AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Optical Illusion: ನಿಮ್ಮ ಕಣ್ಣಿಗೊಂದು ಸವಾಲ್;‌ ಈ ಚಿತ್ರದಲ್ಲಿ ಅಡಗಿರುವ ಬೆಕ್ಕನ್ನು ನಿಮ್ಮಿಂದ ಹುಡುಕಲು ಸಾಧ್ಯವೇ?

ನಮ್ಮ ಬುದ್ಧಿವಂತಿಕೆ ಹಾಗೂ ದೃಷ್ಟಿ ತೀಕ್ಷ್ಣತೆಗೆ ಸವಾಲೊಡ್ಡುವಂತಹ ಅನೇಕ ರೀತಿಯ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಈ ಒಗಟಿನ ಆಟಗಳು ಕೇವಲ ಮೋಜಿನ ಜೊತೆಗೆ ಮೆದುಳನ್ನು ಸಹ ಚುರುಕುಗೊಳಿಸುತ್ತದೆ. ಇದೇ ರೀತಿಯ ಫೋಟೋವೊಂದು ಇದೀಗ ವೈರಲ್‌ ಆಗಿದ್ದು, ಆ ಚಿತ್ರದಲ್ಲಿ ಅಡಗಿರುವ ಬೆಕ್ಕನ್ನು ಹುಡುಕಲು ನಿಮಗೆ ಸವಾಲನ್ನು ನೀಡಲಾಗಿದೆ.

Optical Illusion: ನಿಮ್ಮ ಕಣ್ಣಿಗೊಂದು ಸವಾಲ್;‌ ಈ ಚಿತ್ರದಲ್ಲಿ ಅಡಗಿರುವ ಬೆಕ್ಕನ್ನು ನಿಮ್ಮಿಂದ ಹುಡುಕಲು ಸಾಧ್ಯವೇ?
ಆಪ್ಟಿಕಲ್‌ ಇಲ್ಯೂಷನ್‌ Image Credit source: Social Media
ಮಾಲಾಶ್ರೀ ಅಂಚನ್​
|

Updated on: Jul 15, 2025 | 3:21 PM

Share

ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಚಿತ್ರಗಳು ನೋಡಲು ತುಂಬಾನೇ ವಿಚಿತ್ರವಾಗಿರುವುದರ ಜೊತೆಗೆ ಭ್ರಮೆಯನ್ನುಂಟುಮಾಡುವ ಮೂಲಕ  ನಮ್ಮ ದೃಷ್ಟಿ, ಮೆದುಳಿಗೆ ಸವಾಲು ಹಾಕುತ್ತವೆ. ಇಂತಹ ಸಾಕಷ್ಟು ಬ್ರೈನ್‌ ಟೀಸರ್‌, ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಇದು ಟೈಮ್‌ ಪಾಸ್‌ಗಾಗಿ ಇರುವ ಮೋಜಿನ ಆಟ ಮಾತ್ರವಲ್ಲದೆ, ನಮ್ಮ ಬುದ್ಧಿವಂತಿಕೆಯನ್ನು ಚುರುಕುಗೊಳಿಸುವ ಒಗಟಿನ ಆಟವಾಗಿದೆ. ಇದೀಗ ಇಲ್ಲೊಂದು ಇಂತಹದ್ದೇ ಆಪ್ಟಿಕಲ್‌ ಚಿತ್ರ ವೈರಲ್‌ ಆಗಿದ್ದು,  ಅದರಲ್ಲಿ ಅಡಗಿರುವ ಬೆಕ್ಕನ್ನು(find the  hidden cat) ಹುಡುಕಲು ಸವಾಲನ್ನು ನೀಡಲಾಗಿದೆ. ಈ ಸವಾಲನ್ನು ಸ್ವೀಕರಿಸುವ ಮೂಲಕ ನೀವು ನಿಮ್ಮ ದೃಷ್ಟಿ ಸಾಮರ್ಥ್ಯ ಹೇಗಿದೆ ಎಂಬುದನ್ನು ಪರೀಕ್ಷಿಸಿ.

ಈ ಚಿತ್ರದಲ್ಲಿ ಅಡಗಿರುವ ಬೆಕ್ಕನ್ನು ಹುಡುಕಬಲ್ಲಿರೇ?

ಈ ನಿರ್ದಿಷ್ಟ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವನ್ನು Taylor1224M ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಆ ಚಿತ್ರದಲ್ಲಿ ಮರ ಹಾಗೂ ಪೊದೆಯ ಹಿಂದೆ ಅಡಗಿರುವ ಬೆಕ್ಕನ್ನು ಹುಡುಕಲು ಸವಾಲನ್ನು ನೀಡಲಾಗಿದೆ. ಈ ಚಿತ್ರದಲ್ಲಿ ಮೇಲ್ನೋಟಕ್ಕೆ ಬರೀ ಹಸಿರು ಗಿಡ ಮರ, ಪೊದೆಗಳು ಕಂಡರೂ, ಈ ಪೊದೆಯ ಮಧ್ಯೆ ಒಂದು ಬೆಕ್ಕು ಅಡಗಿ ಕುಳಿತಿದೆ. ಅಡಗಿ ಕುಳಿತಿರುವ ಆ ಬೆಕ್ಕನ್ನು ಹುಡುಕಲು ನಿಮಗೆ ಸವಾಲನ್ನು ನೀಡಲಾಗಿದೆ.

ಪೋಸ್ಟ್ ಇಲ್ಲಿದೆ ನೋಡಿ:

Find the cat byu/Taylor1224M inFindTheSniper

ಇದನ್ನೂ ಓದಿ
Image
ಈ ಚಿತ್ರದಲ್ಲಿ ಅಡಗಿರುವ ಇಂಗ್ಲಿಷ್ ಪದಗಳನ್ನು ಹುಡುಕಬಲ್ಲಿರಾ?
Image
ಈ ಚಿತ್ರದಲ್ಲಿ ಅಡಗಿರುವ ಪ್ರಾಣಿಗಳು, ಮಾನವನ ಮುಖವನ್ನು ಪತ್ತೆ ಹಚ್ಚಬಲ್ಲಿರಾ?
Image
ಈ ಚಿತ್ರದಲ್ಲಿ ಅಡಗಿರುವ ಇಲಿಯನ್ನು ಹುಡುಕಿ ಹೇಳಿ
Image
5 ಸೆಕೆಂಡುಗಳಲ್ಲಿ ಚಿತ್ರದಲ್ಲಿ ಅಡಗಿರುವ ನಗು ಮುಖವನ್ನು ಪತ್ತೆಹಚ್ಚಿ ನೋಡೋಣ

ಸವಾಲನ್ನು ಸ್ವೀಕರಿಸಲು ಸಿದ್ಧರಿದ್ದೀರೆ?

ನಿಮ್ಮ ವೀಕ್ಷಣಾ ಕೌಶಲ್ಯ ಮತ್ತು ಬುದ್ಧಿವಂತಿಕೆವನ್ನು ಪರೀಕ್ಷಿಸಲು ಈ ಆಪ್ಟಿಕಲ್‌ ಇಲ್ಯೂಷನ್‌ ಉತ್ತಮ ಮಾರ್ಗವಾಗಿದ್ದು, ಈ ಮೂಲಕ ನಿಮ್ಮ ದೃಷ್ಟಿ ಸಾಮರ್ಥ್ಯವನ್ನು ಪರೀಕ್ಷಿಸಿ.  ವೀಕ್ಷಣಾ ಕೌಶಲ್ಯ ಹಾಗೂ ಏಕಾಗ್ರತೆಯನ್ನು ಹೊಂದಿರುವವರಿಗೆ ಮಾತ್ರ ಈ ಸವಾಲನ್ನು ಪೂರ್ಣಗೊಳಿಸಲು ಸಾಧ್ಯ.

ಇದನ್ನೂ ಓದಿ: ಈ ಚಿತ್ರದಲ್ಲಿ ಅಡಗಿರುವ ಇಂಗ್ಲಿಷ್ ಪದಗಳನ್ನು 20 ಸೆಕೆಂಡುಗಳಲ್ಲಿ ಹುಡುಕಬಲ್ಲಿರಾ?

ಇಲ್ಲಿದೆ ಉತ್ತರ:

ಎಷ್ಟೇ ಹುಡುಕಿದರೂ ಬೆಕ್ಕು ಮಾತ್ರ ಕಾಣಿಸಲೇ ಇಲ್ಲ, ಅಷ್ಟಕ್ಕೂ ಬೆಕ್ಕು ಎಲ್ಲಿದೆ ಎಂಬ ಗೊಂದಲ ಇದ್ಯಾ. ಹಾಗಿದ್ರೆ  ಆ ಮರಗಳ ಮಧ್ಯ ಭಾಗಕ್ಕೆ ದೃಷ್ಟಿ ಹಾಯಿಸಿ ನೋಡಿ, ಅಲ್ಲಿ ಕಪ್ಪು ಬೆಕ್ಕೊಂದು ಅಡಗಿ ಕುಳಿತಿರುವುದು ನಿಮ್ಮ ಗಮನಕ್ಕೆ ಬರುತ್ತದೆ.

Optical Illusion (1)

ರೆಡ್ಡಿಟ್‌ನಲ್ಲಿ ವೈರಲ್‌ ಆಗಿರುವ ಈ ಪೋಸ್ಟ್‌ ಹಲವಾರು ಕಾಮೆಂಟ್ಸ್‌ಗಳನ್ನೂ ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅಲ್ಲಿ ಬೆಕ್ಕುಗಳಿಲ್ಲ, ಬರೀ ಕಣ್ಣು ಮಾತ್ರ ಕಾಣುತ್ತಿದೆ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼನನ್ನ ಪ್ರಕಾರ ಅದು ಬೆಕ್ಕಲ್ಲ ಕರಿ ಚಿರತೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼನನಗೆ ಮಾತ್ರ ಬರೀ ಕಣ್ಣು ಮಾತ್ರ ಕಂಡದ್ದುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ