Viral: ಬಾಡಿಗೆ ಮನೆ ಖಾಲಿ ಮಾಡುವಾಗ ಮನೆಮಾಲೀಕನಿಂದ ಬಾಡಿಗೆದಾರನಿಗೆ ಸಿಕ್ತು ಪ್ರೀತಿಯ ಉಡುಗೊರೆ
ಬೆಂಗಳೂರು ಎಂದರೆ ಎಲ್ಲರೂ ದುಡಿಯೋಕೆ ಬಂದವರು, ಇಲ್ಲಿ ದುಡ್ಡಿಗೆ ಬಿಟ್ಟರೆ ಭಾವನೆಗಳಿಗೆ ಬೆಲೆಯಿಲ್ಲ ಎನ್ನುವ ಮಾತಿದೆ. ಇನ್ನು ಬಾಡಿಗೆ ಮನೆಯ ವಿಚಾರದಲ್ಲಿ ಇಂತಿಷ್ಟು ಹಣ ಡೆಪಾಸಿಟ್ ಇಟ್ಟರೆ ಮಾತ್ರ ಬಾಡಿಗೆ ಮನೆ ಗ್ಯಾರಂಟಿ. ಮನೆ ಖಾಲಿ ಮಾಡುವ ವೇಳೆ ಆ ಹಣ ಮರಳಿ ನಮ್ಮ ಕೈಗೆ ಸಿಗುತ್ತದೆ ಎನ್ನುವ ಗ್ಯಾರಂಟಿಯಂತೂ ಇರಲ್ಲ. ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿರುವ ಅದೆಷ್ಟೋ ಜನರಿಗೆ ಇಂತಹ ಕಹಿ ಅನುಭವವು ಆಗಿರುತ್ತದೆ. ಆದರೆ ಇದೀಗ ಬಾಡಿಗೆ ಮನೆಯಲ್ಲಿದ್ದ ಬೆಂಗಳೂರಿನ ವ್ಯಕ್ತಿಯೊಬ್ಬರು ಮನೆ ಖಾಲಿ ಮಾಡುವ ವೇಳೆ ಮನೆಮಾಲೀಕನ ಪ್ರೀತಿಯ ವಿದಾಯಕ್ಕೆ ಮನಸೋತಿದ್ದಾರೆ. ಬಾಡಿಗೆ ಮನೆಯಲ್ಲಿ ವಾಸವಿದ್ದ ನನಗೆ ವಿಭಿನ್ನವಾದ ಅನುಭವವಾಯಿತು ಎಂದು ಹೇಳಿಕೊಂಡಿದ್ದಾರೆ. ಈ ಕುರಿತಾದ ಪೋಸ್ಟ್ ಇಲ್ಲಿದೆ.

ಬೆಂಗಳೂರಿಗೆ (Bengaluru) ಉದ್ಯೋಗ ಹಾಗೂ ಕಲಿಕೆಗಾಗಿ ಬರುವ ಅನೇಕರಿಗೆ ಬಾಡಿಗೆಗೆ ಮನೆ ಹುಡುಕುವುದು ಕಷ್ಟದ ಕೆಲಸ. ಮನೆ ಸಿಕ್ಕಿದರೂ ಬಾಡಿಗೆ ಹೆಚ್ಚು, ಇಲ್ಲದಿದ್ದರೆ ಉದ್ಯೋಗದ ಸ್ಥಳದಿಂದ ಮನೆ ತುಂಬಾ ದೂರ ಎನ್ನುವ ಅಸಮಾಧಾನ. ಹೀಗಾಗಿ ಈ ಬಾಡಿಗೆ ಮನೆ ಹಾಗೂ ಮನೆ ಮಾಲೀಕರ ವಿಚಾರದಲ್ಲಿ ಸಾಕಷ್ಟು ಕಹಿ ಅನುಭವವಾಗಿರುತ್ತದೆ. ಆದರೆ ಇಲ್ಲೊಬ್ಬ ಬೆಂಗಳೂರಿನ ವ್ಯಕ್ತಿಯೂ ಮನೆ ಮಾಲೀಕನು ತನ್ನನ್ನು ನಡೆಸಿಕೊಂಡ ರೀತಿಯ ಬಗ್ಗೆ ಹೇಳಿಕೊಂಡಿದ್ದಾರೆ. ಮನೆ ಖಾಲಿ ಮಾಡುವ ಸಂದರ್ಭದಲ್ಲಿ ತನ್ನನ್ನು ಅತಂತ್ಯ ಪ್ರೀತಿಯಿಂದ ಬೆಳ್ಳಿಯ ಕಡಗವನ್ನು ಉಡುಗೊರೆಯಾಗಿ ನೀಡಿ ವಿದಾಯ ಹೇಳಿದ್ದಾರೆ, ಒಳ್ಳೆಯ ಮನಸ್ಸಿನ ವ್ಯಕ್ತಿ ಎಂದು ರೆಡ್ಡಿಟ್ (reddit) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
@Kind_Transition_7885/Reddit ರೆಡ್ಡಿಟ್ ಖಾತೆಯಲ್ಲಿ ಬಾಡಿಗೆ ಮನೆ ಬಿಡುವಾಗ ಮನೆ ಮಾಲೀಕನ ಪ್ರೀತಿಯ ಬೀಳ್ಕೊಡುಗೆ ಉಡುಗೊರೆಯ ಬಗ್ಗೆ ಹೇಳಿಕೊಂಡಿದ್ದಾರೆ. ಮನೆ ಮಾಲೀಕರು ಠೇವಣಿಯನ್ನೂ ಹಿಂದಿರುಗಿಸದ ನಗರದಲ್ಲಿ, ನನ್ನ ಮನೆ ಮಾಲೀಕರು ನನಗೆ ವಿದಾಯ ಉಡುಗೊರೆಯನ್ನು ನೀಡಿದರು. ನಾನು ಎರಡು ವರ್ಷಗಳ ಕಾಲ ಒಂದೇ ಮನೆಯಲ್ಲಿ ವಾಸಿಸುತ್ತಿದ್ದ ವೇಳೆಯಲ್ಲಿ ಮಾಲೀಕರು ತಮ್ಮ ವಾಸ್ತವ್ಯದ ಉದ್ದಕ್ಕೂ ತಮ್ಮನ್ನು ಮಗನಂತೆ ನಡೆಸಿಕೊಂಡಿದ್ದಾರೆ. ಮನೆ ಖಾಲಿ ಮಾಡುವಾಗ ಮನೆಯ ಮಾಲೀಕರಿಂದ ಬೀಳ್ಕೊಡುಗೆ ಉಡುಗೊರೆಯಾಗಿ ಬೆಳ್ಳಿ ಕಡಗ ಸಿಕ್ಕಿದೆ. ನನಗೆ ಅಗತ್ಯವಿದ್ದ ವಸ್ತುಗಳ ತೆಗೆದುಕೊಂಡು ಬರಲು ನನಗೆ ಅಗತ್ಯವಿದ್ದಾಗಲೆಲ್ಲಾ ಅವರು ತನ್ನ ಸ್ಕೂಟಿಯನ್ನು ಸಹ ನನಗೆ ನೀಡುತ್ತಿದ್ದರು ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ :Viral: ಬೆಂಗಳೂರಿಗರೇ, ಓಲಾದಲ್ಲಿ ಆಟೋ ಬುಕ್ ಮಾಡೋ ಬದಲು ಸೆಡಾನ್ ಕಾರ್ ಬುಕ್ ಮಾಡೋದೇ ಬೆಸ್ಟ್
ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಬಳಕೆದಾರರು ನಾನಾ ರೀತಿಯ ಕಾಮೆಂಟ್ ಮಾಡಿ ಆ ಮನೆ ಮಾಲೀಕರ ಒಳ್ಳೆಯ ವ್ಯಕ್ತಿತ್ವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು, ನೀವು 8 ಬಿಲಿಯನ್‌ನಲ್ಲಿ 1 ಮೊಟ್ಟೆಯಿಡುವ ಅವಕಾಶವಿರುವ ಮನೆ ಮಾಲೀಕರನ್ನು ಆಕಸ್ಮಿಕವಾಗಿ ಭೇಟಿಯಾದಿರಿ ಎಂದಿದ್ದಾರೆ. ಇನ್ನೊಬ್ಬರು, ಕೆಲವು ವರ್ಷಗಳ ಹಿಂದೆ ನನಗೂ ಒಳ್ಳೆಯ ಮನೆ ಮಾಲೀಕರು ಸಿಕ್ಕಿದ್ದರು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನೀವು ಅವರಿಗೆ ಏನಾದರೂ ರೀತಿಯಲ್ಲಿ ಉಪಕಾರ ಮಾಡಿ. ಇಷ್ಟೊಂದು ಒಳ್ಳೆಯ ಜನರು ಇರುವುದು ಅಪರೂಪ. ನೀವು ಅವರೊಂದಿಗಿನ ಒಳ್ಳೆಯ ಬಾಂಧವ್ಯವನ್ನು ನಿಮ್ಮ ಕೆಲಸ ಕಾರ್ಯಗಳಲ್ಲಿ ವ್ಯಕ್ತಪಡಿಸಬೇಕು ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








