AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ನಮ್ಮವರಿಗೆ ನಾಗರಿಕ ಪ್ರಜ್ಞೆ ಇಲ್ಲ, ಹಾಗಾಗಿ ಭಾರತ ಹೀಗಿದೆ ಎಂದ ಭಾರತೀಯ ವ್ಲಾಗರ್

ನಾವೆಲ್ಲರೂ ಶಿಕ್ಷಣ ಪಡೆದು ವಿದ್ಯಾವಂತರೇನು ಆಗಿದ್ದೇವೆ. ಸಾರ್ವಜನಿಕ ಸ್ಥಳಗಳನ್ನು ಹೇಗೆ ಸ್ವಚ್ಛವಾಗಿಟ್ಟುಕೊಳ್ಳ ಬೇಕು ಎನ್ನುವ ಕನಿಷ್ಠ ಪ್ರಜ್ಞೆಯೂ ನಮಗಿಲ್ಲ. ಆದರೆ ಇದೀಗ ಭಾರತೀಯ ವ್ಲಾಗರ್ ಒಬ್ಬರು ವಿಡಿಯೋದಲ್ಲಿ ಹಾಂಗ್ ಕಾಂಗ್‌ನ ಸ್ವಚ್ಛತೆಯನ್ನು ಭಾರತದ ನಗರಗಳಿಗೆ ಹೋಲಿಸಿದ್ದಾರೆ. ಈ ವೇಳೆಯಲ್ಲಿ ವಿದೇಶವು ಇಷ್ಟೊಂದು ಸ್ವಚ್ಛವಾಗಿರಲು ಕಾರಣವೇನು ಎನ್ನುವುದನ್ನು ಇಲ್ಲಿ ತಿಳಿಸಿದ್ದಾರೆ. ಈ ಕುರಿತಾದ ವಿಡಿಯೋ ಇಲ್ಲಿದೆ.

Video: ನಮ್ಮವರಿಗೆ ನಾಗರಿಕ ಪ್ರಜ್ಞೆ ಇಲ್ಲ, ಹಾಗಾಗಿ ಭಾರತ ಹೀಗಿದೆ ಎಂದ ಭಾರತೀಯ ವ್ಲಾಗರ್
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on:Jul 22, 2025 | 2:44 PM

Share

ನಾವೆಲ್ಲರೂ ಮಾತಿಗೆ ಮಾತು ಸ್ವಚ್ಛತೆಯ ಬಗ್ಗೆ ಮಾತನಾಡುತ್ತೇವೆ. ಆದರೆ ನಮ್ಮ ಭಾರತೀಯ ಮನಸ್ಥಿತಿ ಹೇಗಿದೆಯೆಂದರೆ ನಮ್ಮ ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶ ಸ್ವಚ್ಛವಾಗಿದ್ದರೆ ಸಾಕು. ಆದರೆ ರಸ್ತೆ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛವಾಗಿಲ್ಲದಿದ್ದರೆ ನಮಗೇನು ಎನ್ನುವವರೇ ಹೆಚ್ಚು. ಭಾರತೀಯ ವ್ಲಾಗರ್ ಸಮಲ್ (Samal) ಹಾಂಗ್ ಕಾಂಗ್‌ ಗೆ ಭೇಟಿ ನೀಡಿದ್ದು, ಇಲ್ಲಿನ ಸ್ಥಳಗಳನ್ನು ವೀಕ್ಷಿಸುತ್ತ, ವಿದೇಶದಲ್ಲಿ ಸಾರ್ವಜನಿಕ ಸ್ಥಳಗಳು, ನದಿಗಳು ಎಷ್ಟು ಸ್ವಚ್ಛವಾಗಿದೆ. ಇಲ್ಲಿನ ಜನರು ಸ್ವಚ್ಛತೆಗೆ ಎಷ್ಟು ಗಮನ ಕೊಡುತ್ತಾರೆ ಎಂದು ವಿವರಿಸಿದ್ದಾರೆ. ಇದೇ ವೇಳೆ ಹಾಂಗ್ ಕಾಂಗ್‌ನ (Hong Kong) ಸ್ವಚ್ಛತೆಯನ್ನು ಭಾರತೀಯ ನಗರಗಳಿಗೆ ಹೋಲಿಸಿದ್ದು, ಭಾರತೀಯರು ಸ್ವಚ್ಛತೆಯ ಬಗ್ಗೆ ಗಮನ ಕೊಡುತ್ತಿಲ್ಲ ಎನ್ನುವುದನ್ನು ನೇರವಾಗಿ ಹೇಳಿದ್ದಾರೆ.

travelwithsamalvlogs ಹೆಸರಿನ ಖಾತೆಯಲ್ಲಿ ಭಾರತೀಯ ವ್ಲಾಗರ್ ಸಮಲ್ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಇವರು ಹಾಂಗ್ ಕಾಂಗ್‌ನ ಸ್ವಚ್ಛವಾದ ನದಿ ತೀರದಲ್ಲಿ ನಡೆದುಕೊಂಡು ಹೋಗುತ್ತಾ, ವಿದೇಶಗಳು ಹೆಚ್ಚು “ಅಭಿವೃದ್ಧಿ ಹೊಂದಿದವು” ಎಂದು ಭಾವಿಸಲು ಕಾರಣವೇನು ಎನ್ನುವುದನ್ನು ವಿವರಿಸುವುದನ್ನು ಕಾಣಬಹುದು. ಅದಲ್ಲದೇ, ನಮ್ಮ ನಗರಗಳನ್ನು ಇದನ್ನಾಗಿ ಪರಿವರ್ತಿಸಲು ನಾವು ಬಯಸಿದರೆ, ನಮಗೆ ಬೇಕಾಗಿರುವುದು ಸರ್ಕಾರ ಮತ್ತು ಜನರ ಬೆಂಬಲ. ನಮಗೆ ಎತ್ತರದ ಕಟ್ಟಡಗಳು, ಹಚ್ಚ ಹಸಿರಾದ ಪರಿಸರ ಮತ್ತು ನದಿಗಳಿವೆ ಎಂದು ಹೇಳುವುದನ್ನು ನೀವಿಲ್ಲಿ ನೋಡಬಹುದು.

ಇದನ್ನೂ ಓದಿ
Image
ಓಲಾದಲ್ಲಿ ಆಟೋ ಬುಕ್ ಮಾಡೋ ಬದಲು ಸೆಡಾನ್ ಕಾರ್ ಬುಕ್ ಮಾಡೋದೇ ಬೆಸ್ಟ್
Image
ದೇವರ ಹೆಸರಿನಲ್ಲಿ ಹಣ ವಸೂಲಿ ಮಾಡ್ತಾರೆ, ಈ ಜನರಿಂದ ನೀವು ದೂರವಿರಿ
Image
ವಿಚ್ಛೇದಿತ ಮಹಿಳೆಯರಿಗೆ ರಿಲ್ಯಾಕ್ಸ್ ನೀಡುವ ವಿಶೇಷ ಡಿವೋರ್ಸ್ ಕ್ಯಾಂ
Image
ಗ್ರಾಹಕರಿಗೆ ವಿಶೇಷ ಸೂಚನೆ : ಚಹಾ ಅಂಗಡಿಯ ಗೋಡೆಯ ಮೇಲೆ ವಿಶಿಷ್ಟ ಪೋಸ್ಟರ್

ವಿದೇಶಕ್ಕೂ ಹಾಗೂ ಭಾರತಕ್ಕೂ ಇರುವ ಒಂದೇ ವ್ಯತ್ಯಾಸವೆಂದರೆ ಸ್ವಚ್ಛತೆ ಮತ್ತು ನಾಗರಿಕ ಪ್ರಜ್ಞೆ. ಹೌದು, ಇಲ್ಲಿನ ರಸ್ತೆಗಳು ಸ್ವಚ್ಛವಾಗಿವೆ. ಹಚ್ಚ ಹಸಿರಾದ ಗಿಡಗಳು ಹಾಗೂ ಈ ಗಿಡಗಳಲ್ಲಿ ಹೂವುಗಳು ಮಾತ್ರ ಇರುತ್ತವೆ, ಬಿಸಾಡಲಾದ ಗುಟ್ಕಾ ಪ್ಯಾಕೆಟ್‌ಗಳಲ್ಲ. ಹೂವಿನ ಬಣ್ಣವನ್ನು ಬದಲಾಯಿಸಲು ಯಾರೂ ಅವುಗಳ ಮೇಲೆ ಪಾನ್ ಮಸಾಲವನ್ನು ಉಗುಳಿಲ್ಲ. ಯಾರೂ ಹೂವುಗಳನ್ನು ಕೀಳುವುದಿಲ್ಲ ಸಸ್ಯಗಳನ್ನು ಕದಿಯುವುದಿಲ್ಲ ಎಂದು ನಮ್ಮ ಭಾರತೀಯರು ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇಲ್ಲಿನ ನದಿಗಳು ಕೂಡ ಅಷ್ಟೇ ಸ್ವಚ್ಛವಾಗಿವೆ, ಅವುಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ತೇಲುತ್ತಿಲ್ಲ. ಎಲ್ಲಿಯೂ ಕಸ ಕಾಣುತ್ತಿಲ್ಲ. ನಾವು ಇಲ್ಲಿಗೆ ಬರಲು ತುಂಬಾ ಹಣ ಖರ್ಚು ಮಾಡುತ್ತೇವೆ. ಈ ದೇಶಗಳಿಂದ ಕಲಿಯುವ ಮೂಲಕ ನಾವು ಇದನ್ನು ನಮ್ಮ ಮನೆಯಲ್ಲಿಯೂ ಪುನರಾವರ್ತಿಸಬಹುದು. ಇವು ದೊಡ್ಡ ಸಮಸ್ಯೆಗಳಾಗಿ ಕಾಣದಿರಬಹುದು ಆದರೆ ಇಂತಹ ಸಣ್ಣ ಪುಟ್ಟ ವಿಚಾರಗಳೇ ನಮ್ಮ ಭಾರತವನ್ನು ಹಿಂದಕ್ಕೆ ತಳ್ಳುತ್ತಿವೆ ಎಂದು ಕಟುವಾಸ್ತವವನ್ನು ಏನಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ :Viral: ಹನಿಮೂನ್​​ಗೆ ಹೋಗಿ ಬೆಡ್​​​ ಮೇಲೆ ಮೂತ್ರ ಮಾಡಿದ ಉದ್ಯಮಿ

ಈ ವಿಡಿಯೋವೊಂದು ನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರೊಬ್ಬರು, ಕನಿಷ್ಠ ನಾಗರಿಕ ಪ್ರಜ್ಞೆ ಇರುವುದು ಮುಖ್ಯ ಎಂದಿದ್ದಾರೆ. ಇನ್ನೊಬ್ಬರು, ಭಾರತದಲ್ಲಿ ಈ ರೀತಿ ಪುನರಾವರ್ತನೆಯಾಗಬೇಕೆಂದು ನಾನು ಬಯಸುತ್ತೇನೆ ಆದರೆ ನಮಗೆ ನಾಗರಿಕ ಪ್ರಜ್ಞೆ ಇಲ್ಲ. ಜಾತಿ, ಧರ್ಮ ಮತ್ತು ಭಾಷೆಯ ಬಗ್ಗೆ ಹೋರಾಡುವುದರಲ್ಲಿ ನಾವು ತುಂಬಾ ಕಾರ್ಯನಿರತರಾಗಿದ್ದು, ಹೀಗಾಗಿ ಈ ವಿಷಯಗಳ ಮೇಲೆ ಕೇಂದ್ರೀಕರಿಸಲು ಸಮಯವಿಲ್ಲ ಎಂದು ವ್ಯಂಗ್ಯವಾಗಿ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಸತ್ಯವಾದ ಮಾತು, ಭಾರತೀಯರಿಗೆ ನಾಗರಿಕ ಪ್ರಜ್ಞೆಯೇ ಇಲ್ಲ ಎಂದು ವ್ಲಾಗರ್ ಅವರ ಮಾತನ್ನು ಒಪ್ಪಿಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:39 pm, Tue, 22 July 25

ರಾಹುಲ್ ಬರುವ ಮೊದಲು ಶಾಸಕರ, ಕಾರ್ಯಕರ್ತರ ಸಭೆ: ಶಿವಕುಮಾರ್
ರಾಹುಲ್ ಬರುವ ಮೊದಲು ಶಾಸಕರ, ಕಾರ್ಯಕರ್ತರ ಸಭೆ: ಶಿವಕುಮಾರ್
‘ನಿಂಗ್ಯಾಕೆ ಬೇಕು ಇದೆಲ್ಲ’: ಪ್ರಥಮ್ ವಿರುದ್ಧ ನಿರ್ಮಾಪಕ ಕೆ ಮಂಜು
‘ನಿಂಗ್ಯಾಕೆ ಬೇಕು ಇದೆಲ್ಲ’: ಪ್ರಥಮ್ ವಿರುದ್ಧ ನಿರ್ಮಾಪಕ ಕೆ ಮಂಜು
ಸಿದ್ದರಾಮಯ್ಯರಿಂದ ಶಾಸಕರನ್ನೆಲ್ಲ ತಮ್ಮೆಡೆ ಸೆಳೆದುಕೊಳ್ಳುವ ಹುನ್ನಾರ: ಅಶೋಕ
ಸಿದ್ದರಾಮಯ್ಯರಿಂದ ಶಾಸಕರನ್ನೆಲ್ಲ ತಮ್ಮೆಡೆ ಸೆಳೆದುಕೊಳ್ಳುವ ಹುನ್ನಾರ: ಅಶೋಕ
ಸತೀಶ್ ಜಾರಕಿಹೊಳಿ ಸೇರಿದಂತೆ ಯಾರೂ ತನ್ನ ಪರ ಮಾತಾಡಲಿಲ್ಲ: ಕರೆಮ್ಮ, ಶಾಸಕಿ
ಸತೀಶ್ ಜಾರಕಿಹೊಳಿ ಸೇರಿದಂತೆ ಯಾರೂ ತನ್ನ ಪರ ಮಾತಾಡಲಿಲ್ಲ: ಕರೆಮ್ಮ, ಶಾಸಕಿ
ಧರ್ಮಸ್ಥಳ ಪ್ರಕರಣ: 2ನೇ ದಿನವೂ ಶವಗಳಿಗಾಗಿ ಮುಂದುವರಿದ ಶೋಧ
ಧರ್ಮಸ್ಥಳ ಪ್ರಕರಣ: 2ನೇ ದಿನವೂ ಶವಗಳಿಗಾಗಿ ಮುಂದುವರಿದ ಶೋಧ
ಶಾಸಕರೊಂದಿಗೆ ಸಭೆ ನಡೆಸುವುದು ಸಿಎಂರ ಪರಮೋಚ್ಛ ಅಧಿಕಾರ: ಸುರೇಶ್
ಶಾಸಕರೊಂದಿಗೆ ಸಭೆ ನಡೆಸುವುದು ಸಿಎಂರ ಪರಮೋಚ್ಛ ಅಧಿಕಾರ: ಸುರೇಶ್
ಬೆಳಗಿನ ಜಾವ 3.50ಕ್ಕೆ ಸಂಭವಿಸಿರುವ ಅಪಘಾತ, ಲಾರಿಯ ಆರ್ಧಭಾಗ ರಸ್ತೆ ಮೇಲಿದೆ
ಬೆಳಗಿನ ಜಾವ 3.50ಕ್ಕೆ ಸಂಭವಿಸಿರುವ ಅಪಘಾತ, ಲಾರಿಯ ಆರ್ಧಭಾಗ ರಸ್ತೆ ಮೇಲಿದೆ
ಕೆಎಂಎಫ್​​ಗೆ ಮೆಜಾರಿಟಿ ಇರುವ ಪಕ್ಷದವರು ಅಧ್ಯಕ್ಷರಾಗುತ್ತಾರೆ: ಜಾರಕಿಹೊಳಿ
ಕೆಎಂಎಫ್​​ಗೆ ಮೆಜಾರಿಟಿ ಇರುವ ಪಕ್ಷದವರು ಅಧ್ಯಕ್ಷರಾಗುತ್ತಾರೆ: ಜಾರಕಿಹೊಳಿ
ಪ್ರತಿಭಟನೆ ಸ್ವರೂಪವನ್ನು ಸಿಎಂ, ಡಿಸಿಎಂ ಇನ್ನೂ ನಿರ್ಧರಿಸಿಲ್ಲ: ಪರಮೇಶ್ವರ್
ಪ್ರತಿಭಟನೆ ಸ್ವರೂಪವನ್ನು ಸಿಎಂ, ಡಿಸಿಎಂ ಇನ್ನೂ ನಿರ್ಧರಿಸಿಲ್ಲ: ಪರಮೇಶ್ವರ್
ಪೊಲೀಸರು ಹಿಡಿದಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ
ಪೊಲೀಸರು ಹಿಡಿದಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ