AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video : ನೀವು ತುಂಬಾನೇ ಬ್ಯೂಟಿಫುಲ್ ಎಂದ ಕೆಫೆ ಸಿಬ್ಬಂದಿ, ಪತ್ನಿಯನ್ನು ಹೊಗಳುತ್ತಿದ್ದಂತೆ ಗರಂ ಆದ ಪತಿ

ಯಾರೇ ಆಗಿರಲಿ ತಮ್ಮ ಹೆಂಡ್ತಿಯನ್ನು ಪರಪುರುಷ ಹೊಗಳುತ್ತಿದ್ದರೆ ಪಿತ್ತ ನೆತ್ತಿಗೆ ಏರುತ್ತದೆ. ಇವನು ಯಾರು, ನನ್ನ ಹೆಂಡ್ತಿಯನ್ನು ಹೊಗಳೋನು ಎಂದು ಮನಸ್ಸಿನಲ್ಲಿ ಬೈಯಲು ಶುರು ಮಾಡುತ್ತಾರೆ. ಆದರೆ ಇಲ್ಲೊಬ್ಬ ಪತಿರಾಯ ಹೆಂಡ್ತಿಯನ್ನು ಕೆಫೆ ಸಿಬ್ಬಂದಿಯೊಬ್ಬ ಹೊಗಳಿದ್ದಕ್ಕೆ ರಂಪಾಟ ಮಾಡಿದ್ದಾನೆ. ಸಿಬ್ಬಂದಿ ಮೇಲೆ ಕೋಪಗೊಂಡು ಕೂಗಾಡಿದ್ದಾನೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಈ ವ್ಯಕ್ತಿಗೆ ನಿನ್ನ ಹೆಂಡ್ತಿ ಚೆನ್ನಾಗಿದ್ದಾಳೆ ಎಂದು ಖುಷಿ ಪಡು ಎಂದು ಕಾಮೆಂಟ್ ಮಾಡಿದ್ದಾರೆ.

Video : ನೀವು ತುಂಬಾನೇ ಬ್ಯೂಟಿಫುಲ್ ಎಂದ ಕೆಫೆ ಸಿಬ್ಬಂದಿ, ಪತ್ನಿಯನ್ನು ಹೊಗಳುತ್ತಿದ್ದಂತೆ ಗರಂ ಆದ ಪತಿ
ವೈರಲ್ ವಿಡಿಯೋImage Credit source: Instagram
ಸಾಯಿನಂದಾ
|

Updated on:Jul 10, 2025 | 5:36 PM

Share

ಅಮೆರಿಕ, ಜುಲೈ 10: ದಿನನಿತ್ಯ ಗುರುತು ಪರಿಚಯವಿಲ್ಲದ ವ್ಯಕ್ತಿಗಳು ಎದುರಾಗುತ್ತಾರೆ. ಹೀಗೆ ಸಿಕ್ಕ ವ್ಯಕ್ತಿಗಳಲ್ಲಿ ಕೆಲವರು ನೋಡುವುದಕ್ಕೆ ಚಂದ ಇರುತ್ತಾರೆ. ಹೀಗಿರುವಾಗ ಮತ್ತೆ ಮತ್ತೆ ಅವರತ್ತ ಕಣ್ಣು ಹೋಗುವುದು ಸಹಜ ಕೂಡ. ಸುಂದರವಾದ ವ್ಯಕ್ತಿಗಳು ಕಂಡಾಗ ಎಷ್ಟು ಬ್ಯೂಟಿಫುಲ್ ಆಗಿದ್ದಾರೆಂದು  ಮನಸ್ಸಿನಲ್ಲಿ ಹೇಳ್ತೇವೆ. ಆದರೆ ಕೆಲವರು ಒಂದು ಹೆಜ್ಜೆ ಮುಂದೆ ನೀವು ತುಂಬಾ ಸುಂದರವಾಗಿದ್ದೀರಾ ಎಂದು ಕಾಂಪ್ಲಿಮೆಂಟ್ (compliment) ಕೊಡ್ತಾರೆ. ಆದರೆ ಇಲ್ಲೊಬ್ಬ ಕೆಫೆ ಸಿಬ್ಬಂದಿ ಗ್ರಾಹಕನ ಪತ್ನಿಗೆ ಕಾಂಪ್ಲಿಮೆಂಟ್ ಕೊಡಲು ಹೋಗಿ ಪಜೀತಿಗೆ ಸಿಲುಕಿದ್ದಾನೆ. ಕೆಫೆ ಸಿಬ್ಬಂದಿಯೂ ತನ್ನ ಪತ್ನಿಗೆ ಬ್ಯೂಟಿಫುಲ್ ಎಂದಿದ್ದಕ್ಕೆ ಪತಿಯೂ ಈತನ ಮೇಲೆ ಗರಂ ಆಗಿದ್ದು, ಜಗಳಕ್ಕೆ ಇಳಿದಿದ್ದು, ಸೋಶಿಯಲ್‌ ಮೀಡಿಯಾದಲ್ಲಿ (social media) ಈ ವಿಡಿಯೋ ವೈರಲ್‌ ಆಗಿದೆ. ಈ ಘಟನೆಯೂ ಅಮೆರಿಕದ ಕನ್ಸಾಸ್ ನಲ್ಲಿ (Kansas of America) ನಡೆದಿದೆ ಎನ್ನಲಾಗಿದೆ.

the_shortreview ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ಕೆಫೆ ಸಿಬ್ಬಂದಿಯೊಬ್ಬರು ಗ್ರಾಹಕನ ಪತ್ನಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೀಗನ್ನುತ್ತಿದ್ದಂತೆ ಗ್ರಾಹಕನು ವಿರುದ್ಧ ಗರಂ ಆಗಿದ್ದು ನೀವು ಏಕೆ ನನ್ನ ಹೆಂಡ್ತಿಗೆ ಬ್ಯೂಟಿಫುಲ್ ಎಂದು ಹೇಳಿದ್ದೀರಿ ಎಂದು ಪ್ರಶ್ನಿಸಿದ್ದಾನೆ. ಈ ವೇಳೆಯಲ್ಲಿ ಸಿಬ್ಬಂದಿ ಮಾತ್ರ ಏನು ಮಾತನಾಡದೇ ಸುಮ್ಮನೆ ನಿಂತುಕೊಂಡಿದ್ದು, ತಾನು ಹೀಗೆ ಮಾತನಾಡಿದ್ದಕ್ಕೆ ಕ್ಷಮಿಸಿ ಎಂದು ಕೇಳಿದ್ದಾನೆ. ಆದರೆ ಕೋಪಗೊಂಡ ವ್ಯಕ್ತಿಯೂ ತನ್ನ ಏರುಧ್ವನಿಯಲ್ಲಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿರುವುದನ್ನು ನೀವಿಲ್ಲಿ ನೋಡಬಹುದು.

ಇದನ್ನೂ ಓದಿ
Image
ಬೆಂಗಳೂರು ಚೆನ್ನಾಗಿಲ್ಲ, ಇದು ಸಂಪೂರ್ಣ ಕೊಳಕು ನಗರ ಎಂದು ಟೀಕಿಸಿದ ವ್ಯಕ್ತಿ
Image
ಅಜ್ಜಿಯ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಗಿಫ್ಟ್ ಕೊಟ್ಟ ಮೊಮ್ಮಗಳು
Image
ಈ ಸಾಫ್ಟ್‌ವೇರ್ ಇಂಜಿನಿಯರ್​​​ನ ತಿಂಗಳ ಖರ್ಚು 4.28 ಲಕ್ಷ ರೂ.
Image
ಭಾರತೀಯನಿಗೆ ಅವಮಾನ ಮಾಡಿದ ಅಮೆರಿಕದ ನಿವಾಸಿ

ಇದನ್ನೂ ಓದಿ : Video : 7 ದಿನಕ್ಕಾಗುವಷ್ಟು ಅಡುಗೆಯನ್ನು ಒಂದೇ ದಿನ ಮಾಡಿದ ಮಹಿಳೆ, ಈಕೆ ಸೋಮಾರಿ ಎಂದ ಜನ

ವೈರಲ್‌ ವಿಡಿಯೋ ಇಲ್ಲಿದೆ ನೊಡಿ

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಳಕೆದಾರರೊಬ್ಬರು, ಈತನಿಗೆ ಪತಿಯನ್ನು ಯಾರಾದ್ರೂ ಹೊಗಳಿದ್ರೆ ಸಹಿಸಿಕೊಳ್ಳಲು ಆಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಯುತ್ತಿದೆ ಎಂದಿದ್ದಾರೆ. ಇನ್ನೊಬ್ಬರು, ದಯವಿಟ್ಟು ಯಾರಾದ್ರೂ ಈತನನ್ನು ಮನೋವೈದ್ಯರ ಬಳಿ ಕರೆದುಕೊಂಡು ಹೋಗಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಈತನಿಗೆ ಖಂಡಿತ ಪತ್ನಿ ಡಿವೋರ್ಸ್ ನೀಡುತ್ತಾಳೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:22 pm, Thu, 10 July 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ