Optical Illusion: ಈ ಚಿತ್ರದಲ್ಲಿ 45 ಸಂಖ್ಯೆಗಳ ನಡುವೆ ಅಡಗಿರುವ 54, 55 ಸಂಖ್ಯೆಯನ್ನು 5 ಸೆಕೆಂಡುಗಳಲ್ಲಿ ಹುಡುಕಿ
ಒಗಟಿನ ಚಿತ್ರಗಳನ್ನು ಬಿಡಿಸುವುದೆಂದರೆ ಕೆಲವರಿಗೆ ಇಷ್ಟ. ಹೀಗಾಗಿ ಹೆಚ್ಚಿನವರು ಇಂತಹ ಆಪ್ಟಿಕಲ್ ಇಲ್ಯೂಷನ್, ಬ್ರೈನ್ ಟೀಸರ್ ಚಿತ್ರಗಳತ್ತ ಕಣ್ಣಾಯಿಸುತ್ತಾರೆ. ಇಂತಹ ಒಗಟುಗಳನ್ನು ಬಿಡಿಸುವ ಕ್ರೇಜ್ ಕೆಲವರಲ್ಲಿ ಹೆಚ್ಚಿರುತ್ತದೆ. ಅಂತಹವರಿಗೆ ಇಲ್ಲೊಂದು ಸವಾಲು ಇದ್ದು, ಸೋಶಿಯಲ್ ಮೀಡಿಯಾದಲ್ಲಿ ಕಠಿಣ ಸವಾಲಿನ ಚಿತ್ರವೊಂದು ವೈರಲ್ ಆಗಿದ್ದು, 45 ಸಂಖ್ಯೆಗಳ ನಡುವೆ ಅಡಗಿರುವ 54 ಹಾಗೂ 55 ಸಂಖ್ಯೆಗಳನ್ನು ಐದು ಸೆಕೆಂಡುಗಳಲ್ಲಿ ಹುಡುಕಬೇಕು. ಈ ಸವಾಲನ್ನು ಸ್ವೀಕರಿಸಲು ನೀವು ಸಿದ್ಧವಿದ್ದೀರಾ?.

ಆಪ್ಟಿಕಲ್ ಇಲ್ಯೂಷನ್ (optical illusion), ಬ್ರೈನ್ ಟೀಸರ್ (brain teaser) ಗಳಂತಹ ಒಗಟಿನ ಚಿತ್ರಗಳು ಬಿಡಿಸುವುದೇ ಒಂಥರಾ ಮಜಾವಿರುತ್ತದೆ. ಇದು ಮೆದುಳಿಗೆ ಕೆಲಸ ನೀಡುವುದಲ್ಲದೇ, ನಿಮ್ಮ ಬುದ್ಧಿವಂತಿಕೆ ಹಾಗೂ ಯೋಚನಾಶಕ್ತಿ ಎಷ್ಟಿದೆ ಎಂದು ಪರೀಕ್ಷಿಸಲು ಸಹಾಯ ಮಾಡುತ್ತದೆ. ಈ ಒಗಟಿನ ಚಿತ್ರಗಳು ಮೇಲ್ನೋಟಕ್ಕೆ ಸುಲಭವಾಗಿ ಕಂಡರೂ ಹೆಚ್ಚಿನ ಸಲ ನಿಮ್ಮನ್ನು ಭ್ರಮೆಯಲ್ಲಿ ಸಿಲುಕಿಸಬಹುದು. ಇದೀಗ ಕಷ್ಟಕರವಾದ ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಪ್ಪು ಹಿನ್ನಲೆಯನ್ನು ಹೊಂದಿರುವ ಈ ಚಿತ್ರದಲ್ಲಿ ಬಿಳಿ ಬಣ್ಣದಲ್ಲಿ 45 ಸಂಖ್ಯೆಗಳನ್ನು ಸಾಲಾಗಿ ಬರೆಯಲಾಗಿದೆ. ಈ ಸಂಖ್ಯೆಗಳ ನಡುವೆ 54 ಹಾಗೂ 55 ಸಂಖ್ಯೆಗಳು ಅಡಗಿವೆ. ನಿರ್ದಿಷ್ಟ ಸಮಯದೊಳಗೆ ನೀವು ಇದನ್ನು ಗುರುತಿಸಬೇಕು. ನಿಮ್ಮ ಸಮಯ ಈಗಿನಿಂದಲೇ ಪ್ರಾರಂಭವಾಗುತ್ತದೆ.
@OMGPhilipa ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. 45 ಸಂಖ್ಯೆಗಳ ನಡುವೆ ಅಡಗಿರುವ 54 ಹಾಗೂ 55 ಸಂಖ್ಯೆಗಳನ್ನು ಐದು ಸೆಕೆಂಡುಗಳಲ್ಲಿ ಹುಡುಕಿ ಎಂದು ಬರೆಯಲಾಗಿದೆ. ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಕಪ್ಪು ಹಿನ್ನಲೆಯುಳ್ಳ ಹಾಳೆಯ ಮೇಲೆ 45 ಸಂಖ್ಯೆಗಳನ್ನು ಸಾಲಾಗಿ ಬರೆದಿರುವುದನ್ನು ನೀವು ನೋಡಬಹುದು. ಆದರೆ ಇದರಲ್ಲಿ ಅಡಗಿರುವ 54 ಹಾಗೂ 55 ಸಂಖ್ಯೆಯನ್ನು ಹುಡುಕಬೇಕು ಎನ್ನುವ ಸವಾಲನ್ನು ನೀಡಲಾಗಿದೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
Optical Illusion: Within 5 Seconds Spot The Number 55 and 54 among 45
Let’s go 🤸♀️ pic.twitter.com/oAgcOF4l80
— Charismatic Chioma👓 (@OMAPhilipa) June 9, 2025
ಉತ್ತರ ಇಲ್ಲಿದೆ
ನಿಮಗೆ ಕೊಟ್ಟಿರುವ ಸಮಯ ಐದು ಸೆಕೆಂಡುಗಳು ಮಾತ್ರ. ಆದರೆ ನೀವು ಹತ್ತು ಸೆಕೆಂಡುಗಳಾದರೂ 45 ಸಂಖ್ಯೆಗಳ ನಡುವೆ ಅಡಗಿರುವ 54 ಹಾಗೂ 55 ಸಂಖ್ಯೆಯನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲವೇ? ಹೆಚ್ಚು ಚಿಂತಿಸಬೇಡಿ, ಉತ್ತರವನ್ನು ನಾವೇ ನಿಮಗೆ ಹೇಳುತ್ತೇವೆ. ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ಸರಿಯಾಗಿ ಗಮನಿಸಿ, ಈ ಚಿತ್ರದ ಮೂರನೇ ಸಾಲಿನಲ್ಲಿ 54 ಸಂಖ್ಯೆಯಿದೆ. ಒಂಬತ್ತನೇ ಸಾಲಿನಲ್ಲಿ 55 ಸಂಖ್ಯೆಯೂ ಇರುವುದನ್ನು ನೀವು ಗಮನಿಸಬಹುದು.
ಇದನ್ನೂ ಓದಿ : Optical Illusion: ಈ ಚಿತ್ರದಲ್ಲಿ ಅಡಗಿರುವ ಇಂಗ್ಲಿಷ್ ಪದಗಳನ್ನು 20 ಸೆಕೆಂಡುಗಳಲ್ಲಿ ಹುಡುಕಬಲ್ಲಿರಾ?
ಬಳಕೆದಾರರ ಕಾಮೆಂಟ್‌ಗಳು ಹೀಗಿವೆ
ಜೂನ್ 9 ರಂದು ಶೇರ್ ಮಾಡಲಾದ ಈ ಪೋಸ್ಟ್ ಹಲವಾರು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಮೂರನೇ ಸಾಲಿನ ಮೂರನೇ ಕಾಲಂನಲ್ಲಿ 54 ಹಾಗೂ ಒಂಬತ್ತನೇ ಸಾಲಿನ ಹದಿನಾಲ್ಕನೇ ಕಾಲಂ 55 ಸಂಖ್ಯೆ ಇದೆ ಎಂದಿದ್ದಾರೆ. ಮತ್ತೊಬ್ಬರು , ಇಂತಹ ಒಗಟಿನ ಆಟಗಳನ್ನು ಬಿಡಿಸುವುದು ಖುಷಿ ಕೊಡುತ್ತದೆ. ನಾನು ಈ ಚಿತ್ರದಲ್ಲಿ ಉತ್ತರ ಕಂಡುಕೊಂಡಿದ್ದೇನೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಈ ಚಿತ್ರದಲ್ಲಿ ಉತ್ತರವನ್ನು ಸುಲಭವಾಗಿ ಹುಡುಕಬಹುದು ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:03 pm, Thu, 10 July 25








