Video : ನ್ಯೂಯಾರ್ಕ್ನಲ್ಲಿ ತಿಂಗಳಿಗೆ 4.28 ಲಕ್ಷ ರೂ ಖರ್ಚು ಮಾಡುವ ಭಾರತೀಯ ಮೂಲದ ಸಾಫ್ಟ್‌ವೇರ್ ಇಂಜಿನಿಯರ್
ಅಮೆರಿಕದಲ್ಲಿ ದುಡಿಯುವ ಜನರ ಸಂಬಳ ಹೇಗೆ ದೊಡ್ಡದಾಗಿರುತ್ತದೆ, ಹಾಗೆಯೇ ಅವರ ಖರ್ಚು ಕೂಡ ಅಷ್ಟೇ ದೊಡ್ಡ ಮಟ್ಟದ್ದು, ಇದಕ್ಕೆ ಉದಾಹರಣೆ ಈ ವಿಡಿಯೋ ನೋಡಿ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಖತ್ ಟ್ರೆಂಡ್ ಆಗುತ್ತಿದೆ. ನ್ಯೂಯಾರ್ಕ್ ನಗರದಲ್ಲಿ ವಾಸಿಸಲು ಇಷ್ಟು ವೆಚ್ಚ ಮಾಡಬೇಕು ಎಂಬ ಪ್ರಶ್ನೆಗಳು ಮೂಡುವುದು ಖಂಡಿತ. ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್ ತಿಂಗಳ ಖರ್ಚು ಎಷ್ಟಿದೆ ಎಂಬುದನ್ನು ಇಲ್ಲಿ ಹೇಳಲಾಗಿದೆ.

ಸಾಫ್ಟ್‌ವೇರ್ ಇಂಜಿನಿಯರ್, (software engineer) ಐಟಿಬಿಟಿ ಕಂಪನಿಗಳಲ್ಲಿ ಕೆಲಸ ಮಾಡುವವರ ಜೀವನ ತುಂಬಾ ಹೈಪೈ ಎಂದು ಹೇಳುತ್ತೇವೆ. ಆದರೆ ಅವರು ಖರ್ಚು ಮಾಡುವುದು ಕೂಡ ಅಷ್ಟೇ ಇರುತ್ತದೆ. ಸಂಬಳ ಕೂಡ ಅಷ್ಟೇ ಇರುತ್ತದೆ. ಅದರೂ ಅವರಿಗೆ ಈ ಸಂಬಳ ಸಾಕಾಗುವುದಿಲ್ಲ. ಇದು ಭಾರತದ ಕಥೆ, ಆದರೆ ಇಲ್ಲೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಗೂಗಲ್‌ನಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ನ್ಯೂಯಾರ್ಕ್ ನಗರದಲ್ಲಿ (New York City) ವಾಸಿಸಲು ಎಷ್ಟು ವೆಚ್ಚವಾಗುತ್ತದೆ ಎಂಬ ಬಗ್ಗೆ ಹಂಚಿಕೊಂಡಿದ್ದಾರೆ. ಇದೀಗ ಈ ವಿಚಾರ ಚರ್ಚೆಗೆ ಕಾರಣವಾಗಿದೆ. ಇನ್‌ಸ್ಟಾಗ್ರಾಮ್ ರೀಲ್‌ನಲ್ಲಿ ಮೈತ್ರಿ ಮಂಗಲ್ ಎಂಬುವವರು, ತಮ್ಮ ಮಾಸಿಕ ಖರ್ಚುಗಳನ್ನು ವಿವರಿಸಿದ್ದಾರೆ, ನಗರದಲ್ಲಿ ವಾಸಿಸಲು ಪ್ರತಿ ತಿಂಗಳು ಸುಮಾರು ₹ 4 ಲಕ್ಷ ವೆಚ್ಚವಾಗಬಹುದು ಎಂದು ಹೇಳಿದ್ದಾರೆ. ಇದಕ್ಕೆ ಅಚ್ಚರಿಯ ರಿಯಾಕ್ಷನ್ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಮಾಡಿದ್ದಾರೆ.
ಈ ವಿಡಿಯೋವನ್ನು ಕುಶಾಲ್ ಲೋಧಾ ಎಂಬವವರು (@kushallodha548) ಹಂಚಿಕೊಂಡಿದ್ದಾರೆ, ಕುಶಾಲ್ ಲೋಧಾ ಪಾಡ್‌ಕ್ಯಾಸ್ಟರ್ ಮಾಡುವ ಕಾರಣ, ವೃತ್ತಿ, ತಂತ್ರಜ್ಞಾನ ಮತ್ತು ವಿದೇಶ ಜೀವನ ಹೀಗೆ ಬೇರೆ ಬೇರೆ ವಿಚಾರಗಳ ಬಗ್ಗೆ ಹಂಚಿಕೊಳ್ಳುತ್ತಾರೆ. ಇದೀಗ ಮೈತ್ರಿ ಮಂಗಲ್ ಅವರ ಬಗ್ಗೆಯೂ ಇದರಲ್ಲಿ ಹಂಚಿಕೊಂಡಿದ್ದಾರೆ. ಮೈತ್ರಿ ತಮ್ಮ ತಿಂಗಳ ಖರ್ಚಿನ ಲೆಕ್ಕಾಚಾರವನ್ನು ಈ ವಿಡಿಯೋದಲ್ಲಿ ಹೇಳಿದ್ದಾರೆ. ಮನೆಯ ಬಾಡಿಗೆ 2,57,069 ರೂ. ದೈನಂದಿನ ವೆಚ್ಚಗಳು ಮತ್ತು ಪ್ರವಾಸ 85 ಸಾವಿರದಿಂದ 1 ಲಕ್ಷ 71 ಸಾವಿರ. ಇದರ ಜತೆಗೆ ಮತ್ತೊಂದು ಪ್ರಯಾಣ ವೆಚ್ಚ ಅಂದರೆ ದಿನ ನಿತ್ಯದ ಓಡಾಟ 8,500 ರೂ.ರಿಂದ 17, 000 ರೂ. ವರೆಗೆ. ಒಟ್ಟಾರೆಯಾಗಿ ಅವರ ಮಾಸಿಕ ಬಜೆಟ್ 4,28,350 ರೂ. ಎಂದು ಹೇಳಿದ್ದಾರೆ.
ಇದನ್ನೂ ಓದಿ: ನೀನೇಕೆ ನಮ್ಮ ದೇಶದಲ್ಲಿದ್ದೀಯ, ನೀನು ಇಲ್ಲಿರುವುದು ನನಗೆ ಇಷ್ಟವಿಲ್ಲ : ಭಾರತೀಯನಿಗೆ ಅವಮಾನ ಮಾಡಿದ ಅಮೆರಿಕದ ನಿವಾಸಿ
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಇನ್ನು ನ್ಯೂಯಾರ್ಕ್ ನಗರದಲ್ಲಿ ಕೆಲಸ ಮಾಡುವ ಸಾಫ್ಟ್‌ವೇರ್ ಇಂಜಿನಿಯರ್‌ನ ಸರಾಸರಿ ವೇತನ ವರ್ಷಕ್ಕೆ 1,28,48,130 ರೂ. ರಿಂದ 1,71,30,840 ರೂ. ಆದರೆ 1.6 ಕೋಟಿಯಷ್ಟು ನ್ಯೂಯಾರ್ಕ್ ನಗರದಲ್ಲಿ ಹಣ ವ್ಯಯವಾಗುತ್ತದೆ ಎಂದು ಹೇಳಿದ್ದಾರೆ. ಈ ವಿಡಿಯೋವನ್ನು ಜುಲೈ 7ರಂದು ಹಂಚಿಕೊಳ್ಳಲಾಗಿದ್ದು, ಈ ವಿಡಿಯೋವನ್ನು 2 ಸಾವಿರಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಜತೆಗೆ ಇದಕ್ಕೆ ಕಾಮೆಂಟ್‌ಗಳು ಬಂದಿದ್ದು, ಬಳಕೆದಾರ ನಿಮ್ಮ ವಿಷಯ ತುಂಬಾ ಚೆನ್ನಾಗಿದೆ. ಆದರೆ ಇದರಲ್ಲಿ ಸೂಕ್ತ ಒಳನೋಟಗಳಿಲ್ಲ ಎಂದು ಹೇಳಿದ್ದಾರೆ. ಗೂಗಲ್‌ನಲ್ಲಿ ಸರಾಸರಿ ಪ್ಯಾಕೇಜ್’ ಎಂಬುದು ಸಾಫ್ಟ್‌ವೇರ್ ಇಂಜಿನಿಯರ್‌ಗೆ ಸಹ ಸ್ವಲ್ಪ ಅಸ್ಪಷ್ಟವಾಗಿರುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








