ನೋ ಮೋರ್ ಬ್ಯಾಕ್ ಬೆಂಚರ್ಸ್; ಸಿನಿಮಾದಿಂದ ಪ್ರೇರಣೆ ಪಡೆದು ಹೊಸ ಆಸನ ವ್ಯವಸ್ಥೆಯನ್ನು ಅಳವಡಿಸಿಕೊಂಡ ಕೇರಳದ ಶಾಲೆಗಳು
ಫ್ರಂಟ್, ಮಿಡಲ್, ಬ್ಯಾಕ್ ಬೆಂಚ್ ಈ ರೀತಿಯ ಆಸನ ವ್ಯವಸ್ಥೆಯಿಂದ ಶಾಲೆಯಲ್ಲಿ ಬ್ಯಾಕ್ ಬೆಂಚ್‌ನಲ್ಲಿ ಕೂರುವ ವಿದ್ಯಾರ್ಥಿಗಳ ಕಡೆ ಶಿಕ್ಷಕರು ಅಷ್ಟಾಗಿ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಜೊತೆಗೆ ಇದು ಬ್ಯಾಕ್ ಬೆಂಚ್‌ನಲ್ಲಿ ಕುಳಿತ ವಿದ್ಯಾರ್ಥಿಗಳ ಹಾಗೂ ಪಾಠ ಮಾಡುತ್ತಾ ಮುಂದೆ ನಿಂತ ಶಿಕ್ಷಕರ ನಡುವಿನ ಅಂತರವನ್ನು ಸಹ ಹೆಚ್ಚಿಸುತ್ತದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ಈ ಅಂತರವನ್ನು ಕಡಿಮೆ ಮಾಡುವ ಸಲುವಾಗಿ ಇದೀಗ ಕೇರಳ ಕೆಲವು ಶಾಲೆಗಳು ಅರ್ಧ ವೃತ್ತಾಕಾರದ ಆಸನ ವ್ಯವಸ್ಥೆಯನ್ನು ಪರಿಚಯಿಸಿವೆ.

ಕೇರಳ, ಜುಲೈ 12: ಶಾಲೆಗಳಲ್ಲಿ ಲಾಸ್ಟ್ ಬೆಂಚ್‌ನಲ್ಲಿ (Last Bench Students) ಕೂರುವಂತಹ ವಿದ್ಯಾರ್ಥಿಗಳಿಗೆ ನಾವು ಲಾಸ್ಟ್ ಬೆಂಚ್ ಸ್ಟೂಡೆಂಟ್ಸ್ ಅಂತ ಕರೆಸಿಕೊಳ್ಳುವುದಕ್ಕೆ ಅದೇನೋ ಹೆಮ್ಮೆ. ಅದೇ ರೀತಿ ಶಿಕ್ಷಕರಿಗೆ ಈ ಲಾಸ್ಟ್ ಬೆಂಚ್‌ನಲ್ಲಿ ಕುಳಿತ ತರ್ಲೆ ವಿದ್ಯಾರ್ಥಿಗಳನ್ನು ನಿಭಾಯಿಸುವುದೇ ದೊಡ್ಡ ಟಾಸ್ಕ್. ಈ ಲಾಸ್ಟ್ ಬೆಂಚ್‌ನಲ್ಲಿ ಕುಳಿತ ವಿದ್ಯಾರ್ಥಿಗಳು ಟೀಚರ್ ಪಾಠ ಮಾಡುವಾಗಲೂ ಅತ್ತ ಗಮನ ಕೊಡದೆ ಏನೇನೋ ತರ್ಲೆ ಕಿತಾಪತಿಗಳನ್ನು ಮಾಡುತ್ತಿರುತ್ತಾರೆ. ಇದರಿಂದ ಪಾಠದತ್ತ ಗಮನ ಕೂಡ ಕೊಡುವುದಿಲ್ಲ. ಜೊತೆಗೆ ಇಂತಹ ಸೀಟಿಂಗ್ ಅರೇಂಜ್‌ಮೆಂಟ್ ಲಾಸ್ಟ್ ಬೆಂಚ್ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವೆ ಅಂತರ ಸಹ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ಈ ಅಂತರವನ್ನು ಕಡಿಮೆ ಮಾಡುವ ಸಲುವಾಗಿ ಇದೀಗ ಕೇರಳ ಕೆಲವು ಶಾಲೆಗಳು ಹೊಸದಾಗಿ (Kerala schools adopt new seating arrangement) ಅರ್ಧ ವೃತ್ತಾಕಾರದ ಆಸನ ವ್ಯವಸ್ಥೆಯನ್ನು ಪರಿಚಯಿಸಿವೆ.
ಹೊಸ ಸೀಟಿಂಗ್ ಅರೇಂಜ್‌ಮೆಂಟ್ ಅಳವಡಿಸಿಕೊಂಡ ಕೇರಳದ ಶಾಲೆಗಳು:
2024 ರಲ್ಲಿ ಬಿಡುಗಡೆಗೊಂಡ ವಿನೇಶ್ ವಿಶ್ವನಾಥ್ ಅವರ ನಿರ್ದೇಶನದ ಮಲಯಾಳಂ ಚಲನಚಿತ್ರವಾದ ʼಸ್ಥಾನಾರ್ಥಿ ಶ್ರೀಕುಟ್ಟನ್ʼ ಸಿನಿಮಾದಿಂದ ಪ್ರೇರಣೆಗೊಂಡು ಶಾಲೆಗಳು ಈ ಹೊಸ ವ್ಯವಸ್ಥೆಯನ್ನು ಪರಿಚಯಿಸಿದ್ದು, ವಿದ್ಯಾರ್ಥಿಗಳಿಗೆ ಕಟ್ಟುವ ಬ್ಯಾಕ್ ಬೆಂಚರ್ಚ್ ಎಂಬ ಹಣೆಪಟ್ಟಿಯನ್ನು ತೊಡೆದು ಹಾಕುವುದು ಇದರ ಮುಖ್ಯ ಉದ್ದೇಶವಾಗಿದೆ.
ʼUʼ ಶೇಪ್ ಅಂದರೆ ಈ ಅರ್ಧವೃತ್ತಾಕಾರದ ಆಸನ ವ್ಯವಸ್ಥೆಯು ವಿದ್ಯಾರ್ಥಿಗಳಲ್ಲಿ ತರಗತಿಯಲ್ಲಿ ಸಮಾನ ಒಳಗೊಳ್ಳುವಿಕೆ, ಸಮಾನ ಭಾಗವಹಿಸುವಿಕೆ ಮತ್ತು ಎಲ್ಲಾ ಚಟುವಟಿಕೆಗಳಲ್ಲೂ ಉತ್ತಮ ತೊಡಗಿಕೊಳ್ಳುವಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಕೇರಳದ ಶಿಕ್ಷಣಾಧಿಕಾರಿಗಳು ಮತ್ತು ಶಾಲಾ ನಿರ್ವಹಣಾ ಸಮಿತಿಗಳು ಈ ಉಪಕ್ರಮವನ್ನು ಅನುಮೋದಿಸಿವೆ. ಪ್ರಸ್ತುತ ಈ ವ್ಯವಸ್ಥೆಯನ್ನು ಕೊಲ್ಲಂ, ಕಣ್ಣೂರು, ತ್ರಿಶೂರ್, ಪಾಲಕ್ಕಾಡ್ ಸೇರಿದಂತೆ ಕೇರಳದ ಕೆಲವು ಜಿಲ್ಲೆಗಳಲ್ಲಿರುವ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಜಾರಿಗೆ ತರಲಾಗಿದೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
🚨 Kerala schools are adopting new classroom seating model with no backbenchers. 👏 pic.twitter.com/2hkhRk6HuV
— Indian Tech & Infra (@IndianTechGuide) July 10, 2025
“ಈ ಹೊಸ ವ್ಯವಸ್ಥೆಯು ʼವಿದ್ಯಾರ್ಥಿಗಳ ನಡುವಿನ ಸಂವಹನದಲ್ಲಿ ಹೆಚ್ಚಳ ಕಂಡು ಬಂದಿದೆ. ಜೊತೆಗೆ ವಿಶೇಷವಾಗಿ ಹಿಂಬಂದಿಯಲ್ಲಿ ಕೂರುತ್ತಿದ್ದ ವಿದ್ಯಾರ್ಥಿಗಳ ನಿರ್ಲಕ್ಷ್ಯವನ್ನು ಮತ್ತು ಅವರ ಕಡೆಗಣಿಸುವಿಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ. ಅಲ್ಲದೆ ಈ ಹೊಸ ವ್ಯವಸ್ಥೆ ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯಕ್ಷಮತೆಯಲ್ಲಿ ಗಮನಾರ್ಹ ಸುಧಾರಣೆಗಳನ್ನು ತಂದಿವೆ” ಎಂದು ಇಲ್ಲಿನ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ವೈದ್ಯರೇ ಪತ್ತೆ ಮಾಡಲು ಆಗದ ಕಾಯಿಲೆ, ಚಾಟ್ ಜಿಟಿಪಿಯಿಂದ ಪತ್ತೆಯಾಯ್ತು, ಹೇಗೆ ಅಂತೀರಾ?
Indian Tech & Infra ಹೆಸರಿನ ಎಕ್ಸ್ ಖಾತೆಯಲ್ಲಿ ಈ ಕುರಿತ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿದ್ದು, ಈ ವ್ಯವಸ್ಥೆಯ ಬಗ್ಗೆ ಬಳಕೆದಾರರು ಕಾಮೆಂಟ್ ಮೂಲಕ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಒಬ್ಬ ಬಳಕೆದಾರರು ʼಇದು ತಪ್ಪು ನಿರ್ಧಾರದಂತೆ ತೋರುತ್ತಿದೆ. ಹೀಗೆ ಅರ್ಧವೃತ್ತಾಕಾರದಲ್ಲಿ ಕುಳಿತರೆ ತಲೆಯ ನಿರಂತರ ಚಲನೆಯಿಂದಾಗಿ ಕುತ್ತಿಗೆಗೆ ಒತ್ತಡ ಬೀಳುವ ಸಾಧ್ಯತೆ ಇದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದು ಕೊನೆಯ ಬೆಂಚಿನಲ್ಲಿ ಕೂತು ತರ್ಲೆ ಮಾಡುವ ವಿದ್ಯಾರ್ಥಿಗಳಿಗೆ ದೊಡ್ಡ ಹೊಡೆತʼ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:42 am, Sat, 12 July 25








