವ ಚಂದ ನೋಡಿ
ಮರಿಯಾನೆಗೆ ಸ್ನಾನ ಮಾಡಿಸಿದ ತಾಯಾನೆImage Credit source: Instagram
ಸಾಯಿನಂದಾ
|

Updated on: Jul 25, 2025 | 2:16 PM

Share

ಪ್ರತಿಯೊಬ್ಬ ತಾಯಿಯು (mother) ಮಗುವಿನ ಲಾಲನೆ ಪಾಲನೆಯಲ್ಲಿ ತನ್ನ ಖುಷಿಯನ್ನು ಕಾಣುತ್ತಾಳೆ. ಮಗುವಿಗೆ ಎಣ್ಣೆ ಹಚ್ಚಿ ಸ್ನಾನ ಮಾಡಿಸುವುದು, ಆಹಾರ ನೀಡುವುದು ಆಕೆಯ ದಿನನಿತ್ಯ ರೂಟೀನ್ ಆಗಿರುತ್ತದೆ. ಆದರೆ ಪ್ರಾಣಿಗಳು ಆಗಲ್ಲ, ಬೆಳೆಯುತ್ತ ಹೋದಂತೆ ತಮ್ಮ ಪಾಡಿಗೆ ಎಲ್ಲವನ್ನು ಕಲಿತುಕೊಂಡು ಬಿಡುತ್ತವೆ. ಆದರೆ ಕೆಲವೊಮ್ಮೆ ಈ ಪ್ರಾಣಿಗಳು ತಮ್ಮ ಕಂದಮ್ಮಗಳಿಗೆ ಆಹಾರ ತಂದು ಕೊಡುವುದು, ಪ್ರೀತಿಯಿಂದ ಮುದ್ದಿಸುವುದನ್ನು ಮಾಡುತ್ತವೆ. ಆದರೆ ನೀವು ತಾಯಿ ಆನೆಯು (elephant) ಮರಿಯಾನೆಗೆ ಸ್ನಾನ ಮಾಡಿಸುವುದನ್ನು ಎಂದಾದ್ರೂ ನೋಡಿದ್ದೀರಾ. ಆದರೆ ಇಲ್ಲೊಂದು ಅಪರೂಪದ ವಿಡಿಯೋವನ್ನು ವೈರಲ್ ಆಗಿದೆ. ತಾಯಿ ಆನೆಯೂ ತನ್ನ ಮುಂಭಾಗದಲ್ಲಿ ಕುಳಿತುಕೊಂಡ ಮರಿಯಾನೆಗೆ ಸ್ನಾನ ಮಾಡಿಸಿದ್ದುಈ ದೃಶ್ಯವೂ ಎಲ್ಲರ ಗಮನ ಸೆಳೆದಿದೆ.

elephantsofworld ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡ ಈ ವಿಡಿಯೋದಲ್ಲಿ ತಾಯಾನೆಯು ಮರಿಯಾನೆ ನಡುವಿನ ಬಾಂಧವ್ಯವನ್ನು ಕಾಣಬಹುದು. ಈ ವಿಡಿಯೋಗೆ ಅಮ್ಮ ಇದ್ದಲ್ಲಿ ಪ್ರತಿಯೊಂದು ಚೆನ್ನಾಗಿರುತ್ತದೆ ಎಂದು ಶೀರ್ಷಿಕೆಯನ್ನು ನೀಡಲಾಗಿದೆ. ಆನೆಯೊಂದು ತನ್ನ ಎರಡು ಕಾಲುಗಳನ್ನು ನೆಲಕ್ಕೆ ಊರಿ ಕುಳಿತುಕೊಂಡಿದೆ. ಎರಡು ಕಾಲುಗಳ ನಡುವೆ ಮುದ್ದು ಕಂದಮ್ಮನನ್ನು ಕೂರಿಸಿಕೊಂಡಿದೆ. ಪೈಪ್‌ನಿಂದು ವ್ಯಕ್ತಿಯೊಬ್ಬರು ನೀರು ಹಾಕುತ್ತಿದ್ದು, ತಾಯಾನೆ ತನ್ನ ಸೊಂಡಿಲಿನಿಂದ ನೀರನ್ನು ಹಿಡಿದು ಮರಿಯಾನೆಯ ಮುಖ ಹಾಗೂ ತಲೆಗೆ ಹಾಕುತ್ತಿದೆ. ತನ್ನ ಸೊಂಡಿಲಿನಿಂದ ಕಂದಮ್ಮನ ಮುಖವನ್ನು ಉಜ್ಜುತ್ತಾ ಸ್ನಾನ ಮಾಡಿಸುತ್ತಿದೆ. ಮೈ ಮೇಲೆ ತಣ್ಣನೆಯ ನೀರು ಬೀಳುತ್ತಿದ್ದಂತೆ ಮರಿಯಾನೆಯು ಓಡಲು ಮುಂದಾಗಿರುವುದನ್ನು ನೀವಿಲ್ಲಿ ನೋಡಬಹುದು.

ಇದನ್ನೂ ಓದಿ
Image
ತಲೆಕೆಳಗಾಗಿ ಮಲಗಿ ಹೋಮ್ ವರ್ಕ್ ಮಾಡೋದ್ರಲ್ಲಿ ಬ್ಯುಸಿ ಈ ಪುಟಾಣಿ
Image
ವರ್ಷದೊಳಗೆ ಶೇ.30ರಷ್ಟು ಬೆಂಗಳೂರು ಟ್ರಾಫಿಕ್​ನಿಂದ ಮುಕ್ತಿ
Image
ಬಾರ್​ ಗರ್ಲ್ ಜತೆಗೆ ಭಾರತೀಯ ಯುವಕರ ಕಿರಿಕ್
Image
ಬದುಕು ಕಟ್ಟಿಕೊಟ್ಟ ಸುಂದರ ನಗರಕ್ಕೆ ಧನ್ಯವಾದ ತಿಳಿಸಿದ ವ್ಯಕ್ತಿ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ: Video: ಉದ್ಯಾನವನಕ್ಕೆ ಭೇಟಿ ನೀಡಿದ ಮಹಿಳೆಯ ಕೆನ್ನೆಗೆ ಚುಂಬಿಸಿದ ಮರಿಯಾನೆ

ಈ ವಿಡಿಯೋ 2.1 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಬಳಕೆದಾರರೊಬ್ಬರು, ತಾಯಿ ಹಾಗೂ ಮಗುವಿನ ನಡುವಿನ ಪರಿಶುದ್ಧವಾದ ಪ್ರೀತಿ ಅಂದ್ರೆ ಇದೇ ನೋಡಿ ಎಂದಿದ್ದಾರೆ. ಇನ್ನೊಬ್ಬರು, ತುಂಬಾನೇ ಸುಂದರವಾಗಿದೆ. ನನಗೆ ಇಂತಹ ವಿಡಿಯೋಗಳನ್ನು ನೋಡುವುದೆಂದರೆ ಇಷ್ಟ. ನಾನು ದಿನವಿಡಿ ಈ ವಿಡಿಯೋಗಳನ್ನು ನೋಡುವುದರಲ್ಲೇ ಕಳೆಯುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ. ತಾಯಿ ತನ್ನ ಮಗುವಿಗಾಗಿ ಎಲ್ಲವನ್ನು ಪ್ರೀತಿಯಿಂದಲೇ ಮಾಡುತ್ತಾಳೆ ಎಂದು ಕಾಮೆಂಟ್‌ನಲ್ಲಿ ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ