Viral: ನಿನ್ನ ಎದೆ ಚಿಕ್ಕದು, ಥೈಲ್ಯಾಂಡ್ನಲ್ಲಿ ಬಾರ್ ಗರ್ಲ್ ಜತೆಗೆ ಭಾರತೀಯ ಯುವಕರ ಕಿರಿಕ್, ಕೊನೆಗೆ ಪೊಲೀಸರ ಎಂಟ್ರಿ
ಥೈಲ್ಯಾಂಡ್ನಲ್ಲಿ ಕೆಲವೊಂದು ನಶೆಯ ಪ್ರದೇಶಗಳು ಇರುತ್ತದೆ. ಇಲ್ಲಿ ಎಲ್ಲವೂ ಸಿಗುತ್ತದೆ. ಅಲ್ಲಿನ ಬಾರ್ಗಳಲ್ಲಿ ಮಹಿಳೆಯರನ್ನು ಕೂಡ ಬಳಸಿಕೊಳ್ಳುತ್ತಾರೆ. ಅದಕ್ಕೆ ಹೆಚ್ಚಿನ ವಿದೇಶಿಗರು ಥೈಲ್ಯಾಂಡ್ಗೆ ಪ್ರವಾಸ ಮಾಡುತ್ತಾರೆ. ಹಾಗೆ ಮೂವರು ಭಾರತೀಯ ಪ್ರವಾಸಿಗರು ಅಲ್ಲಿಗೆ ತೆರಳಿದ್ದಾರೆ. ಅಲ್ಲಿನ ಪಟ್ಟಾಯದಲ್ಲಿರುವ ಹೋಟೆಲ್‌ಗೆ ಮಹಿಳೆಯೊಬ್ಬರನ್ನು ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಆಕೆಯ ಎದೆ ಭಾಗ ಚಿಕ್ಕದು ಎಂದು ತಿರಸ್ಕರಿಸಿದ್ದು, ಈ ವೇಳೆ ಇಬ್ಬರ ನಡುವೆ ಜಗಳ ನಡೆದಿದೆ. ಮುಂದೇನಾಯ್ತು ಗೊತ್ತಾ? ಆ ಕುರಿತಾದ ಮಾಹಿತಿ ಇಲ್ಲಿದೆ.

ಭಾರತೀಯ ಯುವಕರು ಥೈಲ್ಯಾಂಡ್ಗೆ (Thailand) ಹೆಚ್ಚಾಗಿ ಪ್ರವಾಸ ಹೋಗುತ್ತಾರೆ. ಈ ಬಗ್ಗೆ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತಾರೆ. ಅಲ್ಲಿ ಬಾರ್ಗಳಿಗೆ, ಮಸಾಜ್ ಸೆಂಟರ್ಗಳಿಗೆ ಹೋಗಿ ಮಸಾಜ್ ಮಾಡಿಕೊಳ್ಳುತ್ತಾರೆ. ಹೌದು, ಮೂವರು ಯುವಕರು ಜೊತೆ ಸೇರಿ ಥೈಲ್ಯಾಂಡ್ಗೆ ಪ್ರವಾಸ ಹೋಗಿದ್ದಾರೆ. ಅಲ್ಲಿ ಬಾರ್ ಮಹಿಳೆ ಜತೆಗೆ ಕಿರಿಕ್ ಮಾಡಿಕೊಂಡಿದ್ದಾರೆ. ಆಕೆಯ ಎದೆ ಚಿಕ್ಕದು ಎಂದು ಆಕೆಯ ಜತೆಗೆ ಜಗಳ ಮಾಡಿಕೊಂಡಿದ್ದಾರೆ. ನಂತರ ಪೊಲೀಸರಿಗೆ ಫೋನ್ ಮಾಡಿ ಆಕೆಯ ವಿರುದ್ಧ ದೂರು ನೀಡಿದ್ದಾರೆ.
ಥೈಲ್ಯಾಂಡ್‌ನ ಪಟ್ಟಾಯದಲ್ಲಿರುವ ಹೋಟೆಲ್ ಒಂದರಲ್ಲಿ ಮೂವರು ಭಾರತೀಯ ಯುವಕರು ಮಹಿಳೆಯ ಜತೆಗೆ ಕಿರಿಕ್ ಮಾಡಿಕೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಪಟ್ಟಾಯ ಮೇಲ್‌ನ ವರದಿಯ ಪ್ರಕಾರ , ಪ್ರವಾಸಿಗರು ಆಕೆಯ ದೇಹ ಆಕೃತಿಯ ಬಗ್ಗೆ ಅತೃಪ್ತರಾಗಿದ್ದಾರೆ. ಆಕೆಯ “ಎದೆ ತುಂಬಾ ಚಿಕ್ಕದಾಗಿದೆ” ಆ ಕಾರಣಕ್ಕೆ ಅವಳನ್ನು ರೂಮ್ನಿಂದ ಹೊರ ಹೋಗುವಂತೆ ಕೇಳಿಕೊಂಡಿದ್ದೇವೆ. ಆದರೆ ಆಕೆ ಇದನ್ನು ನಿರಾಕರಿಸಿದ್ದಾಳೆ ಎಂದು ಪ್ರವಾಸಿಗರು ಹೇಳಿದ್ದಾರೆ. ಇನ್ನು ಈ ಮಹಿಳೆ ಕೂಡ ನಾನು ಹೋಗುವುದಿಲ್ಲ. ನಾನು ಹೊರ ಹೋಗಬೇಕೆಂದರೆ ಉಳಿದ ಹಣವನ್ನು ಪಾವತಿಸಿ ಎಂದು ಹಠ ಹಿಡಿದು ಕುಳಿತಿದ್ದಾಳೆ.
ಜುಲೈ 18 ರಂದು, ಸುಮಾರು ಬೆಳಗಿನ ಜಾವ 2.30 ರ ಸುಮಾರಿಗೆ, ಪಟ್ಟಾಯ ಪೊಲೀಸ್ ಠಾಣೆಗೆ ಮೂವರು ಭಾರತೀಯ ಪ್ರವಾಸಿಗರು ಕರೆ ಮಾಡಿದ್ದಾರೆ. ಪೊಲೀಸರು ಸೋಯಿ ಪಟ್ಟಾಯ ಬೀಚ್ 11 ರಲ್ಲಿರುವ ಅವರ ಹೋಟೆಲ್‌ಗೆ ಬಂದಾಗ 35 ರಿಂದ 40 ವರ್ಷ ವಯಸ್ಸಿನ ಮಹಿಳೆ ಜತೆಗೆ ಜಗಳ ಮಾಡುತ್ತಿರುವುದನ್ನು ನೋಡಿದ್ದಾರೆ. ಈ ಸಮಯದಲ್ಲಿ ಮಹಿಳೆ ಗಾಬರಿಯಾಗಿದ್ದು. ಆದರೆ ಆಕೆ ಪೊಲೀಸರು ಬರುವಂತಹ ಯಾವುದೇ ಕೆಲಸ ಮಾಡಿಲ್ಲ ಎಂದು ಹೇಳಿದ್ದಾಳೆ. ಇನ್ನು ಮಹಿಳೆ ಪೊಲೀಸರಿಗೆ ನೀಡಿದ ಹೇಳಿಕೆ ಪ್ರಕಾರ, ನಾನು ಈ ಮೂವರ ಜತೆಗೆ ಒಪ್ಪಂದ ಮಾಡಿಕೊಂಡಿದ್ದಾನೆ. ಒಬ್ಬರಿಗೆ 3,000ದಂತೆ ಎಂದು ಹೇಳಿ ಅವರ ಜತೆಗೆ ಬಂದಿದ್ದೇನೆ. ಈಗಾಗಲೇ 1,000 ನೀಡಿದ್ದಾರೆ. ಆ ನಂತರವೇ ನಾನು ಅವರ ಜತೆಗೆ ಹೊಟೇಲ್ಗೆ ಹೋಗಿದ್ದೇನೆ. ಆದರೆ ಈಗ ನನ್ನ ಎದೆ ಚಿಕ್ಕದು ಎಂದು ಹೇಳಿ, ನನ್ನನ್ನು ತಿರಸ್ಕರಿಸಿದ್ದಾರೆ. ಈ ವೇಳೆ ಇವರ ನಡುವೆ ಜಗಳ ನಡೆದಿದೆ.
ಇದನ್ನೂ ಓದಿ: ಹುಲಿಯಣ್ಣನ ಮೈ ಮೇಲೆ ಒರಗಿ ವಿಶ್ರಾಂತಿ ಪಡೆದ ಸಿಂಹ
ಪೊಲೀಸರು ಬಂದು ಅವರನ್ನು ಸಮಾಧಾನ ಮಾಡಿ, ಒಂದು ನಿರ್ಣಯಕ್ಕೆ ಬರುವಂತೆ ಕೇಳಿಕೊಂಡಿದ್ದಾರೆ. ಪೂರ್ಣ ಪಾವತಿ ಇಲ್ಲದೆ ನಾನು ಇಲ್ಲಿಂದ ಹೋಗುವುದಿಲ್ಲ ಎಂದು ಮಹಿಳೆ ಹೇಳಿದ್ದಾಳೆ.ಕೊನೆಗೆ ಕಡೆಯು ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ನಂತರ ಈ ಮೂವರು ಭಾರತೀಯರು ಭಾಗಶಃ ಹಣವನ್ನು ಆಕೆ ನೀಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








