AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ರೈಲಿನಲ್ಲಿ ಬಡ ವ್ಯಾಪಾರಿ ಚೀಲದಲ್ಲಿದ್ದ ತಿಂಡಿ ಎಗರಿಸಿದ ಪ್ರಯಾಣಿಕ

ಹೊಟ್ಟೆ ತುಂಬಿಸಿಕೊಳ್ಳಲು ಕಷ್ಟ ಪಟ್ಟು ದುಡಿಯುವ ಅದೆಷ್ಟೋ ಜನರು ನಮ್ಮ ಸುತ್ತಮುತ್ತಲಿನಲ್ಲಿದ್ದಾರೆ. ಆದರೆ ನಿಯತ್ತಾಗಿ ದುಡಿಯುವ ಇಂತಹ ವ್ಯಕ್ತಿಗಳಿಗೆ ಮೋಸ ಮಾಡುವವರೇ ಹೆಚ್ಚು. ಹೌದು, ಇಂದಿನ ಯುವಪೀಳಿಗೆ ಜನರು ಮಾನವೀಯತೆ ಇಲ್ಲದಂತೆ ವರ್ತಿಸುತ್ತಿದ್ದಾರೆ. ಇದೀಗ ರೈಲಿನಲ್ಲಿ ಪ್ರಯಾಣಿಕನೊಬ್ಬನು ಜನ ದಟ್ಟಣೆಯ ಸಮಯವನ್ನೇ ಬಳಸಿಕೊಂಡಿದ್ದಾನೆ. ವ್ಯಾಪಾರ ಮಾಡಲು ಬೋಗಿಯೊಳಗೆ ಬಂದಿದ್ದ ಬಡ ವ್ಯಾಪಾರಸ್ಥನ ತಲೆಯ ಮೇಲಿದ್ದ ಚೀಲದಿಂದ ಜ್ಯೂಸ್ ಪ್ಯಾಕೆಟ್ ಕದ್ದಿದ್ದು, ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.

Video: ರೈಲಿನಲ್ಲಿ ಬಡ ವ್ಯಾಪಾರಿ ಚೀಲದಲ್ಲಿದ್ದ ತಿಂಡಿ ಎಗರಿಸಿದ ಪ್ರಯಾಣಿಕ
ವೈರಲ್‌ ವಿಡಿಯೋImage Credit source: Twitter
ಸಾಯಿನಂದಾ
|

Updated on:Jul 22, 2025 | 4:52 PM

Share

ನೀವು ಏನೇ ಹೇಳಿ, ನಿಯತ್ತಾಗಿರುವವರಿಗೆ ಇದು ಕಾಲವಲ್ಲ, ಮೋಸ, ದ್ರೋಹ ಮಾಡಿದರೆ ಜೀವನ ಸಾಗೋದು ಎನ್ನುವಂತಾಗಿದೆ. ಇದೇ ಮನಸ್ಥಿತಿಯಲ್ಲಿ ಇಂದಿನ ಯುವಜನಾಂಗ ದಾರಿತಪ್ಪುತ್ತಿದೆ. ಕಳ್ಳತನ, ವಂಚನೆ ಸೇರಿದಂತೆ ಇನ್ನಿತ್ತರ ಕೆಟ್ಟ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಆದರೆ ಇಲ್ಲೊಂದು ಕಡೆ ನಾಚಿಕೆಗೇಡಿನ ಘಟನೆ ನಡೆದಿದೆ. ಟ್ರೈನ್‌ನಲ್ಲಿ ತಿಂಡಿ ತಿನಿಸುಗಳನ್ನು ವ್ಯಾಪಾರ ಮಾಡಲು ಬಂದಿದ್ದ ಬಡ ವ್ಯಾಪಾರಿಯ ಚೀಲದಿಂದ ಪ್ರಯಾಣಿಕನೊಬ್ಬನು (passenger) ಜ್ಯೂಸ್ ಪ್ಯಾಕೆಟ್ ಸೇರಿದಂತೆ ಇತರ ತಿಂಡಿ ತಿನಿಸುಗಳನ್ನು ಕದ್ದಿದ್ದಾನೆ. ಈ ವಿಡಿಯೋ ಇದೀಗ ವೈರಲ್‌ ಆಗುತ್ತಿದ್ದಂತೆ, ಪ್ರಯಾಣಿಕನ ಈ ದುರ್ವರ್ತನೆಗೆ ಸೋಷಿಯಲ್‌ ಮೀಡಿಯಾದಲ್ಲಿ (social media) ಭಾರೀ ಆಕ್ರೋಶ ವ್ಯಕ್ತವಾಗಿದೆ.

@Tarunspeaks ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋಗೆ, ಈ ವ್ಯಕ್ತಿ ಬಡ ಮಾರಾಟಗಾರರಿಂದ ಕದಿಯುವುದನ್ನು “ಹಾಸ್ಯ” ಎಂದು ಭಾವಿಸುತ್ತಾನೆ. ಈ ವ್ಯಕ್ತಿಯನ್ನು ಬಂಧಿಸಬೇಕು” ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋದಲ್ಲಿ ರೈಲಿನಲ್ಲಿ ಕಿಕ್ಕಿರಿದ ಜನಸಂದಣಿ ಇರುವುದನ್ನು ಕಾಣಬಹುದು. ಹೌದು, ಟ್ರೈನ್‌ನಲ್ಲಿ ಪ್ರಯಾಣಿಕರು ತುಂಬಿದ್ದ ಕಾರಣ, ಬಡ ವ್ಯಾಪಾರಿಯೊಬ್ಬ ಕೈಯಲ್ಲಿ ಚಿಪ್ಸ್ ಹಾಗೂ ಬಿಸ್ಕತ್ತುಗಳನ್ನು ಹಿಡಿದುಕೊಂಡು ಮಾರಾಟ ಮಾಡುತ್ತಿದ್ದಾನೆ.

ಇದನ್ನೂ ಓದಿ
Image
ಓಲಾದಲ್ಲಿ ಆಟೋ ಬುಕ್ ಮಾಡೋ ಬದಲು ಸೆಡಾನ್ ಕಾರ್ ಬುಕ್ ಮಾಡೋದೇ ಬೆಸ್ಟ್
Image
ದೇವರ ಹೆಸರಿನಲ್ಲಿ ಹಣ ವಸೂಲಿ ಮಾಡ್ತಾರೆ, ಈ ಜನರಿಂದ ನೀವು ದೂರವಿರಿ
Image
ವಿಚ್ಛೇದಿತ ಮಹಿಳೆಯರಿಗೆ ರಿಲ್ಯಾಕ್ಸ್ ನೀಡುವ ವಿಶೇಷ ಡಿವೋರ್ಸ್ ಕ್ಯಾಂ
Image
ಗ್ರಾಹಕರಿಗೆ ವಿಶೇಷ ಸೂಚನೆ : ಚಹಾ ಅಂಗಡಿಯ ಗೋಡೆಯ ಮೇಲೆ ವಿಶಿಷ್ಟ ಪೋಸ್ಟರ್

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವೇಳೆಯಲ್ಲಿ ಮೇಲಿನ ಬರ್ತ್‌ನಲ್ಲಿ ಕುಳಿತಿದ್ದ ಪ್ರಯಾಣಿಕನೊಬ್ಬನು ತನ್ನ ನೀಚ ಬುದ್ಧಿಯನ್ನು ತೋರಿಸಿದ್ದಾನೆ. ವ್ಯಾಪಾರಿ ಬಳಿ ಮಾತನಾಡುತ್ತ ಗಮನವನ್ನು ಬೇರೆಡೆ ಸೆಳೆದು ವ್ಯಾಪಾರಿಯ ತಲೆ ಮೇಲೆ ಇದ್ದ ಚೀಲದಿದ ಜ್ಯೂಸ್ ಪ್ಯಾಕೆಟ್ ಎಗರಿಸಿದ್ದಾನೆ. ಈತನ ಮುಖಭಾವದಲ್ಲಿ ತಾನೇನೋ ದೊಡ್ಡ ಸಾಧನೆ ಮಾಡಿದೆ ಎಂದು ವ್ಯಕ್ತವಾಗುತ್ತಿದೆ. ಅಲ್ಲೇ ಇದ್ದ ಈ ಪ್ರಯಾಣಿಕನ ಸ್ನೇಹಿತನು ಇದನ್ನು ವಿಡಿಯೋ ಮಾಡಿದ್ದಾನೆ. ಈ ರೀತಿಯಾಗಿ ಬೋಗಿಯೊಳಗೆ ಬರುತ್ತಿದ್ದ ವ್ಯಾಪಾರಿಗಳ ಚೀಲದಿಂದ ಸಮೋಸ, ಪಕೋಡ, ನೀರಿನ ಬಾಟಲಿ ಸೇರಿದಂತೆ ತಿಂಡಿ ತಿನಿಸುವುದನ್ನು ಕದಿಯುವುದನ್ನು ನೀವು ನೋಡಬಹುದು. ಅಲ್ಲೇ ಇದ್ದ ಉಳಿದ ಪ್ರಯಾಣಿಕರು ಈತನ ಈ ಕೆಲಸವನ್ನು ಕಂಡು ನಗುತ್ತಿದ್ದಾರೆ. ಉಳಿದವರು ಈತನಿಗೆ ಬುದ್ಧಿ ಹೇಳುವ ಬದಲು ಮನರಂಜನೆ ಎಂದು ಪರಿಗಣಿಸಿರುವುದನ್ನು ನೀವಿಲ್ಲಿ ನೋಡಬಹುದು.

ಇದನ್ನೂ ಓದಿ :Video: ನಮ್ಮವರಿಗೆ ನಾಗರಿಕ ಪ್ರಜ್ಞೆ ಇಲ್ಲ, ಹಾಗಾಗಿ ಭಾರತ ಹೀಗಿದೆ ಎಂದ ಭಾರತೀಯ ವ್ಲಾಗರ್

ಜುಲೈ 21 ರಂದು ಶೇರ್ ಮಾಡಲಾದ ಈ ವಿಡಿಯೋ 1.4 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರರು ರೈಲ್ವೆ ರಕ್ಷಣಾ ಪಡೆ ಅಧಿಕಾರಿಗಳನ್ನು ಟ್ಯಾಗ್ ಮಾಡಿ ಆರೋಪಿಯನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. ಮತ್ತೊಬ್ಬ ಬಳಕೆದಾರರು, ನಾಚಿಕೆಗೇಡಿನ ಕೃತ್ಯ, ದುಡ್ಡು ಕೊಟ್ಟು ಖರೀದಿಸು, ಬಡ ವ್ಯಾಪಾರಿಯ ಹೊಟ್ಟೆಯ ಮೇಲೆ ಹೊಡೆಯೋದು ಸರಿಯಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಈ ರೀತಿ ಕೆಟ್ಟ ಕೆಲಸ ಮಾಡಿ ತಾನು ಏನೋ ಸಾಧಿಸಿದೆ ಅಂದುಕೊಂಡೆ ಭಾರತೀಯರು ಏಕೆ ಹೀಗೆ ಭಾವಿಸುತ್ತಾರೆ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:50 pm, Tue, 22 July 25

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ