AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀತಾ ಹಾಗೂ ಮುಖೇಶ್ ಅಂಬಾನಿಯ ಈ ಅಪರೂಪದ ಫೋಟೋ ನೀವು ನೋಡಿರಲು ಸಾಧ್ಯವಿಲ್ಲ

ಅಂಬಾನಿ ಫ್ಯಾಮಿಲಿ ಏನೇ ಮಾಡಿದ್ರು ಅದೊಂದು ಅದ್ಭುತವಾಗಿರುತ್ತದೆ. ಅದಕ್ಕೆ ಒಳ್ಳೆಯ ಉದಾಹರಣೆ ಅವರ ಮಗ ಅನಂತ್​​​​ ಅಂಬಾನಿ ಅವರ ಮದುವೆ, ಆದರೆ ನೀತಾ ಹಾಗೂ ಮುಖೇಶ್ ಅಂಬಾನಿ ಅವರ ಮದುವೆ ಮಾತ್ರ ಹೀಗಿರಲಿಲ್ಲ. ತುಂಬಾ ಸರಳವಾಗಿತ್ತು ಎಂಬುದಕ್ಕೆ ಈ ಫೋಟೋ ಸಾಕ್ಷಿ. ನೀತಾ ಹಾಗೂ ಮುಖೇಶ್ ಅಂಬಾನಿ ಅವರ ಮದುವೆಯ ಕೆಲವೊಂದು ಫೋಟೋಗಳನ್ನು ನೀವು ನೋಡಿರಬಹುದು. ಆದರೆ ಇದೀಗ ಹರಿದಾಡುತ್ತಿರುವ ಈ ಫೋಟೋವನ್ನು ನೋಡಿರಲು ಸಾಧ್ಯವಿಲ್ಲ.

ನೀತಾ ಹಾಗೂ ಮುಖೇಶ್ ಅಂಬಾನಿಯ ಈ ಅಪರೂಪದ ಫೋಟೋ ನೀವು ನೋಡಿರಲು ಸಾಧ್ಯವಿಲ್ಲ
ನೀತಾ ಮತ್ತು ಮುಖೇಶ್ ಅಂಬಾನಿ
ಸಾಯಿನಂದಾ
| Edited By: |

Updated on: Jul 22, 2025 | 8:13 PM

Share

ಭಾರತದ ಉದ್ಯಮಿ ಹಾಗೂ ದೇಶದ ಶ್ರೀಮಂತ ದಂಪತಿಗಳಾದ ನೀತಾ ಮತ್ತು ಮುಖೇಶ್ ಅಂಬಾನಿ (Nita  Mukesh Ambani) ಅವರ ಮದುವೆಯ ಹಳೆಯ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​​ ಆಗಿದೆ. ಈ ಫೋಟೋ ಎಲ್ಲೂ ಸಿಗಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ. ಮೊದಲ ಬಾರಿಗೆ ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ಫೋಟೋ 1985 ರ ವಿವಾಹದ ಸಮಯದಲ್ಲಿ ತೆಗೆಸಲಾಗಿದೆ.  ಈ ಫೋಟೋದಲ್ಲಿ ನೀತಾ ಅಂಬಾನಿ ತುಂಬಾ ಸರಳವಾಗಿ ಕಾಣಿಸಿಕೊಂಡಿದ್ದಾರೆ. ನೀತಾ ಅಂಬಾನಿ ಕೆಂಪು ಮತ್ತು ಬಿಳಿ ಸೀರೆಯಲ್ಲಿ ಸರಳವಾಗಿ ಕಾಣಿಸಿಕೊಂಡಿದ್ದಾರೆ. ನೀತಾ ಅಂಬಾನಿ ಅವರ ರಿಲಯನ್ಸ್ ಫೌಂಡೇಶನ್ ನೇತೃತ್ವದ ಸಾಂಪ್ರದಾಯಿಕ ಭಾರತೀಯ ಕರಕುಶಲ ವಸ್ತುಗಳನ್ನು ಸಂರಕ್ಷಿಸುವ ಬಗ್ಗೆ ಹಂಚಿಕೊಳ್ಳುವ ಸ್ವದೇಶ್‌ ಎಂಬ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ಬಗ್ಗೆ ಹಂಚಿಕೊಂಡಿದ್ದಾರೆ.

1985ರಲ್ಲಿ ಮದುವೆ ಪದ್ಧತಿಗಳು ಹೇಳಿತ್ತು, ಅಂದಿನ ಪೂಜಾ ವಿಧಾನಗಳು ಹೇಗಿತ್ತು ಎಂಬುದನ್ನು ಇಲ್ಲಿ ಹಂಚಿಕೊಳ್ಳಲಾಗಿದೆ. ಇನ್ನು ಈ ಫೋಸ್ಟ್​​ನಲ್ಲಿ  “ನೀತಾ ಅಂಬಾನಿ ಅವರು ಕುಶಲಕರ್ಮಿ ಶ್ರೀ ರಾಜಶ್ರುಂದರ್ ರಾಜ್‌ಕೋಟ್ ಅವರಿಂದ 10 ತಿಂಗಳಿಂದ ಕೈಯಿಂದ ನೇಯ್ದ ಅದ್ಭುತವಾದ ಮಧುರೈ ಹತ್ತಿ ಘರ್ಚೋಲಾ ಸೀರೆಯನ್ನು ಉಟ್ಟು, ಶುಭ ಪೂಜೆಯಲ್ಲಿ ಭಾಗವಹಿಸಿದ್ದಾರೆ” ಎಂದು ಬರೆದುಕೊಂಡಿದ್ದಾರೆ. ಜೊತೆಗೆ  ನೀತಾ ಮತ್ತು ಮುಖೇಶ್ ಅಂಬಾನಿ ಅವರ ಮದುವೆಯ ಫೋಟೋಗಳನ್ನು  ಹಂಚಿಕೊಳ್ಳಲಾಗಿದ್ದು, ಈ ಫೋಟೋದಲ್ಲಿ  ನೀತಾ ಅಂಬಾನಿ ಅವರು ಧರಿಸಿದ್ದ ಆನುವಂಶಿಕ ಚಿನ್ನದ ಬಾಜುಬಂಧ್ ಪ್ರಮುಖ ಆಕರ್ಷಣೆ ಅಂತಾನೇ ಹೇಳಬಹುದು.

ಇದನ್ನೂ ಓದಿ
Image
ಬೆಂಗಳೂರಿನಲ್ಲಿ ಬಾಡಿಗೆ ಮನೆ ತುಂಬಾ ದುಬಾರಿ, ಕಹಿ ಅನುಭವ ಹಂಚಿಕೊಂಡ ವಿದೇಶಿಗ
Image
ದೋಣಿಯ ತುದಿಯಲ್ಲಿ ಬಾಲಕನ ಜಬರ್ದಸ್ತ್ ಡ್ಯಾನ್ಸ್
Image
ಬಾಡಿಗೆ ಮನೆ ಖಾಲಿ ಮಾಡುವಾಗ ಮನೆಮಾಲೀಕನಿಂದ ಬಾಡಿಗೆದಾರನಿಗೆ ಸಿಕ್ತು ಉಡುಗೊರೆ
Image
ಹನಿಮೂನ್​​​ ಹೋಗಲು ಮದುವೆ ಊಟವನ್ನು ಹರಾಜಿಗಿಟ್ಟ ಜೋಡಿ

ಇದನ್ನೂ ಓದಿ: ಬೆಂಗಳೂರಿನಲ್ಲಿ ಬಾಡಿಗೆ ಮನೆ ತುಂಬಾ ದುಬಾರಿ, ಕಹಿ ಅನುಭವ ಹಂಚಿಕೊಂಡ ವಿದೇಶಿಗ

ಇಲ್ಲಿದೆ ನೋಡಿ ವೈರಲ್​​ ಫೋಟೋ:

ಇದು ಪೀಳಿಗೆಯಿಂದ ಪೀಳಿಗೆಗೆ ಬಂದ ಒಂದು ಅಮೂಲ್ಯವಾದ ಕುಟುಂಬ ಆಭರಣ, ಇದನ್ನು ಅವರು ತಮ್ಮ ಮದುವೆಯಲ್ಲಿಯೂ ಧರಿಸಿದ್ದರು ಮತ್ತು ಸ್ವದೇಶ್ ಅಂಗಡಿ ಉದ್ಘಾಟನೆಗೆ ಮುನ್ನ ಇತ್ತೀಚೆಗೆ ನಡೆದ ಪೂಜೆಯ ಸಮಯದಲ್ಲೂ ಕೂಡ ಇದನ್ನು ಧರಿಸಿದ್ದಾರೆ. ಅವರ ತಾಯಿಯ ಮುತ್ತಜ್ಜಿಯಿಂದ ವಂಶಪಾರಂಪರ್ಯವಾಗಿ ಈ ಆಭರಣ ಬಂದಿದೆ. ಈ ಆಭರಣವನ್ನು ಧರಿಸುವ ಮೂಲಕ ಅವರ ಮನೆಯ ಮಹಿಳೆಯರ ಶಕ್ತಿಯನ್ನು ತೋರಿಸುತ್ತದೆ ಎಂದು ಹೇಳಲಾಗಿದೆ. ಇದು ಕೇವಲ ಆಭರಣವಲ್ಲ, ಬದಲಾಗಿ ಪರಂಪರೆ, ಪ್ರೀತಿ ಮತ್ತು ಒಂದು ಪೀಳಿಗೆಯ ಮಹಿಳೆಯರಿಂದ ಮುಂದಿನ ಪೀಳಿಗೆಗೆ ಮುಂದಕ್ಕೆ ಸಾಗುವ ಶಕ್ತಿಯಾಗಿದೆ. ನಮ್ಮ ಹಿರಿಯರ ಅನುಗ್ರಹ, ಬುದ್ಧಿವಂತಿಕೆ ಮತ್ತು ಆಶೀರ್ವಾದಗಳನ್ನು ತನ್ನೊಂದಿಗೆ ಹೊತ್ತುಕೊಂಡು ಬಂದಿದೆ. ಮುಂದೆ ಅಂಬಾನಿಯವರ ಮಗಳು ಇಶಾ ಮತ್ತು ನಂತರ ಅವರ ಮೊಮ್ಮಗಳು ಆದಿಯಾಶಕ್ತಿಗೆ ಹಸ್ತಾಂತರಿಸಲ್ಪಡುತ್ತದೆ ಎಂದು ಈ ಪೋಸ್ಟ್​ನಲ್ಲಿ ಹೇಳಲಾಗಿದೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ