Video: ಅಬ್ಬಬ್ಬಾ… ಹೂವು ಹಿಡಿದಷ್ಟು ಸಲೀಸಾಗಿ ನಾಗರಹಾವು ಹಿಡಿದ ವ್ಯಕ್ತಿ
ಆಹಾರವನ್ನರಸುತ್ತಾ ಜನವಸತಿ ಪ್ರದೇಶಗಳ ಕಡೆಗೆ ಹಾವುಗಳು ಬರುವಂತಹದ್ದು ಸಾಮಾನ್ಯ. ಹೀಗೆ ಮನೆ ಬಳಿ ಹಾವುಗಳು ಬಂದ್ರೆ ಜನ ಭಯ ಬಿದ್ದು ಓಡಿ ಹೋಗ್ತಾರೆ. ಇಲ್ಲೊಂದು ಕಡೆ ಅದೇ ರೀತಿ ದೈತ್ಯ ನಾಗರ ಹಾವು ಬಂದಿದ್ದು, ಮನೆಯ ಹೆಂಚಿನ ಮೇಲೆ ಕುಳಿತಿದ್ದ 5 ಅಡಿ ಉದ್ದದ ಈ ಹಾವನ್ನು ಉರಗ ರಕ್ಷಕರೊಬ್ಬರು ರಕ್ಷಣೆ ಮಾಡಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.

ಹಾವುಗಳೆಂದರೆ (Snakes) ಬಹುತೇಕ ಎಲ್ಲರಿಗೂ ಸಿಕ್ಕಾಪಟ್ಟೆ ಭಯ. ಇವುಗಳು ವಿಷಕಾರಿ ಜೀವಿಗಳಾಗಿರುವುದರಿಂದ ಅವುಗಳು ಕಚ್ಚಿದರೆ ಪ್ರಾಣಕ್ಕೆ ಅಪಾಯ ಖಂಡಿತ ಎಂದು ಹೆಚ್ಚಿನವರು ಹಾವನ್ನು ದೂರದಿಂದ ಕಂಡರೂ ಓಡಿ ಹೋಗ್ತಾರೆ. ಹೀಗೆ ಹಾವನ್ನು ಕಂಡ್ರೆ ಭಯ ಪಡುವವರು ಒಂದು ಕಡೆಯಾದ್ರೆ, ಯಾವುದೇ ಭಯವಿಲ್ಲದೆ ನಿರ್ಭೀತಿಯಿಂದ ದೈತ್ಯ ವಿಷಕಾರಿ ಹಾವುಗಳನ್ನು ಸಹ ಬರಿ ಗೈಲಿ ಹಿಡಿಯುವವರಿದ್ದಾರೆ. ಅದೇ ರೀತಿ ಇಲ್ಲೊಬ್ರು ವ್ಯಕ್ತಿ ಮನೆಯ ಹೆಂಚಿನ ಮೇಲೆ ಹೆಡೆ ಎತ್ತಿ ಕುಳಿತಿದ್ದ 5 ಅಡಿ ಉದ್ದದ ನಾಗರಹಾವನ್ನು ಸಲೀಸಾಗಿ ಹಿಡಿದು ರಕ್ಷಣೆ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಈ ವ್ಯಕ್ತಿಯ ಧೈರ್ಯಯವನ್ನು ಕಂಡು ನೋಡುಗರು ಬೆರಗಾಗಿದ್ದಾರೆ.
ಸಲೀಸಾಗಿ ನಾಗರಹಾವು ಹಿಡಿದ ಧೀರ:
ಹಾವುಗಳನ್ನು ಕಂಡರೆ ಭಯ ಬಿದ್ದು ಓಡಿ ಹೋಗುವವರೇ ಹೆಚ್ಚು. ಆದರೆ ಈ ವ್ಯಕ್ತಿ ಹೂವು ಹಿಡಿದಂತೆ ಸಲೀಸಾಗಿ ನಾಗರಹಾವನ್ನು ಹಿಡಿದಿದ್ದಾರೆ. ಮನೆಯೊಂದರ ಹೆಂಚಿನ ಮೇಲೆ ಹೆಡೆ ಎತ್ತಿ ಕುಳಿತಿದ್ದಂತಹ 5 ಅಡಿ ಉದ್ದದ ಈ ನಾಗರಹಾವನ್ನು ಹಿಡಿದು ರಕ್ಷಣೆ ಮಾಡಿದ್ದಾರೆ.
ಪರ್ತಕರ್ತ ಆಂಟೋನಿ (Antony journalist) ಎಂಬವರು ಈ ಕುರಿತ ವಿಡಿಯೋವನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಚಿಕ್ಕಬೂದಿಹಾಳದಲ್ಲಿ ಮನೆಯ ಮೇಲೆ ಕುಳಿತಿದ್ದಂತಹ ನಾಗರಹಾವನ್ನು ಸುರಕ್ಷಿತವಾಗಿ ಹಿಡಿಯಲಾಗಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮನೆಯೊಂದರ ಹೆಂಚಿನ ಮೇಲೆ 5 ಅಡಿ ಉದ್ದದ ನಾಗರ ಹಾವೊಂದು ಕುಳಿತಿರುವಂತಹ ದೃಶ್ಯವನ್ನು ಕಾಣಬಹುದು. ನಂತರ ಉರಗ ರಕ್ಷಕರೊಬ್ಬರು ಹೆಂಚಿನ ಮೇಲೆ ಹತ್ತಿ ಜೋಪಾನವಾಗಿ ಆ ಹಾವನ್ನು ಹಿಡಿದು ರಕ್ಷಣೆ ಮಾಡಿದ್ದಾರೆ. ಆದರೆ ಅನೇಕರು ಈ ಹೀಗೆ ಅವೈಜ್ಞಾನಿಕ ರೀತಿಯಲ್ಲಿ ಹಾವನ್ನು ಹಿಡಿದು ಅದಕ್ಕೆ ನೋವು ಕೊಟ್ಟದ್ದು ತಪ್ಪು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗಲ್ಲಿ ಕ್ರಿಕೆಟ್‌ನಲ್ಲಿ ವಿಕೆಟ್ ಕೀಪರ್ ಆಗಿ ಮಿಂಚಿದ ಶ್ವಾನ; ವೈರಲ್ ಆಯ್ತು ವಿಡಿಯೋ
ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 6 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಹೀಗೆ ಹಾವು ಹಿಡಿಯುವುದು ಅಪಾಯಕಾರಿ, ದಯವಿಟ್ಟು ಇಂತಹ ಸಾಹಸಕ್ಕೆ ಕೈ ಹಾಕಬೇಡಿʼ ಎಂದು ಸಲಹೆ ನೀಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಯಾವುದೇ ರೀತಿಯ ಸುರಕ್ಷತೆ ಇಲ್ಲದೆ ಅವೈಜ್ಞಾನಿಕ ರೀತಿಯಲ್ಲಿ ಹಾವನ್ನು ಹಿಡಿಯುವುದು ಸರಿಯಲ್ಲʼ ಎಂಬ ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಹಾವು ಹಿಡಿದ ರೀತಿ ಸರಿ ಇಲ್ಲ. ಅಷ್ಟು ನೋವು ಕೊಟ್ಟು ಹಾವನ್ನು ರಕ್ಷಣೆ ಮಾಡೋ ಬದಲು, ಅದು ತನ್ನ ಪಾಡಿಗೆ ಅಲ್ಲಿಂದ ಹೋಗುವವರೆಗೆ ಸುಮ್ಮನಿರಬೇಕಿತ್ತುʼ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:56 am, Fri, 18 July 25








