AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಇಲ್ಲಿ ಯಾವ ಪೇನು ಇಲ್ಲ, ದುಡ್ಡು ಕೊಡು ಬೋಂಡಾ ತಿನ್ನು, ದುಡ್ಡು ಕೊಡು ಟೀ ಕುಡಿ, ಗ್ರಾಹಕರಿಗೆ ವಿಶೇಷ ಸೂಚನೆ

ಇತ್ತೀಚೆಗಿನ ದಿನಗಳಲ್ಲಿ ಡಿಜಿಟಲ್ ಪಾವತಿ ಹೆಚ್ಚಾಗಿದೆ. ಹೆಚ್ಚಿನವರು ಗೂಗಲ್ ಪೇ, ಫೋನ್ ಪೇ ಸೇರಿದಂತೆ ಇನ್ನಿತ್ತರ ಆಪ್ಲಿಕೇಶನ್‌ಗಳನ್ನು ಹಣ ಪಾವತಿಗಾಗಿ ಅವಲಂಬಿಸಿಕೊಂಡಿದ್ದಾರೆ. ಹೀಗಿರುವಾಗ ವಾಣಿಜ್ಯ ತೆರಿಗೆ ಇಲಾಖೆಯು ಯುಪಿಐ ಮೂಲಕ ವಹಿವಾಟು ಮಾಡುವ ಸಣ್ಣ ವ್ಯಾಪಾರಸ್ಥರಿಗೆ ಈಗಾಗಲೇ ನೋಟೀಸ್ ಜಾರಿ ಮಾಡಿದೆ. ಈ ಹಿನ್ನಲೆಯಲ್ಲಿ ಚಹಾ ಅಂಗಡಿಯೊಂದರ ಗೋಡೆಯ ಮೇಲೆ ಅಂಟಿಸಲಾದ ಪೋಸ್ಟರ್‌ವೊಂದು ಎಲ್ಲರ ಗಮನ ಸೆಳೆಯುತ್ತಿದೆ. ಅಷ್ಟಕ್ಕೂ ಈ ಪೋಸ್ಟರ್‌ನಲ್ಲಿ ಏನಿದೆ ಗೊತ್ತಾ? ಈ ಕುರಿತಾದ ಮಾಹಿತಿ ಇಲ್ಲಿದೆ ನೋಡಿ

Viral: ಇಲ್ಲಿ ಯಾವ ಪೇನು ಇಲ್ಲ, ದುಡ್ಡು ಕೊಡು ಬೋಂಡಾ ತಿನ್ನು, ದುಡ್ಡು ಕೊಡು ಟೀ ಕುಡಿ, ಗ್ರಾಹಕರಿಗೆ ವಿಶೇಷ ಸೂಚನೆ
ವೈರಲ್ ಪೋಸ್ಟ್Image Credit source: Twitter
ಸಾಯಿನಂದಾ
|

Updated on:Jul 21, 2025 | 2:19 PM

Share

ನಾವಿಂದು ಡಿಜಿಟಲ್ ಯುಗದಲ್ಲಿದ್ದೇವೆ. ಕೈಯಲ್ಲಿ ದುಡ್ಡಿಲ್ಲದಿದ್ದರೆ ಏನಂತೆ, ಬ್ಯಾಂಕ್‌ನಲ್ಲಿ ದುಡ್ಡಿದು ಕೈಯಲ್ಲಿ ಸ್ಮಾರ್ಟ್ ಫೋನ್ ಇದ್ದರೆ ಎಲ್ಲವೂ ಸಾಧ್ಯ. ಹೌದು, ಅಂಗಡಿಗಳು, ಬೇಕರಿಗಳಲ್ಲಿ ಯುಪಿಐ ಪಾವತಿ ಹೆಚ್ಚಾಗಿದ್ದು, ಹೀಗಾಗಿ ಹೆಚ್ಚಿನವರು ಯುಪಿಐ ಮೂಲಕವೇ ವಹಿವಾಟು ನಡೆಸುತ್ತಿದ್ದಾರೆ. ಹೀಗಾಗಿ ವಾಣಿಜ್ಯ ತೆರಿಗೆ ಇಲಾಖೆಯೂ ಲಕ್ಷಾನುಗಟ್ಟಲೆ ಯುಪಿಐ (UPI) ಮೂಲಕ ವಹಿವಾಟು ಮಾಡುವ ಅಂಗಡಿ ಮಾಲೀಕರಿಗೆ, ಸಣ್ಣ ವ್ಯಾಪಾರಸ್ಥರಿಗೆ ತೆರಿಗೆ ಪಾವತಿಸಲು ನೋಟೀಸ್ ನೀಡಿದೆ. ಈ ಹಿನ್ನಲೆಯಲ್ಲಿ ಇಲ್ಲೊಂದು ಪೋಸ್ಟರ್ ವೈರಲ್ ಆಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ (Sagar taluk of Shivamogga district) ಸಣ್ಣದಾದ ಚಹಾ ಅಂಗಡಿಯೊಂದರ ಗೋಡೆಯ ಮೇಲೆ ವಿಶೇಷವಾದ ಪೋಸ್ಟರ್‌ವೊಂದು ಗಮನ ಸೆಳೆದಿದೆ. ಇದರಲ್ಲಿ ಯಾವ ಪೇನು ಇರುವುದಿಲ್ಲ. ದುಡ್ಡು ಕೊಟ್ಟು ತಕೊಳ್ಳಿ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾನೆ.

@krs party ಹೆಸರಿನ ಎಕ್ಸ್ ಖಾತೆಯಲ್ಲಿ ಚಹಾ ಅಂಗಡಿಯೊಂದರ ಗೋಡೆಯ ಮೇಲಿನ ಪೋಸ್ಟರ್ ಶೇರ್ ಮಾಡಿಕೊಳ್ಳಲಾಗಿದೆ. ಸಾಗರ ನಗರ ಭಾಗದ ಕ್ಯಾಂಟೀನ್‌ನಲ್ಲಿ ಕಂಡು ಬಂದ ಪ್ರತಿ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ಪೋಸ್ಟರ್‌ನಲ್ಲಿ ಗೂಗಲ್ ಪೇ, ಫೋನ್ ಪೇ, ಪೇಟಿಯಂ, ಭಾರತ್ ಪೇ ಯಾವ ಪೇನು ಇರುವುದಿಲ್ಲ. ದುಡ್ಡುಕೊಡು ಬೋಂಡಾ ತಿನ್ನು, ದುಡ್ಡುಕೊಡು ಟೀ ಕುಡಿ, ದುಡ್ಡುಕೊಡು ಏನಾರ ತಗ, ಸಾಲ ಇಲ್ಲ. ಕ್ಯಾಶ್ ವ್ಯವಹಾರ ಮಾತ್ರ ಏರುತ್ತದೆ ಎಂದು ಗ್ರಾಹಕರಿಗೆ ಕಟ್ಟುನಿಟ್ಟಾಗಿ ತಿಳಿಸುವ ಮೂಲಕ ಇಲ್ಲಿ ಬರೆದುಕೊಂಡಿರುವುದನ್ನು ಕಾಣಬಹುದು.

ಇದನ್ನೂ ಓದಿ
Image
ತನ್ನ ದುಬಾರಿ ಜೀವನಶೈಲಿಗೆ ಕಂಪನಿಯ ಕೋಟಿ ಕೋಟಿ ಹಣ ಬಳಸಿದ ಮಹಿಳೆ
Image
ಹನಿಮೂನ್​​​ ಹೋಗಲು ಮದುವೆ ಊಟವನ್ನು ಹರಾಜಿಗಿಟ್ಟ ಜೋಡಿ
Image
ಚುಡಾಯಿಸಲು ಬಂದ ವ್ಯಕ್ತಿಗೆ ನಡು ರಸ್ತೆಯಲ್ಲೇ ಚಪ್ಪಿಲಿ ಏಟು ಕೊಟ್ಟ ಹುಡುಗಿ
Image
4.5 ಕೆಜಿ ತೂಕದ ಮಗುವಿಗೆ ಜನ್ಮ ನೀಡಿದ ಅಂತಿಮ ವರ್ಷದ ವಿದ್ಯಾರ್ಥಿನಿ

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಈ ಪೋಸ್ಟ್ ನಲವತ್ತೆಂಟು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು ಕಾಮೆಂಟ್ ಮಾಡುವ ಮೂಲಕ ವಾಣಿಜ್ಯ ಇಲಾಖೆಯೂ ಕೈಗೊಂಡ ಕ್ರಮ ಎಷ್ಟು ಪರಿಣಾಮ ಬೀರಿದೆ ಎಂದು ಕಾಮೆಂಟ್ ನಲ್ಲಿ ಉಲ್ಲೇಖಿಸಿದ್ದಾರೆ. ಬಳಕೆದಾರರೊಬ್ಬರು, ಇದು ನಮ್ಮ ದೇಶದ ಧ್ವನಿ ಎಂದಿದ್ದಾರೆ. ಮತ್ತೊಬ್ಬರು, ಪರೋಕ್ಷವಾಗಿ ಈ ರೀತಿ ಡಿಜಿಟಲ್ ಸೇವೆಗಳು ಎಲ್ಲಾ ಇ ಕಾಮರ್ಸ್ರ್ಸ್ ಅಪ್ಲಿಕೇಶನ್‌ಗಳಿಗೆ ಪ್ರಯೋಜನವನ್ನು ನೀಡುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ : ಸೌಂದರ್ಯ ಹೆಚ್ಚಿಸುವ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಕಂಪನಿ ಹಣ ಬಳಸಿದ ಮಹಿಳೆ

ಇನ್ನೊಬ್ಬ ಬಳಕೆದಾರರು, ಟ್ಯಾಕ್ಸ್ ಪೇ ಮಾಡಿ ಅಂದ ಕೂಡಲೇ ನೋ ಯುಪಿಐ ನಾಟಕ ಶುರು ಆಯ್ತು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು, ಯುಪಿಐ ಪಾವತಿಗಳನ್ನು ಸ್ವೀಕರಿಸದ ಅಂತಹ ಅಂಗಡಿಗಳಿಗೆ ಹೋಗಬೇಡಿ.. ಸಂಬಳ ಪಡೆಯುವ ವರ್ಗವು ಎಲ್ಲಾ ತೆರಿಗೆಗಳನ್ನು ಪಾವತಿಸುತ್ತಲೇ ಇರುತ್ತದೆ ಮತ್ತು ಇತರರು ತೆರಿಗೆ ತಪ್ಪಿಸುವುದು, ತಮ್ಮನ್ನು ಬಡವರೆಂದು ತೋರಿಸಿಕೊಳ್ಳುವುದು ಮತ್ತು ಉಚಿತ ಕೊಡುಗೆಗಳನ್ನು ಆನಂದಿಸುವುದು ನ್ಯಾಯವಲ್ಲ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:52 am, Mon, 21 July 25

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!