Viral: ರಾಜ್ಯ ಸರ್ಕಾರದಿಂದ ಜನರಿಗೆ ಶೀಘ್ರದಲ್ಲಿ ನಿಧಿ ಭಾಗ್ಯ, ಕುಕ್ಕೆ ಸುಬ್ರಹ್ಮಣ್ಯ ರಸ್ತೆಯಲ್ಲಿ ನಿಧಾನವಾಗಿ ಚಲಿಸಿ
ರಾಜ್ಯದ ಅಭಿವೃದ್ಧಿ ಆಗುತ್ತಿಲ್ಲ. ಸರ್ಕಾರ ಯಾವುದೇ ಹೊಸ ಯೋಜನೆಗಳನ್ನು ತಂದಿಲ್ಲ ಎಂದು ಜನ ಆರೋಪ ಮಾಡುತ್ತಿದ್ದಾರೆ. ಈ ಸಮಯದಲ್ಲೇ ಸರ್ಕಾರವನ್ನು ಎಚ್ಚರಿಸಲು ಕರಾವಳಿ ಭಾಗದ ಜನ ಬ್ಯಾನರ್ ಅಭಿಯಾನವನ್ನು ಮಾಡುತ್ತಿದ್ದಾರೆ. ಸಾರ್ವಜನಿಕರ ಸಮಸ್ಯೆಗಳನ್ನು ಕೇಳುವ ಸಮಯ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಇಲ್ಲ. ಹಾಗಾಗಿ ಈ ಬ್ಯಾನರ್ ಹಾಕಿ ಅವರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಈ ವೈರಲ್ ಬ್ಯಾನರ್ನಲ್ಲಿದೆ ಏನಿದೆ ಎಂಬುದನ್ನು ಇಲ್ಲಿ ಹೇಳಲಾಗಿದೆ ನೋಡಿ.

ಕರ್ನಾಟಕದಲ್ಲಿ ಅಭಿವೃದ್ಧಿಯೇ ಆಗುತ್ತಿಲ್ಲ ಎಂದು ಅನೇಕರ ಅಭಿಪ್ರಾಯ. ಆದರೆ ರಾಜ್ಯ ಸರ್ಕಾರ ಈ ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ. ಜನರಿಗೆ ಭಾಗ್ಯಗಳನ್ನು ನೀಡಿ, ರಾಜ್ಯದಲ್ಲಿ ಅಭಿವೃದ್ದಿಯ ಕಡೆಗೆ ಗಮನ ನೀಡುತ್ತಿಲ್ಲ ಎಂಬುದು ಅನೇಕರ ಆರೋಪ. ರಾಜ್ಯದಲ್ಲಿ ಮಳೆಯು ಪ್ರಾರಂಭವಾಗಿದ್ದು, ರಸ್ತೆಗಳು ಗುಂಡಿ ಬಿದ್ದಿದೆ. ಅದರಲ್ಲೂ ಕರವಾಳಿ ಭಾಗದಲ್ಲಿ ಈ ಬಾರಿ ಹೆಚ್ಚು ಮಳೆಯಾಗಿದೆ. ಹೀಗಾಗಿ ಅಲ್ಲಿ ರಸ್ತೆಗಳು ಗುಂಡಿ ಬಿದ್ದು ಸಂಚಾರ ವ್ಯವಸ್ಥೆ ಅಪಾಯದಲ್ಲಿದೆ. ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಹೀಗಾಗಿ ರಸ್ತೆಗಳಲ್ಲಿ ಬಿದ್ದ ಹೊಂಡಗಳ ಬಗ್ಗೆ ಜನ ಟ್ರೋಲ್ ಮಾಡುತ್ತಿದ್ದಾರೆ. ಆದರೆ ಇಲ್ಲೊಂದು ತುಂಬಾ ಸ್ವಾರಸ್ಯಕರವಾದ ಪೋಸ್ಟ್ ಒಂದು ವೈರಲ್ ಆಗಿದೆ. ಈ ಪೋಸ್ಟ್ ಒಂದು ಕಡೆ ಸಾರ್ವಜನಿಕರನ್ನು ಎಚ್ಚರಿಸಿದರೆ, ಇನ್ನೊಂದು ಕಡೆ ಸರ್ಕಾರಕ್ಕೆ ಹಾಗೂ ಜನಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಮಂಗಳೂರಿನ ಕೈಕಂಬದಿಂದ (Kaikamba) ಕುಕ್ಕೆ ಸುಬ್ರಹ್ಮಣ್ಯಕ್ಕೆ ( Kukke Subramanya) ಹೋಗುವ ರಸ್ತೆಯಲ್ಲಿ ಒಂದು ಬ್ಯಾನರ್ ಹಾಕಿದ್ದಾರೆ. ಆ ಬ್ಯಾನರ್ನ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ಪೋಸ್ಟ್ ಎಲ್ಲಾ ಕಡೆ ವೈರಲ್ ಆಗಿದೆ. ಈ ಬಗ್ಗೆ ಅನೇಕರು ಕಾಮೆಂಟ್ ಕೂಡ ಮಾಡಿ. ಸರ್ಕಾರವನ್ನು ಎಚ್ಚರಿಸಲು ಇದೊಂದು ಸೂಪರ್ ಪ್ಲಾನ್ ಎಂದು ಹೇಳಿದ್ದಾರೆ.
ಈ ಪೋಸ್ಟ್ನ್ನು ಸಹನ ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕರ್ನಾಟಕದಲ್ಲಿ ರತ್ನಗಳು. ಕನ್ನಡ ತಿಳಿದಿದ್ದರೆ ಓದಲು ಯೋಗ್ಯವಾಗಿದೆ ಎಂದು ಶೀರ್ಷಿಕೆಯನ್ನು ಕೂಡ ಬರೆದುಕೊಂಡಿದ್ದಾರೆ. ಈ ಬ್ಯಾನರ್ನಲ್ಲಿ ಏನಿದೆ? ಎಚ್ಚರಿಕೆ ಫಲಕ: “ಕೈಕಂಬದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುವ ರಸ್ತೆಯಲ್ಲಿ ನಿಧಿ ಇದೆ ಎಂದು ಯಾರೋ ಮಾಂತ್ರಿಕ ಹೇಳಿದರು. ಈ ರಸ್ತೆಯಲ್ಲಿ ನಿಧಿ ಹುಡುಕಾಟ ನಡೆಯುತ್ತಿರುವ ಬಗ್ಗೆ ಎಚ್ಚೆತ್ತ ರಾಜ್ಯ ಸರ್ಕಾರ, ರಸ್ತೆಯ ಮಧ್ಯದಲ್ಲಿ ದೊಡ್ಡ ಗುಂಡಿಗಳನ್ನು ಅಗೆದು ಅವುಗಳನ್ನು ಅಲ್ಲಿಯೇ ಬಿಟ್ಟಿದೆ. ನಿಧಾನವಾಗಿ ಚಲಿಸಿ” ಎಂಬ ಬ್ಯಾನರ್ನ್ನು ಹಾಕಿದ್ದಾರೆ. ಇದೀಗ ಈ ಬ್ಯಾನರ್ ಎಲ್ಲಾ ಕಡೆ ವೈರಲ್ ಆಗಿದ್ದು. ಅಲ್ಲಿನ ಜನ ಈ ಬ್ಯಾನರ್ ಹಾಕುವ ಮೂಲಕ ಸರ್ಕಾರವನ್ನು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಈ ಚಿತ್ರದಲ್ಲಿ 26ರ ನಡುವೆ ಅಡಗಿರುವ 62 ಸಂಖ್ಯೆಯನ್ನು ಕಂಡುಹಿಡಿಯಬಲ್ಲಿರಾ?
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
😂😂😂🤣🤣🤣. Gems In Karnataka. Worth Reading if you know Kannada pic.twitter.com/vfFhiX756j
— Sahana (@Sahanasatianaat) July 9, 2025
ವೈರಲ್ ಪೋಸ್ಟ್ಗೆ ಅನೇಕರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು, “ROFL… ಇದನ್ನು ಮಾಡಿದವರಿಗೆ ಪ್ರಶಸ್ತಿ ಸಿಗಬೇಕು ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ ಇನ್ನು ಕೆಜಿಎಫ್‌ನಲ್ಲಿ ಚಿನ್ನಕ್ಕಾಗಿ ಅಗೆಯುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ರಾಜ್ಯ ಸರ್ಕಾರದಿಂದ ನಿಧಿ ಭಾಗ್ಯ ಸಿಕ್ಕಿದೆ ಎಂದು ಹೇಳಿದ್ದಾರೆ. ಇನ್ನು ಬೆಂಗಳೂರಿನ ವ್ಯಕ್ತಿಯೊಬ್ಬರು ಅದೇ ಜ್ಯೋತಿಷಿ ಬೆಂಗಳೂರಿನ ರಸ್ತೆಗಳ ಕೆಳಗೆ ನಿಧಿ ಇದೆ ಎಂದು ಭವಿಷ್ಯ ನುಡಿದಂತೆ ಕಾಣುತ್ತಿದೆ, ಹಾಗಾಗಿ ಇಲ್ಲಿಯೂ ಗುಂಡಿಗಳು ಬಿದ್ದಿದೆ ಎಂದು ಹೇಳಿದ್ದಾರೆ. ಇನ್ನು ಕೆಲವರು ಇಂತಹ ಪುಣ್ಯಸ್ಥಳಗಳಿಗೆ ಹೋಗುವ ರಸ್ತೆಗಳನ್ನು ಸರಿ ಮಾಡಬೇಕು ಎಂದು ಅನೇಕರು ಸಲಹೆ ನೀಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:10 pm, Fri, 11 July 25








