Viral: ಆಟೋಗೆ ವಿಂಡ್ ಶೀಲ್ಡ್ ಹಾಕಿಸಿಕೊಳ್ಳುವಂತೆ ಚಾಲಕನಿಗೆ ಹಾಡಿನ ಮೂಲಕ ಮನವಿ ಮಾಡಿದ ಪೊಲೀಸ್
ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ, ಪೊಲೀಸರು ಫೈನ್ ಹೆಸರಿನಲ್ಲಿ ಹಣ ಪೀಕುತ್ತಾರೆ, ದರ್ಪ ತೋರುತ್ತಾರೆ ಎಂದು ಹೇಳುವವರೇ ಹೆಚ್ಚು. ಆದ್ರೆ ಇಲ್ಲೊಬ್ಬರು ಪೊಲೀಸ್ ತನ್ನ ಹಾಡಿನ ಮೂಲಕ ಆಟೋ ಚಾಲಕನಿಗೆ ಸ್ವೀಟ್ ಆಗಿ ಎಚ್ಚರಿಕೆ ನೀಡಿದ್ದಾರೆ. ಹೌದು ಆಟೋದಲ್ಲಿ ವಿಂಡ್ ಗ್ಲಾಸ್ ಇಲ್ಲದ ಕಾರಣ ಆಟೋಗೆ ವಿಂಡ್ ಗ್ಲಾಸ್ ಯಾಕೆ ಹಾಕಿಲ್ಲ ಅಂಕಲ್ ಎಂದು ಹಾಡಿನ ಮೂಲಕ ರಿಕ್ಷಾ ಚಾಲಕನಿಗೆ ಎಚ್ಚರಿಕೆ ಕೊಟ್ಟಿದ್ದು, ಈ ಸುಂದರ ದೃಶ್ಯ ಇದೀಗ ಸಖತ್ ವೈರಲ್ ಆಗುತ್ತಿದೆ.

ಕಾರು, ಲಾರಿ, ಬಸ್, ಆಟೋ ಇತ್ಯಾದಿ ವಾಹನಗಳಿಗೆ ವಿಂಡ್‌ಶೀಲ್ಡ್ (windshield) ಬಹಳ ಮುಖ್ಯವಾಗಿದೆ. ಇದು ಚಾಲಕನಿಗೆ ರಸ್ತೆಯ ಸ್ಪಷ್ಟ ನೋಟವನ್ನು ಒದಗಿಸುವುದು ಮಾತ್ರವಲ್ಲದೆ ಇದು ಸುರಕ್ಷಿತ ಚಾಲನೆಗೆ ತುಂಬಾನೇ ನಿರ್ಣಾಯಕವಾಗಿದೆ. ಆದ್ರೆ ಇಲ್ಲೊಬ್ಬ ಆಟೋ ಚಾಲಕ ತನ್ನ ಆಟೋಗೆ ವಿಂಡ್ ಶೀಲ್ಡ್ ಬದಲಿಗೆ ಪ್ಲಾಸ್ಟಿಕ್ ಕಟ್ಟಿ ಓಡಾಡಿದ್ದು, ಇದನ್ನು ಕಂಡ ಮಧ್ಯಪ್ರದೇಶದ ಪೊಲೀಸ್ (Police) ಚಾಲಕನಿಗೆ ಗದರದೆ ಹಾಡಿನ ಮೂಲಕ ಸ್ವೀಟ್ ಆಗಿ ಎಚ್ಚರಿಕೆ ನೀಡಿದ್ದಾರೆ. ಪೊಲೀಸ್ ಭಗವತ್ ಪ್ರಸಾದ್ ಪಾಂಡೆ ಅವರು, ರಿಕ್ಷಾವನ್ನು ತಡೆದು ಅಂಕಲ್ ನೀವು ಆಟೋಗೆ ಗ್ಲಾಸ್ ಏಕೆ ಅಳವಡಿಸಿಲ್ಲ ಎಂದು ಹಾಡಿನ ಮೂಲಕ ಕೇಳಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಪೊಲೀಸರ ಹಾಡು ಹಾಗೂ ಅವರ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಆಟೋಗೆ ವಿಂಡ್‌ಶೀಲ್ಡ್ ಹಾಕಿಸದೆ, ಬರೀ ಪ್ಲಾಸ್ಟಿಕ್ ಕವರ್ ಕಟ್ಟಿ ಓಡಾಡುತ್ತಿದ್ದ ರಿಕ್ಷಾ ಚಾಲಕನನ್ನು ತಡೆದು ಅಂಕಲ್ ನೀವು ಆಟೋಗೆ ಗ್ಲಾಸ್ ಏಕೆ ಹಾಕಿಲ್ಲ ಎಂಬ ಹಾಡು ಹಾಡುತ್ತಾ ಸಂಚಾರ ನಿಯಮವನ್ನು ಉಲ್ಲಂಘಿಸಿದ್ದಕ್ಕೆ ಮಧ್ಯಪ್ರದೇಶದ ಪೊಲೀಸರೊಬ್ಬರು ಆಟೋ ಚಾಲಕನಿಗೆ ಸ್ವೀಟ್ ಆಗಿ ಎಚ್ಚರಿಕೆ ನೀಡಿದ್ದಾರೆ.
ಹೆಚ್ಚಿನ ಪೊಲೀಸರು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದವರಿಗೆ ಫೈನ್ ಹಾಕಿ ಬುದ್ಧಿವಾದ ಹೇಳಿದ್ರೆ, ಪೊಲೀಸ್ ಭಗವತ್ ಪ್ರಸಾದ್ ಪಾಂಡೆಯವರು ಮಾತ್ರ ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ ಹಾಡಿನ ಮೂಲಕ ಬುದ್ಧಿವಾದ ಹೇಳಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಈ ವಿಡಿಯೋವನ್ನು ಭಗವತ್ ಪ್ರಸಾದ್ ಪಾಂಡೆ (bhagwat_prasad_pandey) ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಭಗವತ್ ಪ್ರಸಾದ್ ʼಅಂಕಲ್ ನೀವು ಗ್ಲಾಸ್ ಯಾಕೆ ಹಾಕಿಲ್ಲ. ನಿಮಗೆ ಎರಡು ಮೂರು ಬಾರಿ ಹೇಳಿದರೂ ಆಟೋಗೆ ಗ್ಲಾಸ್ ಯಾಕೆ ಹಾಕಿಲ್ಲ ಎಂದು ಹಾಡಿನ ಮೂಲಕ ಬುದ್ಧಿವಾದ ಹೇಳಿದ್ದಾರೆ. ಅಲ್ಲದೆ ಹೀಗೆ ಪ್ಲಾಸ್ಟಿಕ್ ಕವರ್ ಏಕೆ ಕಟ್ಟಿದ್ದೀರಾ? ವಿಂಡ್ ಶೀಲ್ಡ್ ಹಾಕಿಸಿಕೊಳ್ಳಲು ಸಮಸ್ಯೆ ಇದ್ರೆ ನನ್ನ ಬಳಿ ಹೇಳಿ, ನಾನು ಗ್ಲಾಸ್ ಹಾಕಿ ಕೊಡುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಸ್ತೆಬದಿಯಲ್ಲಿ ಗುಲಾಬಿ ಮಾರುತ್ತಿದ್ದ ಪುಟ್ಟ ಬಾಲಕಿಗೆ ಕಪಾಳಮೋಕ್ಷ ಮಾಡಿದ ಆಟೋ ಚಾಲಕ
ಜುಲೈ 3 ರಂದು ಹಂಚಿಕೊಳ್ಳಲಾದ ಈ ವಿಡಿಯೋ 8 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಮೊದಲು ಭಾರತೀಯ ಪೊಲೀಸ್ ತರಬೇತಿ ಸಂಸ್ಥೆಗಳಿಗೆ ನಿಮ್ಮ ನಡವಳಿಕೆಯ ಬಗ್ಗೆ ಕಲಿಸಿಕೊಡಬೇಕುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಿಮ್ಮ ಹಾಡಂತೂ ಬಹಳ ಮುದ್ದಾಗಿದೆ ಸರ್ʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಹಾಡು ಮಾತ್ರವಲ್ಲ ನಿಮ್ಮ ವ್ಯಕ್ತಿತ್ವವೂ ಅದ್ಭುತವಾಗಿದೆʼ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ