AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Optical Illusion: ಈ ಚಿತ್ರದಲ್ಲಿ ಅಡಗಿರುವ ಇಂಗ್ಲಿಷ್ ಪದಗಳನ್ನು 20 ಸೆಕೆಂಡುಗಳಲ್ಲಿ ಹುಡುಕಬಲ್ಲಿರಾ?

ಸಾಮಾಜಿಕ ಜಾಲತಾಣಗಳಲ್ಲಿ ಕಣ್ಣು ಹಾಗೂ ಮೆದುಳಿಗೆ ಸವಾಲೊಡ್ದುವ ಕುತೂಹಲಕಾರಿ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ವೈರಲ್ ಆಗುತ್ತಿರುತ್ತದೆ. ಆದರೆ ಇದೀಗ ಇಂತಹದ್ದೇ ಕಠಿಣ ಸವಾಲಿನ ಚಿತ್ರವೊಂದು ವೈರಲ್ ಆಗಿದ್ದು, ಇದರಲ್ಲಿ ಅಡಗಿರುವ ಇಂಗ್ಲಿಷ್ ಅಕ್ಷರಗಳನ್ನು ಹುಡುಕಬೇಕು. ಈ ಸವಾಲನ್ನು ಹುಡುಕಲು ನಿಮಗಿರುವ ಸಮಯ ಇಪ್ಪತ್ತು ಸೆಕೆಂಡುಗಳು ಮಾತ್ರ. ಈ ಸವಾಲನ್ನು ಸ್ವೀಕರಿಸಲು ನಿಮ್ಮಿಂದ ಸಾಧ್ಯನಾ?

Optical Illusion: ಈ ಚಿತ್ರದಲ್ಲಿ ಅಡಗಿರುವ ಇಂಗ್ಲಿಷ್ ಪದಗಳನ್ನು 20 ಸೆಕೆಂಡುಗಳಲ್ಲಿ ಹುಡುಕಬಲ್ಲಿರಾ?
ಆಪ್ಟಿಕಲ್‌ ಇಲ್ಯೂಷನ್‌
ಸಾಯಿನಂದಾ
|

Updated on:Jul 08, 2025 | 5:25 PM

Share

ಆಪ್ಟಿಕಲ್‌ ಇಲ್ಯೂಷನ್‌ (optical illusion) ಹಾಗೂ ಬ್ರೈನ್ ಟೀಸರ್‌ನಂತಹ (brain teaser) ಒಗಟಿನ ಚಿತ್ರಗಳು ದೃಷ್ಟಿ ಸಾಮರ್ಥ್ಯ ಹಾಗೂ ಯೋಚನಾ ಸಾಮರ್ಥ್ಯ ಎಷ್ಟಿದೆ ಎಂದು ತಿಳಿಯಲು ಸಹಕಾರಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ (social media) ವೈರಲ್ ಆಗಿರುವ ಈ ಒಗಟಿನ ಆಟಗಳನ್ನು ಬಿಡಿಸುವ ಮಜಾನೇ ಬೇರೆ. ಆದರೆ ಎಷ್ಟೇ ಪ್ರಯತ್ನಿಸಿದರೂ ಇಂತಹ ಒಗಟನ್ನು ಬಿಡಿಸಲು ಕೆಲವರಿಗೆ ಸಾಧ್ಯವಾಗುವುದಿಲ್ಲ. ಇಂತಹದ್ದೇ ಕಠಿಣ ಸವಾಲಿನ ಚಿತ್ರವೊಂದು ವೈರಲ್ ಆಗಿದ್ದು, ಈ ಚಿತ್ರವು ನೋಡುವುದಕ್ಕೆ ಸರಳವಾಗಿದೆ. ಆದರೆ ಇದರಲ್ಲಿ ಅಡಗಿರುವ ಇಂಗ್ಲಿಷ್ ಅಕ್ಷರಗಳನ್ನು ಹುಡುಕಿ, ಅದನ್ನು ಜೋಡಿಸಿದಾಗ ಇಂಗ್ಲಿಷ್ ಪದಗಳುಸಿಗುತ್ತದೆ. ಆ ಪದಗಳು ಯಾವುದೆಂದು ನೀವು ಇಪ್ಪತ್ತು ಸೆಕೆಂಡುಗಳೊಳಗೆ ಹೇಳಬೇಕು. ಈ ಸವಾಲನ್ನು ಸ್ವೀಕರಿಸಲು ನೀವು ಸಿದ್ದವಿದ್ದರೆ ಈಗಾಗಲೇ ನಿಮ್ಮ ಸಮಯ ಆರಂಭವಾಗುತ್ತದೆ.

ಈ ಚಿತ್ರದಲ್ಲಿ ಏನಿದೆ?

ಒಗಟಿನ ಆಟಗಳು ಮನೋರಂಜನೆಯನ್ನು ನೀಡುವುದು ಮಾತ್ರವಲ್ಲದೆ ನಮ್ಮ ಯೋಚನಾ ಶಕ್ತಿ ಮತ್ತು ಏಕಾಗ್ರತೆಯನ್ನು ವೃದ್ಧಿಸಲು ಸಹಾಯ ಮಾಡುತ್ತದೆ. ಇಂತಹ ಒಗಟಿನ ಆಟಗಳಿಗೆ ಉತ್ತರ ಕಂಡುಹಿಡಿಯುವ ಕ್ರೇಜ್‌ ನಿಮಗಿದ್ರೆ ಇದು ನಿಮಗೆ ನಿಜಕ್ಕೂ ಖುಷಿ ಕೊಡುತ್ತದೆ. ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಗಂಡ ಹೆಂಡತಿ ಹಾಗೂ ಮಗ ಸೋಫಾದ ಮೇಲೆ ಕುಳಿತು ಪುಸ್ತಕ ಓದುತ್ತಿದ್ದಾರೆ. ಆದರೆ ಈ ಚಿತ್ರದಲ್ಲಿ ಇಂಗ್ಲಿಷ್ ಅಕ್ಷರಗಳು ಅಡಗಿವೆ. ಈ ಅಕ್ಷರಗಳನ್ನು ಒಟ್ಟು ಸೇರಿಸಿದರೆ ಒಂದು ಪದವಾಗುತ್ತದೆ. ಈ ಒಗಟನ್ನು ನೀವು ಇಪ್ಪತ್ತು ಸೆಕೆಂಡುಗಳ ಒಳಗೆ ಪತ್ತೆ ಹಚ್ಚಬೇಕು.

ಇದನ್ನೂ ಓದಿ
Image
ಈ ಚಿತ್ರದಲ್ಲಿ ಅಡಗಿರುವ ಪ್ರಾಣಿಗಳು, ಮಾನವನ ಮುಖವನ್ನು ಪತ್ತೆ ಹಚ್ಚಬಲ್ಲಿರಾ?
Image
ಈ ಚಿತ್ರದಲ್ಲಿ ಅಡಗಿರುವ ಇಲಿಯನ್ನು ಹುಡುಕಿ ಹೇಳಿ
Image
5 ಸೆಕೆಂಡುಗಳಲ್ಲಿ ಚಿತ್ರದಲ್ಲಿ ಅಡಗಿರುವ ನಗು ಮುಖವನ್ನು ಪತ್ತೆಹಚ್ಚಿ ನೋಡೋಣ
Image
ಈ ಚಿತ್ರದಲ್ಲಿ 25, 7 ರ ನಡುವೆ ಅಡಗಿರುವ 52 ಸಂಖ್ಯೆ ಎಲ್ಲಿದೆ ಎಂದು ಹೇಳಿ

ಇದನ್ನೂ ಓದಿ : Optical Illusion : ಈ ಚಿತ್ರದಲ್ಲಿ ಅಡಗಿರುವ ಪ್ರಾಣಿಗಳು, ಮಾನವನ ಮುಖವನ್ನು ಪತ್ತೆ ಹಚ್ಚಬಲ್ಲಿರಾ?

ಉತ್ತರ ಇಲ್ಲಿದೆ

ಅಬ್ಬಬ್ಬಾ ಎಷ್ಟೇ ಹುಡುಕಿದರೂ ಚಿತ್ರದಲ್ಲಿ ಅಡಗಿರುವ ಇಂಗ್ಲಿಷ್ ಅಕ್ಷರಗಳನ್ನು ಹುಡುಕಲು ಸಾಧ್ಯವಾಗುತ್ತಿಲ್ಲವೇ ಎಂದು ತಲೆ ಕೆಡಿಸಿಕೊಂಡಿದ್ದೀರಾ? ಚಿಂತಿಸಬೇಡಿ. ನಾವು ನಿಮಗೆ ಆ ಇಂಗ್ಲಿಷ್ ಅಕ್ಷರಗಳು ಹಾಗೂ ಆ ಇಂಗ್ಲೀಷ್ ಪದ ಯಾವುದೆಂದು ಹೇಳುತ್ತೇವೆ. ಈ ಚಿತ್ರದಲ್ಲಿ ಮಹಿಳೆಯ ಕೈಯಲ್ಲಿರುವ ಪುಸ್ತಕವನ್ನು ಗಮನಿಸಿ, ಈ ಪುಸ್ತಕದ ಮುಖಪುಟದಲ್ಲಿ O, R ಅಕ್ಷರಗಳಿವೆ. ಈ ಮಹಿಳೆ ಧರಿಸಿರುವ ಉಡುಪಿನಲ್ಲಿ T ಹಾಗೂ ಆಕೆಯ ಕೂದಲಿನಲ್ಲಿ S ಅಕ್ಷರಗಳಿವೆ . ಆಕೆಯ ಕಾಲು ಹಾಗೂ ಪುಸ್ತಕದ ನಡುವೆ Y ಅಕ್ಷರವನ್ನು ನೀವು ನೋಡಬಹುದು. ಈ ಎಲ್ಲಾ ಅಕ್ಷರಗಳನ್ನು ಸೇರಿದಾಗ STORY ಎನ್ನುವ ಪದ ಸಿಗುತ್ತದೆ.

ವ್ಯಕ್ತಿಯೊಬ್ಬನು ಕುಳಿತ ಸೋಫಾವನ್ನು ನೋಡಿ, ಆ ಸೋಫಾದ ಮೇಲೆ NOVEL ಎಂಬ ಪದವಿದೆ. ಇನ್ನು ಆ ವ್ಯಕ್ತಿಯ ಕನ್ನಡಕವನ್ನು ಗಮನಿಸಿ, ಕನ್ನಡದ ಎರಡು ಬದಿಯಲ್ಲಿ ಎರಡು O ಅಕ್ಷರಗಳಿವೆ. ಈ ವ್ಯಕ್ತಿಯ ಕಿವಿಯೂ ಇಂಗ್ಲಿಷ್ ವರ್ಣಮಾಲೆಯ B ಅಕ್ಷರದಂತಿದೆ. ಸೋಫಾ ಹಾಗೂ ಟೇಬಲ್ ಲ್ಯಾಂಪ್ ನಡುವೆ K ಅಕ್ಷರವಿದೆ. ಮರವನ್ನು ಗಮನಿಸಿ, ಆ ಮರದಲ್ಲಿ WORDS ಎಂಬ ಪದ ಕಾಣಿಸುತ್ತದೆ. ಸೋಫಾದ ಮೇಲೆ ಮಲಗಿ ಪುಸ್ತಕ ಓದುತ್ತಿರುವ ಹುಡುಗನ ಡ್ರೆಸ್ ಮೇಲೆ PAGE ಪದವು ಇದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:19 pm, Tue, 8 July 25

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!