AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಆರೋಗ್ಯ ಸಮಸ್ಯೆ ಅಂದ್ರು ವಿಚಿತ್ರ ಬೇಡಿಕೆ ಇಡ್ತಾರೆ ಬಾಸ್, ಕಹಿ ಅನುಭವ ಹಂಚಿಕೊಂಡ ಉದ್ಯೋಗಿ

ಅಯ್ಯೋ ಏನ್ ಕೇಳ್ತಿರಾ, ಹುಷಾರಿಲ್ಲ ಅಂದ್ರು ನಮ್ಮ ಬಾಸ್ ರಜೆ ಕೊಡೋಕೆ ಹಿಂದೆ ಮುಂದೆ ನೋಡ್ತಾರೆ, ಉದ್ಯೋಗಿಗಳು ಈ ರೀತಿ ಹೇಳೋದನ್ನು ನೀವು ನೋಡಿರಬಹುದು. ಆದರೆ ಇದೀಗ ಉದ್ಯೋಗಿಯೂ ಸಿಕ್ ಲೀವ್ ಹಾಕಿದ್ರು ಬಾಸ್ ವಿಶೇಷ ಬೇಡಿಕೆಯಿಟ್ಟಿದ್ದಾರೆ. ಹೌದು ಆರೋಗ್ಯ ಸಮಸ್ಯೆ ಇದೆ ಎಂದು ರಜೆ ಹಾಕಿದ್ರು ಬಾಸ್ ವಿಚಿತ್ರವಾಗಿ ವರ್ತಿಸಿದ್ದು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ. ಈ ಕುರಿತಾದ ಪೋಸ್ಟ್ ಇಲ್ಲಿದೆ.

Viral: ಆರೋಗ್ಯ ಸಮಸ್ಯೆ ಅಂದ್ರು ವಿಚಿತ್ರ ಬೇಡಿಕೆ ಇಡ್ತಾರೆ ಬಾಸ್, ಕಹಿ ಅನುಭವ ಹಂಚಿಕೊಂಡ ಉದ್ಯೋಗಿ
ವೈರಲ್ ಪೋಸ್ಟ್Image Credit source: Twitter/Olga Rolenko/Moment/Getty Images
ಸಾಯಿನಂದಾ
|

Updated on: Jul 13, 2025 | 5:17 PM

Share

ಎಷ್ಟೇ ಒತ್ತಡಭರಿತ ಕೆಲಸವೇ ಇರಲಿ, ಕೆಲಸ ಬಿಟ್ಟರೆ ಬೇರೆ ಉದ್ಯೋಗ ಸಿಗಲ್ಲ ಎಂದು ಕಷ್ಟ ಆದ್ರೂ ಸರಿಯೇ, ಅದನ್ನು ತೋರಿಸಿಕೊಳ್ಳಲೇ ಕೆಲಸ ಮಾಡುತ್ತಾರೆ. ಆದರೆ ಆರೋಗ್ಯ ಕೆಟ್ಟಾಗ ಕೆಲಸ ಮಾಡೋಕೆ ಆಗುತ್ತಾ. ಬಾಸ್ ಹೇಳಲಿ, ಯಾರೇ ಬಂದು ಹೇಳಿದ್ರೂ ದೇಹವಂತೂ ಕೆಲಸ ಮಾಡೋಕೆ ಸ್ಪಂದಿಸಲ್ಲ. ಹೀಗಿರುವಾಗ ಹೆಚ್ಚಿನವರು ರಜೆ ತಕೊಂಡು ರೆಸ್ಟ್ ಮಾಡ್ತಾರೆ. ಆದರೆ ಇಲ್ಲೊಬ್ಬ ಉದ್ಯೋಗಿಗೆ (employee) ಇದೇ ರೀತಿ ಆರೋಗ್ಯ ಕೆಟ್ಟಿದೆ. ಹೌದು ಹೊಟ್ಟೆ ನೋವು ಎಂದು ಬಾಸ್‌ಗೆ ಹೇಳಿ ರಜೆ ಹಾಕಿದ್ರು, ಬಾಸ್ ಮಾತ್ರ ಸುಮ್ಮನೆ ಇರಲು ಬಿಟ್ಟಿಲ್ಲವಂತೆ. ಆಫೀಸ್ ಗೆ ಬರ್ಬೇಡಿ ರೆಸ್ಟ್ ಮಾಡಿ, ಆದರೆ ಮನೆಯಲ್ಲಿ ಕೆಲಸ ಮಾಡಿ ಎಂದಿದ್ದಾರಂತೆ. ತನ್ನ ಬಾಸ್‌ನ ಮನಸ್ಥಿತಿಯನ್ನು ಕಂಡು ಉದ್ಯೋಗಿ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ (social media) ಪೋಸ್ಟ್ ಮಾಡಿ ಇಂತಹ ಬಾಸ್ ಸಿಕ್ಕರೆ ಏನ್ ಮಾಡೋದು ಹೇಳಿ ಎಂದು ಬಳಕೆದಾರರನ್ನು ಕೇಳಿದ್ದಾರೆ.

r/IndianWorkPlace ಹೆಸರಿನ ರೆಡ್ಡಿಟ್ ಖಾತೆಯಲ್ಲಿ ತಮ್ಮ ಬಾಸ್ ಜೊತೆಗಿನ ವಾಟ್ಸಾಪ್ ಸಂಭಾಷಣೆಯ ಸ್ಕ್ರೀನ್‌ಶಾಟ್ ಶೇರ್ ಮಾಡಿಕೊಂಡು ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. ನಾನು ಕಳೆದ ಆರೇಳು ತಿಂಗಳುಗಳಿಂದ ಮಾರ್ಕೆಟಿಂಗ್ ಸಂಯೋಜಕನಾಗಿ ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನು ಕೇವಲ ನನ್ನ ರಜೆಗಳನ್ನು ಮಾತ್ರವೇ ತೆಗೆದುಕೊಳ್ಳುತ್ತೇನೆ. ನಾನು ತಿಂಗಳಿಗೊಮ್ಮೆ ಮಾತ್ರ ರಜೆ ತೆಗೆದುಕೊಳ್ಳುತ್ತೇನೆ ಅಷ್ಟೇ. ಇಲ್ಲಿ ನನ್ನನ್ನೂ ಒಳಗೊಂಡಂತೆ ಇಬ್ಬರೂ ಉದ್ಯೋಗಿಗಳು ಆಫೀಸಿನಲ್ಲಿ ಕೆಲಸ ಮಾಡುತ್ತಾರೆ. ಉಳಿದ 2-4 ಉದ್ಯೋಗಿಗಳು ಮನೆಯಿಂದ ಕೆಲಸ ಮಾಡುವ ಸಣ್ಣ ಕಂಪನಿ ಇದಾಗಿದ್ದು, ಇದು ಸುಮಾರು 25 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಹೀಗಿರುವಾಗ ನಿನ್ನೆಯಿಂದ ನನಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ನಾನು ಇಂದು ಬೆಳಗ್ಗೆ ನನ್ನ ಬಾಸ್‌ಗೆ ರಜೆಗಾಗಿ ಮೆಸೇಜ್ ಮಾಡಿದೆ. ಈ ಮೆಸೇಜ್ ಗೆ ಬಂದ ಪ್ರತಿಕ್ರಿಯೆ ಹೀಗಿತ್ತು. ಹುಷಾರಿಲ್ಲದೆ ಇದ್ರು ಆಫೀಸ್ ಗೆ ಬರ್ಬೇಡಿ, ಮನೆಯಿಂದಲೇ ಕೆಲಸ ಮಾಡಿ ಪರವಾಗಿಲ್ಲ ಎಂದಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

Texted my boss to take leave but asking to WFH indirectly byu/Junaid0010 inIndianWorkplace

ಇದನ್ನೂ ಓದಿ
Image
ಕುಮಟಾ ಬಳಿಯ ಗುಹೆಯಲ್ಲಿ ಇಬ್ಬರು ಮಕ್ಕಳ ಜೊತೆ ರಷ್ಯಾದ ಮಹಿಳೆಯ ನಿಗೂಢ ವಾಸ
Image
ಕನ್ನಡ "ಬಡ ಆರ್ಥಿಕತೆಯ" ಭಾಷೆ, ನಾನು ಇಂಗ್ಲಿಷ್ ಮಾತನಾಡುತ್ತೇನೆ
Image
ಮಳೆ ನೀರಲ್ಲಿ ಐಫೋನ್‌ ಕಳೆದು ಹೋಯ್ತು ಎಂದು ಬಿಕ್ಕಿ ಬಿಕ್ಕಿ ಅತ್ತ ಯುವಕ
Image
ಹೊಸ ಆಸನ ವ್ಯವಸ್ಥೆಯನ್ನು ಅಳವಡಿಸಿಕೊಂಡ ಕೇರಳದ ಶಾಲೆಗಳು

ಇನ್ನು ಈ ಕಂಪನಿ ಕೆಲಸಕ್ಕೆಂದು ನನಗೆ ಲ್ಯಾಪ್ ಟಾಪ್ ಒದಗಿಸಿಲ್ಲ, ಕೆಲಸಕ್ಕೆ ನನ್ನ ಸ್ವಂತ ಲ್ಯಾಪ್‌ಟಾಪ್ ಅನ್ನು ಬಳಸುತ್ತಿದ್ದೇನೆ. ಇನ್ನು ಕಳೆದ 25 ವರ್ಷಗಳಿಂದ ಅವರು ಇಷ್ಟು ಕಡಿಮೆ ಉದ್ಯೋಗಿಗಳನ್ನು ಹೊಂದಲು ಏನು ಕಾರಣ ಎಂದು ಕೇಳಿದರೆ, ಆ ಉದ್ಯೋಗಿ ‘ಕೋವಿಡ್-19 ಸಮಯದಲ್ಲಿ ವ್ಯವಹಾರಕ್ಕೆ ತುಂಬಾನೇ ತೊಂದರೆಯಾಗಿತ್ತು. ವಿನ್ಯಾಸಕರ ವ್ಯವಸ್ಥೆಯು 15 ವರ್ಷಗಳಿಗೂ ಹೆಚ್ಚು ಕಾಲ ಇದೆ ಎಂದು ಹೇಳುತ್ತಾರೆ. ಇದರಿಂದನೇ ಕೆಲಸ ವಿಳಂಬವಾಗುತ್ತಿದೆ ನಾನು ಸಮಸ್ಯೆಯನ್ನು ಎತ್ತಿ ತೋರಿಸಿದಾಗ, ನಾನು ಕೇವಲ ನೆಪಗಳನ್ನು ನೀಡುತ್ತಿದ್ದೇನೆ. ಒಂದು ನಿಮಿಷ ತೆಗೆದುಕೊಳ್ಳುವ ಕೆಲಸವು ಮೂರು ನಿಮಿಷಗಳು ತೆಗೆದುಕೊಳ್ಳುತ್ತಿವೆ ಎಂದು ಅವರು ಆರೋಪಿಸುತ್ತಾರೆ. ಅದಲ್ಲದೇ ಶನಿವಾರದಂದು ಕೆಲಸ ಮಾಡಲು ನಾನು ನಿರಾಕರಿಸುವುದು ನಾನು ಸರ್ಕಾರಿ ಉದ್ಯೋಗಿಯಂತೆ ವರ್ತಿಸುತ್ತಿದ್ದೇನೆ ಎಂದು ಹೇಳುತ್ತಾರೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : Viral: 1 ಸಾವಿರ ರೂ. ನೀಡುವೆ ಈ ಕಾಫಿಗೆ ಉಗುಳು, ಬೆಂಗಳೂರಿನಲ್ಲಿ ನಡೆದ ವಿಚಿತ್ರ ಘಟನೆ ಬಗ್ಗೆ ಹಂಚಿಕೊಂಡ ಯುವತಿ

ಈ ಪೋಸ್ಟ್‌ಗೆ ಬಳಕೆದಾರರು ನಾನಾ ರೀತಿಯಲ್ಲಿ ಕಾಮೆಂಟ್ ಗಳನ್ನು ಮಾಡಿದ್ದು, ಬಳಕೆದಾರರೊಬ್ಬರು, ನಾನು 30 ವರ್ಷ ಹಳೆಯ ಕಂಪನಿಗಳನ್ನು ನೋಡಿದ್ದೇನೆ. ಕೇವಲ ಐದು ಆರು ಉದ್ಯೋಗಿಗಳನ್ನು ಹೊಂದಿರುವ ಇವು 40-50 ಕೋಟಿ ಆದಾಯವನ್ನು ಗಳಿಸುತ್ತಿವೆ ಎಂದಿದ್ದಾರೆ. ಇನ್ನೊಬ್ಬರು, ಭಾರತದಲ್ಲಿ ಕೆಲಸದ ನೀತಿ ತೀರಾ ಕೆಟ್ಟದಾಗಿದೆ, ಆರ್ಥಿಕ ಸ್ಪರ್ಧೆಯಲ್ಲಿ ಸೋಲುವುದು ಖಂಡಿತ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, ಹೊಟ್ಟೆ ನೋವು ಎಂದು ಹೇಳಬೇಡಿ, ಕುಟುಂಬ ತುರ್ತು ಪರಿಸ್ಥಿತಿ ಅಥವಾ ಕೆಲಸ ಮಾಡಲು ಅಸಾಧ್ಯವಾದ ಕಾರಣಗಳನ್ನು ನೀಡಿ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ