Viral: ಬೆಂಗಳೂರಿಗರೇ, ಓಲಾದಲ್ಲಿ ಆಟೋ ಬುಕ್ ಮಾಡೋ ಬದಲು ಸೆಡಾನ್ ಕಾರ್ ಬುಕ್ ಮಾಡೋದೇ ಬೆಸ್ಟ್
ಬೆಂಗಳೂರು ಸೇರಿದಂತೆ ದೊಡ್ಡ ದೊಡ್ಡ ನಗರಗಳಲ್ಲಿ ಆಟೋ ಸೇರಿದಂತೆ ಟ್ಯಾಕ್ಸಿ ಬುಕ್ ಮಾಡಲು ರೈಡ್ ಹೇಲಿಂಗ್ ಅಪ್ಲಿಕೇಶನ್‌ಗಳನ್ನು ಬಳಸುವವರೇ ಹೆಚ್ಚು. ಆದರೆ ಇದೀಗ ಬೆಂಗಳೂರಿನ ವ್ಯಕ್ತಿಯೊಬ್ಬರು ಓಲಾದಲ್ಲಿ ಆಟೋ ಬುಕ್ ಮಾಡುವುದು ಎಷ್ಟು ದುಬಾರಿ ಎನ್ನುವುದನ್ನು ಬಹಿರಂಗ ಪಡಿಸಿದ್ದಾರೆ. ಸೆಡಾನ್ ಕಾರ್ ಬುಕಿಂಗ್‌ಗಿಂತಲೂ ಆಟೋ ಬುಕಿಂಗ್ ತುಂಬಾನೇ ದುಬಾರಿ, ದಿನನಿತ್ಯದ ಓಡಾಟಕ್ಕಾಗಿ ಆಟೋವನ್ನೇ ಅವಲಂಬಿಸಿರುವ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದೆ ಎನ್ನುವ ವಿಚಾರವನ್ನು ತಿಳಿಸಿದ್ದಾರೆ. ಈ ಕುರಿತಾದ ಪೋಸ್ಟ್ ಇಲ್ಲಿದೆ

ಈಗೇನಿದ್ದರೂ ಎಲ್ಲವೂ ಡಿಜಿಟಲ್ ಮಯವಾಗಿದೆ. ಅದರಲ್ಲಿ ಈ ದೊಡ್ಡ ದೊಡ್ಡ ನಗರಗಳಲ್ಲಿ ಆಟೋ, ಟ್ಯಾಕ್ಸಿ ಬುಕ್ ಮಾಡಲು ಆ್ಯಪ್‌ಗಳನ್ನು ಅವಲಂಬಿಸಿದವರೇ ಹೆಚ್ಚು. ಆದರೆ ಮಾಯಾನಗರಿ ಬೆಂಗಳೂರಿನಲ್ಲಿ ಆ್ಯಪ್ (Apps) ಮೂಲಕ ಆಟೋರಿಕ್ಷಾಗಳನ್ನು ಬುಕ್ ಮಾಡುವ ಪ್ರಯಾಣಿಕರು ಆ್ಯಪ್ ಆಧಾರಿತ ಆಟೋ ಸೇವೆಗಳು ಎಷ್ಟು ದುಬಾರಿ ಎಂದು ಹೇಳುವುದನ್ನು ನೀವು ಕೇಳಿರಬಹುದು. ಇದಕ್ಕೆ ಸಂಬಂಧಿಸಿದ ಪೋಸ್ಟ್‌ಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಆದರೆ ಇದೀಗ ಬೆಂಗಳೂರಿನ (Bengaluru) ವ್ಯಕ್ತಿಯೊಬ್ಬರು ಓಲಾದಲ್ಲಿ ಆಟೋ ಬುಕ್ ಮಾಡುವ ಬದಲು ಸೆಡಾನ್ ಕಾರು ಬುಕ್ ಮಾಡಿದ್ರೆ ಒಳ್ಳೆಯದು ಎಂದಿದ್ದಾರೆ. ಆಟೋ ಬುಕಿಂಗ್ ಎಷ್ಟು ದುಬಾರಿ ಎನ್ನುವುದರ ಬಗ್ಗೆ ಇಲ್ಲಿ ತೋರಿಸುವ ಮೂಲಕ ಆಟೋ ಬುಕ್ ಮಾಡುವ ಮುನ್ನ ಈ ಬಗ್ಗೆ ನಿಮಗೆ ತಿಳಿದಿರಲಿ ಎಂದು ಹೇಳಿದ್ದಾರೆ.
r/Bengaluru ರೆಡ್ಡಿಟ್ ಖಾತೆಯಲ್ಲಿ ವ್ಯಕ್ತಿಯೊಬ್ಬರು ಓಲಾ ಅಪ್ಲಿಕೇಶನ್ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದು, ಓಲಾದಲ್ಲಿ ಆಟೋ ಸೇವೆ ಸೆಡಾನ್‌ಗಿಂತ ಹೆಚ್ಚು ದುಬಾರಿಯಾಗಿದೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಆಟೋ ಬುಕಿಂಗ್ ಹಾಗೂ ಸೆಡಾನ್ ಕಾರು ಬುಕಿಂಗ್ ದರವನ್ನು ಇಲ್ಲಿ ಸ್ಪಷ್ಟವಾಗಿ ನೋಡಬಹುದು. ಕ್ರಮಿಸುವ ದೂರ ಒಂದೇ ಆಗಿದ್ದರೂ ಇಲ್ಲಿ ಸೆಡಾನ್ ಕಾರ್‌ಗಳಿಂದ ಆಟೋ ರೈಡ್‌ನ ಬೆಲೆಯೇ ದುಬಾರಿಯಾಗಿದೆ. ಆಟೋ ದರ 530 ರೂ ಆದರೆ, ಅದೇ ಸೆಡಾನ್ ಕಾರಿನ ದರ 521 ರೂ ಆಗಿದೆ.
ಇದನ್ನೂ ಓದಿ :Video: ದೇವರ ಹೆಸರಿನಲ್ಲಿ ಹಣ ವಸೂಲಿ ಮಾಡ್ತಾರೆ, ಇಂತವರನ್ನು ಕಂಡ್ರೆ ನೀವು ಹುಷಾರಾಗಿರಿ ಎಂದ ಬೆಂಗಳೂರಿನ ಯುವತಿ
ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಈ ಪೋಸ್ಟ್ ನೋಡಿ ಬಳಕೆದಾರರಲ್ಲಿ ಕೆಲವರು ತಮಗಾದ ಅನುಭವವನ್ನು ಹಂಚಿಕೊಂಡರೆ, ಇನ್ನು ಕೆಲವರು ಈ ರೀತಿ ಗ್ರಾಹಕರ ಜೇಬಿಗೆ ಕತ್ತರಿ ಹಾಕುವ ಆಟೋ ಸೇವೆಗಳ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು, ಸ್ವಂತ ವಾಹನ ಇಲ್ಲದವರು ದಯವಿಟ್ಟು ಸ್ಕೂಟಿ ಖರೀದಿಸಿ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರ, ಏನು ಆಶ್ಚರ್ಯ ಪಡಬೇಕಾಗಿಲ್ಲ. ಈ ಅಪ್ಲಿಕೇಶನ್‌ಗಳಲ್ಲಿ ಆಟೋಗಳು ದುಬಾರಿಯಾಗಿವೆ. ಗ್ರಾಹಕರಿಂದ ಹೆಚ್ಚುವರಿ ಹಣವನ್ನು ವಸೂಲಿ ಮಾಡುತ್ತಿವೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನಾನು ಆಟೋ ಬುಕ್ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದೇನೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








