Video: ಜ್ಯೂಸ್‌ಗೆ ಮೂತ್ರ ಮಿಕ್ಸ್ ಮಾಡಿ ಮಾರಾಟ; ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಅಂಗಡಿಯಾತ
ಕನ್ವರ್ ಯಾತ್ರೆಯು ಹಿಂದೂಗಳ ವಾರ್ಷಿಕ ಧಾರ್ಮಿಕ ಕಾರ್ಯಕ್ರಮವಾಗಿದ್ದು, ಲಕ್ಷಾತಂರ ಭಕ್ತರು ಈ ಯಾತ್ರೆಯಲ್ಲಿ ಭಾಗವಹಿಸುತ್ತಾರೆ. ಈ ಯಾತ್ರೆ ಸಾಗುವ ಮಾರ್ಗದಲ್ಲಿ ಸಾಕಷ್ಟು ಅಂಗಡಿ ಮುಂಗಟ್ಟುಗಳಿದ್ದು, ಅದರೊಲೊಂದು ಜ್ಯೂಸ್ ಅಂಗಡಿಯ ಮಾಲೀಕ ಇದೀಗ ಜ್ಯೂಸ್‌ಗೆ ಮೂತ್ರ ಬೆರೆಸಿ ಮಾರಾಟ ಮಾಡಿ ಸಿಕ್ಕಿ ಬಿದ್ದಿದ್ದಾನೆ. ಆರೋಪಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.

ಗ್ರಾಹಕರಿಗೆ ನೀಡುವ ಆಹಾರದ ವಿಷಯದಲ್ಲಿ ಹೋಟೆಲ್‌ಗಳು ಮತ್ತು ಅಂಗಡಿಗಳು ತುಸು ಹೆಚ್ಚೇ ನೈರ್ಮಲ್ಯ ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಆದರೆ ಕೆಲವರು ಇದರ ಬಗ್ಗೆ ಗಮನ ಹರಿಸುವುದೇ ಇಲ್ಲ. ಇಷ್ಟು ಮಾತ್ರವಲ್ಲದೆ ಜ್ಯೂಸ್‌ಗೆ ಮೂತ್ರ ಮಿಕ್ಸ್ ಮಾಡಿ, ಆಹಾರಕ್ಕೆ ಉಗುಳು ಮಿಶ್ರಣ ಮಾಡಿ ಗ್ರಾಹಕರಿಗೆ ಕೊಟ್ಟಂತಹತ ಅದೆಷ್ಟೋ ಪ್ರಕರಣಗಳು ನಡೆದಿವೆ. ಇದೀಗ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲೂ (Ghaziabad) ಸಹ ಇಂತಹದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಕನ್ವರ್ ಯಾತ್ರೆಗೆ ಹೋಗುವ ದಾರಿ ಮಧ್ಯದಲ್ಲಿ ಜ್ಯೂಸ್ ಅಂಗಡಿ ಮಾಲೀಕನೊಬ್ಬ ಮೂತ್ರ ಬೆರೆಸಿದ (vendor caught selling urine mixed juice) ಜ್ಯೂಸನ್ನು ಗ್ರಾಹಕರಿಗೆ ಮಾರಾಟ ಮಾಡಿ ಸಿಕ್ಕಿ ಬಿದ್ದಿದ್ದಾನೆ. ಸದ್ಯ ಆತನನ್ನು ಪೊಲೀಸರು ಬಂಧಿಸಿದ್ದು, ಈ ಕುರಿತ ಸುದ್ದಿಯೊಂದು ಇದೀಗ ವೈರಲ್ ಆಗುತ್ತಿದೆ.
ಜ್ಯೂಸ್‌ಗೆ ಮೂತ್ರ ಬೆರೆಸಿ ಮಾರಾಟ ಮಾಡಿದ ಅಂಗಡಿ ಮಾಲೀಕ:
ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಈ ಘಟನೆ ನಡೆದಿದ್ದು, ಅಮೀರ್ ಖಾನ್ ಎಂದು ಗುರುತಿಸಲಾದ ವ್ಯಕ್ತಿಯೊಬ್ಬ ಮೂತ್ರ ಬೆರೆಸಿದ ಜ್ಯೂಸ್ ಮಾರಾಟ ಮಾಡಿ ಸಿಕ್ಕಿಬಿದ್ದಿದ್ದಾನೆ. ಹೌದು ಕನ್ವರ್ ಯಾತ್ರೆಗೆ ಹೋಗುವ ಮಾರ್ಗ ಮಧ್ಯದಲ್ಲಿ ಈತ ಜ್ಯೂಸ್ ಅಂಗಡಿ ಇದ್ದು, ಇಲ್ಲಿ ಈತ ಮೂತ್ರ ಬೆರೆಸಿದ ಜ್ಯೂಸನ್ನು ಮಾರಾಟ ಮಾಡುತ್ತಿದ್ದನು. ಈ ವೇಳೆ ರೆಡ್ ಹ್ಯಾಂಡ್ ಈತ ಸಿಕ್ಕಿ ಬಿದ್ದಿದ್ದು, ಸದ್ಯ ಆರೋಪಿಯನ್ನು ಬಂಧಿಸಿ, ಆತನ ಅಂಗಡಿಯಲ್ಲಿದ್ದ 1 ಲೀ ಮೂತ್ರವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕುರಿತ ವಿಡಿಯೋವನ್ನು Megh Updates ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾಗಿದ್ದು, “ಕನ್ವರ್ ಯಾತ್ರಾ ಮಾರ್ಗದಲ್ಲಿ ಮೂತ್ರ ಮಿಶ್ರಿತ ಜ್ಯೂಸ್ ಮಾರಾಟ ಮಾಡುತ್ತಿದ್ದ ಮುಸ್ಲಿಂ ಜ್ಯೂಸ್ ಮಾರಾಟಗಾರ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
🚨 SHOCKING & SHAMEFUL
Ghaziabad: Muslim juice vendor Aamir Khan caught selling urine-mixed juice on the Kanwar Yatra route 🤬
— 1 litre of urine SEIZED. Accused has been ARRESTED. pic.twitter.com/VFhX8OdiCB
— Megh Updates 🚨™ (@MeghUpdates) July 13, 2025
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಜ್ಯೂಸ್ ಅಂಗಡಿಯ ಬಳಿ ನಿಂತು ಗ್ರಾಹಕರು ಗಲಾಟೆ ಮಾಡುತ್ತಾ ಮೂತ್ರ ಬೆರೆಸಿದ ಜ್ಯೂಸ್ ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕನ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಇನ್ನೊಬ್ಬನ ಜತೆಗೆ ಓಡಿ ಹೋದ ಪತ್ನಿ, ವಿಚ್ಛೇದನ ನೀಡಿ ಹಾಲಿನಲ್ಲಿ ಸ್ನಾನ ಮಾಡಿದ ಪತಿ
ಜುಲೈ 13 ರಂದು ಶೇರ್ ಮಾಡಲಾದ ಈ ವಿಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇಂತಹ ತಪ್ಪುಗಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯಲೇಬೇಕುʼ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಿಜಕ್ಕೂ ಇದು ಘೋರ ಅಪರಾಧ, ಆತನಿಗೆ ಕಠಿಣ ಶಿಕ್ಷೆ ಆಗ್ಲೇಬೇಕುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದು ತುಂಬಾ ಗಂಭೀರ ಮತ್ತು ಆತಂಕಕಾರಿ ವಿಷಯʼ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








