AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಟ್ರಾಫಿಕ್ ಜಾಮ್ ನಡುವೆ ಸಮಯವನ್ನು ಸರಿಯಾಗಿ ಬಳಸಿಕೊಳ್ಳುತ್ತಿರುವ ಬೆಂಗಳೂರಿನ ಉದ್ಯಮಿ

ಇಂದಿನ ವೇಗದ ಹಾಗೂ ಸ್ಪರ್ಧಾತ್ಮಕ ಯುಗದಲ್ಲಿ ಸಮಯ ಎನ್ನುವುದು ಬಹಳ ಮುಖ್ಯ. ಹೀಗಾಗಿ ಬೆಂಗಳೂರು ಮೂಲದ ಉದ್ಯಮಿಯೊಬ್ಬರು ಪ್ರಯಾಣದ ನಡುವೆಯೂ ಒಂದೊಂದು ನಿಮಿಷವನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳುತ್ತಾರೆ ಎನ್ನುವುದಕ್ಕೆ ಈ ಪೋಸ್ಟ್ ಸಾಕ್ಷಿಯಾಗಿದೆ. ಇವರು ಸಮಯವನ್ನು ಬಳಸಿಕೊಳ್ಳುವ ರೀತಿ ನೋಡಿದ್ರೆ ನಿಮಗೆ ಅಚ್ಚರಿಯಾಗೋದು ಪಕ್ಕಾ. ಸುಖಾಸುಮ್ಮನೆ ಸಮಯ ಹಾಳು ಮಾಡದೇ ಸೃಜನಶೀಲ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಈ ಕುರಿತಾದ ಪೋಸ್ಟ್ ಇಲ್ಲಿದೆ ನೋಡಿ

Viral: ಟ್ರಾಫಿಕ್ ಜಾಮ್ ನಡುವೆ ಸಮಯವನ್ನು ಸರಿಯಾಗಿ ಬಳಸಿಕೊಳ್ಳುತ್ತಿರುವ ಬೆಂಗಳೂರಿನ ಉದ್ಯಮಿ
ಸಾಂದರ್ಭಿಕ ಚಿತ್ರImage Credit source: Getty Images
ಸಾಯಿನಂದಾ
|

Updated on: Jul 11, 2025 | 2:50 PM

Share

ಬೆಂಗಳೂರು (Bengaluru) ಎಂದರೆ ಮೊದಲು ನೆನಪಿಗೆ ಬರುವುದೇ ಟ್ರಾಫಿಕ್. ಅಪ್ಪಿತಪ್ಪಿಯೂ ಈ ಟ್ರಾಫಿಕ್ ನಲ್ಲಿ ಸಿಕ್ಕಿಹಾಕಿಕೊಂಡರೆ ಒಂದು ಗಂಟೆಗೂ ಹೆಚ್ಚು ಟ್ರಾಫಿಕ್ ನಲ್ಲೇ ಕಳೆಯಬೇಕು. ಹೀಗಾಗಿ ಬೆಂಗಳೂರು ಮೂಲದ ಉದ್ಯಮಿ ಅಮೃತ್ ಜೋಶಿ (Amrut Joshi) ಟೈಮ್ ವೇಸ್ಟ್ ಮಾಡದೇ ಈ ಟ್ರಾಫಿಕ್ ನಡುವೆಯೂ ಹೇಗೆ ಪ್ರತಿ ನಿಮಿಷವನ್ನು ಬಳಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ. ಅವರು ತಮ್ಮ ಪ್ರಯಾಣದುದ್ದಕ್ಕೂ ಸಮಯವನ್ನು ವ್ಯರ್ಥ ಮಾಡದೇ ಏನೆಲ್ಲಾ ಸೃಜನಶೀಲ ಮಾರ್ಗಗಳನ್ನು ಅಳವಡಿಸಿಕೊಂಡಿದ್ದಾರೆ ಎಂದು ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನೋಡಿ ಬಳಕೆದಾರರು ಇದು ನಿಜಕ್ಕೂ ಒಳ್ಳೆಯ ಐಡಿಯಾ ಎಂದಿದ್ದಾರೆ.

ಬೆಂಗಳೂರು ಮೂಲದ ಉದ್ಯಮಿ ಹಾಗೂ ಸಂಸ್ಥಾಪಕ ಅಮೃತ್ ಜೋಶಿ ತಮ್ಮ ಲಿಂಕ್ಡ್ ಇನ್ ಖಾತೆಯಲ್ಲಿ ತಮ್ಮ ವೈಯುಕ್ತಿಕ ಟ್ರಾಫಿಕ್ ಚಾಟ್ ಶೀಟ್ ಶೇರ್ ಮಾಡಿಕೊಂಡಿದ್ದು ಈ ಸಮಯವನ್ನು ಹೇಗೆಲ್ಲಾ ಉಪಯೋಗಿಸಿಕೊಳ್ಳುತ್ತೇನೆ ಎನ್ನುವುದನ್ನು ಉಲ್ಲೇಖಿಸಿದ್ದಾರೆ. ಇದು ನನ್ನ ಹೆಬ್ಬಾಳ ಹಾಗೂ ವೈಟ್ ಫೀಲ್ಡ್ ನಡುವಿನ 80 ನಿಮಿಷಗಳ ಸುದೀರ್ಘ ಪ್ರಯಾಣ. ಈ ಸಮಯವನ್ನು ಉತ್ಪಾದಕವನ್ನಾಗಿ ಸರಳ ಹಾಗೂ ಪರಿಣಾಮಕಾರಿ ಮಾರ್ಗಗಳ ಪಟ್ಟಿ ಹೀಗಿವೆ. ಬೆಂಗಳೂರಿನ ಸಂಚಾರವನ್ನು ಸುಗಮಗೊಳಿಸುವುದು ಸವಾಲಿನ ಕೆಲಸವಾಗುತ್ತಿದೆ. ಹೀಗಾಗಿ ಈ ಸಮಯವನ್ನು ಸರಿಯಾಗಿ ಬಳಸಿ ಗಳಿಕೆಯನ್ನಾಗಿ ಪರಿವರ್ತಿಸಲು ನಾನು ಕೆಲವು ಮಾರ್ಗಗಳನ್ನು ಕಂಡುಕೊಂಡಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ : Viral: ರಾಜ್ಯ ಸರ್ಕಾರದಿಂದ ಜನರಿಗೆ ಶೀಘ್ರದಲ್ಲಿ ನಿಧಿ ಭಾಗ್ಯ, ಕುಕ್ಕೆ ಸುಬ್ರಹ್ಮಣ್ಯ ರಸ್ತೆಯಲ್ಲಿ ನಿಧಾನವಾಗಿ ಚಲಿಸಿ

ಇದನ್ನೂ ಓದಿ
Image
ನಡುರಸ್ತೆಯಲ್ಲೇ ತಂದೆ ಮಗನ ಹೊಡೆದಾಟ
Image
ಪತ್ನಿಯನ್ನು ಹೊಗಳಿದ್ದನ್ನು ನೋಡಿ ಕೆಫೆ ಸಿಬ್ಬಂದಿ ಮೇಲೆ ಗರಂ ಆದ ಪತಿ
Image
7 ದಿನಕ್ಕಾಗುವಷ್ಟು ಅಡುಗೆಯನ್ನು ಒಂದೇ ದಿನ ಮಾಡಿದ ಮಹಿಳೆ
Image
ರೈಲ್ವೆ ಹಳಿ ಮೇಲೆ ಮರಿಗೆ ಜನ್ಮ ನೀಡಿದ ಆನೆ : ಎರಡು ಗಂಟೆ ಸ್ಥಗಿತಗೊಂಡ ರೈಲು

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

Viral Post

 

ಓದುವುದರಿಂದ ಹಿಡಿದು ಒಂದು ಸಣ್ಣ ನಿದ್ರೆಯವರೆಗೂ ಈ ಪ್ರಯಾಣದ ಸಮಯವನ್ನು ವೈಯುಕ್ತಿಕ ಬಿಡುವಿನ ಸಮಯವಾಗಿ ಹೇಗೆ ಪರಿವರ್ತಿಸಿಕೊಳ್ಳುತ್ತಾರೆ ಎನ್ನುವುದನ್ನು ನೀವಿಲ್ಲಿ ನೋಡಬಹುದು. ಟೆಕ್ ಕ್ರಚ್, ಕ್ರಿಯಿಂಫೋ ಹಾಗೂ ರಾಜಕೀಯ ಜೀವನಚರಿತ್ರೆಗಳಿಗೆ ಹೆಚ್ಚು ಆದ್ಯತೆ ನೀಡುವ ಮೂಲಕ ಅದನ್ನೇ ಹೆಚ್ಚು ಈ ಸಮಯದಲ್ಲಿ ಓದುತ್ತೇವೆ. ಸ್ನೇಹಿತರು, ಗ್ರಾಹಕರು ಹಾಗೂ ಸಹೋದ್ಯೋಗಿಗಳ ಜೊತೆಗೆ ಫೋನ್ ಕಾಲ್ ಹಾಗೂ ದೇಹದ ಶಕ್ತಿ ಕಡಿಮೆಯಾದಾಗ ಒಂದು ಸಣ್ಣ ನಿದ್ದೆ ಮಾಡುತ್ತೇನೆ ಎನ್ನುವ ಇವರು ಸಂಚಾರದ ವೇಳೆ ಸಮಯ ವ್ಯರ್ಥ ಮಾಡುವ ಅಗತ್ಯವಿಲ್ಲ ಎನ್ನುತ್ತಾ ಈ ಟ್ರಾಫಿಕ್ ನಡುವೆ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂದು ಸಲಹೆ ನೀಡಿದ್ದಾರೆ. ಇವರ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಟೈಮ್ ಈ ರೀತಿ ಬಳಸಿಕೊಳ್ಳಬಹುದೆಂದು ನಮಗೆ ತಿಳಿದೇ ಇರಲಿಲ್ಲ, ಒಳ್ಳೆಯ ಸಲಹೆಗಳು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ