Optical Illusion: ಈ ಚಿತ್ರದಲ್ಲಿ 40ರ ನಡುವೆ ಅಡಗಿರುವ 00, 44, 04 ಈ ಮೂರು ಸಂಖ್ಯೆಯನ್ನು ಹುಡುಕಲು ನಿಮ್ಮಿಂದ ಸಾಧ್ಯನಾ?
ಆಪ್ಟಿಕಲ್ ಇಲ್ಯೂಷನ್ ಹಾಗೂ ಬ್ರೈನ್ ಟೀಸರ್‌ನಂತಹ ಒಗಟಿನ ಆಟಗಳನ್ನು ಬಿಡಿಸುವುದೆಂದರೆ ಕೆಲವರಿಗೆ ಇಷ್ಟ. ಹೀಗಾಗಿ ಹೆಚ್ಚಿನವರು ಇಂತಹ ಚಿತ್ರಗಳು ಕಣ್ಣಿಗೆ ಬಿದ್ದಾಗ ಉತ್ತರ ಕಂಡುಕೊಳ್ಳೋಣ ಎಂದು ಮುಂದಾಗುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಇಂತಹ ಸಾಕಷ್ಟು ಒಗಟಿನ ಚಿತ್ರಗಳು ವೈರಲ್ ಆಗುತ್ತಿರುತ್ತದೆ. ಇದೀಗ ಇಂತಹದ್ದೇ ಚಿತ್ರ ವೈರಲ್ ಆಗಿದ್ದು, 40 ಸಂಖ್ಯೆಗಳ ನಡುವೆ ಅಡಗಿರುವ ಮೂರು ವಿಭಿನ್ನ ಸಂಖ್ಯೆಗಳನ್ನು ಪತ್ತೆ ಹಚ್ಚುವ ಸವಾಲು ಇದಾಗಿದೆ.

ಆಪ್ಟಿಕಲ್ ಇಲ್ಯೂಷನ್ (Optical Illusion) ಹಾಗೂ ಬ್ರೈನ್ ಟೀಸರ್ ಈ ಒಗಟಿನ ಚಿತ್ರಗಳು ಟೈಮ್ ಪಾಸ್‌ಗೆ ಮಾತ್ರವಲ್ಲದೇ ಮೆದುಳಿಗೆ ವ್ಯಾಯಾಮವನ್ನು ನೀಡುವುದರಲ್ಲಿ ಎರಡು ಮಾತಿಲ್ಲ. ಹೌದು ಈ ಒಗಟಿನ ಆಟಗಳು ನಿಮ್ಮ ದೃಷ್ಟಿ ಸಾಮರ್ಥ್ಯ ಹಾಗೂ ಬುದ್ಧಿವಂತಿಕೆ ಎಷ್ಟಿದೆ ಎಂದು ಪರೀಕ್ಷಿಸಲು ಸಹಕಾರಿಯಾಗಿದೆ. ಈ ಚಿತ್ರಗಳು ಮೇಲ್ನೋಟಕ್ಕೆ ಟ್ರಿಕ್ಕಿ ಎನಿಸಿದರೂ ಉತ್ತರವು ಅಷ್ಟೇ ಸುಲಭವಾಗಿರುತ್ತದೆ. ಆದರೆ ನೀವು ಮೆದುಳಿಗೆ ಸ್ವಲ್ಪ ಕೆಲಸ ಕೊಡಬೇಕಾಗುತ್ತದೆ. ಹೌದು, ಇದೀಗ ಇಂತಹದ್ದೇ ಕಠಿಣ ಚಿತ್ರವೊಂದು ವೈರಲ್ ಆಗಿದ್ದು, ಈ ಚಿತ್ರದಲ್ಲಿ 40 ಸಂಖ್ಯೆಗಳನ್ನು ಸಾಲಾಗಿ ಬರೆಯಲಾಗಿದೆ. ಇದರ ನಡುವೆ 04, 44, 00 ಈ ಮೂರು ಸಂಖ್ಯೆಗಳು ಅಡಗಿವೆ. ಕೇವಲ ಐದು ಸೆಕೆಂಡುಗಳಲ್ಲಿ ಈ ಸಂಖ್ಯೆಯನ್ನು ಕಂಡು ಹಿಡಿಯುವ ಸವಾಲನ್ನು ನೀಡಲಾಗಿದೆ. ನೀವು ಈ ಸವಾಲನ್ನು ಸ್ವೀಕರಿಸಿದ್ದೀರಿ ಎಂದಾದರೆ ಈಗಾಗಲೇ ಈ ಒಗಟನ್ನು ಬಿಡಿಸಲು ಪ್ರಯತ್ನಿಸಿ.
ಈ ಚಿತ್ರದಲ್ಲಿ ಏನಿದೆ?
ಈ ಚಿತ್ರದಲ್ಲಿ ಕಪ್ಪು ಹಲಗೆಯ ಮೇಲೆ 40 ಸಂಖ್ಯೆಗಳನ್ನು ಸಾಲಾಗಿ ಬರೆದಿರುವುದನ್ನು ನೋಡಬಹುದು. ಆದರೆ ನೀವು ಈ ಸಂಖ್ಯೆಗಳ ನಡುವೆ ಅಡಗಿರುವ 04, 44, 00 ಈ ಮೂರು ಸಂಖ್ಯೆಯನ್ನು ಕಂಡುಹಿಡಿಯಬೇಕು. ನೀವು ಬುದ್ಧಿವಂತರಾಗಿದ್ರೆ ಐದು ಸೆಕೆಂಡಿನಲ್ಲಿ ಈ ಸಂಖ್ಯೆಗಳನ್ನು ಗುರುತಿಸಬಹುದು.
ನೀವು ಈ ಸವಾಲನ್ನು ಸ್ವೀಕರಿಸಿದ್ದೀರಾ?
@BrainyBitsHub ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾದ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ 40 ಸಂಖ್ಯೆಗಳು ಇರುವುದನ್ನು ಕಾಣಬಹುದು. ಆದರೆ ಈ ಸಂಖ್ಯೆಗಳ ನಡುವೆ ಮೂರು ಸಂಖ್ಯೆಗಳು ಅಡಗಿದೆ. ಈ ಚಿತ್ರದ ಮೂಲಕ ನಿಮ್ಮ ಕಣ್ಣು ಎಷ್ಟು ಶಾರ್ಪ್ ಇದೆ ಎಂದು ಪರೀಕ್ಷಿಸಿಕೊಳ್ಳುವ ಸಮಯ ಇದಾಗಿದೆ. ವೀಕ್ಷಣಾ ಕೌಶಲ್ಯ ಹಾಗೂ ಬುದ್ಧಿ ಸಾಮರ್ಥ್ಯ ಇದ್ದವರಿಗೆ ಮಾತ್ರ ಇಂತಿಷ್ಟು ಸಮಯದೊಳಗೆ ಇದಕ್ಕೆ ಉತ್ತರ ಕಂಡುಕೊಳ್ಳಲು ಸಾಧ್ಯ.
ವೈರಲ್ ಪೋಸ್ಟ್ ಇಲ್ಲಿದೆ
Can You Find Out Three different Numbers🤔❓#Puzzle #Quiz #IQ #Riddle #Math#brainteaser pic.twitter.com/5X81UKpFHc
— Brainy Bits Hub (@Brainy_Bits_Hub) July 8, 2025
ಉತ್ತರ ಇಲ್ಲಿದೆ
ಎಷ್ಟೇ ಹುಡುಕಿದರೂ ನಿಮಗೆ 44 ಸಂಖ್ಯೆಗಳ ನಡುವೆ ಅಡಗಿರುವ 04, 44, 00 ಸಂಖ್ಯೆಯನ್ನು ಕಂಡುಹಿಡಿಯಲು ಸಾಧ್ಯವಾಗುತ್ತಿಲ್ಲವೇ. ಆದರೆ ನಾವೇ ನಿಮಗೆ ಸರಿಯಾದ ಉತ್ತರವನ್ನು ಹೇಳುತ್ತೇವೆ. ಈ ಚಿತ್ರದಲ್ಲಿ ನಾಲ್ಕನೇ ಸಾಲಿನ ಕೊನೆಯಲ್ಲಿ 00 ಸಂಖ್ಯೆ ಅಡಗಿದೆ. ಐದನೇ ಸಾಲಿನಲ್ಲಿ 44, 04 ಸಂಖ್ಯೆಯಿರುವುದನ್ನು ಕಾಣಬಹುದು.
ಇದನ್ನೂ ಓದಿ :Optical Illusion: ಈ ಚಿತ್ರದಲ್ಲಿ 26ರ ನಡುವೆ ಅಡಗಿರುವ 62 ಸಂಖ್ಯೆಯನ್ನು ಕಂಡುಹಿಡಿಯಬಲ್ಲಿರಾ?
ಜುಲೈ 8 ರಂದು ಶೇರ್ ಮಾಡಲಾದ ಈ ಪೋಸ್ಟ್ ಹನ್ನೊಂದು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಇದಕ್ಕೆ ಹಲವಾರು ಕಾಮೆಂಟ್‌ಗಳನ್ನು ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ. ಬಳಕೆದಾರರೊಬ್ಬರು, ಅದ್ಭುತ ಎಂದಿದ್ದಾರೆ. ಇನ್ನೊಬ್ಬರು, ಮೆದುಳಿಗೆ ಒಳ್ಳೆಯ ಕೆಲಸ ಎಂದಿದ್ದಾರೆ. ಮತ್ತೊಬ್ಬರು ನಾನು ಉತ್ತರ ಕಂಡು ಹಿಡಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:23 pm, Mon, 21 July 25