Video : ಮಲೇಷ್ಯಾದಲ್ಲಿ ಭಾರತೀಯ ನಾರಿಯರಂತೆ ಸೀರೆ ಉಟ್ಟು ಸುತ್ತಾಡಿದ ಚೀನೀ ಮಹಿಳೆಯರು
ಸೀರೆ ಭಾರತೀಯ ನಾರಿಯರಿಗೆ ಮಾತ್ರ ಎಂಬ ಕಲ್ಪನೆ ಹೋಗಿದೆ. ವಿದೇಶಿ ಮಹಿಳೆಯರು ಕೂಡ ಸೀರೆಯನ್ನು ಇಷ್ಟಪಡುತ್ತಾರೆ. ಎಂಬುದಕ್ಕೆ ಈ ವಿಡಿಯೋ ಸಾಕ್ಷಿ . ಸೀರೆಯಲ್ಲಿ ಚೀನೀ ಮಹಿಳೆಯರು ಭಾರೀ ಮಿಂಚಿದ್ದಾರೆ. ಈ ಬಗ್ಗೆ ಭಾರತೀಯ ವ್ಲಾಗರ್ ತನ್ನ ಯೂಟ್ಯಬ್ ಶಾರ್ಟ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಮಲೇಷ್ಯಾದ ಬಾಟು ಗುಹೆಯಲ್ಲಿ ಸೀರೆ ಧರಿಸಿದ್ದ ಇಬ್ಬರು ಚೀನೀ ಮಹಿಳೆಯರನ್ನು ಪರಿಚಯ ಮಾಡಿಕೊಂಡು ಅವರೊಂದಿಗೆ ಫೋಟೋ ಕ್ಲಿಕಿಸಿಕೊಂಡಿದ್ದಾರೆ.

ಸೀರೆ ಭಾರತೀಯ ಹೆಣ್ಮಕ್ಕಳಿಗೆ ಮಾತ್ರ ಎನ್ನುವ ಕಾಲವಿತ್ತು, ಆದರೆ ಅದು ಈಗ ಬದಲಾಗಿದೆ, ಭಾರತೀಯ ಸಂಸ್ಕೃತಿಯನ್ನು ಜಗತ್ತಿನ ಬೇರೆ ಬೇರೆ ದೇಶಗಳು ಅನುಸರಿಸುತ್ತಿದೆ. ಭಾರತದ ಆಚರಣೆ, ಪದ್ಧತಿ, ಆಹಾರ ಕ್ರಮಗಳನ್ನು ವಿದೇಶಿಗರು ಇಷ್ಟ ಪಡುತ್ತಿದ್ದಾರೆ. ಇದೀಗ ಇದಕ್ಕೆ ಸಾಕ್ಷಿ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿ ಅಲ್ಲಿದ್ದ ಭಾರತೀಯರೇ ಅಚ್ಚರಿ ಪಟ್ಟಿದ್ದಾರೆ. ಮಲೇಷ್ಯಾದ ಬಾಟು ಗುಹೆಯಲ್ಲಿ ಸೀರೆ ಧರಿಸಿದ್ದ ಇಬ್ಬರು ಚೀನೀ ಮಹಿಳೆಯರು (Chinese womans) ಭಾರತೀಯ ವ್ಯಕ್ತಿಗೆ ಕಂಡಿದ್ದಾರೆ. ಈ ಚೀನೀ ಮಹಿಳೆಯರು ಸೀರೆಯಲ್ಲಿ ಗೊಂಬೆಗಳಂತೆ ಕಂಡಿದ್ದಾರೆ, ಫೋಟೋ ಕ್ಲಿಕಿಸಿ ಸಂಭ್ರಮಿಸಿದ್ದಾರೆ. ಭಾರತೀಯ ವ್ಲಾಗರ್ ತನ್ನ ಯೂಟ್ಯೂಬ್ನಲ್ಲಿ ಚೀನೀ ಜನರು ಸೀರೆ ಉಡುತ್ತಿದ್ದಾರೆ ಎಂದು ಹೇಳಿದ್ದಾರೆ . ಈ ವ್ಲಾಗರ್ ಆ ಮಹಿಳೆಯರನ್ನು ನೋಡಿ ಸೀರೆಯಲ್ಲಿ ತುಂಬಾ ಚೆನ್ನಾಗಿ ಕಾಣುತ್ತಿದ್ದಾರೆ ಎಂದು ಹೊಗಳಿದ್ದಾನೆ. ಇದಕ್ಕೆ ಚೀನೀ ಮಹಿಳೆಯರು ನಗುತ್ತಾ ಉತ್ತರಿಸುತ್ತಾರೆ.
ಇನ್ನು ಈ ವಿಡಿಯೋದಲ್ಲಿ ಇಬ್ಬರು ಮಹಿಳೆಯರು ಫೋಟೋಗೆ ಪೋಸ್ ಕೊಡುವುದು ಕಾಣಬಹುದು. ಒಬ್ಬರು ಹಸಿರು ಸೀರೆ ಧರಿಸಿದ್ದರೆ, ಇನ್ನೊಬ್ಬರು ಕೆಂಪು-ಗುಲಾಬಿ ಬಣ್ಣದ ಸೀರೆಯನ್ನು ಧರಿಸಿದ್ದಾರೆ. ಭಾರತೀಯರಂತೆ ಆಭರಣ, ಬಳೆ, ಹೂವನ್ನು ಧರಿಸಿ ಭಾರತೀಯ ನಾರಿಯಂತೆ ಕಂಗೊಳಿಸಿದ್ದಾರೆ. ಅಲ್ಲಿ ಓಡಾಡುತ್ತಿದ್ದ ಜನರು ಅವರನ್ನೇ ಅಚ್ಚರಿಯಿಂದ ನೋಡಿದ್ದಾರೆ. ಇನ್ನೊಂದು ವಿಶೇಷವೆಂದರೆ ಹಿಂದಿನ ಕಾಲದಲ್ಲಿ ಭಾರತೀಯ ನಾರಿಯರು ಬಳಸುತ್ತಿದ್ದ ಬ್ಯಾಗ್ಗಳನ್ನು ಹಿಡಿದುಕೊಂಡು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಮಹಿಳೆಯ ಕೈಯಲ್ಲಿ ಕಲ್ಲಂಗಡಿ ಹಣ್ಣು ಕಂಡೊಡನೆ ಓಡೋಡಿ ಬಂದ ಮರಿಯಾನೆ, ಮಾಡಿದ್ದೇನು ನೋಡಿ
ವೈರಲ್ ವಿಡಿಯೋ ಇಲ್ಲಿದೆ ನೋಡಿ:
ಈ ವಿಡಿಯೋದಲ್ಲಿ ವ್ಲಾಗರ್ ಈ ಮಹಿಳೆಯರು ಚೀನಾದವರು, ಅವರು ಸೀರೆಯನ್ನು ಉಟ್ಟುಕೊಂಡು ಮಲೇಷ್ಯಾದ ಬಾಟು ಗುಹೆಗೆ ಬಂದಿದ್ದಾರೆ ಎಂದು ಹೇಳಿದ್ದಾರೆ. ಅವರು ಜತೆಗೆ ಮಾತನಾಡಿ ಒಂದು ಫೋಟೋ ಕೂಡ ಈ ವ್ಲಾಗರ್ ತೆಗೆಸಿಕೊಳ್ಳುತ್ತಾರೆ. ಈ ವಿಡಿಯೋದಲ್ಲಿ ವ್ಲಾಗರ್ ಹೀಗೆ ಹೇಳುತ್ತಾರೆ, “ಎಲ್ಲರಿಗೂ ನಮಸ್ಕಾರ, ನಾನು ಭಾರತವನ್ನು ಮತ್ತು ನನ್ನ ವೈಯಕ್ತಿಕ ಅನುಭವಗಳ ವೀಡಿಯೊಗಳನ್ನು ರಚಿಸಲು ಮತ್ತು ಹಂಚಿಕೊಳ್ಳಲು ನಾನು ಇಷ್ಟಪಡುತ್ತೇನೆ, ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಈ ಜೀವನವು ನನ್ನನ್ನು ಎಲ್ಲಿಗೆ ಕರೆದೊಯ್ಯುತ್ತದೆ ಎಂದು ನೋಡೋಣ. ನಿಮ್ಮೊಂದಿಗೆ ಎಲ್ಲಾ ಒಳ್ಳೆಯ ಮತ್ತು ರೋಮಾಂಚಕಾರಿ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದೇನೆ.” ಎಂದು ಹೇಳಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಇದೀಗ ಭಾರೀ ವೈರಲ್ ಆಗುತ್ತಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








