AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಸ್ನೇಹಿತ ದುಬೈ ತಲುಪಿದ, ನಾನು ಮಾತ್ರ ಇನ್ನೂ ಬೆಂಗಳೂರು ಟ್ರಾಫಿಕ್‌ನಲ್ಲಿದ್ದೇನೆ, ಇದು ನಿಜವೇ?

ಬೆಂಗಳೂರಿನ ಟ್ರಾಫಿಕ್​ ನೋಡಿ ನೋಡಿ ಸಾಕಾಗಿದೆ. ಪ್ರತಿದಿನ ಬೆಂಗಳೂರು ಟ್ರಾಫಿಕ್​​​ ಬಗ್ಗೆ ದಿನಕ್ಕೊಂದು ಟ್ರೋಲ್​​​ ಹಾಗೂ ಗೋಳು, ಇದೀಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇಲ್ಲೊಂದು ಪೋಸ್ಟ್​​​ ಭಾರೀ ವೈರಲ್​​ ಆಗಿದೆ. ತನ್ನ ಸ್ನೇಹಿತ ದುಬೈಗೆ ತಲುಪಿದ ನಾವು ಮಾತ್ರ ಈ ಟ್ರಾಫಿಕ್​​ನಲ್ಲಿ ಸಿಲುಕಿಕೊಂಡಿದ್ದೇವೆ ಎಂದು ಪೋಸ್ಟ್​​​ ಒಂದನ್ನು ಹಾಕಲಾಗಿದೆ. ಈ ಪೋಸ್ಟ್​​​ ಸೋಶಿಯಲ್​​ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.

ನನ್ನ ಸ್ನೇಹಿತ ದುಬೈ ತಲುಪಿದ, ನಾನು ಮಾತ್ರ ಇನ್ನೂ ಬೆಂಗಳೂರು ಟ್ರಾಫಿಕ್‌ನಲ್ಲಿದ್ದೇನೆ, ಇದು ನಿಜವೇ?
ವೈರಲ್​​ ಫೊಸ್ಟ್​
ಸಾಯಿನಂದಾ
| Updated By: ಪ್ರೀತಿ ಭಟ್​, ಗುಣವಂತೆ|

Updated on: Jul 19, 2025 | 4:55 PM

Share

ಈ ಬೆಂಗಳೂರಿನ ಟ್ರಾಫಿಕ್​​ನದ್ದು (Bengaluru traffic) ಒಂದಲ್ಲ ಒಂದು ಗೋಳು, ಪ್ರತಿದಿನ ಬೆಂಗಳೂರು ಟ್ರಾಫಿಕ್​​​​ ಟ್ರೋಲ್​​ ಆಗುತ್ತಲೇ ಇರುತ್ತದೆ. ಇದು ಇಲ್ಲಿನ ಜನರ ಪ್ರತಿದಿನದ ಸಮಸ್ಯೆಯಾಗಿದೆ. ಬೆಂಗಳೂರು ಟ್ರಾಫಿಕ್​​ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಿರಂತರ ಚರ್ಚೆ ನಡೆಯುತ್ತಲೇ ಇರುತ್ತದೆ. ಇದೀಗ ಮತ್ತೆ ಬೆಂಗಳೂರು ಟ್ರಾಫಿಕ್​​​​​ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಕಾರಣ ಈ ಪೋಸ್ಟ್​​​ ನೋಡಿ. ಇನ್‌ಸ್ಟಾಗ್ರಾಮ್ ಪೋಸ್ಟ್​​​ವೊಂದು ಭಾರೀ ಸದ್ದು ಮಾಡುತ್ತಿದೆ. ಈ ಪೋಸ್ಟ್​​​ ಭಾರೀ ತಮಾಷೆಯಾಗಿದ್ದರು ಕೂಡ ಇದು ಬೆಂಗಳೂರು ಟ್ರಾಫಿಕ್​​ ಸಮಸ್ಯೆಯನ್ನು ಅನಾವರಣ ಮಾಡುತ್ತಿದೆ. ದುಬೈಗೆ ಹೋಗುವ ತನ್ನ ಸ್ನೇಹಿತನನ್ನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಿಟ್ಟು ಬರುವಾಗ ಟ್ರಾಫಿಕ್ ಸಿಕ್ಕಿದೆ. ಸ್ನೇಹಿತ ದುಬೈ ತಲುಪಿದರೂ ಟ್ರಾಫಿಕ್​​ ಮಾತ್ರ ಕ್ಲಿಯರ್ ಆಗಿಲ್ಲ ಎಂದು ಪೋಸ್ಟ್​​​ನಲ್ಲಿ ಬರೆದುಕೊಳ್ಳಲಾಗಿದೆ.

ಬೆಂಗಳೂರಿನ ನಿವಾಸಿಯೊಬ್ಬರು ಇನ್ಸ್ಟಾ​​ ಖಾತೆಯ ಪೋಸ್ಟ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್​​ ನೋಡಿ ಅನೇಕರು ಇದು ನಿಜವೇ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲಿಂದ ಈ ಪೋಸ್ಟ್​​ ವೈರಲ್​​​​ ಆಗಲು ಶುರುವಾಗಿದೆ. ಅನೇಕರು ಈ ಬಗ್ಗೆ ಕಮೆಂಟ್​​ ಮಾಡಿದ್ದಾರೆ. ಇಲ್ಲೊಬ್ಬ ಬಳಕೆದಾರ ಇದು ಸುಳ್ಳು ನಿಜವಲ್ಲ. ವಿಮಾನ ನಿಲ್ದಾಣಕ್ಕೆ 3 ಗಂಟೆಗಳ ಮೊದಲು ಮನೆಯಿಂದ ಹೊರಡುತ್ತಾರೆ ಮತ್ತು ದುಬೈಗೆ ಹೊರಡಲು ವಿಮಾನವು ಸುಮಾರು 3.5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ, ಒಟ್ಟು 6.5 ಗಂಟೆಗಳು. 6.5 ಗಂಟೆಗಳಲ್ಲಿ ನೀವು ಹೆಬ್ಬಾಳ, ಮಾರತಹಳ್ಳಿ, HSR, ಇ-ಸಿಟಿ, ಸಿಲ್ಕ್ ಬೋರ್ಡ್, CBD ಅನ್ನು ಹಾದು ಹೆಬ್ಬಾಳಕ್ಕೆ ಹಿಂತಿರುಗಬಹುದು ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು, ಸುಮಾರು 45 ನಿಮಿಷಗಳಲ್ಲಿ ಸುಮಾರು 20 ಕಿ.ಮೀ. ಪ್ರಯಾಣಿಸುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಎಂಟು ಆರೋಗ್ಯವಂತ ಶಿಶುಗಳಿಗೆ ಐವಿಎಫ್ ಮೂಲಕ ಜನ್ಮ ನೀಡಿದ ಮಹಿಳೆ

ವೈರಲ್​​ ಪೋಸ್ಟ್​​ ಇಲ್ಲಿದೆ ನೋಡಿ:

ಕೆಲವೊಂದು ಜನ ಈ ಪೋಸ್ಟ್​​​​ಗೆ ಹೆಚ್ಚಿನ ಸಹಮತ ನೀಡಿಲ್ಲ, ಕೆಲವರು ಹೌದು ಎಂದು ಹೇಳಿದ್ದಾರೆ. ಈ ಪೋಸ್ಟ್​​​ನ ವಿರುದ್ಧ ಹೇಳಿಕೆಯನ್ನು ನೀಡಿದ್ದಾರೆ. ಈ ಪೋಸ್ಟ್​​​​ ತುಂಬಾ ಅಪಹಾಸ್ಯಕಾರಿಯಾಗಿದೆ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ ಈ ಪೋಸ್ಟ್ ತಮಾಷೆಯಾಗಿದೆ, ಆದರೆ ದುರದೃಷ್ಟವಶಾತ್ ನಿಜ ಎಂದು ಕರೆದಿದ್ದಾರೆ. ಸಿಲ್ಕ್ ಬೋರ್ಡ್‌ನಿಂದ ಹೆಬ್ಬಾಳಕ್ಕೆ ಮೆಟ್ರೋ ಪ್ರವೇಶದೊಂದಿಗೆ ಡಬಲ್ ಡೆಕ್ಕರ್ ಫ್ಲೈಓವರ್‌ ಅಲ್ಲಿಯೂ ಬರಬಹುದಲ್ಲ ಎಂದು ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಸಾರಥಿ’ ಸಿನಿಮಾ ಬಿಡುಗಡೆ ಸಮಯದಲ್ಲಿ ಪಟ್ಟ ಕಷ್ಟ ನೆನೆದ ನಿರ್ಮಾಪಕ
‘ಸಾರಥಿ’ ಸಿನಿಮಾ ಬಿಡುಗಡೆ ಸಮಯದಲ್ಲಿ ಪಟ್ಟ ಕಷ್ಟ ನೆನೆದ ನಿರ್ಮಾಪಕ
ಸಮೀರ್​ನನ್ನು ಕೇಳಿಕೊಂಡು 4-5 ಪೊಲೀಸರು ಬಂದಿದ್ದರು: ಆಶಾ, ಗೃಹಿಣಿ
ಸಮೀರ್​ನನ್ನು ಕೇಳಿಕೊಂಡು 4-5 ಪೊಲೀಸರು ಬಂದಿದ್ದರು: ಆಶಾ, ಗೃಹಿಣಿ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು
ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು
ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ
ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ