Video: ದೇವರ ಹೆಸರಿನಲ್ಲಿ ಹಣ ವಸೂಲಿ ಮಾಡ್ತಾರೆ, ಇಂತವರನ್ನು ಕಂಡ್ರೆ ನೀವು ಹುಷಾರಾಗಿರಿ ಎಂದ ಬೆಂಗಳೂರಿನ ಯುವತಿ
ಕೈ ಕಾಲು ಗಟ್ಟಿಯಿದ್ದರೂ ದುಡಿದು ತಿನ್ನುವ ಬದಲು ಭಿಕ್ಷೆ ಬೇಡಿ ತಿನ್ನುವವರನ್ನು ನೋಡಬಹುದು. ಹೌದು, ಬಸ್ ನಿಲ್ದಾಣ, ರೈಲು ನಿಲ್ದಾಣ, ದೇವಸ್ಥಾನ ಆವರಣ ಸೇರಿದಂತೆ ಸಾರ್ವಜನಿಕರ ಸ್ಥಳಗಳಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುವವರೇ ಹೆಚ್ಚು. ಹೀಗಿರುವಾಗ ಬೆಂಗಳೂರಿನಲ್ಲಿ ಭಿಕ್ಷೆ ಬೇಡುವವರಿಂದ ತಮಗಾದ ಕಹಿ ಅನುಭವದ ಬಗ್ಗೆ ಯುವತಿಯೊಬ್ಬಳು ಹೇಳಿಕೊಂಡಿದ್ದಾಳೆ. ದಯವಿಟ್ಟು ಇಂತವರಿಂದ ದೂರವಿರಿ ಎಂದಿದ್ದಾಳೆ. ಈ ಕುರಿತಾದ ಕುತೂಹಲಕಾರಿ ಪೋಸ್ಟ್ ಇಲ್ಲಿದೆ.

ಕಷ್ಟ ಪಟ್ಟು ದುಡಿದು ತಿನ್ನುವುದೆಂದರೆ ಕೆಲವರಿಗೆ ಕಷ್ಟ. ಹೀಗಾಗಿ ಬೇಡಿ ತಿಂದು ಜೀವನ ಸಾಗಿಸುವವರು ನಮ್ಮ ಸುತ್ತಮುತ್ತಲಿನಲ್ಲಿದ್ದಾರೆ. ಅದಲ್ಲದೇ, ಭಿಕ್ಷಾಟನೆಯನ್ನು ಲಾಭದಾಯಕ ಉದ್ಯೋಗ ಮಾಡಿಕೊಂಡವರು ಇದ್ದಾರೆ. ಕೆಲವರು ಮಕ್ಕಳನ್ನು ಭಿಕ್ಷಾಟನೆಗೆ ಕಳುಹಿಸಿದರೆ, ಇನ್ನು ಕೆಲವರು ಮಗುವನ್ನು ಕಂಕುಳಲ್ಲಿ ಕೂರಿಸಿಕೊಂಡು ಭಿಕ್ಷೆ ಬೇಡುತ್ತಾರೆ. ಅಷ್ಟೇ ಅಲ್ಲದೇ, ತಲೆ ಮೇಲೆ ಮೂರ್ತಿಗಳನ್ನು ಇಟ್ಟುಕೊಂಡು ದೇವರ ಹೆಸರಿನಲ್ಲಿ ಜನರ ಬಳಿ ಹಣ ವಸೂಲಿ ಮಾಡುತ್ತಾರೆ. ಬೆಂಗಳೂರಿನ ಇಂದಿರಾನಗರದಲ್ಲಿ (Indiranagar in Bengaluru) ದೇವರ ವಿಗ್ರಹಗಳನ್ನು ತಲೆ ಮೇಲೆ ಇಟ್ಟುಕೊಂಡು ದೇವರ ಹೆಸರಿನಲ್ಲಿ ಜನರಿಂದ ಹಣ ವಸೂಲಿ ಮಾಡುವವರ ಸಂಖ್ಯೆಯೂ ದಿನ ದಿನೇ ಹೆಚ್ಚಾಗುತ್ತಿದೆ. ಹೀಗಾಗಿ ಇಂತವರನ್ನು ಕಂಡರೆ ನೀವು ಹುಷಾರಾಗಿ ಎಂದು ಬೆಂಗಳೂರಿನ ಯುವತಿಯೂ ಎಚ್ಚರಿಸಿದ್ದಾಳೆ. ಈ ವೇಳೆಯಲ್ಲಿ ತಮಗಾದ ಕಹಿ ಅನುಭವದ ಬಗ್ಗೆ ಶ್ರೇಯಾ (Shreya) ಎನ್ನುವ ಯುವತಿ ಹೇಳಿಕೊಂಡಿದ್ದು, ಸದ್ಯ ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ.
shreyadiary ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದ್ದು ಶ್ರೇಯಾ ಎಂಬುವರು ತಮಗಾದ ಕಹಿ ಅನುಭವವನ್ನು ಹೇಳಿಕೊಂಡಿದ್ದಾಳೆ. ಇಂದು ಜುಲೈ 14ರಂದು ಇಂದಿರಾನಗರದ ಚಿನ್ ಲಂಗ್ ಬ್ರೆವರಿಯಲ್ಲಿ ಸ್ನೇಹಿತರೊಂದಿಗೆ ಊಟಕ್ಕೆ ಹೊರಗೆ ಹೋಗಿದ್ದಾಗ ವೇಳೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆಯಿತು. ನಾವು ಹೊರಗೆ ಇಳಿಯುತ್ತಿದ್ದಂತೆ ದೇವರ ವಿಗ್ರಹಗಳನ್ನು ಹಿಡಿದಿದ್ದ ಮಹಿಳೆಯರ ಗುಂಪೊಂದು ಆಕ್ರಮಣಕಾರಿಯಾಗಿ ನಮ್ಮನ್ನು ಸುತ್ತುವರೆದರು. ದೇವರ ಹೆಸರಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟರು. ನಾವು ಹಣ ನೀಡಲು ನಿರಾಕರಿಸಿ ಅವರಿಂದ ದೂರ ಹೋಗಲು ಪ್ರಯತ್ನಿಸಿದೆವು. ಆದರೆ ಅವರಲ್ಲಿ ಒಬ್ಬರು ನನ್ನ ಶರ್ಟ್ ಅನ್ನು ಹಿಂದಿನಿಂದ ಎಳೆದರು, ಅವರು ಎಳೆದಾಡಿದ ರಭಸಕ್ಕೆ ನಾನು ಕೆಳಗೆ ಬೀಳುವಂತಾಗಿದ್ದೆ. ನಾವು ಹಣ ನೀಡುವುದಿಲ್ಲ ಎಂದು ನಿರಾಕರಿಸಿದ ಮೇಲೆಯೂ ಅವರು ನಮ್ಮನ್ನು ಹಿಂಬಾಲಿಸುತ್ತಲೇ ಇದ್ದರು. ಬರೀ ಇಷ್ಟೇ ಅಲ್ಲ, ಅವರು ನಮಗೆ ಅಪಘಾತವಾಗಲಿ ಕುರುಡುತನ ಬರಲಿ, ಜೀವನ ನಾಶವಾಗಲಿ ಹೀಗೆ ಕೆಟ್ಟದಾಗಿ ಶಾಪವಿಟ್ಟರು.
ಕೊನೆಗೆ ಇವರಿಂದ ನಾವು ಪಾರಾದರೆ ಸಾಕು ಎಂದು ನಾವು 200 ರೂಪಾಯಿ ಕೊಟ್ಟೆವು. ಆದರೆ ಆಕೆ 500 ರೂಪಾಯಿಗೆ ಡಿಮ್ಯಾಂಡ್ ಮಾಡಿದಳು, ಒಂದು ಆಚರಣೆಗೆ 500 ರೂಪಾಯಿ ಬೇಕೇಬೇಕು ಎಂದು ನಮ್ಮ ಮುಂದೆ ಪಟ್ಟು ಹಿಡಿದು ನಿಂತು ಬಿಟ್ಟಳು. ಕೊಡಲು ಆಗಲ್ಲ ಎಂದು ಹೇಳಿದಾಗ. ಅವಳು ನಮ್ಮನ್ನು ತಳ್ಳಿದಳು, ಹಣವನ್ನು ಬಾಯಿಗೆ ತುರುಕಿ, ಚಾಟಿ ಬೀಸುತ್ತಾ ನಮ್ಮನ್ನು ಹೆದರಿಸಿದಳು. ಈ ಗುಂಪಿನಲ್ಲಿದ್ದವರಲ್ಲಿ ಒಬ್ಬಾಕೆ ಮಗುವನ್ನು ಎತ್ತಿಕೊಂಡಿದ್ದಳು. ಆದರೆ ಆ ಮಗು ಅವಳದೋ ಇಲ್ಲವಾದರೆ ಕನಿಕರಕ್ಕಾಗಿ ಬೇರೆ ಯಾರದ್ದೋ ಮಕ್ಕಳನ್ನು ಎತ್ತಿಕೊಂಡು ಬಂದಿದ್ದಾರೋ ಗೊತ್ತಿಲ್ಲ.
ಆದರೆ ಸ್ವಲ್ಪ ಸಮಯದ ನಂತರದಲ್ಲಿ ಅದೇ ಗುಂಪು ಹತ್ತಿರದ ರಸ್ತೆಯಲ್ಲಿ ನಮ್ಮ ಹಾಗೆಯೇ ಇನ್ನೊಂದು ಕುಟುಂಬಕ್ಕೆ ಕಿರುಕುಳ ನೀಡುತ್ತಿರುವುದನ್ನು ನಾವು ನೋಡಿದ್ದೇವೆ. ಹೀಗಾಗಿ ಜನರಿಗೆ ಈ ಗುಂಪಿನ ಬಗ್ಗೆ ಜಾಗೃತಿ ಮೂಡಿಸಲು ನಾವು ವೀಡಿಯೊವನ್ನು ರೆಕಾರ್ಡ್ ಮಾಡಿದೆವು. ಇದು ಹಣದ ಬಗ್ಗೆ ಅಲ್ಲ, ಅವರು ನೀಡುವ ಕಿರುಕುಳ ಅವರು ಹಾಕುವ ಶಾಪದಿಂದ ನಿಮಗಾಗುವ ಭಯ, ಅಸಹಾಯಕತೆ ಮತ್ತು ಭಾವನಾತ್ಮಕ ಆಘಾತದ ಬಗ್ಗೆ ನಿಮಗೆ ತಿಳಿಸಲು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಈ ರೀತಿಯ ಬೆದರಿಕೆ ಹಗಲಿನಲ್ಲಿ ಬೆಂಗಳೂರಿನ ಹಲವಾರು ಭಾಗಗಳಲ್ಲಿ ನಡೆಯುತ್ತಿದೆ ಎಂದು ಯೋಚಿಸುವುದ್ದಕ್ಕೆ ಭಯ ಆಗ್ತಿದೆ. ನಾವು ಇದನ್ನು ಜಾಗೃತಿ ಮೂಡಿಸಲು ಹಾಕಿದ್ದು, ಬೆಂಗಳೂರು ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಒತ್ತಾಯಿಸಲು ಹಂಚಿಕೊಳ್ಳುತ್ತಿದ್ದೇವೆ. ನಮಗಾದ ಅನುಭವ ಬೇರೆ ಯಾರಿಗೂ ಆಗದಿರಲಿ, ದಯವಿಟ್ಟು ಜಾಗರೂಕರಾಗಿರಿ ಮತ್ತು ಇಂತಹ ಕಿರುಕುಳದ ವಿರುದ್ಧ ನಾವೆಲ್ಲರೂ ಒಟ್ಟಾಗಿ ನಿಲ್ಲೋಣ ಎಂದು ಯುವತಿಯೂ ಬರೆದುಕೊಂಡಿದ್ದಾಳೆ.
ಇದನ್ನೂ ಓದಿ :Video: ವಿಚ್ಛೇದಿತ ಮಹಿಳೆಯರಿಗೆ ರಿಲ್ಯಾಕ್ಸ್ ನೀಡುವ ವಿಶೇಷ ಡಿವೋರ್ಸ್ ಕ್ಯಾಂಪ್
ಈ ವಿಡಿಯೋ ಈವರೆಗೆ 4.2 ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಈ ಪೋಸ್ಟ್ ಗೆ ಬೆಂಗಳೂರು ಪೊಲೀಸರು ಪ್ರತಿಕ್ರಿಯಿಸಿದ್ದು, ಇಂತಹ ಸಂದರ್ಭಗಳಲ್ಲಿ 112 ಕ್ಕೆ ಕರೆ ಮಾಡಿ ವಿಚಾರ ತಿಳಿಸಿ, ನಮ್ಮ ತಂಡ ಸ್ಥಳಕ್ಕೆ ಹೊಯ್ಸಳ ವಾಹನವನ್ನು ಕಳುಹಿಸುತ್ತದೆ. ಅಗತ್ಯ ಕ್ರಮ ಕೈಗೊಳ್ಳುವುದು ಎಂದಿದ್ದಾರೆ. ಇನ್ನೊಬ್ಬರು ನೀವು ಇಂತಹವರಿಗಾಗಿಪೆಪ್ಪರ್ ಸ್ಪ್ರೇ ಇಟ್ಟುಕೊಳ್ಳುವುದು ಉತ್ತಮ ಎಂದಿದ್ದಾರೆ. ಮತ್ತೊಬ್ಬ ಬಳಕೆದಾರ, ಕಬ್ಬನ್ ಪಾರ್ಕ್‌ನಲ್ಲಿ ನನಗೆ ಇದೇ ರೀತಿಯ ಅನುಭವ ಆಗಿದೆ. ಅವರು ನಮ್ಮನ್ನು ಕಂಡೊಡನೆ ನಮ್ಮನ್ನು ಹೆದರಿಸುವ ಪ್ರಯತ್ನ ಮಾಡುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:42 pm, Mon, 21 July 25








