Viral Video: ಕಾರಿನಡಿ ಸಿಲುಕಿದರೂ ಪವಾಡದಂತೆ ಬದುಕುಳಿದ ಮಗು
ಪಂಜಾಬ್‌ನ ಮಂಡಿ ಗೋವಿಂದ್‌ಗಢದಲ್ಲಿ ಎಸ್‌ಯುವಿ ಡಿಕ್ಕಿ ಹೊಡೆದು ಮಗು ಆ ವಾಹನದ ಕೆಳಗೆ ಬಿದ್ದರೂ ಅದು ಪವಾಡಸದೃಶವಾಗಿ ಸಾವಿನಿಂದ ಪಾರಾಗಿದೆ. ಮಗು ಕಾರು ಡಿಕ್ಕಿ ಹೊಡೆದು ಆ ವಾಹನದ ಕೆಳಗೆ ಸಿಲುಕಿಕೊಂಡಾಗ ಜನರು ಆ ಮಗುವನ್ನು ರಕ್ಷಿಸಲು ಧಾವಿಸುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಈ ವಿಡಿಯೋ ವೈರಲ್ ಆಗಿದ್ದು, ಚಾಲಕನ ಅಜಾಗರೂಕತೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ನವದೆಹಲಿ, ಜುಲೈ 14: ಚಲಿಸುತ್ತಿದ್ದ ಎಸ್‌ಯುವಿಯ ಚಕ್ರಗಳ ಕೆಳಗೆ ಮಗುವೊಂದು ಸಿಲುಕಿರುವುದನ್ನು ತೋರಿಸುವ ಶಾಕಿಂಗ್ ವಿಡಿಯೋ (Shocking Video) ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಈ ಘಟನೆ ಪಂಜಾಬ್‌ನ ಗೋವಿಂದ್‌ಗಢದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಈ ವಿಡಿಯೋದಲ್ಲಿ ಮಗುವೊಂದು ರಸ್ತೆಯಲ್ಲಿ ಓಡುತ್ತಿರುವುದನ್ನು ನೋಡಬಹುದು. ಆಗ ಆ ರಸ್ತೆಯಲ್ಲಿ ಆ ಹೆಣ್ಣು ಮಗುವಿನ ಜೊತೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕಡೆಗೆ ವೇಗವಾಗಿ ಕಾರೊಂದು ಬಂದಿದೆ. ಹಿಂದಿನಿಂದ ಬರುತ್ತಿದ್ದ ಕಾರನ್ನು ಮಗು ನೋಡುವುದಿಲ್ಲ. ಸ್ಪೀಡಾಗಿ ಬಂದ ಮಹೀಂದ್ರಾ ಎಸ್‌ಯುವಿ ಆ ಮಗುವಿಗೆ ಡಿಕ್ಕಿ ಹೊಡೆಯುತ್ತದೆ.
ವರದಿಗಳ ಪ್ರಕಾರ, ಕಾರು ಡಿಕ್ಕಿ ಹೊಡೆದು, ಕಾರಿನಡಿ ಆ ಮಗುವನ್ನು ಎಳೆದುಕೊಂಡು ಹೋಗಿದ್ದರೂ ಆ ಮಗು ಬದುಕುಳಿದಿದೆ. ಗಗನ್‌ದೀಪ್ ಸಿಂಗ್ ಎಂಬ ಎಕ್ಸ್ ಬಳಕೆದಾರರು ಈ ಘಟನೆಯ ಸಿಸಿಟಿವಿ ದೃಶ್ಯಗಳನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೊವನ್ನು ಹಂಚಿಕೊಂಡ ಅವರು, “ಮಂಡಿ ಗೋವಿಂದಗಢದಲ್ಲಿ ನಿರ್ಲಕ್ಷ್ಯದ ಉತ್ತುಂಗದಲ್ಲಿದೆ! ಕಾರು 2 ವರ್ಷದ ಮಗುವಿಗೆ ಡಿಕ್ಕಿ ಹೊಡೆದಿದೆ, ಆದರೆ ಅದೃಷ್ಟವಶಾತ್ ಮಗು ಬದುಕುಳಿದಿದೆ. ಚಾಲಕ ಮತ್ತು ಪೋಷಕರಲ್ಲಿ ತಪ್ಪು ಯಾರದ್ದು ಎಂಬ ಪ್ರಶ್ನೆ ಉದ್ಭವಿಸುತ್ತದೆ” ಎಂದು ಪೋಸ್ಟ್ ಮಾಡಿದ್ದಾರೆ.
मंडी गोबिंदगढ़ में लापरवाही की हद! 2 साल के मासूम पर चढ़ गई गाड़ी, गनीमत रही कि बच्चा बच गया। सवाल उठता है– गलती किसकी थी?#Punjab #news @latestly pic.twitter.com/6o6DNST7um
— Gagandeep Singh (@GagandeepNews) July 14, 2025
ಇದನ್ನೂ ಓದಿ: 45ಕ್ಕೂ ಅಧಿಕ ಮಹಿಳೆಯರ ಅಶ್ಲೀಲ ವಿಡಿಯೋ; ಬೆಂಗಳೂರು ಪೊಲೀಸ್ ವಿಚಾರಣೆ ವೇಳೆ ಶಾಕಿಂಗ್ ವಿಷಯ ಬಯಲು
ಕಾರು ಮಗುವನ್ನು ಡಿಕ್ಕಿ ಹೊಡೆದು ವಾಹನದ ಕೆಳಗೆ ಸಿಲುಕಿಸಿದ ನಂತರ ಜನರು ಮಗುವನ್ನು ರಕ್ಷಿಸಲು ಧಾವಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಜನರು ಜೋರಾಗಿ ಕಿರುಚಾಡಿದ ನಂತರ ಕಾರು ಚಾಲಕ ಕಾರನ್ನು ಹಿಂದಕ್ಕೆ ಸರಿಸುತ್ತಾನೆ. ನಂತರ ಮಗುವನ್ನು ವಾಹನದ ಕೆಳಗಿನಿಂದ ಹೊರಗೆ ಎಳೆಯಲಾಗುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




