Optical Illusion : ಈ ಚಿತ್ರದಲ್ಲಿ ಅಡಗಿರುವ ಪ್ರಾಣಿಗಳು, ಮಾನವನ ಮುಖವನ್ನು ಪತ್ತೆ ಹಚ್ಚಬಲ್ಲಿರಾ?
ಇತ್ತೀಚೆಗಿನ ದಿನಗಳಲ್ಲಿ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇದೆ. ಈ ಒಗಟಿನ ಆಟಗಳು ನಿಮ್ಮ ದೃಷ್ಟಿ ಮತ್ತು ಮೆದುಳಿಗೆ ಕೆಲಸ ನೀಡುತ್ತವೆ ಅನ್ನೋದೇನೋ ನಿಜ. ಈ ಒಗಟುಗಳು ಸ್ವಲ್ಪ ಟ್ರಿಕ್ಕಿಯಾಗಿದ್ದರೂ, ಇದನ್ನು ಬಿಡಿಸುವ ಮಜಾನೇ ಬೇರೆ. ಇದೀಗ ಇಲ್ಲೊಂದು ಬಹಳ ಕಠಿಣ ಸವಾಲಿನ ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ವೈರಲ್ ಆಗಿದ್ದು ಈ ಚಿತ್ರದಲ್ಲಿ ಅಡಗಿರುವ ಮಾನವನ ಮುಖಗಳು ಸೇರಿದಂತೆ 16 ಪ್ರಾಣಿ ಪಕ್ಷಿಗಳನ್ನು ಗುರುತಿಸಬೇಕು. ಇದು ನಿಮ್ಮಿಂದ ಸಾಧ್ಯವಾದರೆ ನಿಮ್ಮ ಕಣ್ಣು ಶಾರ್ಪ್ ಇದೆ ಎಂದರ್ಥ.

ಆಪ್ಟಿಕಲ್ ಇಲ್ಯೂಷನ್ (Optical Illusion) ಹಾಗೂ ಬ್ರೈನ್ ಟೀಸರ್‌ನಂತಹ (brain teaser)+ಒಗಟಿನ ಆಟಗಳನ್ನು ಬಿಡಿಸುವುದರಲ್ಲಿ ಇರುವ ಮಜಾನೇ ಬೇರೆ. ಈ ಆಟಗಳು ಕಠಿಣ ಎನಿಸಿದರೂ ಮೆದುಳಿಗೆ ಕೆಲಸ ನೀಡುವುದು ಮಾತ್ರವಲ್ಲದೇ ನೀವೇಷ್ಟು ಬುದ್ಧಿವಂತರು ಹಾಗೂ ಯೋಚನಾ ಸಾಮರ್ಥ್ಯ ಎಷ್ಟಿದೆ ಎಂದು ಪರೀಕ್ಷಿಸಲು ಸಹಾಯ ಮಾಡುತ್ತದೆ. ನಿಮ್ಮಲ್ಲಿ ತಾಳ್ಮೆಯಿದ್ದರೆ ಉತ್ತರ ಕಂಡು ಹಿಡಿಯುವುದು ಕಷ್ಟವಲ್ಲ. ಇದೀಗ ಬುದ್ಧಿವಂತಿಕೆ ಮತ್ತು ಕಣ್ಣಿನ ತೀಕ್ಷ್ಣತೆಗೆ ಸವಾಲೊಡ್ಡುವ ಒಗಟಿನ ಚಿತ್ರವೊಂದು ಸೋಶಿಯಲ್ ಮೀಡಿಯಾದಲ್ಲಿ (social media) ವೈರಲ್ ಆಗಿದೆ. ದಟ್ಟ ಕಾಡಿನಲ್ಲಿ ಅಡಗಿರುವ 16 ಪ್ರಾಣಿ ಪಕ್ಷಿಗಳು ಸೇರಿದಂತೆ ಮಾನವನ ಮುಖವನ್ನು ಕಂಡುಹಿಡಿಯಬೇಕು. ಆದರೆ ನಿಮಗಿರುವ ಕಾಲಾವಕಾಶ ಮೂವತ್ತು ಸೆಕೆಂಡುಗಳು ಮಾತ್ರ ಎನ್ನುವುದು ತಲೆಯಲ್ಲಿರಲಿ, ಹಾಗಾದ್ರೆ ಈ ಒಗಟನ್ನು ಬಿಡಿಸಲು ನೀವು ಸಿದ್ಧರಿದ್ದೀರಾ?.
ಚಿತ್ರದಲ್ಲಿ ಏನಿದೆ?
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ದಟ್ಟ ಕಾಡನ್ನು ಕಾಣಬಹುದು. ಇಲ್ಲಿ ಮರದ ರೆಂಬೆ ಕೊಂಬೆಗಳು ಹರಡಿಕೊಂಡಿದ್ದು, ನಿಮಗಿರುವ ಸವಾಲು ಏನೆಂದರೆ ಈ ಕಾಡಿನಲ್ಲಿರುವ 16 ಪ್ರಾಣಿ ಪಕ್ಷಿಗಳು ಸೇರಿದಂತೆ ಮಾನವನ ಮುಖವನ್ನು ಕಂಡುಹಿಡಿಯಬೇಕು. ಈ ಚಿತ್ರವನ್ನು ಸೂಕ್ಷ್ಮವಾಗಿ ನೋಡಿದಾಗ ನರಿಯು ನಿಮ್ಮ ಕಣ್ಣಿಗೆ ಸ್ಪಷ್ಟವಾಗಿ ಬೀಳುತ್ತದೆ. ಉಳಿದ ಪ್ರಾಣಿ ಪಕ್ಷಿಗಳನ್ನು ಕಂಡು ಹಿಡಿಯುವುದೇ ಸವಾಲಿನ ವಿಚಾರ. ಆದರೆ ಈ ಒಗಟಿನ್ನು ಬಿಡಿಸಲು ನಿಮಗಿರುವ ಸಮಯ ಮೂವತ್ತು ಸೆಕೆಂಡುಗಳು ಮಾತ್ರ. ಒಂದು ವೇಳೆ ನೀವು ಈ ಸವಾಲನ್ನು ಪೂರ್ಣಗೊಳಿಸಿದರೆ ನಿಮ್ಮ ವೀಕ್ಷಣಾ ಕೌಶಲ್ಯವು ಚೆನ್ನಾಗಿದೆ ಎಂದರ್ಥ.
ಉತ್ತರ ಇಲ್ಲಿದೆ:
ಎಷ್ಟೇ ಪ್ರಯತ್ನಿಸಿದರೂ, ಈ ಚಿತ್ರದತ್ತ ಕಣ್ಣುಹಾಯಿಸಿದರೂ 16 ಪ್ರಾಣಿ ಪಕ್ಷಿಗಳು ಹಾಗೂ ಮಾನವನ ಮುಖವನ್ನು ಪತ್ತೆ ಹಚ್ಚಲು ನಿಮಗೆ ಸಾಧ್ಯವಾಗಿಲ್ಲವೇ, ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಈ ಚಿತ್ರದಲ್ಲಿ ನರಿ, ಕುದುರೆ, ಕುರಿ, ಹಂದಿ, ಹಸು, ಎರಡು ಹದ್ದು, ಪಾರಿವಾಳ ಸೇರಿದಂತೆ ಮಾನವನ ಮುಖಗಳಿವೆ. ಈ ಚಿತ್ರದಲ್ಲಿ ಪ್ರಾಣಿ ಪ್ರಕ್ಷಿಗಳು ಸೇರಿದಂತೆ ಮಾನವನ ಮುಖಗಳನ್ನು ಕೆಂಪು ಬಣ್ಣದ ಗೆರೆ ಎಳೆದು ಗುರುತಿಸಿದ್ದೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:52 pm, Sun, 6 July 25