Video : ಮಹಿಳೆಯ ಕೈಯಲ್ಲಿ ಕಲ್ಲಂಗಡಿ ಹಣ್ಣು ಕಂಡೊಡನೆ ಓಡೋಡಿ ಬಂದ ಮರಿಯಾನೆ, ಮಾಡಿದ್ದೇನು ನೋಡಿ
ಮರಿಯಾನೆಗಳ ಆಟ ತುಂಟಾಟಗಳನ್ನು ಕಣ್ತುಂಬಿಸಿಕೊಳ್ಳುವ ಖುಷಿಯೇ ಬೇರೆ. ಈ ಮರಿಯಾನೆಗಳ ಮುದ್ದು ಪೆದ್ದು ವಿಡಿಯೋಗಳು ಆಗಾಗ ನೆಟ್ಟಿಗರ ಕಣ್ಮನ ಸೆಳೆಯುತ್ತದೆ. ಇದೀಗ ಪುಟಾಣಿ ಆನೆಯೊಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಕಣ್ಣಿಗೆ ಕಲ್ಲಂಗಡಿ ಹಣ್ಣನ್ನು ಹಿಡಿದು ನಿಂತ ಮಹಿಳೆಯನ್ನು ಕಂಡಿದೆ. ನೋಡನೋಡುತ್ತಿದ್ದಂತೆ ಮಹಿಳೆಯ ಬಳಿಗೆ ಓಡಿ ಹೋದ ಈ ಆನೆ ಮರಿ ಏನ್ ಮಾಡಿದೆ ಗೊತ್ತಾ? ಈ ಕುರಿತಾದ ವಿಡಿಯೋ ಇಲ್ಲಿದೆ ನೋಡಿ.

ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ಹೃದಯ ಗೆಲ್ಲುತ್ತಿರುವ ವಿಡಿಯೋ ಇದು. ಹೌದು, ಈ ಮರಿಯಾನೆಗಳು (baby elephant) ಮಾಡುವ ಆಟ ತುಂಟಾಟಗಳನ್ನು ಕಂಡಾಗ ಮನಸ್ಸಿಗೆ ಬೇಗನೇ ಹತ್ತಿರವಾಗುತ್ತದೆ. ಎಷ್ಟು ಮುದ್ದಾಗಿ ಆಡುತ್ತವೆ ಎನ್ನುತ್ತೇವೆ. ಎಲ್ಲಾದ್ರೂ ಹಣ್ಣಿನ ಅಂಗಡಿ, ಯಾರಾದ್ರೂ ಕೈಯಲ್ಲಿ ತಿಂಡಿ ತಿನಿಸುಗಳನ್ನು ಹಿಡಿದು ನಿಂತುಕೊಂಡಿದ್ರೆ ಸಾಕು, ಮೆಲ್ಲನೆ ಹೋಗಿ ಕದ್ದು ತಿಂದು ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಇದೀಗ ಮರಿಯಾನೆಯೊಂದು ಮಹಿಳೆಯ ಬಳಿ ಕಲ್ಲಂಗಡಿ ಹಣ್ಣನ್ನು (watermelon fruits) ಕೇಳಿ ತಿನ್ನುತ್ತಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ (social media) ವೈರಲ್ ಆಗಿದೆ.
@AMAZINGNATURE ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾಗಿದ್ದು ಕಲ್ಲಂಗಡಿ ಕೇಳಿ ತಿನ್ನುವ ಮರಿಯಾನೆ ಎನ್ನುವ ಶೀರ್ಷಿಕೆಯನ್ನು ನೀಡಲಾಗಿದೆ. ಮಾವುತನೊಂದಿಗೆ ತಾಯಿ ಆನೆ ಹಾಗೂ ಮರಿಯಾನೆ ರಸ್ತೆಯಲ್ಲಿ ನಡೆದುಕೊಂಡು ಹೋಗುವುದರೊಂದಿಗೆ ಈ ವಿಡಿಯೋ ಪ್ರಾರಂಭವಾಗುತ್ತದೆ. ಈ ವೇಳೆಯಲ್ಲಿ ಮರಿಯಾನೆ ಕಣ್ಣಿಗೆ ಬೀಳುವುದೇ ಮಹಿಳೆ. ಹೌದು ಆಕೆಯ ಕೈಯಲ್ಲಿನ ತಟ್ಟೆಯಲ್ಲಿ ಕಲ್ಲಂಗಡಿ ಹಣ್ಣಿವೆ. ಹಿಂದೆ ಮುಂದೆ ನೋಡದೇ ಮಹಿಳೆಯ ಬಳಿ ಕಲ್ಲಂಗಡಿ ಹಣ್ಣನ್ನು ಕೇಳಲು ಪ್ರಾರಂಭಿಸುತ್ತದೆ. ಆ ಮಹಿಳೆ ಯಾವುದೇ ಹಿಂಜರಿಕೆಯಿಲ್ಲದೇ ಕತ್ತರಿಸಿಟ್ಟ ಕಲ್ಲಂಗಡಿ ಹಣ್ಣನ್ನು ಕೈಯಾರೆ ಮರಿಯಾನೆಗೆ ನೀಡುತ್ತಾಳೆ. ಆ ಬಳಿಕ ತಾಯಿ ಆನೆ ಕೂಡ ಮಹಿಳೆಯ ಬಳಿ ಬಂದು ಕಲ್ಲಂಗಡಿ ಹಣ್ಣನ್ನು ತಿನ್ನುವುದನ್ನು ನೋಡಬಹುದು.
ಇದನ್ನೂ ಓದಿ : ನಿಜವಾದ ಟಾಮ್ ಆ್ಯಂಡ್ ಜೆರಿ; ಒಟ್ಟಿಗೇ ಊಟ ಮಾಡುವ ಬೆಕ್ಕು-ಇಲಿ ವಿಡಿಯೋ ವೈರಲ್
ವೈರಲ್ ವಿಡಿಯೋ ಇಲ್ಲಿದೆ ನೋಡಿ
Baby elephant asking for watermelon pic.twitter.com/n9VLDQJLAL
— Nature is Amazing ☘️ (@AMAZlNGNATURE) July 7, 2025
ಜುಲೈ 7 ರಂದು ಶೇರ್ ಮಾಡಲಾದ ಈ ವಿಡಿಯೋ 4.3 ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದುಕೊಂಡಿವೆ. ಒಬ್ಬ ಬಳಕೆದಾರರೊಬ್ಬರು, ಇದು ಥೈಲ್ಯಾಂಡ್‌ನಲ್ಲಿ ಕಾಣಸಿಗುವ ಸಾಮಾನ್ಯ ದೃಶ್ಯ ಎಂದಿದ್ದಾರೆ. ಇನ್ನೊಬ್ಬರು, ಮರಿಯಾನೆಗಳು ನಿಜಕ್ಕೂ ಮುದ್ದಾಗಿವೆ, ತಾಯಿಯಾನೆಗಳು ಸದಾ ಕಾಳಜಿಯನ್ನು ತೋರುತ್ತವೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಈ ಮರಿಯಾನೆಗಳು ನಿಜಕ್ಕೂ ಮುಗ್ಧ ಪ್ರಾಣಿಗಳು, ಅವುಗಳ ಆಟ ತುಂಟಾಟವನ್ನು ನೋಡುವುದಕ್ಕೆ ಖುಷಿಯಾಗುತ್ತದೆ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








