Viral: ಹನಿಮೂನ್ ಹೋಗಲು ಮದುವೆ ಊಟವನ್ನು ಹರಾಜಿಗಿಟ್ಟ ಜೋಡಿ
ಮದುವೆಯನ್ನು ವ್ಯಾಪಾರ ಮಾಡಿಕೊಂಡಿದ್ದಾರೆ ಎಂಬುದಕ್ಕೆ ಈ ವೈರಲ್ ಪೋಸ್ಟ್ ತುಂಬಾ ಒಳ್ಳೆಯ ಉದಾಹರಣೆ ನೋಡಿ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತ ಒಂದು ಪೋಸ್ಟ್ ಭಾರೀ ವೈರಲ್ ಆಗಿದೆ. ವಧು-ವರ ತಮ್ಮ ಮದುವೆಯಲ್ಲಿ ಆಹಾರವನ್ನೇ ಹರಾಜಿಗಿಟ್ಟಿದ್ದಾರೆ. ಹರಾಜಿನಿಂದ ಬರುವ ಹಣದಲ್ಲಿ ಅಲಾಸ್ಕಾ ಹನಿಮೂನ್ ಹೋಗುತ್ತೇವೆ ಎಂದು ಜೋಡಿ ಹೇಳಿದ್ದಾರೆ. ಇದೀಗ ಈ ಪೋಸ್ಟ್ ಗೆ ಭಾರೀ ಅಕ್ರೋಶ ವ್ಯಕ್ತವಾಗಿದೆ.

ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದ ಅದ್ಭುತ ಕ್ಷಣ, ಮನೆಯಲ್ಲಿ ಸಂಭ್ರಮ, ಹೊಸ ಹೊಸ ಕನಸು, ಅತಿಥಿಗಳು, ಊಟ ಹೀಗೆ ಅನೇಕ ವಿಚಾರಗಳಿಂದ ಕೂಡಿರುತ್ತದೆ. ಮದುವೆಗೆ ಬರುವ ಅತಿಥಿಗಳನ್ನು ಒಳ್ಳೆಯ ಗೌರವ ಹಾಗೂ ಊಟವನ್ನು ನೀಡಬೇಕು. ಆಗ ಮಾತ್ರ ಮದುವೆ ಮಾಡಿದಕ್ಕೂ ಒಂದು ಸಮಾಧಾನವಾಗುವುದು. ಅದರಲ್ಲೂ ಮದುವೆಗೆ ಬಂದು ಅತಿಥಿಗಳನ್ನು ಯಾವುದೇ ಕಾರಣಕ್ಕೂ ಅವಮಾನಿಸಬಾರದು. ಮದುವೆಯಲ್ಲಿ ಊಟ (wedding etiquette) ಎಲ್ಲರನ್ನೂ ಗಮನ ಸೆಳೆಯುವುದು ಸಹಜ, ಆದರೆ ಇಲ್ಲೊಂದು ಮದುವೆ ಊಟ ವಿಚಿತ್ರ ಹಾಗೂ ಅವಮಾನಿಯವಾಗಿತ್ತು. ಈ ಮದುವೆಯಲ್ಲಿ ಆಹಾರವನ್ನೇ ಹರಾಜಿಗಿಟ್ಟಿದ್ದಾರೆ. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಮದುವೆ ಬಂದ ಅತಿಥಿಗಳಿಗೆ ಊಟದ ಮೆನುವನ್ನೇ ಹರಾಜಿಗೆ ಇಟ್ಟಿದ್ದಾರೆ. ಈ ಸುದ್ದಿಯನ್ನು @turbothad ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಮದುವೆಯಲ್ಲಿ ಹಸಿದ ಅತಿಥಿಗಳನ್ನು ಕೂರಿಸಿ ಮೊದಲ ತಟ್ಟೆಯ ಆಹಾರವನ್ನು ಹರಾಜಿಗೆ ಇಡಲಾಗಿದೆ ಎಂದು ಹೇಳಿದ್ದಾರೆ. ಮೊದಲ ತಟ್ಟೆಯ ಆಹಾರವನ್ನು ಮಾತ್ರ ಹರಾಜಿನಲ್ಲಿ ಇಡಲಾಯಿತು, ಆದರೆ ಅದನ್ನು ಖರೀದಿಸಿದ ವ್ಯಕ್ತಿಗೆ ಇತರ ಅತಿಥಿಗಳಿಗಿಂತ ಮೊದಲು ಬಡಿಸಲಾಗುತ್ತದೆ ಎಂದು ಹೇಳಿದ್ದಾರೆ. ಅದಾದ ನಂತರ, ಇತರ ಅತಿಥಿಗಳಿಗೆ ಊಟ ಬಡಿಸಲಾಗುವುದು. ಹರಾಜಿನಿಂದ ಬರುವ ಹಣದಲ್ಲಿ ಅಲಾಸ್ಕಾ ಹನಿಮೂನ್ ಹೋಗುತ್ತೇವೆ ಎಂದು ನವ ಜೋಡಿ ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಅಕ್ರೋಶ ಕೂಡ ವ್ಯಕ್ತವಾಗಿದೆ. ಮದುವೆಗೆ ಬಂದ ಒಬ್ಬ ಅತಿಥಿ ಮೊದಲ ತಟ್ಟೆಯ ಊಟಕ್ಕಾಗಿ1,29,285 ರೂ. ಖರ್ಚು ಮಾಡಿದ್ದಾರೆ. ಇನ್ನು ಈ ಪೋಸ್ಟ್ ಹೇಳಿರುವ ಪ್ರಕಾರ, ಮಧು-ವರ ಊಟದ ಸಭಾಂಗಣಕ್ಕೆ ಬಂದು, ಎಲ್ಲರನ್ನೂ ಕೂರಿಸಿ ‘ಸರಿ ಜನರೇ, ಎಲ್ಲರೂ ಹಸಿದಿದ್ದಾರೆಂದು ನಮಗೆ ತಿಳಿದಿದೆ. ಆದ್ದರಿಂದ ನಾವು ಮೊದಲ ತಟ್ಟೆಯ ಭೋಜನವನ್ನು ಹರಾಜು ಹಾಕುತ್ತಿದ್ದೇವೆ, ಅದನ್ನು ಖರೀದಿಸುವವರಿಗೆ ಮೊದಲು ಬಡಿಸಲಾಗುವುದು ಎಂದು ಹೇಳಿದ್ದಾರೆ. ಈ ಹರಾಜಿನಲ್ಲಿ ಬಂದ ಹಣದಲ್ಲಿ ನಾವಿಬ್ಬರು ಹನಿಮೂನ್ಗೆ ಹೋಗುತ್ತೇವೆ ಎಂದು ಹೇಳಿದ್ದಾರೆ. ಆ ನಂತರ ಈ ಪ್ಲೇಟ್ 1,29,285 ರೂ.ಗೆ ಹರಾಜಗಿದೆ.
ಇದನ್ನೂ ಓದಿ: ಚುಡಾಯಿಸಲು ಬಂದ ವ್ಯಕ್ತಿಗೆ ನಡು ರಸ್ತೆಯಲ್ಲೇ ಚಪ್ಪಿಲಿ ಏಟು ಕೊಟ್ಟ ಹೈಸ್ಕೂಲ್ ಹುಡುಗಿ
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
The bride and groom just sat everyone down and said “Alright folks we know everyone’s hungry… So we’re auctioning off the first plate of dinner, whoever buys it gets their table served first. Proceeds go to our Alaska fishing trip honeymoon.” Plate sold for $1500. Brilliant
— Thad🥛☀️ (@turbothad) July 20, 2025
ಇದೀಗ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಅಕ್ರೋಶಕ್ಕೆ ಕಾರಣವಾಗಿದೆ. ಹಲವು ಬಳಕೆದಾರರು ಅವರ ಈ ರೀತಿಯ ಕೆಲಸವನ್ನು ಅನುಚಿತ ಮತ್ತು ಅಸಭ್ಯ ಎಂದು ಹೇಳಿದ್ದಾರೆ. ಇನ್ನು ಕೆಲವರು ಮದುವೆಗಳು ಕೇವಲ ಹಣದ ದೋಚುವ ಕಾರ್ಯಕ್ರಮವೆಂದು ಹೇಳಿದ್ದಾರೆ. ನಿಮ್ಮ ಮದುವೆಯಲ್ಲಿ ಹಣ ಪಾವತಿಸಿ ಒಂದು ತಟ್ಟೆಯ ಊಟವನ್ನು ನಿಮ್ಮ ಆಪ್ತ ಸ್ನೇಹಿತರು ಮತ್ತು ಕುಟುಂಬಕ್ಕೆ ಮಾರಾಟ ಮಾಡುವುದು ನಾಚಿಕೆಗೇಡಿನ ವರ್ತನೆ ಎಂದು ಒಬ್ಬ ಬಳಕೆದಾರ ಹೇಳಿದ್ದಾರೆ. ಇದು ಅಸಂಬದ್ಧ , ನಿಮ್ಮ ಮದುವೆಗೆ ನಿಮ್ಮ ಸಂಬಂಧಿಕರು ಈಗಾಗಲೇ ಹಣ ಹಾಗೂ ಸಮಯವನ್ನು ಖರ್ಚು ಮಾಡಿದ್ದಾರೆ ಎಂದು ಮತ್ತೊಬ್ಬ ಬಳಕೆದಾರ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಇಂತಹ ಮದುವೆಯಲ್ಲಿ ನಾನು ಒಂದು ಕ್ಷಣವು ನಿಲ್ಲುತ್ತಿರಲಿಲ್ಲ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:56 pm, Sun, 20 July 25








