ಪ್ರತಿದಿನ ಕಿರಿಕಿರಿ ಮಾಡುತ್ತಿದ್ದ ಮ್ಯಾನೇಜರ್ಗೆ 15 ಬಾರಿ ಚಾಕುವಿನಿಂದ ಇರಿದು ಕೊಂದ ಮಹಿಳಾ ಉದ್ಯೋಗಿ
ಕೆಲಸದ ಸ್ಥಳದಲ್ಲಿ ಕಿರಿಕಿರಿ ಎಲ್ಲರಿಗೂ ಇದ್ದೇ ಇರುತ್ತದೆ. ಅದು ಸಹಜ ಕೂಡ ಹೌದು, ಆದರೆ ಅದು ಅತಿಯಾದರೆ ಕೋಪ ನೆತ್ತಿಗೆ ಎರುತ್ತದೆ. ಈ ಸಮಯದಲ್ಲಿ ವಿಪರೀತ ಕೋಪ ಬರುವುದು ಸಹಜ. ಇಲ್ಲೊಂದು ಅಂತಹದ್ದೇ ಘಟನೆ ನಡೆದಿದ್ದು, ತನ್ನ ಮ್ಯಾನೇಜರ್ ಪ್ರತಿದಿನ ತನಗೆ ಕೆಲಸದ ವಿಚಾರವಾಗಿ ಕಿರಿಕಿರಿ ಮಾಡುತ್ತಿದ್ದ ಎಂದು ಮಹಿಳಾ ಉದ್ಯೋಗಿ ಆತನಿಗೆ 15 ಬಾರಿ ಚಾಕುವಿನಿಂದ ಇರಿದು ಕೊಂದಿದ್ದಾಳೆ.

ಕೆಲಸದ ಸ್ಥಳದಲ್ಲಿ ಒತ್ತಡ ಇರುವುದು ಸಹಜ, ಕೆಲವೊಂದು ಬಾರಿ ಅದು ಕಿರಿಕಿರಿ ಆಗುತ್ತದೆ. ಆಗ ಸಹಜವಾಗಿ ಕೋಪ ಬಂದೇ ಬರುತ್ತದೆ. ಕೆಲಸದ ಸ್ಥಳದಲ್ಲಿ ಕೆಲವು ಹಿರಿಯ ಉದ್ಯೋಗಿಗಳು ಕಿರಿಯ ಉದ್ಯೋಗಿಗಳ ಮೇಲೆ ದಬ್ಬಾಳಿಕೆ ಮಾಡುವ ಸಂಸ್ಕೃತಿ ಹಿಂದಿನಿಂದಲ್ಲೂ ಇದೆ. ಇದರಿಂದ ಕೆಲವರು ಕೆಲಸ ಬಿಟ್ಟದ್ದು ಇದೆ, ಇನ್ನೂ ಕೆಲವರು ಆತ್ಮಹತ್ಯೆಯಂತಹ ಕೆಲವು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡ ಘಟನೆಗಳು ಕೂಡ ನಡೆದಿದೆ. ಆದರೆ ಇಲ್ಲೊಂದು ವಿಚಿತ್ರ ಹಾಗೂ ಅಚ್ಚರಿಯ ಘಟನೆಯೊಂದು ನಡೆದಿದ್ದು, ಪ್ರತಿಷ್ಠಿತ ಕಂಪನಿಯ ಮಹಿಳಾ ಉದ್ಯೋಗಿ ಪ್ರತಿದಿನ ತನಗೆ ಮಾನಸಿಕವಾಗಿ ಹಿಂಸೆ ನೀಡುತ್ತಾನೆ ಎಂದು ಮ್ಯಾನೇಜರ್ಗೆ 15 ಬಾರಿ ಚಾಕುವಿನಿಂದ ಇರಿದು ಕೊಂದಿದ್ದಾಳೆ. ಇದೀಗ ಈ ಸುದ್ದಿ ವ್ಯಾಪಕವಾಗಿ ವೈರಲ್ ಆಗಿದೆ. ಈ ಘಟನೆ ಅಮೆರಿಕದಲ್ಲಿ ನಡೆದಿದ್ದು, ಇಲ್ಲಿನ ಮಿಚಿಗನ್‌ನಲ್ಲಿರುವ ಮೆಕ್‌ಡೊನಾಲ್ಡ್ಸ್ ಔಟ್ಲೆಟ್ನಲ್ಲಿ ಅಫೆನಿ ಮುಹಮ್ಮದ್ (Afeni Muhammad) ಎಂಬ 26 ವರ್ಷದ ಮಹಿಳೆ ಮ್ಯಾನೇಜರ್ ಜೆನ್ನಿಫರ್ ಹ್ಯಾರಿಸ್ (39 ವರ್ಷ) ಮೇಲೆ ಸತತ 15 ಬಾರಿ ಚಾಕುವಿನಿಂದ ಹಲ್ಲೆ ನಡೆಸಿದ್ದಾಳೆ.
ಅಫೆನಿ ಮುಹಮ್ಮದ್ ಎಂಬ ಮಹಿಳಾ ಉದ್ಯೋಗಿ ಕೋಪದ ಭರದಲ್ಲಿ ತನ್ನ ಮ್ಯಾನೇಜರ್ ಜೆನ್ನಿಫರ್ ಹ್ಯಾರಿಸ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾಳೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಈ ಘಟನೆ ಜುಲೈ 12 ರಂದು ನಡೆದಿದ್ದು, ಕೆಲಸದ ವಿಚಾರವಾಗಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಪ್ರತಿದಿನ ಮ್ಯಾನೇಜರ್ ಬಂದು ನೀನು ಕಡಿಮೆ ಕೆಲಸ ಮಾಡುತ್ತಿದ್ದೀಯಾ, ಕಳಪೆ ಕಾರ್ಯಕ್ಷಮತೆ ಇದೆ ಎಂದು ಪದೇ ಪದೇ ಮನೆಗೆ ಕಳುಹಿಸುತ್ತಿದ್ದ ಎಂಬ ಕಾರಣಕ್ಕೆ ಕೋಪಗೊಂಡು ಅಫೆನಿ ಮುಹಮ್ಮದ್ ಮ್ಯಾನೇಜರ್ ಮೇಲೆ ಈ ದಾಳಿ ಮಾಡಿದ್ದಾಳೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಆಟೋಗೆ ವಿಂಡ್ ಶೀಲ್ಡ್ ಹಾಕಿಸಿಕೊಳ್ಳುವಂತೆ ಚಾಲಕನಿಗೆ ಹಾಡಿನ ಮೂಲಕ ಮನವಿ ಮಾಡಿದ ಪೊಲೀಸ್
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
McDonald’s Manager and Mother of 6 Stabbed to Death by This Employee pic.twitter.com/cXd4pzt0Zk
— The Facts Dude (@The_Facts_Dude) July 11, 2025
ಅಫೆನಿ ಮುಹಮ್ಮದ್ ಮ್ಯಾನೇಜರ್ನ್ನು ಕೊಲೆ ಮಾಡುವ ಹಿಂದಿನ ದಿನ ತಮ್ಮ ಇನ್‌ಸ್ಟಾಗ್ರಾಮ್ ಮತ್ತು ಟ್ವಿಟರ್ ಖಾತೆಗಳಲ್ಲಿ ತನ್ನ ಮ್ಯಾನೇಜರ್ ಬಗ್ಗೆ ಕೋಪದಲ್ಲಿ ಕೆಲವೊಂದು ಸ್ಟೋರಿಗಳನ್ನು ಹಾಕಿದ್ದಾಳು. ತನ್ನ ಮ್ಯಾನೇಜರ್ ನನ್ನನ್ನೂ ತುಂಬಾ ಕೀಳಾಗಿ ನೋಡುತ್ತಾನೆ. ನಾನು ಇದನ್ನು ಇನ್ನು ಮುಂದೆ ಸಹಿಸಲಾರೆ ಎಂದು ಹಾಕಿದ್ದಳು. ಮರುದಿನ ಮತ್ತೆ ಈ ವಿಚಾರವಾಗಿ ಇಬ್ಬರ ನಡುವೆ ವಾದಗಳು ನಡೆದಿದೆ. ಮತ್ತೆ ಮ್ಯಾನೇಜರ್ ಮನೆಗೆ ಕಳುಹಿಸಿದ್ದಾನೆ. ಇದರಿಂದ ಕೋಪಗೊಂಡು ಮಹಿಳೆ ತನ್ನ ಕಾರಿನ ಬಳಿ ಹೋಗಿ, ಕಾರಿನಲ್ಲಿದ್ದ ಚಾಕುವನ್ನು ತಂದು ಮ್ಯಾನೇಜರ್ಗೆ 15 ಬಾರಿ ಇರಿದಿದ್ದಾಳೆ. ಕಂಪನಿಯಲ್ಲಿ ಇದನ್ನು ನೋಡಿ ವ್ಯಕ್ತಿಯೊಬ್ಬ ಬಿಡಿಸಲು ಬಂದಿದ್ದಾನೆ. ಆದರೆ ಅಷ್ಟೊತ್ತಿಗೆ, ಮ್ಯಾನೇಜರ್ ಪ್ರಾಣ ಹೋಗಿತ್ತು. ಈ ಮಹಿಳೆ ತಕ್ಷಣ ಅಲ್ಲಿಂದ ಪರಾರಿಯಾಗಲು ಮುಂದಾಗಿದ್ದು, ಆದರೆ ತಕ್ಷಣ ಅಲ್ಲಿನ ಸಿಬ್ಬಂದಿಗಳು ಆಕೆಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದೊಂದು ಪೂರ್ವ ಯೋಜಿತ ಎಂದು ಕೊಲೆಯೆಂದು ಮ್ಯಾನೇಜರ್ ಕಡೆಯ ವಕೀಲರು ಕೋರ್ಟ್ನಲ್ಲಿ ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:18 pm, Tue, 15 July 25








