Video: 54 ವರ್ಷಗಳ ಸುದೀರ್ಘ ದಾಂಪತ್ಯ ಜೀವನ, ಈಕೆ ನನಗೆ ಸಿಕ್ಕ ವರ; ಈ ವೃದ್ಧ ದಂಪತಿಯ ಶುದ್ಧ ಪ್ರೀತಿ ನೋಡಿ
ಈಗಿನ ಕಾಲದ ಪ್ರೀತಿಗೆ ವ್ಯಾರಂಟಿನೂ ಇಲ್ಲ ಗ್ಯಾರಂಟಿಯಂತೂ ಇಲ್ಲವೇ ಇಲ್ಲ. ಕೆಲವೇ ಕೆಲವು ದಿನಗಳ ಜೊತೆಗೆ ಇದ್ದು ವಿಚ್ಛೇದನ ಪಡೆಯುವ ದಂಪತಿಗಳಿಗೆ ಈ ವೃದ್ಧ ದಂಪತಿ ನಿಜಕ್ಕೂ ಮಾದರಿ. 54 ವರ್ಷಗಳ ಸುದೀರ್ಘ ದಾಂಪತ್ಯ ಜೀವನದೊಂದಿಗೆ ಈ ವೃದ್ಧ ದಂಪತಿಯ ಈ ಪ್ರೀತಿಯ ಗುಟ್ಟನ್ನು ಸಂದರ್ಶಕರೊಬ್ಬರು ಹೊರ ತೆಗೆಯುವ ಪ್ರಯತ್ನ ಮಾಡಿದ್ದಾರೆ. ಈ ವೃದ್ಧ ದಂಪತಿಯ ಇಷ್ಟು ವರ್ಷಗಳ ದಾಂಪತ್ಯ ಜೀವನದಲ್ಲಿ ಪ್ರೀತಿ ಇವತ್ತಿಗೂ ಹಚ್ಚಹಸಿರಾಗಿದೆ ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ. ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಹೃದಯ ಗೆದ್ದುಕೊಂಡಿದೆ.

ಮನುಷ್ಯ ಎಷ್ಟು ಬದಲಾಗಿಲ್ಲ ಹೇಳಿ, ಸಂಬಂಧಗಳು ದಿನ ಕಳೆದಂತೆ ಅರ್ಥ ಕಳೆಯುತ್ತಿದೆ. ಹೀಗಾಗಿ ಈಗಿನ ಕಾಲದಲ್ಲಿ ಪರಿಶುದ್ಧ ಪ್ರೀತಿಯನ್ನು ನೋಡೋದೇ ಕಷ್ಟ. ಹೀಗಾಗಿ ಹುಡುಗ ಹುಡುಗಿಯರ ನಡುವಿನ ಪ್ರೀತಿಗೆ ಗ್ಯಾರಂಟಿ ಅನ್ನೋದೇ ಇಲ್ಲ. ನೀನಿಲ್ಲದೇ ಹೋದರೆ ಇನ್ನೊಬ್ಬರು ಎನ್ನುವ ಮನೋಭಾವವು ಎಲ್ಲರಲ್ಲೂ ಬೆಳೆದಿದೆ. ಅದಲ್ಲದೇ, ದಾಂಪತ್ಯ ಜೀವನವೆನ್ನುವುದು ಸಣ್ಣ ಸಣ್ಣ ವಿಷಯಗಳಿಂದ ಮುರಿದು ಬೀಳುತ್ತಿದೆ. ಆದರೆ ನಮ್ಮ ಅಜ್ಜ ಅಜ್ಜಿಯಂದಿರ ಯಶಸ್ವಿ ದಾಂಪತ್ಯ ಜೀವನ (Married life) ನೋಡಿದಾಗ ನಿಜಕ್ಕೂ ಅಚ್ಚರಿಯಾಗುತ್ತದೆ. ಇದೀಗ ವೃದ್ಧ ದಂಪತಿಗಳ ಈ ವಿಡಿಯೋ ಇವರಿಬ್ಬರ ಪ್ರೀತಿ, ಅನ್ಯೋನ್ಯತೆ ಎಷ್ಟಿದೆ ಎನ್ನುವುದಕ್ಕೆ ಸಾಕ್ಷಿ. ಏನೇ ನ್ಯೂನ್ಯತೆಗಳಿದ್ದರೂ ಜೊತೆಯಾಗಿ ನಡೆದುಕೊಂಡ ಬಂದ ಹಾದಿಯನ್ನು ಮೆಲುಕು ಹಾಕಿಕೊಂಡಿದ್ದಾರೆ. ಕೈ ಕೈ ಹಿಡಿದುಕೊಂಡು ವಾಕಿಂಗ್ ಮಾಡುತ್ತಿದ್ದ ವೃದ್ಧ ದಂಪತಿಗಳನ್ನು ಸಂದರ್ಶಕರೊಬ್ಬರು ಮಾತನಾಡಿಸಿ, ಈ ವೇಳೆಯಲ್ಲಿ ಇವರು ತಮ್ಮ ಪ್ರೀತಿಯ ಹಿಂದಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಬಳಕೆದಾರರ ಮೆಚ್ಚುಗೆ ಪಡೆದುಕೊಂಡಿದೆ.
shutterbonsai ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸಂದರ್ಶಕರೊಬ್ಬರು ಈ ವೃದ್ಧ ದಂಪತಿಯನ್ನು ಮಾತನಾಡಿಸಿದ್ದು, ನಿಮಗೆ ಮದುವೆಯಾಗಿದ್ದೀಯಾ ಎಂದು ಕೇಳಿದಾಗ, ಈ ವೃದ್ಧನು ‘ಇಲ್ಲ, ನಾನು ಮದುವೆಯಾಗಿಲ್ಲ. ನಾನು ಇದೀಗ ಹುಡುಗಿಯನ್ನು ಹುಡುಕುತ್ತಿದ್ದೇನೆ ತಮಾಷೆಯಾಗಿ ಹೇಳುತ್ತ ನಗುವುದರಿಂದ ಈ ವಿಡಿಯೋವು ಪ್ರಾರಂಭವಾಗುತ್ತದೆ. ಆ ಬಳಿಕ 1971 ರಲ್ಲಿ ನಾನು ಮದುವೆಯಾಗಿದ್ದೆ, ಸುಮಾರು 54 ವರ್ಷಗಳು ಕಳೆದಿವೆ ಎಂದು ಹೇಳುವುದನ್ನು ನೀವಿಲ್ಲಿ ನೋಡಬಹುದು. ‘ಮೇಡಂ, ನೀವು ಏನನ್ನಾದರೂ ಹೇಳಲು ಇಷ್ಟಪಡ್ತೀರಾ ಎಂದು ಕೇಳಿದ್ದಕ್ಕೆ ಅವಳು ಹೆಚ್ಚು ಮಾತನಾಡಲು ಸಾಧ್ಯವಾಗುವುದಿಲ್ಲ, ನಾನು ಅವಳ ಧ್ವನಿ ಎನ್ನುತ್ತಾ, ಅವಳಿಗೆ ಕಿವಿ ಸರಿಯಾಗಿ ಕೇಳಿಸುವುದಿಲ್ಲ ಎಂದಿದ್ದಾರೆ ವೃದ್ಧ ವ್ಯಕ್ತಿ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಈ ವೇಳೆಯಲ್ಲಿ ನಿಮ್ಮ ಸುಖ ದಾಂಪತ್ಯದ ಗುಟ್ಟೇನು, ನೀವು ಜೊತೆಯಾಗಿ ಇರುವಂತೆ ಮಾಡಿದ ವಿಷಯ ಯಾವುದು ಎಂದು ಪ್ರಶ್ನೆ ಕೇಳಿದ್ದಾನೆ. ಅದಕ್ಕೆ ನಗುತ್ತಾ ವೃದ್ಧನು , ಪ್ರೀತಿ ನೀವು ಹಂಚಿಕೊಳ್ಳುವ ಬಹುಮುಖ್ಯ ಸಂಗತಿ. ಪ್ರೀತಿ ಎಂದರೆ ಹತ್ತು ಅಥವಾ ಹದಿನೈದು ವರ್ಷಗಳಲ್ಲಿ ಮಾಯವಾಗುವ ಆಕರ್ಷಣೆ ಖಂಡಿತವಲ್ಲ. ನೀವು ಯಾರನ್ನಾದರೂ ಪ್ರೀತಿಸುತ್ತೀರಿ, ನೀವು ಇಂದು ಅವರನ್ನು ಪ್ರೀತಿಸುತ್ತೀರಿ, ನಾಳೆ ಅವರನ್ನು ಪ್ರೀತಿಸುತ್ತೀರಿ, ನೀವು ಅವರನ್ನು ಶಾಶ್ವತವಾಗಿ ಪ್ರೀತಿಸುತ್ತೀರಿ, ನಂತರದಲ್ಲಿ ಜವಾಬ್ದಾರಿ ಬರುತ್ತದೆ. ಏಕೆಂದರೆ ವೃದ್ಧಾಪ್ಯವು ಬಹಳಷ್ಟು ಸಮಸ್ಯೆಗಳನ್ನು ತಂದೊಡುತ್ತದೆ.
ಇಂದು ಅವಳಿಗೆ ಕಿವಿ ಕೇಳಿಸುತ್ತಿಲ್ಲ, ಅವಳಿಗೆ ಬೇರೆ ಕೆಲವು ಸಮಸ್ಯೆಗಳೂ ಇವೆ, ಆದರೆ ಅವಳು ನನ್ನ ಜೀವನದ ಭಾಗವಾಗಿದ್ದಾಳೆ ಎಂದು ಹೇಳಿದ್ದಾರೆ. ತನ್ನ ಹೆಂಡತಿ ತನ್ನನ್ನು ಕಾಳಜಿಯಿಂದ ನೋಡಿಕೊಂಡಿದ್ದಾಗಿ ಹಾಗೂ ತನ್ನ ತಾಯಿಯನ್ನು ಚೆನ್ನಾಗಿ ನೋಡಿ ಕೊಂಡಿದ್ದಾಳೆ. ಈಕೆ ನನಗೆ ಸಿಕ್ಕ ವರ. ನಾವು ದೇವರನ್ನು ಒಂದೇ ಒಂದು ವಿಷಯ ಕೇಳಬೇಕು,ನಾನು ಚೆನ್ನಾಗಿದ್ದಾಗ ನನ್ನನ್ನು ನಿನ್ನೊಂದಿಗೆ ಕರೆದುಕೊಂಡು ಹೋಗು ಎಂದು ಹೇಳಿರುವುದನ್ನು ಈ ವಿಡಿಯೋದಲ್ಲಿ ನೀವು ನೋಡಬಹುದು.
ಇದನ್ನೂ ಓದಿ:Video: ಮೊಬೈಲ್ ನೋಡುತ್ತಾ ಕುಳಿತು ಮೈ ಮರೆತ್ರೆ ಏನಾಗುತ್ತೆ ಅನ್ನೋದನ್ನು ನೋಡಿ ಒಮ್ಮೆ
ಈ ವಿಡಿಯೋ 4.4 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು ಈ ವೃದ್ಧ ದಂಪತಿಯ ಪ್ರೀತಿಯನ್ನು ಮೆಚ್ಚಿಕೊಂಡಿದ್ದಾರೆ. ಬಳಕೆದಾರರೊಬ್ಬರು, ಅವನು ಅವಳ ಧ್ವನಿ, ಅವಳು ಅವನ ಮಾತುಗಳು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಸಣ್ಣ ಸಣ್ಣ ವಿಷಯಕ್ಕೆ ಜಗಳ ಮಾಡಿಕೊಂಡು ದೂರವಾಗುವ ದಂಪತಿಗಳಿಗೆ ಈ ಜೋಡಿ ಮಾದರಿ ಎಂದಿದ್ದಾರೆ. ಇನ್ನೊಬ್ಬರು, ಜೀವನದ ಕೊನೆಯ ಕ್ಷಣಗಳಲ್ಲಿ ಕೈ ಕೈ ಹಿಡಿದು ನಡೆಯುವ ದಂಪತಿಗಳನ್ನು ಕಂಡಾಗ ನಿಜಕ್ಕೂ ಖುಷಿಯಾಗುತ್ತದೆ. ನಿಮ್ಮ ಪ್ರೀತಿಯೂ ಹೀಗೆ ಶಾಶ್ವತವಾಗಿರಲಿ ಎಂದು ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:35 pm, Wed, 23 July 25








