AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ವೈದ್ಯರೇ ಪತ್ತೆ ಮಾಡಲು ಆಗದ ಕಾಯಿಲೆ, ಚಾಟ್ ಜಿಟಿಪಿಯಿಂದ ಪತ್ತೆಯಾಯ್ತು, ಹೇಗೆ ಅಂತೀರಾ?

ನಾವಿಂದು ತಂತ್ರಜ್ಞಾನ ದೊಂದಿಗೆ ಬೆಸೆದುಕೊಂಡಿದ್ದೇವೆ. ತಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ತಂತ್ರಜ್ಞಾನಗಳದ್ದೇ ಮೇಲುಗೈ. ಈಗಂತೂ ಎಐ ತಂತ್ರಜ್ಞಾನದಿಂದ ಎಲ್ಲವೂ ಸಾಧ್ಯ ಎನ್ನುವಂತಾಗಿದೆ. ಚಾಟ್ ಜಿಪಿಟಿಯ ಮೂಲಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವುದನ್ನು ನೋಡಿದ್ದೇವೆ. ಆದರೆ ಇದೀಗ ವ್ಯಕ್ತಿಯೊಬ್ಬರು ಅಚ್ಚರಿಕಾರಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಇವರಿಗಿದ್ದ ಆರೋಗ್ಯ ಸಮಸ್ಯೆಯನ್ನು ಪತ್ತೆ ಹಚ್ಚಿದ್ದು ವೈದ್ಯರು ಅಲ್ಲವಂತೆ, ಚಾಟ್ ಜಿಪಿಟಿಯಂತೆ, ಈ ಕುರಿತಾದ ಕುತೂಹಲಕಾರಿ ಪೋಸ್ಟ್ ಇಲ್ಲಿದೆ.

Viral: ವೈದ್ಯರೇ ಪತ್ತೆ ಮಾಡಲು ಆಗದ ಕಾಯಿಲೆ, ಚಾಟ್ ಜಿಟಿಪಿಯಿಂದ ಪತ್ತೆಯಾಯ್ತು, ಹೇಗೆ ಅಂತೀರಾ?
ವೈರಲ್ ಪೋಸ್ಟ್Image Credit source: Nikolas Kokovlis/NurPhoto via Getty Images/ Twitter
ಸಾಯಿನಂದಾ
|

Updated on:Jul 11, 2025 | 5:42 PM

Share

ಇತ್ತೀಚೆಗಿನ ದಿನಗಳಲ್ಲಿ ಜನರು ತಮ್ಮ ಆತ್ಮೀಯ ವ್ಯಕ್ತಿಗಳೊಂದಿಗೆ ಹೆಚ್ಚು ಕನೆಕ್ಟ್ ಆಗುವ ಬದಲು ಈ ತಂತ್ರಜ್ಞಾನಗಳನ್ನೇ ಹೆಚ್ಚು ಅವಲಂಬಿಸಿದ್ದಾರೆ. ಚಾಟ್ ಜಿಪಿಟಿ (Chat GPT) ಈ ಹೆಸರು ಎಲ್ಲರೂ ಕೇಳಿರಬಹುದು. ಏನಾದ್ರು ಸಮಸ್ಯೆಗೆ ಪರಿಹಾರ ಬೇಕಂದ್ರೆ ಅಥವಾ ಸಲಹೆ ಪಡೆಯಬೇಕು ಅಂತಾದ್ರೆ ಮೊದಲು ನೆನಪಾಗೋದು ಚಾಟ್ ಜಿಪಿಟಿ. ಈ ಅಪ್ಲಿಕೇಶನ್ ನಲ್ಲಿ ಸಲಹೆಗಳನ್ನು ಪಡೆದು ಸಮಸ್ಯೆಯಿಂದ ಪಾರಾಗಿರುವ ಸುದ್ದಿಗಳನ್ನು ನೀವು ಕೇಳಿ ಇರ್ತೀರಾ. ಆದರೆ ವ್ಯಕ್ತಿಯೊಬ್ಬರು ಕಳೆದ ಹತ್ತು ವರ್ಷಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಇವರಿಗೆ ಇರುವ ಕಾಯಿಲೆ ಯಾವುದೆಂದು ವೈದ್ಯರಿಗೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಆದರೆ, ಚಾಟ್ ಜಿಪಿಟಿ ಈ ವ್ಯಕ್ತಿಯ ಕಾಯಿಲೆಯನ್ನು ಕೆಲವೇ ಕೆಲವು ಸೆಕೆಂಡುಗಳಲ್ಲಿ ಪತ್ತೆ ಹಚ್ಚಿದೆ. ಈ ಬಗೆಗಿನ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ (social media) ಗಮನ ಸೆಳೆಯುತ್ತಿದೆ. ಈ ಪೋಸ್ಟ್ ನೋಡಿದ ಬಳಕೆದಾರರು ಕೂಡ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

shwetak.ai ಹೆಸರಿನ ಖಾತೆಯಲ್ಲಿ ವ್ಯಕ್ತಿಯೊಬ್ಬರು, Chat GPT 10+ ವರ್ಷ ಹಳೆಯ ಸಮಸ್ಯೆಯನ್ನ ನಿಮಿಷಗಳಲ್ಲಿ ಪರಿಹರಿಸಿದೆ. ವೈದ್ಯರು ಅದನ್ನು ಕಂಡುಹಿಡಿಯಲಾಗಲಿಲ್ಲ” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ಕಳೆದ 10 ವರ್ಷಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದೆ. ಈ ಸಮಸ್ಯೆಯ ಬಗ್ಗೆ ಅನೇಕ ವೈದ್ಯರನ್ನು ಸಂಪರ್ಕಿಸಿದ್ದೆ, ಆದರೆ ವೈದ್ಯರು ಯಾವುದೇ ಪರಿಹಾರವನ್ನು ನೀಡಲಿಲ್ಲ. ಆದರೆ ಚಾಟ್ ಜಿಪಿಟಿ ಮೂಲಕ ಸರಿಯಾದ ಪರಿಹಾರ ಸಿಕ್ಕಿತು. ಬೆನ್ನುಮೂಳೆಯ MRI, CT ಸ್ಕ್ಯಾನ್, ರಕ್ತ ಪರೀಕ್ಷೆಗಳು ಮಾಡಿಸಿಕೊಂಡಿದ್ದೇನೆ.

ನಾನು ದೇಶದ ಅನೇಕ ಪ್ರಮುಖ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದೇನೆ. ನರವಿಜ್ಞಾನಿ ಸೇರಿದಂತೆ ಅನೇಕ ತಜ್ಞರನ್ನು ಸಂಪರ್ಕಿಸಿದರೂ, ನನ್ನ ಸಮಸ್ಯೆಯನ್ನು ಸರಿಯಾಗಿ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ನಾನು ಕ್ರಿಯಾತ್ಮಕ ಆರೋಗ್ಯ ಪರೀಕ್ಷೆಯನ್ನು ಮಾಡಿಸಿಕೊಂಡೆ, ಅದು ನನಗೆ ಹೋಮೋಜೈಗಸ್ A1298C MTHFR ರೂಪಾಂತರವಿದೆ ಎಂದು ಬಹಿರಂಗಪಡಿಸಿತು. ಈ ಸಮಸ್ಯೆ ಜನಸಂಖ್ಯೆಯ ಕೇವಲ 7-12 ಪ್ರತಿಶತದಷ್ಟು ಜನರಲ್ಲಿ ಮಾತ್ರ ಕಂಡುಬರುತ್ತದೆ ಎಂದು ವೈದ್ಯರು ತಿಳಿಸಿದರು.

ಇದನ್ನೂ ಓದಿ
Image
ನಡುರಸ್ತೆಯಲ್ಲೇ ತಂದೆ ಮಗನ ಹೊಡೆದಾಟ
Image
ಪತ್ನಿಯನ್ನು ಹೊಗಳಿದ್ದನ್ನು ನೋಡಿ ಕೆಫೆ ಸಿಬ್ಬಂದಿ ಮೇಲೆ ಗರಂ ಆದ ಪತಿ
Image
7 ದಿನಕ್ಕಾಗುವಷ್ಟು ಅಡುಗೆಯನ್ನು ಒಂದೇ ದಿನ ಮಾಡಿದ ಮಹಿಳೆ
Image
ರೈಲ್ವೆ ಹಳಿ ಮೇಲೆ ಮರಿಗೆ ಜನ್ಮ ನೀಡಿದ ಆನೆ : ಎರಡು ಗಂಟೆ ಸ್ಥಗಿತಗೊಂಡ ರೈಲು

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

View on Threads

ಆದರೆ ಈ ಆರೋಗ್ಯ ಸಂಬಂಧಿತ ಲಕ್ಷಣಗಳು ಮತ್ತು ಪ್ರಯೋಗಾಲಯ ವರದಿಯನ್ನು Chat GPT ಯಲ್ಲಿ ನೋಂದಾಯಿಸಿದಾಗ ಈ ರೂಪಾಂತರದ ಬಗ್ಗೆ ತಿಳಿದುಕೊಂಡೆ. ಈ ಸಮಸ್ಯೆ MTHFR ರೂಪಾಂತರಕ್ಕೆ ಸಂಬಂಧಿಸಿದೆ ನನ್ನ ದೇಹದಲ್ಲಿ B12 ಮಟ್ಟಗಳು ಸಾಮಾನ್ಯವಾಗಿದ್ದರೂ, ಈ ರೂಪಾಂತರದಿಂದಾಗಿ, ದೇಹವು B12 ಅನ್ನು ಸರಿಯಾಗಿ ಬಳಸಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿಯೇ Chat GPT ನನಗೆ ಪೂರಕಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿತು. ಕೊನೆಗೂ ಚಾಟ್ ಜಿಪಿಟಿ ಮೂಲಕ ಪರಿಹಾರ ಸಿಕ್ಕಿತು ಎಂದು ಇಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ : Viral: 2BHK ಮನೆ, ಸಿಂಪಲ್​​ ಲೈಫ್, ನಿವೃತ್ತಿ ವೇಳೆಗೆ 4.7 ಕೋಟಿ ರೂ ಸಂಪಾದನೆ

ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಚಾಟ್ ಜಿಪಿಟಿ ಬಹಳ ಜ್ಞಾನವುಳ್ಳದ್ದಾಗಿರಬೇಕು. ಎಐ ತಂತ್ರಜ್ಞಾನವು ವೈದ್ಯರಿಗೆ ಬಹಳ ಸಹಾಯಕವಾಗಬಹುದು ಎಂದಿದ್ದಾರೆ. ಆರೋಗ್ಯದ ವಿಚಾರದಲ್ಲಿ ಚಾಟ್ ಜಿಪಿಟಿ ಸಲಹೆಗಳನ್ನು ಸಂಪೂರ್ಣವಾಗಿ ಸ್ವೀಕರಿಸುವುದು ಸರಿಯಲ್ಲ, ಇದು ಆರೋಗ್ಯದ ಮೇಲೆ ಬಹುದೊಡ್ಡ ಹೊಡೆತವನ್ನು ನೀಡಬಹುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, ಸಲಹೆಗಳನ್ನು ಪಡೆಯುವುದು ಒಳ್ಳೆಯದೇ ಆದರೆ ಕಣ್ಣು ಮುಚ್ಚಿ ನಂಬುವುದು ಸರಿಯಲ್ಲ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:41 pm, Fri, 11 July 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ