ಈ ಹಳ್ಳಿಯಲ್ಲಿ ಕೇಳಿ ಬರುತ್ತೆ ವಿಚಿತ್ರ ಶಬ್ದ, ಆ ನಿಗೂಢ ಸ್ಥಳ ಎಲ್ಲಿದೆ ಗೊತ್ತಾ?
ಕೆಲವೊಂದು ಪ್ರದೇಶಗಳು ವಿಚಿತ್ರ ಹಾಗೂ ಭಯಾನಕವಾಗಿರುತ್ತದೆ. ಇಂತಹ ಸಾಕಷ್ಟು ನಿಗೂಢ ಜಾಗಗಳ ಬಗ್ಗೆ ನೀವು ಸಹ ಕೇಳಿರಬಹುದಲ್ವಾ. ರಷ್ಯಾದಲ್ಲೂ ಇಂತಹದ್ದೇ ನಿಗೂಢ ಹಳ್ಳಿಯೊಂದಿದ್ದು, ಈ ಹಳ್ಳಿಯೂ ವಿಜ್ಞಾನಕ್ಕೂ ಮೀರಿದ ಸಂಗತಿಗಳನ್ನು ಹೊಂದಿದೆ. ವಿಜ್ಞಾನಿಗಳು ಕೂಡ ಇಲ್ಲಿನ ಈ ವಿಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಅಷ್ಟಕ್ಕೂ ಈ ಹಳ್ಳಿಯಲ್ಲಿ ಅಂತಹ ವಿಚಿತ್ರ ವಿಚಾರಗಳು ಏನಿದೆ ಎಂಬುದನ್ನು ನೋಡೋಣ ಬನ್ನಿ.

ಕೆಲವೊಂದು ಜಾಗಗಳು ಅನೇಕ ಪ್ರಶ್ನೆಗಳನ್ನು ಹಾಗೂ ವಿಚಿತ್ರ ಸಂಗತಿಗಳನ್ನು ಹೇಳುತ್ತದೆ. ಭಯಾನಕ ಹಾಗೂ ಅತ್ಯಂತ ನಿಗೂಢವಾಗಿರುವ ಇಂತಹ ಸ್ಥಳಗಳ ಬಗ್ಗೆ ನೀವು ಸಹ ಕೇಳಿರಬಹುದು. ಭಾರತದಲ್ಲೂ ಇಂತಹ ಅನೇಕ ವಿಚಿತ್ರ ಸಂಗತಿಗಳನ್ನು ಹೊಂದಿರುವ ಸ್ಥಳಗಳು ಇದೆ. ಅದೇ ರೀತಿ ಇದೀಗ ಇಲ್ಲೊಂದು ಹಳ್ಳಿ ಬಾರಿ ಸದ್ದು ಮಾಡುತ್ತಿದೆ. ಈ ಹಳ್ಳಿರುವುದು ರಷ್ಯಾದಲ್ಲಿ. ಈ ಹಳ್ಳಿ ವಿಜ್ಞಾನಕ್ಕೂ ನಿಗೂಢವಾಗಿ ಕಂಡಿದೆ. ರಷ್ಯಾದ (Russia) ಉರಲ್ ಪರ್ವತಗಳ ಬಳಿಯಿರುವ ಮೊಲ್ಯೊಬ್ಕಾ ಎಂಬ ಈ ಗ್ರಾಮವು ‘ಎಂ-ಟ್ರಯಾಂಗಲ್’ ಅಥವಾ ‘ಪೆರ್ಮ್ ವಲಯ’ ಎಂದು ಪ್ರಸಿದ್ಧವಾಗಿದೆ. ಈ ಪ್ರದೇಶವು 70 ಚದರ ಮೈಲುಗಳಷ್ಟು ವಿಸ್ತಾರವಾಗಿದೆ ಮತ್ತು ರಷ್ಯಾ ರಾಜಧಾನಿ ಮಾಸ್ಕೋದಿಂದ ಸುಮಾರು 600 ಮೈಲುಗಳಷ್ಟು ದೂರದಲ್ಲಿದೆ.
1980 ರ ದಶಕದಲ್ಲಿ, ಇಲ್ಲಿಂದ ವಿಚಿತ್ರ ಶಬ್ದಗಳು ಬರುತ್ತಿತ್ತು. ವಿಜ್ಞಾನಿಗಳು ಹಾಗೂ ಸಂಶೋಧನಾ ಸಂಸ್ಥೆಗಳು ಈ ಗ್ರಾಮದ ಬಗ್ಗೆ ಗಮನಿಸಿ ಅಧ್ಯಯನವನ್ನು ನಡೆಸಿದ್ದಾರೆ. ಯಾವುದೇ ವಾಹನವಿಲ್ಲದಿದ್ದರೂ ಇಲ್ಲಿ ಸಂಚಾರದ ಶಬ್ದ ಕೇಳಿಸುತ್ತದೆ ಎಂದು ಇಲ್ಲಿನ ಜನ ಹೇಳುತ್ತಾರೆ. ಅದು ಕೂಡ 40 ಕಿಲೋಮೀಟರ್ ದೂರದಲ್ಲಿ ರಸ್ತೆಗಳಿದ್ದು, ಹೀಗಿರುವಾಗ ಇಂತಹ ಶಬ್ಧಗಳು ವಿಚಿತ್ರ ಎಂದು ಭಾಸವಾಗುತ್ತದೆ. ಅಲ್ಲದೆ ಇದು ವಿಜ್ಞಾನಕ್ಕೂ ಮೀರಿದ ಘಟನೆಯಾಗಿದೆ. ಇಲ್ಲಿ ಕೆಲವೊಮ್ಮೆ ಮೋಡಗಳ ನಡುವೆಯಿಂದ ಪ್ರಕಾಶಮಾನವಾದ ಬೆಳಕಿನ ಕಿರಣವು ಭೂಮಿಯ ಮೇಲೆ ಬೀಳುತ್ತದೆ ಮತ್ತು ಯಾವುದೋ ಒಂದು ಶಕ್ತಿ ದಟ್ಟವಾದ ಕಾಡುಗಳಲ್ಲಿ ಚಲಿಸುವುದನ್ನು ಕಾಣಬಹುದಂತೆ. ಇಂತಹ ವಿಚಿತ್ರವನ್ನು ಕಣ್ಣಾರೆ ನೋಡಿದವರು ಕೂಡ ಇದ್ದಾರೆ.
ಈ ನಿಗೂಢ ಸ್ಥಳದ ಬಗ್ಗೆ ಅತ್ಯಂತ ಆಘಾತಕಾರಿ ವಿಚಾರ ಕೂಡ ಇದೆ. ಹೌದು ಒಬ್ಬ ಮಾನಸಿಕ ವ್ಯಕ್ತಿ, ಈ ನಿಗೂಢ ಸ್ಥಳಕ್ಕೆ ಹೋಗಿದ್ದಾನೆ. ಹೋಗುವಾಗ ಮಾನಸಿಕ ವ್ಯಕ್ತಿಯಾಗಿ ಹೋಗಿದ್ದ ಈತ ಬರುವಾಗ ಸರಿಯಾಗಿ ಬುದ್ಧಿವಂತ ವ್ಯಕ್ತಿಯಾಗಿ ಬಂದಿದ್ದಾನೆ. ಇನ್ನೊಬ್ಬ ವ್ಯಕ್ತಿ ತೀವ್ರ ಅಸ್ವಸ್ಥನಾಗಿ ಇಲ್ಲಿಗೆ ಬಂದು ತಾನಾಗಿಯೇ ಗುಣಮುಖನಾಗಿ ಹಿಂತಿರುಗಿದ್ದಾನಂತೆ. ಹೀಗಾಗಿ ಇಲ್ಲಿ ಯಾವುದೋ ಅದೃಶ್ಯ ಶಕ್ತಿ ಇದೆ ಎಂಬುದು ಇಲ್ಲಿನ ಜನರ ನಂಬಿಕೆ. ಇನ್ನೊಂದು ವಿಚಿತ್ರವೆಂದರೆ ಇಲ್ಲಿ ಮೊಬೈಲ್ ನೆಟ್‌ವರ್ಕ್ ಕಂಪನಿಗಳಿವೆ. ಆದರೆ ಫೋನ್‌ಗಳು ಮಾತ್ರ ಕಾರ್ಯನಿರ್ವಹಿಸುವುದಿಲ್ಲ. ಆದ್ರೆ ಒಂದೇ ಒಂದು ಕಡೆ ನೆಟ್‌ವರ್ಕ್ ಸಿಗುತ್ತಂತೆ. ಹೌದು ಇಲ್ಲೊಂದು ವಿಶೇಷ ಮಣ್ಣಿನ ದಿಬ್ಬ ಪ್ರದೇಶವಿದ್ದು, ಇಲ್ಲಿ ಮಾತ್ರ ನೆಟ್‌ವರ್ಕ್ ಕಾರ್ಯನಿರ್ವಹಿಸುತ್ತಂತೆ. ಇಲ್ಲಿ ನಿಂತರೆ ಜಗತ್ತಿನ ಯಾವ ದೇಶಕ್ಕೂ ಬೇಕಾದರೂ ಕಾಲ್ ಮಾಡಬಹುದು. ಈ ದಿಬ್ಬದಿಂದ ಕೇಳಗೆ ಇಳಿದ ತಕ್ಷಣ ನೆಟ್‌ವರ್ಕ್ ಕಡಿತಗೊಳ್ಳುತ್ತದೆ.
ಇದನ್ನೂ ಓದಿ: ಆರೋಗ್ಯ ಸಮಸ್ಯೆ ಅಂದ್ರು ವಿಚಿತ್ರ ಬೇಡಿಕೆ ಇಡ್ತಾರೆ ಬಾಸ್, ಕಹಿ ಅನುಭವ ಹಂಚಿಕೊಂಡ ಉದ್ಯೋಗಿ
ಈ M-ಟ್ರಯಾಂಗಲ್ ಒಂದು ನಿಗೂಢತೆಯೇ, ಪವಾಡವೇ ಅಥವಾ ಇನ್ನೊಂದು ಜಗತ್ತಿಗೆ ಪ್ರವೇಶ ದ್ವಾರವೇ? ಎಂಬ ಪ್ರಶ್ನೆಗೆ ಇಲ್ಲಿಯವರೆಗೆ ಯಾರ ಬಳಿಯೂ ಉತ್ತರವಿಲ್ಲ, ಆದರೆ ಅಲ್ಲಿಗೆ ಭೇಟಿ ನೀಡಿದವರ ಜೀವನದಲ್ಲಿ ಅನೇಕ ಬದಲಾವಣೆಗಳು ನಡೆದಿದೆ. ಇದು ಭಯಾನಕ ಹಳ್ಳಿಯಾದರೂ, ಯಾರಿಗೂ ತೊಂದರೆಯನ್ನು ಮಾಡುವುದಿಲ್ಲ ಎಂದು ಅನೇಕರು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ