Viral: ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ದೊಡ್ಡ ಸಮಸ್ಯೆ, ವರ್ಕ್ ಫ್ರಮ್ ಹೋಮ್ ಆಪ್ಷನ್ ಕೊಡಿ ಎಂದ ಮಹಿಳೆ
ಟ್ರಾಫಿಕ್ ಟ್ರಾಫಿಕ್ ಟ್ರಾಫಿಕ್. ಹೀಗೆನ್ನುತ್ತಿದ್ದಂತೆ ನೆನಪಿಗೆ ಬರುವುದೇ ಈ ಮಾಯನಗರಿ ಬೆಂಗಳೂರು. ಬೆಳಗ್ಗೆ ಹಾಗೂ ಸಂಜೆಯ ವೇಳೆ ರಸ್ತೆಯಲ್ಲಿ ನಿಂತಿರುವ ಸಾಲು ಸಾಲು ವಾಹನವನ್ನು ನೋಡಿದಾಗ ಈ ಟ್ರಾಫಿಕ್ ಗೆ ಯಾವಾಗ ಮುಕ್ತಿ ಸಿಗುತ್ತದೆ ಎಂದು ಮನಸ್ಸಿನಲ್ಲಿ ಅಂದುಕೊಳ್ಳುವವರೇ ಹೆಚ್ಚು. ಟ್ರಾಫಿಕ್ ನಿಂದ ಬೇಸೆತ್ತ ಮಹಿಳೆಯೊಬ್ಬರು ವರ್ಕ್ ಫರ್ಮ್ ಹೋಮ್ ಆಯ್ಕೆ ಕೊಟ್ಟರೆ ತುಂಬಾ ಒಳ್ಳೆಯದು ಎಂದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.

ಬೆಂಗಳೂರು (Bengaluru) ಸೇರಿದಂತೆ ದೊಡ್ಡ ದೊಡ್ಡ ನಗರಗಳಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೌದು, ಬೆಳಗ್ಗೆ ಕೆಲಸ ಹೋಗುವ ಮತ್ತು ಸಂಜೆ ಕೆಲಸದಿಂದ ವಾಪಸ್ ಆಗುವಂತಹ ಪೀಕ್ ಟೈಮ್‌ಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಿರುತ್ತದೆ. ಈ ವಾಹನ ಸವಾರರು ಸುಸ್ತಾಗಿ ಹೋಗುತ್ತಾರೆ. ಇದೀಗ ಇಲ್ಲೊಬ್ಬರು ಮಹಿಳೆಯು ಕೆಲಸಕ್ಕೆ ತೆರಳುವವರಿಗೆ ಈ ಟ್ರಾಫಿಕ್ ಜಾಮ್ (traffic jam) ದೊಡ್ಡ ಸಮಸ್ಯೆ, ಹೀಗಾಗಿ ಮನೆಯಲ್ಲಿ ಕುಳಿತು ಕೆಲಸ ಮಾಡುವ ಆಯ್ಕೆಯಿದ್ದರೆ ಒಳ್ಳೆಯದು, ಸಮಯ ಉಳಿಯುತ್ತದೆ, ಕಂಪನಿಗಳು ಈ ಬಗ್ಗೆ ಸ್ವಲ್ಪ ಗಮನ ಹರಿಸಬೇಕು ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಕೂಡ ಈ ಮಹಿಳೆಯ ಮಾತನ್ನು ಒಪ್ಪಿಕೊಂಡಿದ್ದಾರೆ.
@Nyctophilic ಹೆಸರಿನ ಖಾತೆಯಲ್ಲಿ ಆಕಾಂಕ್ಷಾ ಎನ್ನುವ ಮಹಿಳೆಯು ಶೇರ್ ಮಾಡಲಾದ ಪೋಸ್ಟ್‌ನಲ್ಲಿ ಬೆಂಗಳೂರು ಹಾಗೂ ಮುಂಬೈನಂತಹ ನಗರಗಳಲ್ಲಿ ಕಂಪನಿಗಳು WFH (ವರ್ಕ್ ಫ್ರಮ್ ಹೋಮ್) ಅವಕಾಶ ನೀಡಬೇಕು. ಕಂಪನಿಗೆ ಹೋಗಿ ಕೆಲಸ ಮಾಡುವ ಅವಶ್ಯಕತೆ ಇಲ್ಲದ, ಮನೆಯಿಂದಲೇ ಕೆಲಸ ಮಾಡಬಹುದಾದ ಕೆಲಸಗಳಿಗೆ ಈ ರೀತಿ ಅವಕಾಶ ನೀಡುವುದು ಒಳ್ಳೆಯದು. ಟ್ರಾಫಿಕ್ ಜಾಮ್ ಹಾಗೂ ಕಳಪೆ ಮೂಲಸೌಕರ್ಯದೊಂದಿಗೆ ಕಚೇರಿ ತೆರಳುವುದು ಕಷ್ಟದಾಯಕ. ಈ ಸಮಸ್ಯೆಯಿಂದ ಸಮಯ, ಶಕ್ತಿ ಹಾಗೂ ಹಣವನ್ನು ಸುಮ್ಮನೆ ವೇಸ್ಟ್ ಮಾಡುವುದರಲ್ಲಿ ಅರ್ಥವಿಲ್ಲ. ಕಚೇರಿಗೆ ತಲುಪುವಷ್ಟರಲ್ಲಿ ನಿಮ್ಮ ಶಕ್ತಿಯ ಅರ್ಧದಷ್ಟು ವೇಸ್ಟ್ ಆಗುತ್ತದೆ ಎಂದು ಬರೆದುಕೊಂಡಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
Companies should allow WFH in cities like Bangalore and Mumbai. If physical presence isn’t needed, there’s no point wasting time, energy, and money battling traffic and poor infrastructure. Half your energy is wasted just reaching office.
— Akanksha (@Nyctophilic___) July 24, 2025
ಇದನ್ನೂ ಓದಿ: Viral: ಇನ್ನು ಒಂದು ವರ್ಷದೊಳಗೆ ಶೇ.30ರಷ್ಟು ಬೆಂಗಳೂರು ಟ್ರಾಫಿಕ್ನಿಂದ ಮುಕ್ತಿ, ಹೊಸ ಐಡಿಯಾ ತಂದ ಪ್ರಶಾಂತ್ ಪಿಟ್ಟಿ
ಜುಲೈ 24ರಂದು ಶೇರ್ ಮಾಡಲಾದ ಈ ಪೋಸ್ಟ್ ಈವರೆಗೆ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರು ನಾನಾ ರೀತಿಯ ಕಾಮೆಂಟ್ ಮಾಡುವ ಮೂಲಕ ಈ ರೀತಿಯ ಆಯ್ಕೆಯಿದ್ದರೆ ಒಳ್ಳೆಯದು ಎಂದಿದ್ದಾರೆ. ಒಬ್ಬ ಬಳಕೆದಾರರು, ನಿಮ್ಮ ಮಾತನ್ನು ಒಪ್ಪಿದೆ. ನಿಮ್ಮ ಅಭಿಪ್ರಾಯ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ. ಇನ್ನೊಬ್ಬರು, ನನ್ನ ಪ್ರಕಾರ ಕಚೇರಿಯಲ್ಲಿ ಕೆಲಸ ಮಾಡುವುದರಿಂದ ಉದ್ಯೋಗಿಗಳ ಉತ್ಪಾದಕತೆ ಕಡಿಮೆಯಾಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ನೀವು ಪ್ರತಿದಿನ ಕಚೇರಿಗೆ ಪ್ರಯಾಣ ಮಾಡುವಲ್ಲಿ 3-4 ಗಂಟೆಗಳನ್ನು ವ್ಯರ್ಥ ಮಾಡದಿದ್ದರೆ ವರ್ಕ್ ಫ್ರಮ್ ಆಫೀಸ್ ಉತ್ತಮ ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:49 am, Fri, 25 July 25








