Video : ನಡುರಸ್ತೆಯಲ್ಲೇ ತಂದೆ ಮಗನ ಹೊಡೆದಾಟ : ಕಾರಣ ತಿಳಿದಿದ್ರೆ ನೀವು ಶಾಕ್ ಆಗ್ತೀರಾ
ಪ್ರತಿಯೊಬ್ಬ ತಂದೆ ತಾಯಂದಿರಿಗೂ ನಮ್ಮ ಜೀವನದಂತೆ ಮಕ್ಕಳ ಜೀವನ ಆಗ್ಬಾರ್ದು ಎನ್ನುವುದಿರುತ್ತದೆ. ಹೀಗಾಗಿ ಎಷ್ಟೇ ಕಷ್ಟವಾದರೂ ಸರಿಯೇ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುತ್ತಾರೆ. ಹೀಗಿರುವಾಗ ಮಕ್ಕಳು ಪರೀಕ್ಷೆಯಲ್ಲಿ ಫೇಲಾದರೆ ಹೆತ್ತವರಿಗೆ ಸಹಜವಾಗಿಯೇ ಕೋಪ ಬರುತ್ತದೆ. ಆದರೆ ತಂದೆಯೊಬ್ಬ ಮಗನು ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಅಟ್ಟಾಡಿಸಿಕೊಂಡು ಹೋಗಿ ಹೊಡೆದಿದ್ದು, ಕೊನೆಯಲ್ಲಿ ನಡೆದದ್ದು ನೋಡಿದ್ರೆ ಇಂತಹ ಮಕ್ಕಳು ಇರ್ತಾರಾ ಎಂದೆನಿಸುತ್ತದೆ. ಈ ಕುರಿತಾದ ವಿಡಿಯೋ ಇಲ್ಲಿದೆ ನೋಡಿ.

ಚೀನಾ, ಜುಲೈ 10: ಪರೀಕ್ಷೆ ಎಂದರೆ ಮಕ್ಕಳಿಗಿಂತ ಹೆತ್ತವರಿಗೆ ಭಯ ಹೆಚ್ಚು. ಜಸ್ಟ್ ಪಾಸ್ ಆದ್ರೂ ಮಾಡಪ್ಪ ದೇವ್ರೇ ಎಂದು ಹರಕೆ ಹೊತ್ತುಕೊಳ್ಳುವ ಪೋಷಕರು ಇದ್ದಾರೆ. ಒಂದು ವೇಳೆ ಪರೀಕ್ಷೆಯಲ್ಲಿ ಫೇಲ್ ಆದ್ರೆ ಮಕ್ಕಳಿಗೆ ಬೈಯಬಹುದು, ಸಿಟ್ಟಿನಲ್ಲಿ ಹೊಡೆಯಲುಬಹುದು. ಆದರೆ ಇಲ್ಲೊಬ್ಬ ತಂದೆಯೂ ಪರೀಕ್ಷೆಯಲ್ಲಿ ಫೇಲ್ ಆದ ಮಗನನ್ನು ಅಟ್ಟಾಡಿಸಿಕೊಂಡು ಹೋಗಿ ಹೊಡೆದಿದ್ದಾನೆ, ಅದು ನಡುರಸ್ತೆಯಲ್ಲಿ ಮಗನು ಒದೆ ತಿಂದಿದ್ದಾನೆ. ಮೊದಲಿಗೆ ಏಟು ತಿಂದ ಮಗನು ಕೊನೆಗೆ ತಂದೆಗೆ ತಿರುಗಿಸಿ ಹೊಡೆಯಲು ಮುಂದಾಗಿದ್ದಾನೆ. ತಂದೆ ಮಗ ಪರಸ್ಪರ ಹೊಡೆದಾಡಿಕೊಂಡಿರುವ ಘಟನೆಯೂ ಚೀನಾದ ಬೀಜಿಂಗ್‌ನಲ್ಲಿ (Beijing of China) ನಡೆದಿದೆ. ಸೋಶಿಯಲ್ ಮೀಡಿಯಾದಲ್ಲಿ (social media) ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರು ಈ ತರಹ ಅಪ್ಪ ಮಗ ಇದ್ರೆ ಉದ್ಧಾರ ಎಂದಿದ್ದಾರೆ.
@AsianDawn4 ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾದ ವಿಡಿಯೋದಲ್ಲಿ ಮಗ ಫೇಲ್ ಆಗಿದ್ದಾನೆ ಎನ್ನುವ ಕೋಪದಲ್ಲಿ ತಂದೆಯೂ ಬೆಲ್ಟ್ ಹಿಡಿದುಕೊಂಡು ಮಗನನ್ನು ರಸ್ತೆಯುದ್ದಕ್ಕೂ ಅಟ್ಟಾಡಿಸಿಕೊಂಡು ಹೋಗಿದ್ದಾನೆ. ಮೊದಲಿಗೆ ಸುಮ್ಮನೆ ಇದ್ದ ಮಗನು ಕೊನೆಗೆ ತಂದೆಗೆ ಕೈಯಲ್ಲಿದ್ದ ಕೋಲಿನಿಂದ ಹೊಡೆಯಲು ಶುರು ಮಾಡಿದ್ದಾನೆ. ತಂದೆ ಮಗ ಇಬ್ಬರೂ ಹೊಡೆದಾಡಿಕೊಳ್ಳುವ ದೃಶ್ಯವನ್ನು ನೀವಿಲ್ಲಿ ನೋಡಬಹುದು.
ಇದನ್ನೂ ಓದಿ :Video : ನೀವು ತುಂಬಾನೇ ಬ್ಯೂಟಿಫುಲ್ ಎಂದ ಕೆಫೆ ಸಿಬ್ಬಂದಿ, ಪತ್ನಿಯನ್ನು ಹೊಗಳುತ್ತಿದ್ದಂತೆ ಗರಂ ಆದ ಪತಿ
ವೈರಲ್ ವಿಡಿಯೋ ಇಲ್ಲಿದೆ ನೋಡಿ
Chinese son defended himself against his father who tried to discipline him for failing an exam. pic.twitter.com/25xQaA3rW8
— Asian Dawn (@AsianDawn4) July 4, 2025
ಈ ವಿಡಿಯೋ ಈಗಾಗಲೇ ಹದಿನೆಂಟು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಬಳಕೆದಾರರೊಬ್ಬರು, ಇದು ರಣಭಯಂಕರ ಕಾಳಗದ ದೃಶ್ಯವಾಗಿರಬಹುದು ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಪ್ರತಿಯೊಬ್ಬ ತಂದೆತಾಯಿ ಅದೆಷ್ಟೋ ವರ್ಷಗಳಿಂದ ಇದನ್ನೇ ಮಾಡುತ್ತಾ ಬಂದಿದ್ದಾರೆ. ಅಂತಿಮವಾಗಿ ಕೆಲವು ಅತ್ಯುತ್ತಮ ಸಮರ ಕಲೆಗಳನ್ನು ಅಭಿವೃದ್ಧಿ ಪಡಿಸಿದ್ದಾರೆ ಎಂದಿದ್ದಾರೆ. ಮತ್ತೊಬ್ಬರು, ನಿಜವಾದ ತಂದೆಯೂ ಯಾವತ್ತಿಗೂ ಮಕ್ಕಳಿಗೆ ಹೊಡೆಯುವ ಬದಲು ತಪ್ಪನ್ನು ತಿದ್ದಿ ಬುದ್ಧಿ ಹೇಳುತ್ತಾನೆ. ಈ ರೀತಿ ರಸ್ತೆಯುದ್ದಕ್ಕೂ ಅಟ್ಟಾಡಿಸಿಕೊಂಡು ಹೋಗಿ ಹೊಡೆಯುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:01 pm, Thu, 10 July 25