ಹಾಲು ಹಾಕುವ ಮುನ್ನ ಹಾಲಿನ ಪಾತ್ರೆಗೆ ಎಂಜಲು ಉಗುಳಿದ ವ್ಯಾಪಾರಿ; ಶಾಕಿಂಗ್ ವಿಡಿಯೋ ಇಲ್ಲಿದೆ
ಲಕ್ನೋದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಹಾಲು ವಿತರಣೆಗೆ ಮುನ್ನ ಹಾಲಿನಲ್ಲಿ ಉಗುಳುತ್ತಿರುವ ಹಾಲು ವ್ಯಾಪಾರಿಯ ಕೃತ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆತನನ್ನು ಬಂಧಿಸಲಾಗಿದೆ. ಹಾಲು ವ್ಯಾಪಾರಿ ಮನೆಯ ಹೊರಗೆ ನಿಂತು ಯಾರೂ ನೋಡುತ್ತಿಲ್ಲವೇ ಎಂದು ನೋಡಿಕೊಂಡು ಹಾಲಿನ ಕ್ಯಾನ್ ಒಳಗೆ ಉಗುಳಿದ್ದಾನೆ. ಈ ವಿಡಿಯೋಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಲಕ್ನೋ, ಜುಲೈ 5: ಉತ್ತರ ಪ್ರದೇಶದ ಲಕ್ನೋದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಾಲು ವ್ಯಾಪಾರಿಯೊಬ್ಬರು ಗ್ರಾಹಕರಿಗೆ ಹಾಲು ತಲುಪಿಸುವ ಮೊದಲು ಹಾಲಿಗೆ ಉಗುಳುತ್ತಿರುವುದನ್ನು ತೋರಿಸುವ ವಿಡಿಯೋವೊಂದು ಬೆಳಕಿಗೆ ಬಂದಿದೆ. ಮನೆಯಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಈ ಕೃತ್ಯ ಸೆರೆಯಾಗಿದೆ. ಮನೆಯ ಹೊರಗೆ ನಿಂತು ಹಾಲು ವ್ಯಾಪಾರಿ ಯಾರೂ ನೋಡುತ್ತಿಲ್ಲವೇ ಎಂದು ಆಚೀಚೆ ನೋಡುತ್ತಿರುವುದನ್ನು ದೃಶ್ಯಗಳು ತೋರಿಸುತ್ತವೆ. ನಂತರ ಆತ ಪಾತ್ರೆಯ ಮುಚ್ಚಳವನ್ನು ತೆರೆದು, ಪಾತ್ರೆಯನ್ನು ತನ್ನ ಬಾಯಿಯ ಹತ್ತಿರ ತಂದು ಹಾಲಿಗೆ ಉಗುಳಿ ಮತ್ತೆ ಮುಚ್ಚುತ್ತಾನೆ. ಮೊಹಮ್ಮದ್ ಷರೀಫ್ ಎಂದು ಗುರುತಿಸಲಾದ ಹಾಲು ವ್ಯಾಪಾರಿಯನ್ನು ಬಂಧಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos