AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕ್​​​ ನಿರೂಪಕಿಗೆ ಕಣ್ಣು ಊದಿಕೊಳ್ಳುವಂತೆ ಹಲ್ಲೆ ಮಾಡಿದ ಪತಿ

ಪಾಕಿಸ್ತಾನದಲ್ಲಿ ಹೆಣ್ಣು ಮಕ್ಕಳಿಗೆ ಸರಿಯಾದ ರಕ್ಷಣೆ ಇಲ್ಲ ಎಂದು ಪಾಕ್​​​ ಟಿವಿ ನಿರೂಪಕಿಯೊಬ್ಬರು ಎಕ್ಸ್​​​ನಲ್ಲಿ ಟ್ವೀಟ್​​​ ಮಾಡಿದ್ದಾರೆ. ಇದೀಗ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಗಂಡ ತನ್ನ ಮೇಲೆ ಮಾಡಿರುವ ಹಲ್ಲೆಯ ಬಗ್ಗೆ ಎಕ್ಸ್​​​ನಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ನಿರೂಪಕಿಯ ಕಣ್ಣು ಊದಿಕೊಂಡಿರುವುದನ್ನು ಕಾಣಬಹುದು. ಈ ಘಟನೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಇಲ್ಲಿದೆ.

ಪಾಕ್​​​ ನಿರೂಪಕಿಗೆ ಕಣ್ಣು ಊದಿಕೊಳ್ಳುವಂತೆ ಹಲ್ಲೆ ಮಾಡಿದ ಪತಿ
ವೈರಲ್​​​ ಪೋಸ್ಟ್​​​
ಸಾಯಿನಂದಾ
| Updated By: ಮಾಲಾಶ್ರೀ ಅಂಚನ್​|

Updated on: Jul 16, 2025 | 12:29 PM

Share

ಪಾಕಿಸ್ತಾನದಲ್ಲಿ (Pakistan) ಮಹಿಳೆಯರನ್ನು ದಿನನಿತ್ಯವೂ ಹಿಂಸೆ ಮಾಡುವ ಪ್ರವೃತ್ತಿಗಳು ನಡೆಯುತ್ತಲೇ ಇದೆ. ಇದೀಗ ಅಂತಹದ್ದೇ ಘಟನೆಗೆ ಸಂಬಂಧಿಸಿದ ಪೋಸ್ಟ್​​ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ಪಾಕಿಸ್ತಾನದ ಹಿರಿಯ ಪತ್ರಕರ್ತೆ (Pakistani journalist) ಮತ್ತು ದೂರದರ್ಶನ ನಿರೂಪಕಿ ಜಾಸ್ಮೀನ್ ಮಂಜೂರ್ ಮೇಲೆ ಆಕೆಯ ಪತಿ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗಿದೆ. ಕೌಟುಂಬಿಕ ಕಲಹದ ವಿಚಾರವಾಗಿ ನಿರೂಪಕಿ ಜಾಸ್ಮೀನ್ ಮಂಜೂರ್ ಮೇಲೆ ಈ ಹಲ್ಲೆ ನಡೆಸಿದ್ದು, ತನ್ನ ಪತಿ ಹಲ್ಲೆ ಮಾಡಿರುವ ಬಗ್ಗೆ ಫೋಟೋವೊಂದು ಎಕ್ಸ್​​ನಲ್ಲಿ ಹಂಚಿಕೊಂಡಿದ್ದಾರೆ. ವೈರಲ್‌ ಆಗಿರುವ ಆ ಫೋಟೋದಲ್ಲಿ ನಿರೂಪಕಿಯ ಕಣ್ಣು ಊದಿಕೊಂಡಿರುವುದನ್ನು ಕಾಣಬಹುದು.

ಇದೀಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. “ಸುರಕ್ಷಿತವಾಗಿರುವ  ಮನೆಯಲ್ಲಿಯೂ ಯಾರೂ ಸುರಕ್ಷಿತವಾಗಿಲ್ಲ. ನೀವು ಕುರುಡಾಗಿ ನಂಬುವವರೇ ಅತ್ಯಂತ ಅಪಾಯಕಾರಿ ಜನರು”  ಎಂಬ ಶೀರ್ಷಿಕೆಯನ್ನು ಬರೆದುಕೊಂಡು, ಈ ಕುರಿತ ಪೋಸ್ಟನ್ನು ಎಕ್ಸ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಇದರ ಜತೆಗೆ ಮತ್ತೊಂದು ಪೋಸ್ಟ್​​ನ್ನು ಕೂಡ ಹಂಚಿಕೊಂಡಿದ್ದಾರೆ. ಅದರಲ್ಲಿ ನಿಮಗೆ ಒಬ್ಬ ಮಹಿಳೆ ಸಿಕ್ಕಾಗ, ನೀವು ನಿಮ್ಮ ನಿಜವಾದ ಬಣ್ಣಗಳನ್ನು ತೋರಿಸುತ್ತೀರಿ, ಈ ರೀತಿ ದಬ್ಬಾಳಿಕೆ ಮಾಡುವುದು ಹೇಡಿತನ, ದ್ವೇಷಿಗಳು ಯಾವಾಗಲೂ ಇರುತ್ತಾರೆ ಅವರನ್ನು ದೂಷಿಸಬೇಡಿ. ಜೀವನದಲ್ಲಿ ಅವರ ವೈಫಲ್ಯವೇ ಅವರನ್ನು ಈ ಸ್ಥಾನದಲ್ಲಿ ಇರಿಸಿದೆ, ನನ್ನ ಬಳಿ ಇನ್ನೂ 50 ಚಿತ್ರಗಳಿವೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ
Image
ಬೆಕ್ಕು ಎಂದುಕೊಂಡು ಚಿರತೆ ಮೇಲೆ ನಾಯಿಗಳ ದಾಳಿ!
Image
ಹಾಡಿನ ಮೂಲಕ ರಿಕ್ಷಾ ಚಾಲಕನಿಗೆ ಸ್ವೀಟ್‌ ಆಗಿ ಬುದ್ಧಿವಾದ ಹೇಳಿದ ಪೊಲೀಸ್‌
Image
ಗುಲಾಬಿ ಮಾರುತ್ತಿದ್ದ ಪುಟ್ಟ ಬಾಲಕಿಗೆ ಕಪಾಳಮೋಕ್ಷ ಮಾಡಿದ ಆಟೋ ಚಾಲಕ
Image
ಕಾರಿನಡಿ ಸಿಲುಕಿದರೂ ಪವಾಡದಂತೆ ಬದುಕುಳಿದ ಮಗು

ವೈರಲ್​​ ಪೋಸ್ಟ್​​​ ಇಲ್ಲಿದೆ ನೋಡಿ:

ನಿರೂಪಕಿ ಜಾಸ್ಮೀನ್ ತನ್ನ ಜೀವನದ ಕಷ್ಟಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಇದು ನಾನು. ಹೌದು, ಇದು ನನ್ನ ಕಥೆ – ನನ್ನ ಜೀವನವು ಹಿಂಸಾತ್ಮಕ ವ್ಯಕ್ತಿಯಿಂದ ನಾಶವಾಯಿತು. ನನ್ನ ನ್ಯಾಯವನ್ನು ನನ್ನ ಅಲ್ಲಾಹನಿಗೆ ಬಿಡುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಈ ಸ್ಥಿತಿ ನನ್ನ ಮಾಜಿ ಪತಿಯಿಂದ ಉಡುಗೊರೆಯಾಗಿ ಬಂದಿದ್ದು, ಈ ಬಗ್ಗೆ ಸಾವರ್ಜನಿಕವಾಗಿ ಮಾತನಾಡಬೇಕು ಬೇಡವೇ ಎಂಬ ಗೊಂದಲದಲ್ಲಿ ಈ ಪೋಸ್ಟ್​​ ಮಾಡಿದ್ದೇನೆ. ಆದರೆ ಈ ರೀತಿಯ ನಡವಳಿಕೆಯ ವಿರುದ್ಧ ನಾವೆಲ್ಲರೂ ಒಂದಾಗಬೇಕು. ಜೊತೆಗೆ ಇದರ ವಿರುದ್ಧ ಧೈರ್ಯವಾಗಿ ಪ್ರತಿಭಟಿಸಲು ಸಿದ್ಧ ಎಂದು ಹೇಳಿದ್ದಾರೆ.

ಇದನ್ನೂ ಓದಿ: ತಾಯಿಯ ದೀರ್ಘಾಯುಷ್ಯಕ್ಕಾಗಿ ಶವಪೆಟ್ಟಿಗೆ ತಂದ ಮಗ, ಇದು ಇಲ್ಲಿನ ಆಚರಣೆ

ಇದೀಗ ಈ ಪೋಸ್ಟ್​​ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.  ಈ ಪೋಸ್ಟ್​​​​ 17 ಸಾವಿರಕ್ಕೂ ಹೆಚ್ಚು ಲೈಕ್​​ ಹಾಗೂ ಕಾಮೆಂಟ್​​ ಪಡೆದುಕೊಂಡಿದೆ. ಒಬ್ಬ ಬಳಕೆದಾರರು “ಕೌಟುಂಬಿಕ ಹಿಂಸೆ ನಮ್ಮ ಸಮಾಜದ ಮೇಲೆ ಒಂದು ಕಳಂಕ ಎಂದು ಕಮೆಂಟ್​​ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ನೀವು ಪಾಕಿಸ್ತಾನದಲ್ಲಿರುವ ತನಕ , ನೀವು ಸುರಕ್ಷಿತವಾಗಿಲ್ಲ ಎಂದು ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ