ಶ್ವಾನ ಪ್ರಿಯರೇ ಹುಷಾರ್! ಸಾಕು ನಾಯಿ ನೆಕ್ಕಿದ್ದಕ್ಕೆ ಮಹಿಳೆ ಸಾವು
ಮೊಮ್ಮಗಳು ಸಾಕಿದ ನಾಯಿ ನೆಕ್ಕಿದ್ದರಿಂದ ಮಾರಕ ಸೋಂಕು ತಗುಲಿದ ಕಾರಣ ಇಂಗ್ಲೆಂಡ್ನ ವೃದ್ಧ ಮಹಿಳೆ ಸಾವನ್ನಪ್ಪಿದ್ದಾರೆ. ಯುಕೆಯ ನಾರ್ಫೋಕ್‌ನಲ್ಲಿ 83 ವರ್ಷದ ಮಹಿಳೆಯೊಬ್ಬರು ತಮ್ಮ ಮೊಮ್ಮಗಳ ನಾಯಿ ತಮ್ಮ ಕಾಲಿನ ಮೇಲಿನ ಗಾಯವನ್ನು ನೆಕ್ಕಿದ್ದರಿಂದ ಸೆಪ್ಸಿಸ್‌ನಿಂದ ಸಾವನ್ನಪ್ಪಿದ್ದಾರೆ. ಈ ಘಟನೆ ಸಾಕುನಾಯಿ ಮಾಲೀಕರಲ್ಲಿ ಸುರಕ್ಷತಾ ಆತಂಕ ಸೃಷ್ಟಿಸಿದೆ. ನಾಯಿ ಕಚ್ಚಿ ಸಾಯುವುದನ್ನು ಕೇಳಿದ್ದೇವೆ ಆದರೆ, ನಾಯಿ ನೆಕ್ಕಿದ್ದರಿಂದ ಮಹಿಳೆ ಸಾವನ್ನಪ್ಪಿದ್ದು ಹೇಗೆ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ನವದೆಹಲಿ, ಜುಲೈ 23: ಇಂಗ್ಲೆಂಡ್ನಲ್ಲಿ ವೃದ್ಧ ಮಹಿಳೆಯನ್ನು ಅವರ ಮೊಮ್ಮಗಳು ಸಾಕಿದ್ದ ನಾಯಿ ನೆಕ್ಕಿದ್ದರಿಂದ ಆಕೆ ಸಾವನ್ನಪ್ಪಿರುವ ಆಘಾತಕಾರಿ ಘಟನೆ (Shocking News) ನಡೆದಿದೆ. ಯುಕೆಯ ನಾರ್ಫೋಕ್‌ನಲ್ಲಿ 83 ವರ್ಷದ ಜೂನ್ ಬ್ಯಾಕ್ಸ್ಟರ್ ಎಂಬ ಮಹಿಳೆಯೊಬ್ಬರ ಕಾಲಿಗೆ ಜೂನ್ 29ರಂದು ಗಾಯವಾಗಿತ್ತು. ಅವರ ಮನೆಯಲ್ಲಿದ್ದ ಸಾಕು ನಾಯಿ ಅವರ ಕಾಲಿನ ಗಾಯವನ್ನು ನೆಕ್ಕಿತ್ತು. ಇದರಿಂದಾಗಿ ಸಾಕು ಪ್ರಾಣಿಗಳ ಬಾಯಿಯಲ್ಲಿ ಸಾಮಾನ್ಯವಾಗಿ ಕಂಡುಬರುವ ಬ್ಯಾಕ್ಟೀರಿಯಾದಿಂದ ಉಂಟಾಗುವ ತೀವ್ರವಾದ ಸೋಂಕು ತಗುಲಿ ಆ ವೃದ್ಧೆ ಮೃತಪಟ್ಟಿದ್ದಾರೆ.
ಮನೆಯಲ್ಲಿ ಗಾಯಕ್ಕೊಳಗಾಗಿದ್ದ ವೃದ್ಧೆಗೆ ನಾಯಿ ನೆಕ್ಕಿದ್ದರಿಂದ ಸೋಂಕು ತಗುಲಿತ್ತು. ಸಾಕು ನಾಯಿ ಆಕೆಯ ಕಾಲಿನ ಗಾಯವನ್ನು ನೆಕ್ಕಿದಾಗ ಸೆಪ್ಸಿಸ್ ಸೋಂಕು ತಗುಲಿತ್ತು. ಇದರಿಂದ ಆಕೆ ಸಾವನ್ನಪ್ಪಿದ್ದಾರೆ. ಜೂನ್ 29ರಂದು ಮನೆಯಲ್ಲಿ ಕಮೋಡ್ ಬಳಸುವಾಗ ಅವರು ಕಾಲಿಗೆ ಗಾಯ ಮಾಡಿಕೊಂಡಿದ್ದರು. ಅವರನ್ನು ನೋಡಿಕೊಳ್ಳುತ್ತಿದ್ದ ಮೊಮ್ಮಗಳು ಕೈಟ್ಲಾನ್ ಆಲಿನ್ ಮನೆಯಲ್ಲೇ ಒಂದು ನಾಯಿಯನ್ನು ಸಾಕಿದ್ದರು. ಈ ಸಮಯದಲ್ಲಿ ಅವರ ಸಾಕು ನಾಯಿ ತೆರೆದ ಆ ವೃದ್ಧೆಯ ಗಾಯವನ್ನು ನೆಕ್ಕಿತು. ಅದಾದ ನಂತರ ಗಾಯಕ್ಕೆ ಬ್ಯಾಂಡೇಜ್ ಹಾಕಲಾಗಿತ್ತು.
ಇದನ್ನೂ ಓದಿ: ಬೀದಿ ನಾಯಿಯನ್ನು ಉಳಿಸಲು ಹೋಗಿ 17 ವರ್ಷದ ಸ್ಕೂಟಿ ಸವಾರ ಸಾವು
ಆದರೆ, ಒಳಗೆ ಸೋಂಕು ತಗುಲಿ ಮರುದಿನ ಅವರ ಸ್ಥಿತಿ ಹದಗೆಟ್ಟಿತು. ಅವರನ್ನು ನಾರ್ಫೋಕ್ ಮತ್ತು ನಾರ್ವಿಚ್ ವಿಶ್ವವಿದ್ಯಾಲಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ರಕ್ತ ಪರೀಕ್ಷೆಗಳು ನಾಯಿಗಳು ಮತ್ತು ಬೆಕ್ಕುಗಳಂತಹ ಸಾಕು ಪ್ರಾಣಿಗಳ ಬಾಯಿಯಲ್ಲಿ ಸಾಮಾನ್ಯವಾಗಿ ಕಂಡುಬರುವ ಬ್ಯಾಕ್ಟೀರಿಯಂ ಪ್ಯಾಶ್ಚುರೆಲ್ಲಾ ಮಲ್ಟೋಸಿಡಾದಿಂದ ಉಂಟಾದ ಸೋಂಕನ್ನು ಬಹಿರಂಗಪಡಿಸಿದವು.
ವೈದ್ಯಕೀಯ ಚಿಕಿತ್ಸೆ ನೀಡಿದರೂ ಸೆಪ್ಸಿಸ್ ಸೋಂಕು ತಗುಲಿದ್ದರಿಂದ ಅವರು ಜುಲೈ 7ರಂದು ಆಸ್ಪತ್ರೆಯಲ್ಲಿ ನಿಧನರಾದರು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




