ಕಾಯಲು ಹೇಳಿದ್ದಕ್ಕೆ ರಿಸೆಪ್ಷನಿಸ್ಟ್ಗೆ ಒದ್ದು, ಕೂದಲು ಎಳೆದಾಡಿದ ರೋಗಿಯ ವಿಡಿಯೋ ವೈರಲ್
ವೈದ್ಯರ ಕ್ಯಾಬಿನ್‌ಗೆ ಪ್ರವೇಶಿಸಲು ಪ್ರಯತ್ನಿಸಿದ ವ್ಯಕ್ತಿಯನ್ನು ರಿಸೆಪ್ಷನಿಸ್ಟ್ ತಡೆದಾಗ ಅವನು ಅವಳನ್ನು ಒದ್ದು, ರಿಸೆಪ್ಷನ್ ಪ್ರದೇಶದಾದ್ಯಂತ ಆಕೆಯ ಕೂದಲನ್ನು ಹಿಡಿದು ಎಳೆದೊಯ್ದ ಘಟನೆಯ ವಿಡಿಯೋ ವೈರಲ್ ಆಗಿದೆ. "ಸಂತ್ರಸ್ತರ ದೂರಿನ ಆಧಾರದ ಮೇಲೆ, ಭಾರತೀಯ ನ್ಯಾಯ ಸಂಹಿತಾದ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಹಲ್ಲೆ, ಅಶ್ಲೀಲ ಭಾಷೆ ಬಳಕೆ ಮತ್ತು ಮಹಿಳೆಯ ಮಾನನಷ್ಟಕ್ಕೆ ಧಕ್ಕೆ ತಂದಿದ್ದಕ್ಕಾಗಿ ನಾವು ಎಫ್‌ಐಆರ್ ದಾಖಲಿಸಿದ್ದೇವೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂಬೈ, ಜುಲೈ 22: ಮಹಾರಾಷ್ಟ್ರದ (Maharashtra) ಥಾಣೆಯಲ್ಲಿರುವ ಖಾಸಗಿ ಆಸ್ಪತ್ರೆಯೊಂದರಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ 26 ವರ್ಷದ ಸೋನಾಲಿ ಎಂಬ ಮಹಿಳೆಯೊಬ್ಬರು ವೈದ್ಯರ ಕೊಠಡಿಗೆ ಅಪಾಯಿಂಟ್‌ಮೆಂಟ್ ಇಲ್ಲದೆ ಪ್ರವೇಶಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ರೋಗಿಯೊಬ್ಬ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ವೈದ್ಯರು ಮೀಟಿಂಗ್ನಲ್ಲಿದ್ದುದರಿಂದ ಯಾರನ್ನೂ ಒಳಗೆ ಬಿಡಬೇಡಿ ಎಂದು ರಿಸೆಪ್ಷನಿಸ್ಟ್ಗೆ ಹೇಳಿದ್ದರು. ಹೀಗಾಗಿ, ಆಕೆ ರೋಗಿಗೆ ಕಾಯಲು ಹೇಳಿದ್ದರು. ಆದರೆ,
ಕುಡಿದ ಅಮಲಿನಲ್ಲಿದ್ದ ಗೋಕುಲ್ ಝಾ ಬಲವಂತದಿಂದ ವೈದ್ಯರ ಕ್ಯಾಬಿನ್‌ಗೆ ಪ್ರವೇಶಿಸಲು ಪ್ರಯತ್ನಿಸಿದರು. ಸೋನಾಲಿ ಅವರನ್ನು ತಡೆದಾಗ ಈ ರೀತಿ ಆಕೆಯನ್ನು ಎಳೆದಾಡಿದ್ದಾನೆ. ಕೊನೆಗೆ ಆಕೆಯನ್ನು ಕ್ಲಿನಿಕ್ ಸಿಬ್ಬಂದಿ ಮತ್ತು ಇತರ ರೋಗಿಗಳ ಸಂಬಂಧಿಕರು ರಕ್ಷಿಸಿದರು. ಈ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

