ಇಸ್ಕಾನ್ನ ಸಸ್ಯಾಹಾರಿ ಹೋಟೆಲ್ ಒಳಗೆ ಚಿಕನ್ ತಿಂದ ಯುವಕ; ವಿಡಿಯೋಗೆ ಭಾರೀ ಆಕ್ರೋಶ
ಲಂಡನ್‌ನಲ್ಲಿರುವ ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಷಿಯಸ್‌ನೆಸ್ (ಇಸ್ಕಾನ್) ನಡೆಸುತ್ತಿರುವ ಸಸ್ಯಾಹಾರಿ ರೆಸ್ಟೋರೆಂಟ್ ಗೋವಿಂದಾಸ್ ಒಳಗೆ ವ್ಯಕ್ತಿಯೊಬ್ಬ ಕೆಎಫ್‌ಸಿ ಚಿಕನ್ ತಿನ್ನುತ್ತಿರುವುದು ಕಂಡುಬಂದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ವಿಡಿಯೋವೊಂದು ತೀವ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಈ ವಿಡಿಯೋಗೆ ಇಸ್ಕಾನ್ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಂಡನ್, ಜುಲೈ 22: ಆಫ್ರಿಕನ್ ಮೂಲದ ವ್ಯಕ್ತಿಯೊಬ್ಬ ಲಂಡನ್‌ನಲ್ಲಿರುವ ಇಸ್ಕಾನ್ (ISKCON) ನಡೆಸುತ್ತಿರುವ ಸಸ್ಯಾಹಾರಿ ರೆಸ್ಟೋರೆಂಟ್ ಒಳಗೆ ಕೆಎಫ್‌ಸಿ ಚಿಕನ್ ಬಾಕ್ಸ್ ತಂದು, ತಿಂದಿರುವ ವಿಡಿಯೋ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಆಚೆ ಹೋಗಿ ಎಂದು ಹೋಟೆಲ್ ಸಿಬ್ಬಂದಿ ಹೇಳಿದರೂ ಕೇಳದೆ ಅವರಿಗೆ ಚಿಕನ್ ಪೀಸನ್ನು ತೋರಿಸುತ್ತಾ ಆತ ಅತಿರೇಕವಾಗಿ ವರ್ತಿಸಿದ್ದಾನೆ. ಆತ ಕೆಎಫ್‌ಸಿ ಚಿಕನ್ ಬಾಕ್ಸ್ ಅನ್ನು ಹೊರತೆಗೆದು ರೆಸ್ಟೋರೆಂಟ್ ಒಳಗೆ ತಿನ್ನಲು ಪ್ರಾರಂಭಿಸಿದರು. ಇದಕ್ಕೆ ಇಸ್ಕಾನ್ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

