ತಾಯಿಯ ದೀರ್ಘಾಯುಷ್ಯಕ್ಕಾಗಿ ಶವಪೆಟ್ಟಿಗೆ ತಂದ ಮಗ, ಇದು ಇಲ್ಲಿನ ಆಚರಣೆ
ಚೀನಾ ದೇಶ ಅನೇಕ ವಿಚಿತ್ರ ಆಚರಣೆಗಳನ್ನು ಹೊಂದಿದೆ. ಬೇರೆ ಬೇರೆ ಆಚರಣೆಗಳ ಮೂಲಕ ಜಗತ್ತಿನಲ್ಲಿ ಪ್ರಚಾರವನ್ನು ಪಡೆಯುತ್ತಿದೆ. ಅದೇ ರೀತಿ ಇದೀಗ ಚೀನಾ ತನ್ನ ವಿಚಿತ್ರ ಸಂಪ್ರದಾಯದ ವಿಷಯವಾಗಿ ಸುದ್ದಿಯಲ್ಲಿದೆ. ಅದೇನೆಂದರೆ ಜೀವಂತ ಇರುವಾಗಲೇ ಶವಪಟ್ಟಿಗೆಯನ್ನು ತಯಾರಿಸಿ, ಅದರಲ್ಲಿ ಮೆರವಣಿಗೆ ಹೋಗುವ ಮೂಲಕ ತನ್ನ ಜೀವನದ ಕೊನೆಯ ಕ್ಷಣಗಳನ್ನು ಇದರಲ್ಲಿ ಕಳೆಯುವುದು. ಈ ಮೂಲಕ ಆಯಸ್ಸನ್ನು ಹೆಚ್ಚಿಸಿಕೊಳ್ಳಬಹುದು ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ.

ಕೆಲವೊಂದು ದೇಶದ ವಿಚಿತ್ರ ಆಚರಣೆಗಳ ಬಗ್ಗೆ ಕೇಳಿದಾಗ ಅಥವಾ ಇಂತಹ ಆಚರಣೆಗಳು ಕೂಡ ಇದ್ದೀಯಾ ಎಂದು ಅಚ್ಚರಿಗೊಳ್ಳುತ್ತೇವೆ, ಆದರೆ ಈ ಆಚರಣೆಗಳು ಆ ದೇಶಗಳು ಯಾಕೆ ಮಾಡಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಚೀನಾ (Chinese) ದೇಶದ ಒಂದು ಹಳ್ಳಿಯಲ್ಲಿಯೂ ಇಂತಹದ್ದೇ ವಿಭಿನ್ನವಾದ ಆಚರಣೆಯೊಂದು ರೂಢಿಯಲ್ಲಿದ್ದು, ಎಲ್ಲಾ ಕಡೆ ಶವ ಪಟ್ಟಿಗೆಯನ್ನು ಸತ್ತ ನಂತರ ಮಾತ್ರ ಮನೆ ತಂದರೆ ಇಲ್ಲಿ ಮಾತ್ರ ಜೀವಂತ ಇರುವಾಗಲೇ ಶವಪಟ್ಟಿಗೆಯನ್ನು ತಂದು ಅದರಲ್ಲಿ ವಯಸ್ಸಾದವರನ್ನು ಕೂರಿಸುತ್ತಾರೆ. ಇದು ಇಲ್ಲಿನ ಪದ್ಧತಿಯಂತೆ. ಚೀನಾದ ಈ ಗ್ರಾಮದಲ್ಲಿ ಇಂತಹ ಆಚರಣೆಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಇದೀಗ ಇಲ್ಲೊಬ್ಬ ವ್ಯಕ್ತಿ ಕೂಡ ತನ್ನ ತಾಯಿಗಾಗಿ ಶವಪೆಟ್ಟಿಗೆಯನ್ನು ತಯಾರಿಸಿ, ಅದರಲ್ಲಿ ತಾಯಿ ತನ್ನ ಕೊನೆಯ ಕ್ಷಣ ಕಳೆಯಲು ಅದರ ಮೇಲೆ ಕೂರಿಸಿ ಮೆರವಣಿಗೆ ನಡೆಸಿದ್ದಾನೆ. ಈ ವಿಚಿತ್ರ ಪದ್ಧತಿಯ ಬಗ್ಗೆ ಕೇಳಿದ್ರೆ ನೀವು ಅಚ್ಚರಿಪಡುವುದು ಖಂಡಿತ.
ಇದು ಚೀನಾದ ಕೆಲವು ಗ್ರಾಮೀಣ ಪ್ರದೇಶದಲ್ಲಿ ಕಂಡು ಬರುವ ಪದ್ಧತಿ. ಇದು ಜೀವನ ಮತ್ತು ದೀರ್ಘಾಯುಷ್ಯದ ಸಂಕೇತ. ಹಾಗೂ ಇದು ಇಲ್ಲಿನ ಸಂಪ್ರದಾಯ ಎಂದು ಹೇಳಲಾಗಿದೆ. ಯಾವುದೇ ವ್ಯಕ್ತಿ 70 ವರ್ಷ ದಾಟಿದ ತಕ್ಷಣ, ಅವನು ತನಗಾಗಿ ಶವಪೆಟ್ಟಿಗೆಯನ್ನು ತಯಾರಿಸಿ ಮನೆಯಲ್ಲಿ ಇಡುತ್ತಾನೆ. ಇದಕ್ಕಿಂತಲ್ಲೂ ಆಸಕ್ತಿದಾಯಕ ವಿಷಯವೆಂದರೆ ಅವರು ಆ ಶವಪೆಟ್ಟಿಗೆಯನ್ನು ದೈನಂದಿನ ಜೀವನದಲ್ಲಿ ಬಳಸಬೇಕು. ಈ ವಿಶಿಷ್ಟ ಅಭ್ಯಾಸವು ಜೀವಿತಾವಧಿಯನ್ನು ಹೆಚ್ಚಿಸುತ್ತದೆ ಮತ್ತು ವ್ಯಕ್ತಿಯು ಸಾವಿಗೆ ಮಾನಸಿಕವಾಗಿ ಸಿದ್ಧನಾಗಿರುತ್ತಾನೆ ಎಂದು ನಂಬಲಾಗಿದೆ. ಇಲ್ಲಿನ ಜನರ ಪ್ರಕಾರ ಶವಪೆಟ್ಟಿಗೆಯು ಭಯಾನಕ ವಿಷಯವಲ್ಲ, ಆದರೆ ಸ್ವಯಂ-ಸ್ವೀಕಾರ ಮತ್ತು ಗೌರವದ ಸಂಕೇತವಾಗಿದೆ. ಶವಪೆಟ್ಟಿಗೆಯನ್ನು ಇಡುವುದು ಮಾತ್ರವಲ್ಲ, ಜೀವಂತ ವ್ಯಕ್ತಿಯ ಅಂತ್ಯಕ್ರಿಯೆಯೂ ಒಂದು ಹಬ್ಬದಂತೆ ಎಂಬುದು ಇಲ್ಲಿ ಜನರ ನಂಬಿಕೆ. ಇದು ‘ಅಂತಿಮ ವಿದಾಯ’ವಲ್ಲ, ಬದಲಾಗಿ ಜೀವನವನ್ನು ಗೌರವಿಸುವ ಸಾಂಸ್ಕೃತಿಕ ಸಂಪ್ರದಾಯವಾಗಿದೆ ಎಂದು ಇಲ್ಲಿ ಜನ ಹೇಳುತ್ತಾರೆ.
ಇದನ್ನೂ ಓದಿ: ನಿಮ್ಮ ಕಣ್ಣಿಗೊಂದು ಸವಾಲ್; ಈ ಚಿತ್ರದಲ್ಲಿ ಅಡಗಿರುವ ಬೆಕ್ಕನ್ನು ನಿಮ್ಮಿಂದ ಹುಡುಕಲು ಸಾಧ್ಯವೇ?
ಇನ್ನು ಈ ಶವಪಟ್ಟಿಗೆಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ಇದನ್ನು 8 ಅಥವಾ 16 ಜನರು ಹೊತ್ತೊಯ್ಯುತ್ತಾರೆ. ಇದನ್ನು ಅಲ್ಲಿನ ಜಾನಪದ ನಂಬಿಕೆಗಳಲ್ಲಿ ಎಂಟು ಅಮರರು ಅಥವಾ ಎಂಟು ವಜ್ರಗಳು ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ, ಶವಪೆಟ್ಟಿಗೆಯನ್ನು ನೆಲದ ಮೇಲೆ ಇಡಬಾರದು. ಇದು ಅಲಿಖಿತ ನಿಯಮ ಎಂದು ಹೇಲಾಗಿದೆ. ಈ ಸಮಯದಲ್ಲಿ ಯಾವುದೇ ಅಡೆತಡೆ ಉಂಟಾಗದಂತೆ ಸಾವಿರಾರೂ ಜನರು ಸ್ವಯಂಸೇವಕರಂತೆ ನಿಲ್ಲುತ್ತಾರೆ. ಈ ಇಡೀ ದೃಶ್ಯವು ಭಾವನಾತ್ಮಕವಾಗಿರುವುದಲ್ಲದೆ, ಒಂದು ಸಂಸ್ಕೃತಿಯಾಗಿ ಕಾಣಲಾಗುತ್ತದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








