AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video : 7 ದಿನಕ್ಕಾಗುವಷ್ಟು ಅಡುಗೆಯನ್ನು ಒಂದೇ ದಿನ ಮಾಡಿದ ಮಹಿಳೆ, ಈಕೆ ಸೋಮಾರಿ ಎಂದ ಜನ

ಅಮೆರಿಕದಲ್ಲಿರುವ ಭಾರತೀಯ ಮಹಿಳೆಯೊಬ್ಬರು 7 ದಿನಕ್ಕೆ ಆಗುವಷ್ಟು ಅಡುಗೆ ಮಾಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಖತ್​​​ ವೈರಲ್​​ ಆಗಿದೆ. ಈ ಬಗ್ಗೆ ಚರ್ಚೆ ಕೂಡ ನಡೆದಿದೆ. ಆದರೆ ಇದನ್ನು ಅಮೆರಿಕದಲ್ಲಿ ಸಾಮಾನ್ಯವಾಗಿ ಎಲ್ಲರೂ ಮಾಡುತ್ತಾರೆ ಎಂದು ಹೇಳಿದ್ದಾರೆ. ಇನ್ನು ಕೆಲವರು ಈ ಮಹಿಳೆ ತುಂಬಾ ಸೋಮಾರಿ ಎಂದು ಕಾಮೆಂಟ್​ ಮಾಡಿದ್ದಾರೆ, ಈ ಬಗ್ಗೆ ಇಲ್ಲಿದೆ ನೋಡಿ ಸ್ಟೋರಿ.

Video : 7 ದಿನಕ್ಕಾಗುವಷ್ಟು ಅಡುಗೆಯನ್ನು ಒಂದೇ ದಿನ ಮಾಡಿದ ಮಹಿಳೆ, ಈಕೆ ಸೋಮಾರಿ ಎಂದ ಜನ
ವೈರಲ್​​ ವಿಡಿಯೋ
ಸಾಯಿನಂದಾ
|

Updated on: Jul 10, 2025 | 4:49 PM

Share

ಹಿಂದಿನ ಕಾಲದಲ್ಲಿ ಮಹಿಳೆಯರು ತುಂಬಾ ಕ್ರಿಯಾಶೀಲವಾಗಿ ಯೋಚನೆ ಮತ್ತು ಕೆಲಸಗಳನ್ನು ಮಾಡುತ್ತಿದ್ದರು. ಆ ಕಾಲದಲ್ಲಿ ಅವಿಭಕ್ತ ಕುಟುಂಬಗಳೇ ಹೆಚ್ಚು. ಮಧ್ಯಾಹ್ನಕ್ಕೆ ಅಡುಗೆ ಮಾಡಿದ್ರೆ ಆಗಲೇ ಖಾಲಿ. ಮತ್ತೆ ರಾತ್ರಿ ಬೇರೆ ಮಾಡಬೇಕು. ಇದರ ನಡುವೆ ಮನೆ ಕೆಲಸ, ಅದು ಇದು ಎಂದು ಬ್ಯುಸಿ ಹಾಗೂ ಚಟುವಟಿಕೆಯಿಂದ ಕೆಲಸ ಮಾಡುತ್ತಾರೆ. ಆದರೆ ಈಗಿನ ಮಹಿಳೆಯರು, ಒಮ್ಮೆ ಅಡುಗೆ ಮಾಡಿದ್ರೆ ಮೂರು ದಿನ ಬರುವಂತೆ ಮಾಡುತ್ತಾರೆ. ಇದರ ಜತೆಗೆ ಹೆಚ್ಚಿನ ಮಹಿಳೆಯರಿಗೆ ಆಲಸ್ಯ, ಇದು ಅವರ ಹಾಗೂ ಕುಟುಂಬ ಆರೋಗ್ಯದ (Health) ಮೇಲೆ ದೊಡ್ಡ ಮಟ್ಟದ ಪರಿಣಾಮವನ್ನು ಉಂಟು ಮಾಡುತ್ತದೆ ಎಂಬುದು ಅನೇಕರ ವಾದ. ಹಿಂದಿನ ಕಾಲದಂತೆ ಅವಿಭಕ್ತ ಕುಟುಂಬಗಳಲಿಲ್ಲ, (Joint family) ಅದರೂ ಸೋಮಾರಿತನ. ಇದೀಗ ಇಲ್ಲೊಂದು ಸುದ್ದಿ ಕೂಡ ಈಗಿನ ಮಹಿಳೆಯರು ಹೆಚ್ಚು ಸೋಮಾರಿಗಳು ಎಂಬುದನ್ನು ಸಾಬೀತು ಮಾಡಿದೆ. ಅಮೆರಿಕದಲ್ಲಿರುವ ಭಾರತೀಯ ಮಹಿಳೆ ಒಂದು ವಾರಕ್ಕೆ ಆಗುವಷ್ಟು ಆಹಾರ ಒಂದೇ ದಿನ ಮಾಡಿರುವ ಬಗ್ಗೆ ವಿಡಿಯೋ ವೈರಲ್​ ಆಗಿದ್ದು, ಈ  ಬಗ್ಗೆ ಅನೇಕರು ಮಹಿಳೆಯನ್ನು ಟೀಕಿಸಿದ್ದಾರೆ.

ಮಾಧವಿ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಹಂಚಿಕೊಳ್ಳಲಾಗಿದೆ. ಈ ಇನ್ಸ್ಟಾ ಖಾತೆಗೆ 25 ಸಾವಿರಕ್ಕೂ ಹೆಚ್ಚು ಫಾಲೋವರ್ಸ್​​​​ ಇದ್ದಾರೆ. ಇತ್ತೀಚೆಗೆ ಈ ಇನ್‌ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು. ಅದರಲ್ಲಿ ಮಹಿಳೆಯೊಬ್ಬರು, ಏಳು ದಿನಕ್ಕೆ ಆಗುವಷ್ಟು ಆಹಾರವನ್ನು ಒಂದು ಗಂಟೆಯಲ್ಲಿ ತಯಾರಿಸಿದ್ದಾರೆ. ಅದನ್ನು ರೆಫ್ರಿಜರೇಟರ್‌ನಲ್ಲಿ ಇಟ್ಟು, ಬಿಸಿ ಮಾಡಿ, ಊಟದ ನಂತರ ಮತ್ತೆ ಅದನ್ನು ರೆಫ್ರಿಜರೇಟರ್‌ನಲ್ಲಿ ಇರಿಸಲಾಗುತ್ತದೆ. ಹೀಗೆ 7 ದಿನಗಳ ಕಾಲ ಮಾಡಿದ್ದಾರೆ. ಈ ರೀತಿ ಮಾಡುವುದರಿಂದ ಒತ್ತಡದ ಮಹಿಳೆಯರಿಗೆ, ಕೆಲಸಕ್ಕೆ ಹೋಗುವ ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ, ಹೆಚ್ಚು ಉಪಯೋಗ ಎಂದು ಹೇಳಿದ್ದಾರೆ. ಆದರೆ ಇದನ್ನು ಹೆಚ್ಚಿನ ಗೃಹಿಣಿಯರು ವಿರೋಧಿಸಿದ್ದಾರೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಿದ್ದಾರೆ. ಹೀಗೆ ಮಾಡಿದ್ರೆ, ಅಮೆರಿಕದಲ್ಲಿ ಭಾರತದಂತೆ ಅಡುಗೆ ಕೆಲಸದವರ ಅಗತ್ಯ ಇರುವುದಿಲ್ಲ ಎಂದು ಹೇಳಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ:

This meal prep creator got so much hate that she turned off comments ft @madhavis_little_nook byu/National_Holobird inInstaCelebsGossip

ಇದನ್ನೂ ಓದಿ
Image
ಬೆಂಗಳೂರು ಚೆನ್ನಾಗಿಲ್ಲ, ಇದು ಸಂಪೂರ್ಣ ಕೊಳಕು ನಗರ ಎಂದು ಟೀಕಿಸಿದ ವ್ಯಕ್ತಿ
Image
ಅಜ್ಜಿಯ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಗಿಫ್ಟ್ ಕೊಟ್ಟ ಮೊಮ್ಮಗಳು
Image
ಈ ಸಾಫ್ಟ್‌ವೇರ್ ಇಂಜಿನಿಯರ್​​​ನ ತಿಂಗಳ ಖರ್ಚು 4.28 ಲಕ್ಷ ರೂ.
Image
ಭಾರತೀಯನಿಗೆ ಅವಮಾನ ಮಾಡಿದ ಅಮೆರಿಕದ ನಿವಾಸಿ

ಈ ವಿಡಿಯೋದಲ್ಲಿ ಪಾಲಕ್ ರೋಟಿ, ಪನೀರ್ ಕಥಿ ರೋಲ್, ದಾಲ್ ಫ್ರೈ, ಆಲೂ ಗೋಭಿ, ವೆಜ್ ಲಸಾಂಜ ಮುಂತಾದ ಹಲವಾರು ಆರೋಗ್ಯಕರ ಮತ್ತು ಸಸ್ಯಾಹಾರಿ ಖಾದ್ಯಗಳನ್ನು ತಯಾರಿಸುವುದನ್ನು ತೋರಿಸಲಾಗಿದೆ. ಇದು ಏಳು ದಿನಕ್ಕೆ ಎಂದು ಕೂಡ ಹೇಳಲಾಗಿದೆ. ಈ ವಿಡಿಯೋಗೆ ಪ್ರತಿಕ್ರಿಯಿಸಿದ ಬಳಕೆದಾರರೂ ಈಕೆ ಸೋಮಾರಿ ಎಂದು ಹೇಳಿದ್ದಾರೆ. ಇನ್ನು ಕೆಲವು ಟ್ರೋಲ್​​ ಪೇಜ್​​ಗಳು ತನ್ನ ಕುಟುಂಬಕ್ಕೆ ಪ್ರತಿದಿನ ತಾಜಾ ಆಹಾರವನ್ನು ಏಕೆ ಬೇಯಿಸಲು ಸಾಧ್ಯವಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು, ಇಂತಹ ಅಭ್ಯಾಸಗಳು ಹಳಸಿದ ಆಹಾರವನ್ನು ತಿನ್ನುವುದರ ಅನೇಕ ನ್ಯೂನತೆಗಳನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಟಿ ಲಿಶಲ್ಲಿನಿ ಕನರನ್ ಬಟ್ಟೆಯೊಳಗೆ ಕೈ ಹಾಕಿ ಅಸಭ್ಯವಾಗಿ ವರ್ತಿಸಿದ ಅರ್ಚಕ

ಇನ್ನು ಈ ವಿಡಿಯೋಗೆ ಅನೇಕರು ಕಾಮೆಂಟ್​​ ಮಾಡಿದ್ದಾರೆ. ಇದು ಅಮೆರಿಕದಲ್ಲಿ ಸಹಜ, ನೀವು ಎಲ್ಲವನ್ನೂ ಒಬ್ಬಂಟಿಯಾಗಿ ನಿರ್ವಹಿಸುತ್ತಿರುವಾಗ ಊಟದ ತಯಾರಿ ಮಾತ್ರ ಆಯ್ಕೆಯಾಗಿದೆ ಎಂದು ಒಬ್ಬ ಬಳಕೆದಾರ ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ, ಇಲ್ಲಿ ತಮಾಷೆಯೆಂದರೆ ಹೆಚ್ಚಿನ ಕಾಮೆಂಟ್ ಮಾಡುವವರು ಬಹುಶಃ ಅಡುಗೆಮನೆ ಎಲ್ಲಿದೆ ಎಂದು ತಿಳಿದಿರದ ಪುರುಷರು ಎಂದು ಕಾಮೆಂಟ್​​ ಮಾಡಿದ್ದಾರೆ. ತಾಜಾ ಆಹಾರವನ್ನು ಬಯಸುವ ಪ್ರತಿಯೊಬ್ಬರೂ, ದಯವಿಟ್ಟು ಹೋಗಿ ನಿಮ್ಮ ಸ್ವಂತ ಆಹಾರವನ್ನು ಹೇಗೆ ತಯಾರಿಸಬೇಕೆಂದು ಕಲಿಯಿರಿ ಎಂದು ಮತ್ತೊಬ್ಬ ಬಳಕೆದಾರ ಪ್ರತಿಕ್ರಿಯಿಸಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!