ಎಂಟು ಆರೋಗ್ಯವಂತ ಶಿಶುಗಳಿಗೆ ಐವಿಎಫ್ ಮೂಲಕ ಜನ್ಮ ನೀಡಿದ ಮಹಿಳೆ
ಐವಿಎಫ್ ಮೂಲಕ ಮಕ್ಕಳನ್ನು ಪಡೆಯುವುದು ಫ್ಯಾಷನ್ ಆಗಿದೆ. ಅದೆಷ್ಟೋ ದಂಪತಿಗಳಿಗೆ ಇದು ಹೊಸ ಭರವಸೆಯನ್ನು ಮೂಡಿಸಿದೆ. ಇದೀಗ ಐವಿಎಫ್ ಮೈಟೊಕಾಂಡ್ರಿಯದ ಡಿಎನ್‌ಎಯಲ್ಲಿ ರೂಪಾಂತರಗಳನ್ನು ಹೊಂದಿರುವ ಮಹಿಳೆಗೆ ಸಂತನ ಭಾಗ್ಯವನ್ನು ನೀಡಿದೆ. ಯುಕೆಯ ಮಹಿಳೆ ಈಗ ಎಂಟು ಆರೋಗ್ಯವಂತ ಶಿಶುಗಳಿಗೆ ಐವಿಎಫ್ ಮೂಲಕ ಜನ್ಮ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಐವಿಎಫ್ (IVF) ಮೂಲಕ ಮಕ್ಕಳನ್ನು ಪಡೆಯುವ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಕೆಲವು ದಿನಗಳ ಹಿಂದೆ ಕನ್ನಡದ ಖ್ಯಾತ ನಟಿ ಭಾವನಾ ರಾಮಣ್ಣ (Bhavana Ramanna) ಕೂಡ ಐವಿಎಫ್ ಮೂಲಕ ಮಗು ಪಡೆಯಲು ಮುಂದಾಗಿದ್ದಾರೆ, ಈ ಬಗ್ಗೆ ಅನೇಕ ರೀತಿಯ ಚರ್ಚೆಗಳು ನಡೆಯುತ್ತಿದೆ. ಇದೀಗ ಇಲ್ಲೊಂದು ಅಂತಹದೇ ಘಟನೆಯೊಂದು ನಡೆದಿದೆ. ತಾಯಿ ಆಗುವ ಭ್ಯಾಗ ಇಲ್ಲದವರು ಈ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಐವಿಎಫ್ ತಂತ್ರ ಬಳಸಿಕೊಂಡು ಮಹಿಳೆಯರು ಮಗುವನ್ನು ಪಡೆಯುತ್ತಿದ್ದಾರೆ. ಇದೀಗ ಯುಕೆಯ ಮಹಿಳೆಯೊಬ್ಬರು ಎಂಟು ಆರೋಗ್ಯವಂತ ಶಿಶುಗಳಿಗೆ ಐವಿಎಫ್ ಮೂಲಕ ಜನ್ಮ ನೀಡಿದ್ದಾರೆ. ವೈದ್ಯಕೀಯ ಸಾಧನೆಯಲ್ಲಿ ಇದೊಂದು ಮಹತ್ವ ಸಾಧನೆಯಾಗಿದೆ. ವಿಶ್ವದಲ್ಲೇ ಮೊದಲ ಬಾರಿಗೆ ನಡೆಸಲಾದ ಪ್ರಯೋಗದ ಭಾಗವಾಗಿ ಈ ಕಾರ್ಯ ಯಶಸ್ವಿಯಾಗಿದೆ. ಇದೀಗ ಈ ತಂತ್ರ ಜಗತ್ತಿನಲ್ಲಿ ಅನೇಕರಿಗೆ ಭರವಸೆಯನ್ನು ಮೂಡಿಸಿದೆ.
ಮೈಟೊಕಾಂಡ್ರಿಯದ ಡಿಎನ್‌ಎಯಲ್ಲಿ ರೂಪಾಂತರಗಳನ್ನು ಹೊಂದಿರುವ ಮಹಿಳೆಯರಿಗೆ ಹೊಸ ಭರವಸೆಯನ್ನು ನೀಡುತ್ತದೆ ಎಂದು ವೈದ್ಯ ಲೋಕ ಹೇಳಿದೆ. ಈ ರೂಪಾಂತರಗಳು ಬಂಜೆತನ ಅಥವಾ ಮಕ್ಕಳ ಭಾಗ್ಯ ಇಲ್ಲದ ನಿರಾಸೆ ಹೊಂದಿರುವ ದಂಪತಿಗಳಿಗೆ ಹೊಸ ಭರವಸೆಯಾಗಲಿದೆ. ಪ್ರತಿ 5,000 ಜನನಗಳಲ್ಲಿ ಒಂದು ಮಗು ಮೈಟೊಕಾಂಡ್ರಿಯಲ್ ಕಾಯಿಲೆಗಳಿಂದ ಬಳಲುತ್ತಿದ್ದು, ಇದಕ್ಕೆ ಚಿಕಿತ್ಸೆ ನೀಡಲಾಗುವುದಿಲ್ಲ ಮತ್ತು ದೃಷ್ಟಿಹೀನತೆ, ಮಧುಮೇಹ ಮತ್ತು ಸ್ನಾಯು ಕ್ಷೀಣತೆಯಂತಹ ಲಕ್ಷಣಗಳನ್ನು ಒಳಗೊಂಡಿದೆ. ಅದಕ್ಕೆ ಈ ಪ್ರಯೋಗ ತುಂಬಾ ಉತ್ತಮವಾಗಿರುತ್ತದೆ. ಇತ್ತೀಚೆಗೆ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ವರದಿ ಪ್ರಕಾರ, ಈ ಹೊಸ ಐವಿಎಫ್ ವಿಧಾನವು ಮೈಟೊಕಾಂಡ್ರಿಯಲ್ ಕಾಯಿಲೆನಂತಹ ಪ್ರಸರಣವನ್ನು ತಡೆಗಟ್ಟುವ ಗುರಿಯನ್ನು ಹೊಂದಿದೆ. ಇದರಿಂದ ಮಹಿಳೆಯರು ಯಾವುದೇ ಭಯವಿಲ್ಲದೆ ಮಕ್ಕಳನ್ನು ಪಡೆಯಬಹುದು ಎಂದು ಈ ವರದಿಯಲ್ಲಿ ಹೇಳಿದೆ.
ಇನ್ನು ಯುಕೆ ಮಹಿಳೆ 8 ಶಿಶುಗಳಿಗೆ ಐವಿಎಫ್ ಮೂಲಕ ಜನ್ಮ ನೀಡಿದ್ದು, ಎಂಟು ಶಿಶುಗಳಲ್ಲಿಯೂ ಮೈಟೊಕಾಂಡ್ರಿಯಲ್ ಡಿಎನ್ಎ ಕಾಯಿಲೆಯ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲ. ಒಂದೇ ರೀತಿಯ ಅವಳಿ 8 ಮಕ್ಕಳಿಗೆ ಜನ್ಮ ನೀಡಿದ್ದು, ಇದರಲ್ಲಿ ನಾಲ್ಕು ಹೆಣ್ಣು ಮತ್ತು ನಾಲ್ಕು ಗಂಡು ಮಕ್ಕಳು ಎಂದು ಗುರುತಿಸಲಾಗಿದೆ. ವಿಜ್ಞಾನ ಜರ್ನಲ್ ನೇಚರ್ ಪ್ರಕಾರ, ಮೈಟೊಕಾಂಡ್ರಿಯಲ್ ದಾನದ ಮೂಲಕ ಗರ್ಭಧರಿಸಲಾಗಿದೆ. ದೋಷಯುಕ್ತ ಮೈಟೊಕಾಂಡ್ರಿಯ ಕೋಶಗಳ ಶಕ್ತಿಯನ್ನು ಹೊಂದಿರುವ ಫಲವತ್ತಾದ ಮೊಟ್ಟೆಯ ನ್ಯೂಕ್ಲಿಯಸ್ ಅನ್ನು ಆರೋಗ್ಯಕರ ಮೈಟೊಕಾಂಡ್ರಿಯ ಹೊಂದಿರುವ ದಾನಿ ಮೊಟ್ಟೆಯ ಕೋಶಕ್ಕೆ ವರ್ಗಾಯಿಸುವ ತಂತ್ರ ಇದಾಗಿದೆ.
ಇದನ್ನೂ ಓದಿ: ಶಾಲೆಯಲ್ಲಿ ಅದ್ಭುತವಾಗಿ ಡ್ಯಾನ್ಸ್ ಪರ್ಫಾರ್ಮೆನ್ಸ್ ಮಾಡಿದ ತಂದೆ-ಮಗಳು; ಅದ್ಭುತ ದೃಶ್ಯ ವೈರಲ್
ಮೈಟೊಕಾಂಡ್ರಿಯಲ್ ದಾನದ ನಂತರ ತಾಯಿ ಹೇಳಿರುವ ಪ್ರಕಾರ, ಪೋಷಕರಾಗಿ, ನಾವು ಬಯಸಿದ್ದು ನಮ್ಮ ಮಗುವಿಗೆ ಜೀವನದಲ್ಲಿ ಆರೋಗ್ಯಕರ ಜೀವನಶೈಲಿ ಸಿಗಬೇಕು. ಮೈಟೊಕಾಂಡ್ರಿಯಲ್ ದಾನ IVF ಅದನ್ನು ಸಾಧ್ಯವಾಗಿಸಿತು. ಈ ಚಿಕಿತ್ಸೆಯು ನಮಗೆ ಭರವಸೆ ನೀಡಿದೆ. ಈ ಮೂಲಕ ನನಗ ತಾಯಿ ಆಗುವ ಅವಕಾಶವನ್ನು ವಿಜ್ಞಾನ ನೀಡಿದೆ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








