ಎಚ್‌ಎಸ್‌ಆರ್ ಲೇಔಟ್ನಲ್ಲಿ ಬದುಕುವುದೇ ಕಷ್ಟ, ಇಲ್ಲಿ ದುಬಾರಿ ಬಾಡಿಗೆ, ಕಸ, ಕಳಪೆ ನಾಗರಿಕ ಪ್ರಜ್ಞೆ
ಬೆಂಗಳೂರಿನ ಸ್ಥಿತಿ ತುಂಬಾ ಕೆಟ್ಟಾಗಿದೆ ಎಂಬುದರ ಬಗ್ಗೆ ಆಗ್ಗಾಗೆ ವೈರಲ್ ಆಗುತ್ತಿರುವ ಪೋಸ್ಟ್ಗಳನ್ನು ನೋಡತ್ತಲೇ ಇರುತ್ತೇವೆ. ಇದೀಗ ಅಂತಹದ್ದೇ ಮತ್ತೊಂದು ಪೋಸ್ಟ್ ವೈರಲ್ ಆಗಿದೆ. ಬೆಂಗಳೂರಿನಲ್ಲಿ ದಿನನಿತ್ಯದ ಜೀವನ ತುಂಬಾ ಕಷ್ಟವಾಗಿದೆ, ಇಲ್ಲಿನ ಜೀವನಶೈಲಿ ಸರಿ ಇಲ್ಲ. ಅದರಲ್ಲೂ ಈ ದುಬಾರಿ ಸ್ಥಳಗಳಲ್ಲಿ ಜೀವನ ನಡೆಸಲು ಕೂಡ ಸಾಧ್ಯವಿಲ್ಲದ ಸ್ಥಿತಿ ಇದೆ ಎಂದು ವ್ಯಕ್ತಿಯೊಬ್ಬರು ರೆಡ್ಡಿಟ್‌ನಲ್ಲಿ ತಮ್ಮ ಕಷ್ಟವನ್ನು ಹಂಚಿಕೊಂಡಿದ್ದಾರೆ.

ಬೆಂಗಳೂರು (Bengaluru) ಎಷ್ಟು ಕೆಟ್ಟು ಹೋಗಿದೆ, ಇಲ್ಲಿ ಜೀವನ ನಡೆಸುವುದೇ ದೊಡ್ಡ ತಲೆನೋವು, ಅದರೂ ಇಲ್ಲಿ ಬದುಕುವುದು ಅನಿವಾರ್ಯ. ಬೆಂಗಳೂರಿನಲ್ಲಿ ಎಲ್ಲ ಇದೆ ಆದರೆ ಜೀವನ ನಡೆಸುವುದು ತುಂಬಾ ಕಷ್ಟ. ಹೀಗೆ ಪ್ರತಿದಿನ ಒಂದಲ್ಲ ಒಂದು ವಿಚಾರವಾಗಿ ಬೆಂಗಳೂರನ್ನು ಸಾಮಾಜಿಕ ಜಾಲತಾಣದಲ್ಲಿ ದೂರತ್ತಲೇ ಇರುತ್ತಾರೆ. ಇದೀಗ ಮತ್ತೆ ಬೆಂಗಳೂರಿನ ವ್ಯವಸ್ಥೆ ಹಾಗೂ ಜೀವನಶೈಲಿಯ ಬಗ್ಗೆ ವ್ಯಕ್ತಿಯೊಬ್ಬರು ದೂರಿದ್ದಾರೆ. ಈ ಕುರಿತ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬೆಂಗಳೂರಿನ ನಿವಾಸಿಯೊಬ್ಬರು ರೆಡ್ಡಿಟ್‌ನಲ್ಲಿ ತಮ್ಮ ಜೀವನಶೈಲಿಯ ಬಗ್ಗೆ ಹಂಚಿಕೊಂಡಿದ್ದಾರೆ. ಎಚ್‌ಎಸ್‌ಆರ್ ಲೇಔಟ್ (HSR Layout) ಜೀವನ ನಡೆಸುವುದೇ ತುಂಬ ಕಷ್ಟ ಎಂದು ಹೇಳಿದ್ದಾರೆ. ಇದೀಗ ಈ ಪೋಸ್ಟ್ ಹೊಸ ಚರ್ಚೆಯನ್ನು ಸೃಷ್ಟಿ ಮಾಡಿದೆ. ಹೆಚ್ಚುತ್ತಿರುವ ಜೀವನ ವೆಚ್ಚಗಳು, ನಿರ್ಮಾಣ ಅವ್ಯವಸ್ಥೆ ಮತ್ತು ನಾಗರಿಕ ಜವಾಬ್ದಾರಿಯ ಕೊರತೆ ಈ ಎಲ್ಲದರಿಂದ ಇಲ್ಲಿನ ಜೀವನ ಸಾಕಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನ ಜೀವನ ನನಗೆ ಬೇಸತ್ತು ಹೋಗಿದೆ. ಇಲ್ಲಿ ಬದುಕುವುದೇ ಹೆಚ್ಚಾಗಿ ಬೇಸರ ತರಿಸುತ್ತದೆ ಎಂದು ಶೀರ್ಷಿಕೆ ನೀಡಿದ್ದಾರೆ. ಈ ಪೋಸ್ಟ್ನ್ನು @No_Library_9486 ಎಂಬ ರೆಡ್ಡಿಟ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ನೆರೆಹೊರೆಯ ಹದಗೆಡುತ್ತಿರುವ ಜೀವನಶೈಲಿಯನ್ನು ನೋಡಿದಾಗ, ಇಲ್ಲಿನ ಜೀವನವೇ ಸಾಕು ಎಂದು ಆಗುತ್ತದೆ. ನಾನು ಎಚ್‌ಎಸ್‌ಆರ್‌ನಲ್ಲಿ ವಾಸಿಸುತ್ತಿದ್ದೇನೆ, ಅದು ತುಂಬಾ ದುಬಾರಿ ಏರಿಯಾ, ಅದರ ಜೊತೆಗೆ, ಇಲ್ಲಿ ನಿರಂತರವಾಗಿ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ. ಇಲ್ಲಿ ಅನೇಕ ಕೊಳೆಗೇರಿಗಳು, ನಿರಂತರವಾಗಿ ಕಸ ಸುಡುವುದು ನಡೆಯುತ್ತಲೇ ಇರುತ್ತದೆ. ಇಡೀ ಪ್ರದೇಶವು ಅನೈರ್ಮಲ್ಯದಿಂದ ಕೂಡಿದೆ ಎಂದು ಹೇಳಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
I am fed up with Bangalore. Living mostly sucks. byu/No_Library_9486 inbangalore
ಇದನ್ನೂ ಓದಿ
ನಾಗರಿಕ ಸಮಸ್ಯೆಗಳು, ನಿರಾಸಕ್ತಿ ಜೀವನದ ಬಗ್ಗೆ ಅವರು ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ. ರಸ್ತೆ, ನೈರ್ಮಲ್ಯ ಮತ್ತು ಮುಖ್ಯವಾಗಿ ಮೂಲಭೂತ ನಾಗರಿಕ ಪ್ರಜ್ಞೆಯ ಬಗ್ಗೆ ಇಲ್ಲಿನ ಜನರಿಗೆ ನಿರ್ಲಕ್ಷ್ಯವಿದೆ. ಇಲ್ಲಿನ ಹತ್ತಿರದ ಕಟ್ಟಡಗಳ ಜನರು, ವಿದ್ಯಾವಂತರು ಎಂದು ಹೇಳಿಕೊಳ್ಳುವ ಜನರು ತಮ್ಮ ಮನೆಯ ಕಿಟಕಿಗಳ ಮೂಲಕ ಬೀದಿಗಳಿಗೆ ಕಸವನ್ನು ಎಸೆಯುತ್ತಾರೆ. ಇಲ್ಲಿ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ. ಇಲ್ಲಿ ಯಾವುದೇ ನಿಯಮಗಳು ಮತ್ತು ಶುಚಿತ್ವವನ್ನು ಕಾಪಾಡಿಕೊಂಡಿಲ್ಲ. ನಾನು ನಿರಂತರವಾಗಿ ಹೊಗೆ, ಹಾನಿಕಾರಕ ಗಾಳಿ, ಧೂಳುಗಳನ್ನು ಉಸಿರಾಡುತ್ತಿದ್ದೇನೆ ಎಂದು ಅನಿಸುತ್ತಿದೆ. ಕಟ್ಟಡ ನಿರ್ಮಾಣ ಶಬ್ದದ ಬಗ್ಗೆ ಹೇಳುವುದೇ ಬೇಡ. ಈ ಬಗ್ಗೆ ಏನು ಮಾಡಬೇಕೆಂದು ನನಗೆ ತಿಳಿಯುತ್ತಿಲ್ಲ. ಯಾರಿಗೂ ಹೇಳುವುದು ಈ ಕಷ್ಟವನ್ನು ಎಂದು ದುಃಖ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಹಲೋ ನಿಮ್ಮ ಸಮವಸ್ತ್ರ ಎಲ್ಲಿದೆ? ತರಗತಿಯೊಳಗೆ ಬಂದು ಬಾಲಕನ ಪಕ್ಕದಲ್ಲಿ ಕೂತ ಶ್ವಾನ, ಕ್ಯೂಟ್ ವಿಡಿಯೋ ಇಲ್ಲಿದೆ ನೋಡಿ
ನಾವು ಬದುಕುವ ರೀತಿ ನೋಡಿ ನನಗೆ ಬೇಸರವಾಗುತ್ತದೆ. ಯೋಗ್ಯವಾದ ತೆರಿಗೆ ಮತ್ತು ಮನೆ ಬಾಡಿಗೆಯನ್ನು ಪಾವತಿಸಿದ ನಂತರವೂ ಮೂಲಭೂತ ಸೌಕರ್ಯಗಳು ಸಿಗುತ್ತಿಲ್ಲ. ಈ ವಿಚಾರದಲ್ಲಿ ತುಂಬಾ ನೋವಿದೆ ಎಂದು ಈ ಪೋಸ್ಟ್ನಲ್ಲಿ ಹೇಳಿದ್ದಾರೆ. ಇನ್ನು ಈ ಪೋಸ್ಟ್ಗೆ ಅನೇಕರು ಕಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರ ʼದುಬಾರಿ ಸ್ಥಳದಲ್ಲಿ ಬದುಕಬಾರದು ಎನ್ನುವುದು ಇದಕ್ಕೆ, ನಾನು ಇಂತಹ ದುಬಾರಿ ಸ್ಥಳಗಳಲ್ಲಿ ಬದುಕುವುದಿಲ್ಲʼ ಎಂದು ಹೇಳಿದ್ದಾರೆ.ʼ ನನ್ನದು 1 BHK ಗೆ ₹ 7 ಸಾವಿರ ಬಾಡಿಗೆ, ಶಾಂತಿಯುತ ಪರಿಸರ ಮತ್ತು ಪ್ರತಿದಿನ ಸುಂದರವಾದ ಸೂರ್ಯೋದಯ ಇಲ್ಲಿದೆʼ ಎಂದು ಮತ್ತೊಬ್ಬ ಬಳಕೆದಾರ ಕಮೆಂಟ್ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ