Video: ಕಾಲೇಜು ಯುವತಿಯ ಮೇಲೆ ಬೀದಿ ನಾಯಿಗಳ ಡೆಡ್ಲಿ ಅಟ್ಯಾಕ್; ಭಯಾನಕ ದೃಶ್ಯ ವೈರಲ್
ಇತ್ತೀಚಿನ ದಿನಗಳಲ್ಲಿ ಬೀದಿನಾಯಿಗಳ ಹಾವಳಿ ತೀರಾ ಹೆಚ್ಚಾಗಿದೆ. ಇವುಗಳ ಭಯಾನಕ ದಾಳಿಗೆ ಅದೆಷ್ಟೋ ಮಂದಿ ಪ್ರಾಣವನ್ನೇ ಕಳೆದುಕೊಂಡಿದ್ದಿದ್ದಾರೆ. ಬೀದಿನಾಯಿಗಳ ದಾಳಿಗೆ ಸಂಬಂಧಿಸಿದ ಇಂತಹದ್ದೇ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದ್ದು, ದಾರಿಯಲ್ಲಿ ತನ್ನ ಪಾಡಿಗೆ ನಡೆದುಕೊಂಡು ಹೋಗ್ತಿದ್ದ ಕಾಲೇಜು ಯುವತಿಯ ಮೇಲೆ ಬೀದಿ ನಾಯಿಗಳ ಗುಂಪು ಏಕಾಏಕಿ ದಾಳಿ ನಡೆಸಿವೆ. ದಾಳಿಯ ಈ ಭಯಾನಕ ದೃಶ್ಯವನ್ನು ಕಂಡು ನೋಡುಗರು ಬೆಚ್ಚಿ ಬಿದ್ದಿದ್ದಾರೆ.

ಮಧ್ಯಪ್ರದೇಶ, ಜುಲೈ 16: ಇತ್ತೀಗಂತೂ ಬೀದಿ ನಾಯಿಗಳ (Stray Dogs) ಹಾವಳಿ ತೀರಾ ಹೆಚ್ಚಾಗಿದ್ದು, ಜನ ಬೀದಿಗಿಳಿಯಲು ಕೂಡಾ ಹೆದರುತ್ತಿದ್ದಾರೆ. ಹೌದು ಮಕ್ಕಳು, ವೃದ್ಧರು ಸೇರಿದಂತೆ ದಾರಿಯಲ್ಲಿ ಹೋಗಿ ಬರುವವರ ಮೇಲೆ ಈ ನಾಯಿಗಳು ದಾಳಿ ನಡೆಸುತ್ತಿದ್ದು, ದೇಶದಲ್ಲಿ ಬೀದಿ ನಾಯಿಗಳ ದಾಳಿ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಇದೀಗ ಮಧ್ಯಪ್ರದೇಶಲ್ಲಿ ಇಂತಹದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಬೆಳಗ್ಗೆ ತನ್ನ ಪಾಡಿಗೆ ರಸ್ತೆ ಬೀದಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕಾಲೇಜು ಯುವತಿಯ ಮೇಲೆ ನಾಲ್ಕೈದು ಬೀದಿ ನಾಯಿಗಳು ಏಕಾಏಕಿ ದಾಳಿ ( stray dogs attacked a young woman) ನಡೆಸಿವೆ. ಸ್ನೇಹಿತೆಯ ಸಹಾಯದಿಂದ ಯುವತಿ ಡೆಡ್ಲಿ ಅಟ್ಯಾಕ್‌ನಿಂದ ಪಾರಾಗಿದ್ದು, ಈ ಭಯಾನಕ ದೃಶ್ಯ ಇದೀಗ ಭಾರೀ ವೈರಲ್ ಆಗುತ್ತಿದೆ.
ಯುವತಿಯ ಮೇಲೆ ಅಟ್ಯಾಕ್ ಮಾಡಿದ ಬೀದಿ ನಾಯಿಗಳು:
ಈ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದ್ದು, ಕಾಲೇಜು ಯುವತಿಯ ಮೇಲೆ ಬೀದಿ ನಾಯಿಗಳ ಗುಂಪೊಂದು ಏಕಾಏಕಿ ದಾಳಿ ನಡೆಸಿದೆ. ಪರೀಕ್ಷೆ ಇದ್ದ ಕಾರಣ ಆಕೆ ಬೆಳಗ್ಗೆ ಬೇಗ ಕಾಲೇಜಿಗೆ ಹೊರಟಿದ್ದು, ಈ ಸಂದರ್ಭದಲ್ಲಿ ನಾಯಿಗಳು ಆಕೆಯ ಮೇಲೆ ಅಟ್ಯಾಕ್ ಮಾಡಿವೆ. ಒಂದಲ್ಲ ಎರಡು ಬಾರಿ ಆ ನಾಯಿಗಳು ಆಕೆಯ ಮೇಲೆ ದಾಳಿ ನಡೆಸಿದ್ದು, ಅದೃಷ್ಟವಶಾತ್ ಸ್ನೇಹಿತೆಯ ಸಹಾಯದಿಂದ ಅಪಾಯದಿಂದ ಯುವತಿ ಪಾರಾಗಿದ್ದಾಳೆ.
ನಾಯಿಯ ದಾಳಿಯಿಂದ ಯುವತಿಗೆ ತೀವ್ರ ಗಾಯಗಳಾಗಿದ್ದು, ಸ್ಥಳೀಯ ನಿವಾಸಿಗಳ ಸಹಾಯದಿಂದ ನಂತರ ಆಕೆಯನ್ನು ಆಸ್ಪತ್ರೆಗೆ ಕಯೆದೊಯ್ಯಲಾಗಿದೆ. ಈ ಕುರಿತ ವಿಡಿಯೋವನ್ನು Incognito ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
A college student was heading to her college when four stray dogs suddenly attacked her & severely injured her at around 6:30 AM in Indore.
Indore has witnessed 24,000 dog bite cases in first six months of 2025.
There is possibility the numbers will cross 50,000 cases by the… pic.twitter.com/M2xz1qD7wT
— Incognito (@Incognito_qfs) July 15, 2025
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ತನ್ನ ಪಾಡಿಗೆ ನಡೆದುಕೊಂಡು ಹೋಗುತ್ತಿದ್ದ ಯುವತಿಯ ಮೇಲೆ ನಾಲ್ಕೈದು ನಾಯಿಗಳು ಓಡಿ ಬಂದು ದಾಳಿ ನಡೆಸುವ ದೃಶ್ಯವನ್ನು ಕಾಣಬಹುದು. ಅಟ್ಯಾಕ್ ಆದಾಗ ಕೆಳಗೆ ಬಿದ್ದ ಆಕೆ ಕಿರುಚುತ್ತಾ ಹಾಗೋ ಹೀಗೋ ನಾಯಿಗಳನ್ನು ಓಡಿಸಿದ್ದಾಳೆ. ಸಂಕಷ್ಟದಿಂದ ಪಾರಾದೆ ಎಂದುಕೊಳ್ಳುವಷ್ಟರಲ್ಲಿ ಮತ್ತೊಮ್ಮೆ ಆ ನಾಯಿಗಳು ಅಟ್ಯಾಕ್ ಮಾಡಲು ಬಂದಿದ್ದು, ಆ ಸಂದರ್ಭದಲ್ಲಿ ಇನ್ನೊರ್ವ ಕಾಲೇಜು ಯುವತಿ ಆಕೆಯ ರಕ್ಷಣೆಗೆ ಧಾವಿಸಿದ್ದಾಳೆ.
ಇದನ್ನೂ ಓದಿ: ಕಾರಿನಡಿ ಸಿಲುಕಿದರೂ ಪವಾಡದಂತೆ ಬದುಕುಳಿದ ಮಗು
ಜುಲೈ 15 ರಂದು ಶೇರ್ ಮಾಡಲಾದ ಈ ವಿಡಿಯೋ 7.8 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ಸ್ಥಳದಲ್ಲಿ ಚಿಕ್ಕ ಮಕ್ಕಳಿದ್ದರೆ ಈ ನಾಯಿಗಳು ಪ್ರಾಣವನ್ನೇ ಕಸಿದುಕೊಳ್ಳುತ್ತಿದ್ದವುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಬೆಂಗಳೂರಿನಲ್ಲಿಯೂ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ಆ ನಾಯಿಗಳಿಗೆ ಲಸಿಕೆ ಮತ್ತು ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡವ ಬದಲು, ಬಿಬಿಎಂಪಿ ಅವುಗಳಿಗೆ ಚಿಕನ್ ಊಟವನ್ನು ನೀಡುವ ಯೋಜನೆ ಆರಂಭಿಸಿದೆʼ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








