AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಇನ್ನೊಬ್ಬನ ಜತೆಗೆ ಓಡಿ ಹೋದ ಪತ್ನಿ, ವಿಚ್ಛೇದನ ನೀಡಿ ಹಾಲಿನಲ್ಲಿ ಸ್ನಾನ ಮಾಡಿದ ಪತಿ

ಗಂಡ-ಹೆಂಡತಿ ನಡುವೆ ಒಂದು ಒಳ್ಳೆಯ ಅನ್ಯೋನ್ಯತೆ, ಪ್ರೀತಿ ವಿಶ್ವಾಸ ಎಂಬುದು ಹಿಂದಿನ ಕಾಲಕ್ಕೆ ಸರಿ. ಈಗಿನ ಕಾಲದಲ್ಲಿ ಚಿಕ್ಕ ಚಿಕ್ಕ ವಿಷಯಕ್ಕೂ ಜಗಳ ಕೋಪ, ಕೊನೆಗೆ ವಿಚ್ಛೇದನ ಅಥವಾ ಸಾವಿನಲ್ಲಿ ಸಂಬಂಧ ಅಂತ್ಯ. ಇನ್ನು ಕೆಲವರು ಮದುವೆಯಾಗಿ ಅಥವಾ ಮದುವೆಯಾಗಿ ಮಕ್ಕಳಾಗಿ ಇನ್ನೊಬ್ಬನ ಜತೆಗೆ ಓಡಿಹೋಗುತ್ತಾರೆ. ಇದೊಂದು ಈಗ ಫ್ಯಾಷನ್​​ ಆಗಿದೆ. ಇದೀಗ ಇಲ್ಲೊಂದು ಘಟನೆಯೊಂದು ನಡೆದಿದೆ. ತನ್ನ ಪತ್ನಿ ಇನ್ನೊಬ್ಬನ ಜತೆಗೆ ಓಡಿ ಹೋದದ್ದಕ್ಕೆ ಪತಿಯೂ ಆಕೆಗೆ ವಿಚ್ಛೇದನ ನೀಡಿ ಹಾಲಿನಲ್ಲಿ ಸಾನ್ನ ಮಾಡಿದ್ದಾನೆ.

Video: ಇನ್ನೊಬ್ಬನ ಜತೆಗೆ ಓಡಿ ಹೋದ ಪತ್ನಿ, ವಿಚ್ಛೇದನ ನೀಡಿ ಹಾಲಿನಲ್ಲಿ ಸ್ನಾನ ಮಾಡಿದ ಪತಿ
ವೈರಲ್ ವಿಡಿಯೋ Image Credit source: Instagram
ಸಾಯಿನಂದಾ
|

Updated on: Jul 13, 2025 | 6:20 PM

Share

ಅಸ್ಸಾಂ, ಜುಲೈ 13: ಇತ್ತೀಚಿಗಿನ ದಿನಗಳಲ್ಲಿ ವಿಚ್ಛೇದನದ (Divorce) ಪ್ರಕರಣಗಳು ಹೆಚ್ಚಾಗಿದೆ. ಚಿಕ್ಕ ಚಿಕ್ಕ​​ ಕಾರಣಗಳಿಂದಲ್ಲೂ ದಂಪತಿಗಳು ದೂರುವಾಗುತ್ತಿದ್ದಾರೆ. ಇನ್ನು ಕೆಲವು ದಂಪತಿಗಳದ್ದು ವಿಚಿತ್ರ ಕಥೆ. ಹೌದು,  ಮದುವೆಯಾಗಿ ಎರಡು ಮಕ್ಕಳಿದ್ದರೂ ಇನ್ನೊಬ್ಬರ ಜತೆಗೆ ಓಡಿಹೋಗುವುದು. ಇಂತಹ ಘಟನೆಗಳು ಸಮಾಜದಲ್ಲಿ ಹೆಚ್ಚಾಗುತ್ತಿದೆ. ಇದೀಗ ಇಂತಹದೇ ಒಂದು ಘಟನೆ ಅಸ್ಸಾಂನಲ್ಲಿ ನಡೆದಿದೆ. ಹೆಂಡತಿ ಬೇರೊಬ್ಬನ ಜತೆಗೆ ಓಡಿ ಹೋದಳು ಎಂದು ವಿಚ್ಛೇದನ ನೀಡಿ ಹಾಲಿನಲ್ಲಿ ಸ್ನಾನ ಮಾಡಿದ್ದಾನೆ. ಅಸ್ಸಾಂ (Assam )ನಿವಾಸಿ ಮಾಣಿಕ್ ಅಲಿಗೆ ಇದು ಸಂಭ್ರಮಿಸಲು ಯೋಗ್ಯವಾದ ದಿನ ಎಂದು ಹೇಳಿಕೊಂಡಿದ್ದಾನೆ.  ತನ್ನ ಜೀವನದ ಸ್ವಾತಂತ್ರ್ಯ ಪಡೆದುಕೊಂಡ ಕ್ಷಣ. ಇದು ನಮ್ಮ ಆಚರಣೆ ಅಲ್ಲದಿದ್ದರು. ನನಗೆ ತುಂಬಾ ಸಂತೋಷವಾಗಿದೆ. ಆ ಕಾರಣಕ್ಕೆ ನಾನು ಹೀಗೆ ಮಾಡಿದ್ದಾನೆ ಎಂದು ಹೇಳಿಕೊಂಡಿದ್ದಾನೆ.

ಅಸ್ಸಾಂನ ನಲ್ಬಾರಿ ಜಿಲ್ಲೆಯ ನಿವಾಸಿ ಮಾಣಿಕ್ ಅಲಿ, ತನ್ನ ಹೆಂಡತಿಯಿಂದ ಕಾನೂನುಬದ್ಧವಾಗಿ ಬೇರ್ಪಟ್ಟ ನಂತರ ಹಾಲಿನ ಸ್ನಾನ ಮಾಡಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ. ವೈರಲ್ ಆಗಿರುವ ವೀಡಿಯೊದಲ್ಲಿ ಮನೆಯ ಹೊರಗೆ ಹಾಲು ತುಂಬಿದ ನಾಲ್ಕು  ಪ್ಲಾಸ್ಟಿಕ್​​ ಬಕೆಟ್​​ಗಳನ್ನು ಕಾಣಬಹುದು. ಸಂತೋಷದಿಂದ ಮಡದಿಯಿಂದ ಮುಕ್ತಿ ಸಿಕ್ಕಿದೆ ಎಂದು ಒಂದರಂತೆ ಒಂದು ಬಕೆಟ್‌ನಲ್ಲಿದ್ದ ಹಾಲನ್ನು ತಲೆಯ ಮೇಲೆ ಸುರಿದುಕೊಳ್ಳುತ್ತಾನೆ. ಈ ವಿಡಿಯೋ ಇದೀಗ ಎಲ್ಲಾ ಕಡೆ ಭಾರೀ ವೈರಲ್​​ ಆಗಿದೆ. ನಾನು ಇಂದಿನಿಂದ ಮುಕ್ತನಾಗಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಇನ್ನು ಈ ವಿಡಿಯೋ ನೋಡಿ ಅನೇಕರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ
Image
ಕುಮಟಾ ಬಳಿಯ ಗುಹೆಯಲ್ಲಿ ಇಬ್ಬರು ಮಕ್ಕಳ ಜೊತೆ ರಷ್ಯಾದ ಮಹಿಳೆಯ ನಿಗೂಢ ವಾಸ
Image
ಕನ್ನಡ "ಬಡ ಆರ್ಥಿಕತೆಯ" ಭಾಷೆ, ನಾನು ಇಂಗ್ಲಿಷ್ ಮಾತನಾಡುತ್ತೇನೆ
Image
ಮಳೆ ನೀರಲ್ಲಿ ಐಫೋನ್‌ ಕಳೆದು ಹೋಯ್ತು ಎಂದು ಬಿಕ್ಕಿ ಬಿಕ್ಕಿ ಅತ್ತ ಯುವಕ
Image
ಹೊಸ ಆಸನ ವ್ಯವಸ್ಥೆಯನ್ನು ಅಳವಡಿಸಿಕೊಂಡ ಕೇರಳದ ಶಾಲೆಗಳು

ಇದನ್ನೂ ಓದಿ: ಆರೋಗ್ಯ ಸಮಸ್ಯೆ ಅಂದ್ರು ವಿಚಿತ್ರ ಬೇಡಿಕೆ ಇಡ್ತಾರೆ ಬಾಸ್, ಕಹಿ ಅನುಭವ ಹಂಚಿಕೊಂಡ ಉದ್ಯೋಗಿ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ನನ್ನ ಹೆಂಡತಿ ಆಕೆಯ ಲವರ್​​ ಜತೆಗೆ ಓಡಿ ಹೋಗುತ್ತಿದ್ದಾಳೆ. ಅದರೂ ನಾನು ಕುಟುಂಬದ ಶಾಂತಿಗಾಗಿ ನಾನು ಮೌನವಾಗಿದ್ದೆ ಎಂದು ಈ ವಿಡಿಯೋದಲ್ಲಿ ಮಾಣಿಕ್ ಅಲಿ ಹೇಳಿಕೊಂಡಿದ್ದಾನೆ. ಇನ್ನು ಸ್ಥಳೀಯರು ಹೇಳಿರುವ ಪ್ರಕಾರ ಈ ಇಬ್ಬರು ದಂಪತಿಗಳು ವಿಚ್ಛೇದನ ಪಡೆಯುವ ಮೊದಲು ಆತನ ಪತ್ನಿ ಎರಡು ಬಾರಿ ಆಕೆಯ ಪ್ರೇಮಿಯ ಜತೆಗೆ ಓಡಿ ಹೋಗಿದ್ದಾಳೆ ಎಂದು ಹೇಳಿದ್ದಾರೆ. ಇನ್ನು ವಿಚ್ಛೇದನಕ್ಕಾಗಿ ಕಾಯುತ್ತಿದ್ದ ಮಾಣಿಕ್ ಅಲಿ, ಇಂದು ನನಗೆ ಆಕೆಯಿಂದ ಮುಕ್ತಿ ಸಿಕ್ಕಿದೆ ಎಂದು ನನ್ನ ವಕೀಲರು ಹೇಳಿದ್ದಾರೆ. ಹಾಗಾಗಿ, ಇಂದು ನಾನು ನನ್ನ ಸ್ವಾತಂತ್ರ್ಯವನ್ನು ಆಚರಿಸಲು ಹಾಲಿನಲ್ಲಿ ಸ್ನಾನ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾನೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ